Latest Updates
-
ಪ್ರತಿಭಟನೆಯಲ್ಲಿ ಪ್ರೀತಿ: 'ಪ್ರೊಟೆಸ್ಟ್ ನೇ ಬನಾ ದಿ ಜೋಡಿ' ಟ್ರೆಂಡ್ ಹಿಂದೆ ಅಡಗಿದೆ ದೊಡ್ಡ ಅಪಾಯ! -
ಮಳೆಗಾಲದಲ್ಲಿ ಮನೆಯಲ್ಲಿ ಬೂಷ್ಟು ಹರಡುತ್ತಿದೆಯೇ? ಈ 20 ನಿಮಿಷದ ಟಿಪ್ಸ್ ಪಾಲಿಸಿ, ಮನೆ ಫ್ರೆಶ್ ಆಗಿಡಿ! -
ಕೇವಲ 200 ರೂಪಾಯಿಯಲ್ಲಿ ಪರಿಸರ ಸ್ನೇಹಿ ಊಟ: ವಿಶ್ವ ಪ್ರಕೃತಿ ಸಂರಕ್ಷಣಾ ದಿನಕ್ಕೆ ನಿಮ್ಮ ಅಡುಗೆಮನೆಯೇ ಮೊದಲ ಹೆಜ್ಜೆ! -
CWG 2026: 6ನೇ ದಿನ ಭಾರತದ ಪದಕದ ಬೇಟೆ; ಮನೆಯಲ್ಲೇ ಕಮ್ಮಿ ಬಜೆಟ್ನಲ್ಲಿ ಅದ್ಭುತ ವಾಚ್ ಪಾರ್ಟಿ ಪ್ಲಾನ್! -
ವಿಶ್ವ ಹೆಪಟೈಟಿಸ್ ದಿನ: ಲಿವರ್ ಆರೋಗ್ಯ ಹೆಚ್ಚಿಸಲು ಈ 10 ನಿಮಿಷದ ಬೆಳಗಿನ ದಿನಚರಿ ಪಾಲಿಸಿ! -
ಮಳೆಗಾಲದ ರಜೆ: ವರ್ಕ್ ಫ್ರಮ್ ಹೋಮ್ ಪೋಷಕರಿಗೆ ಮಕ್ಕಳನ್ನು ನಿಭಾಯಿಸುವುದು ಹೇಗೆ? ಇಲ್ಲಿದೆ ಸರಳ ಟಿಪ್ಸ್ -
ಮಳೆಗಾಲದಲ್ಲಿ ನಿಮ್ಮ ಮನೆಯ ಗಿಡಗಳು ಸಾಯುತ್ತಿವೆಯೇ? ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಮಳೆಗಾಲದಲ್ಲಿ ಕರೆಂಟ್ ಹೋದರೆ ಫ್ರಿಜ್ ಆಹಾರ ಹಾಳಾಗುತ್ತಾ? ಸುರಕ್ಷಿತವಾಗಿಡಲು ಇಲ್ಲಿವೆ ಸರಳ ಟಿಪ್ಸ್ -
ಐಟಿಆರ್ ಸಲ್ಲಿಕೆಗೆ ಇನ್ನು 4 ದಿನ ಬಾಕಿ: ಭಾರಿ ದಂಡದಿಂದ ಪಾರಾಗಲು ಈ ಕೆಲಸಗಳನ್ನು ಇಂದೇ ಮಾಡಿ! -
IMD ಮಳೆ ಎಚ್ಚರಿಕೆ: ಹೊರಗೆ ಹೋಗಬೇಡಿ, ಮನೆಯಲ್ಲೇ ಈ 12 ನಿಮಿಷದ ವರ್ಕೌಟ್ ಮಾಡಿ ಫಿಟ್ ಆಗಿರಿ!
ಕಾಟೇರ ಸಿನಿಮಾದಂತೆ ಬಗೆದಷ್ಟು ಸಿಗುತ್ತಿವೆ ಅಸ್ಥಿಪಂಜರಗಳು..! ಇದು ಮಹಾಮಾರಿ ಕೃತ್ಯ..!
ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಕಾಟೇರ ಸಿನಿಮಾ ನೋಡಿದ್ದೀರಾ. ನೋಡಿದ್ದರೆ ನಾವು ಮುಂದೆ ಹೇಳ ಹೊರಟಿರುವ ಸ್ಟೋರಿ ಮತ್ತಷ್ಟು ಭಯ ಹುಟ್ಟಿಸುತ್ತೆ. ಕಾಟೇರ ಸಿನಿಮಾದ ಆರಂಭದಲ್ಲೇ ನೂರಾರು ಅಸ್ಥಿಪಂಜರ ಸಿಗುವ ದೃಶ್ಯವಿದೆ. ಆದ್ರೆ ಆ ವೇಳೆ ಅದು ಯಾರದ್ದು ಎಂಬುದು ನಿಗೂಢವಾಗಿರುತ್ತೆ.
ಆದ್ರೆ ಸಿನಿಮಾದ ಅಂತ್ಯದಲ್ಲಿ ಈ ಪ್ರಶ್ನೆಗೆ ಉತ್ತರವೂ ಸಿಗುತ್ತೆ. ಇದೇ ರೀತಿಯ ಅಸ್ಥಿ ಪಂಜರಗಳು ನಿಜ ಜೀವನದಲ್ಲೂ ಎದುರಾದರೆ ಹೇಗಿರುತ್ತೆ? ಹೌದು ಈ ರೀತಿಯ ನೂರಾರು ಅಸ್ಥಿ ಪಂಜರಗಳು ಈಗ ನೆಲದಿಂದ ಮೇಲೆದ್ದು ಬಂದಿದ್ದು, ಭಾರೀ ಅಚ್ಚರಿ ಜೊತೆಗೆ ಅಲ್ಲಿ ನಡೆದಿರಬಹುದಾದ ಭಯಾನಕ ಘಟನೆ ಕುರಿತು ಎಲ್ಲರಲ್ಲೂ ಭಯ ಹುಟ್ಟಿಸಿದೆ.

(ಫೋಟೋ ಕೃಪೆ: itv-grabungen.de)
ಈ ರೀತಿ ನೂರಾರು ಅಸ್ಥಿಪಂಜರ ಸಿಕ್ಕಿರುವುದು ದಕ್ಷಿಣ ಜರ್ಮನಿಯ ನ್ಯೂರೆಂಬರ್ಗ್ ಎಂಬ ನಗರದಲ್ಲಿ. ಈ ಮಾನವ ಅವಶೇಷ ಕಂಡು ಪುರಾತತ್ವ ಅಧಿಕಾರಿಗಳು ಶಾಕ್ ಆಗಿದ್ದು, ಇಷ್ಟು ಪ್ರಮಾಣದಲ್ಲಿ ಎಲ್ಲಿಯೂ ಅಸ್ಥಿ ಪಂಜರ ಸಿಕ್ಕಿರುವ ಉದಾಹರಣೆಯೇ ಇಲ್ಲ ಎಂದಿದ್ದಾರೆ. ಈ ದೊಡ್ಡ ಹೊಂಡದಲ್ಲಿ ಪುರುಷರು, ಮಹಿಳೆಯರು, ಮಕ್ಕಳ ಅಸ್ಥಿಪಂಜರಗಳು ಸಿಕ್ಕಿವೆ.
ಅಲ್ಲಿ ಸಿಕ್ಕಿರುವ ಅಸ್ಥಿಪಂಜರಗಳೆಷ್ಟು.?
ಜರ್ಮನಿಯ ಈ ನಗರದಲ್ಲಿ ಇಡೀ ವಿಶ್ವ ಬೆಚ್ಚಿ ಬೀಳಿಸುವಷ್ಟು ಸಂಖ್ಯೆಯ ಅಸ್ಥಿಪಂಜರ ಪತ್ತೆಯಾಗಿವೆ. ಬರೋಬ್ಬರಿ ಅಲ್ಲಿ 1 ಸಾವಿರಕ್ಕು ಹೆಚ್ಚಿನ ಸಂಖ್ಯೆ ಅಸ್ಥಿ ಪಂಜರಗಳು ಸಿಕ್ಕಿವೆ. ಅಲ್ಲಿ ಮಕ್ಕಳು ಮತ್ತು ಶಿಶುಗಳ ನೂರಾರು ಅಸ್ಥಿಪಂಜರಗಳಿಂದ ಕೂಡಿರುವ ಒಟ್ಟು 8 ಹೊಂಡಗಳು ಪತ್ತೆಮಾಡಲಾಗಿದೆ. ಈ ಅಸ್ಥಿಪಂಜರದ ಜೊತೆಗೆ ಬೆಳ್ಳಿಯ ನಾಣ್ಯಗಳು ಸಹ ಸಿಕ್ಕಿರುವುದು ಇವು ಯಾವ ಕಾಲಕ್ಕೆ ಸೇರಿರುವ ಅಸ್ಥಿಪಂಜರಗಳು ಎಂದು ಕಂಡುಹಿಡಿಯಲು ಪೂರಕ ಸಾಕ್ಷಿಯಾದವು.
ಇವು ಯಾವ ಕಾಲಕ್ಕೆ ಸೇರಿವೆ? ಅಲ್ಲಿ ನಡೆದಿದ್ದೇನು?
ಇನ್ನು ಈ ಅಸ್ಥಿಪಂಜರಗಳ ಹಿಂದಿನ ಸತ್ಯ ಹುಡುಕಲು ಹೊರಟ ಪುರಾತತ್ವ ಇಲಾಖೆ ಅಧಿಕಾರಿಗಳಿಗೆ ಅಚ್ಚರಿಯ ವಿಚಾರಗಳು ಎದುರಾಗಿವೆ. ಈ ಅಸ್ಥಿಪಂಜರಗಳ ಜೊತೆ ಸಿಕ್ಕ ಬೆಳ್ಳಿಯ ನಾಣ್ಯಗಳಿಂದ ಇವು 1619ನೇ ಕಾಲದ ನಾಣ್ಯ ಎಂದು ತಿಳಿದಿದೆ. ಆದರೆ ಈ ಅಸ್ಥಿಪಂಜರವು 1622ರಿಂದ 1634ರ ನಡುವಿನ ಕಾಲಘಟ್ಟಕ್ಕೆ ಸೇರಿವೆ ಎಂದಿದೆ.
ಅಂದರೆ ಆ ಕಾಲದಲ್ಲಿ ಇಡೀ ಜಗತ್ತನ್ನೇ ಕಾಡಿದ್ದ ಪ್ಲೇಗ್ ರೋಗಕ್ಕೆ ತುತ್ತಾದವರ ಅಸ್ಥಿಪಂಜರಗಳು ಇವು ಎಂದು ಅಂದಾಜಿಸಲಾಗಿದೆ. ಈ ಮಾರಣಾಂತಿಕ ರೋಗವು ಇಡೀ ಮನುಕುಲವನ್ನೇ ಕಾಡಿದ್ದ ಕಾಲದಲ್ಲಿ ಸಾಮೂಹಿಕ ಅಂತ್ಯ ಸಂಸ್ಕಾರ ನೆರವೇರಿಸಲಾಗುತ್ತಿತ್ತು. ಅಲ್ಲಿ ನಿತ್ಯವು ಸಾವಿರಾರು ಮಂದಿ ಪ್ರಾಣ ಕಳೆದುಕೊಳ್ಳುತ್ತಿದ್ದರು ಎಂಬುದಕ್ಕೆ ಇದು ಸಾಕ್ಷಿಯಾಗಿದೆ. ಇನ್ನು ಜರ್ಮನಿಯ ಅರ್ಧದಷ್ಟು ಜನಸಂಖ್ಯೆ ಈ ವೇಳೆ ಪ್ಲೇಗ್‌ಗೆ ಒಳಗಾಗಿತ್ತು ಎಂದು ಸಹ ಉಲ್ಲೇಖಗಳಿವೆ.
ನ್ಯೂರೆಂಬರ್ಗ್ ನಗರದಲ್ಲಿ 1533 ಮತ್ತು 1634ರ ನಡುವೆ ಪ್ಲೇಗ್ ರೋಗ ಜನರ ಸರಣಿ ಸವಿಗೆ ಕಾರಣವಾಗಿತ್ತು. ಬರೋಬ್ಬರಿ 30 ಸಾವಿರ ಮಂದಿ ಮೃತಪಟ್ಟಿರಬಹುದು ಎಂದು ಅಂದಾಜಿಸಲಾಗಿದೆ. ಈ ವೇಳೆ ನಗರದ ಚರ್ಚ್ ಯಾರ್ಡ್‌ಗಳಲ್ಲಿ ಈ ಮೃತದೇಹಳನ್ನು ಸಾಮೂಹಿಕ ಸಮಾಧಿ ಮಾಡಲು ನಿರ್ಧರಿಸಲಾಗಿತ್ತು. ಹೀಗಾಗಿ ಈ ಭಾಗದಲ್ಲಿ 8 ಬೃಹತ್ ಹೊಂಡದಲ್ಲಿ ಅಷ್ಟು ಪ್ರಮಾಣದ ಅಸ್ಥಿಪಂಜರ ಸಿಕ್ಕಿವೆ.
ಇಲ್ಲಿಯವರೆಗೆ, ಎಂಟು ಹೊಂಡಗಳಲ್ಲಿ ಮೂರು ಹೊಂಡಗಳನ್ನು ಮಾತ್ರ ಸಂಪೂರ್ಣವಾಗಿ ಅಗೆಯಲಾಗಿದೆ ಮತ್ತು ಅವುಗಳಲ್ಲಿ ಸತ್ತವರ ಸಂಖ್ಯೆಯನ್ನು ಎಣಿಸಲಾಗಿದೆ. ಒಂದು ಹೊಂಡದಲ್ಲಿ 280 ಶವಗಳು ಸಿಕ್ಕಿವೆ. ಮತ್ತೊಂದರಲ್ಲಿ ಸುಮಾರು 150 ದೇಹಗಳು ಸಿಕ್ಕಿವೆ. ಇದೇ ಸಂಖ್ಯೆಯ ಅಸ್ಥಿ ಪಂಜರಗಳು ಪತ್ತೆಯಾದರೆ ಈ ಸಂಖ್ಯೆ 1500 ಮೀರಬಹುದು ಎನ್ನಲಾಗಿದೆ.
ಪ್ಲೇಗ್‌ನಿಂದ ಜರ್ಮನಿಯಲ್ಲ ಮಾತ್ರ ಇಷ್ಟು ಪ್ರಮಾಣದ ಅಸ್ಥಿ ಪಂಜರಗಳು ಪತ್ತೆಯಾಗಿದ ಉದಾಹರಣೆ ಮಾತ್ರವಲ್ಲ ವಿಶ್ವದ ನಾನಾ ಭಾಗದಲ್ಲಿ ಈ ರೀತಿಯ ಅಸ್ಥಿಪಂಜರಗಳು ಪತ್ತೆಯಾಗಿದ್ದವು. ಅಂದರೆ 15 ಮತ್ತು 16ನೇ ಶತಮಾನದಲ್ಲಿ ಪ್ಲೇಗ್ ಮಹಾಮಾರಿ ಇಡೀ ವಿಶ್ವಕ್ಕೆ ಎಷ್ಟರ ಮಟ್ಟಿಗೆ ಅಪಾಯ ತಂದೊಡ್ಡಿತ್ತು ಅನ್ನೋದನ್ನು ನಾವು ಊಹಿಸಹುದು.



Click it and Unblock the Notifications