Latest Updates
-
ಮಳೆಯ ನಡುವೆ ಯುಜಿಸಿ ನೆಟ್ ಪರೀಕ್ಷೆ: ಸಂಗಾತಿಯ ಈ ಸಣ್ಣ ಬೆಂಬಲವೇ ಯಶಸ್ಸಿನ ಗುಟ್ಟು -
ಮಳೆಗಾಲದಲ್ಲಿ ಮನೆಯ ಪೀಠೋಪಕರಣ ಹಾಳಾಗುತ್ತಿದೆಯೇ? ಬೂಸು ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಮುಂಬೈ ಆರೆಂಜ್ ಅಲರ್ಟ್: ಮಳೆಯಲ್ಲಿ ಆಫೀಸ್ ಹೋಗುವವರೇ, ಈ 'ನೋ-ಕುಕ್' ಪ್ರೋಟೀನ್ ಮೀಲ್ಸ್ ಮಿಸ್ ಮಾಡ್ಬೇಡಿ! -
ಅಮೆಜಾನ್ ಪ್ರೈಮ್ ಡೇ ಸೇಲ್: ಕಡಿಮೆ ಬೆಲೆಗೆ ವಸ್ತುಗಳನ್ನು ಖರೀದಿಸಲು ಈ ಸ್ಮಾರ್ಟ್ ಟ್ರಿಕ್ಸ್ ಮಿಸ್ ಮಾಡ್ಬೇಡಿ! -
ಯೋಗದ ನಂತರ ಮೈಕೈ ನೋವು ಕಾಡುತ್ತಿದೆಯೇ? ಕಚೇರಿಯಲ್ಲಿ ಕೆಲಸ ಮಾಡುವಾಗ ಈ 12 ನಿಮಿಷದ ಟಿಪ್ಸ್ ಪಾಲಿಸಿ -
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ 2026: ಅಪ್ಪನ ಮುಖದಲ್ಲಿ ನಗು ಮೂಡಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಐಡಿಯಾಗಳು! -
10ನೇ ಅಂತರಾಷ್ಟ್ರೀಯ ಯೋಗ ದಿನ: ಮಳೆಯನ್ನೂ ಮೀರಿ ಕೋಲ್ಕತ್ತಾದಲ್ಲಿ ಯೋಗ ಸಂಭ್ರಮ, ಮನೆಯಲ್ಲೇ ಅಭ್ಯಾಸ ಮಾಡಲು ಇಲ್ಲಿದೆ ಸರಳ ಟಿಪ್ಸ್!
ಕನ್ಯಾ ರಾಶಿಯಲ್ಲಿ ಮಂಗಳನ ಸಂಚಾರ 2023 : ದ್ವಾದಶ ರಾಶಿಗಳ ಮೇಲೆ ಇದರ ಪರಿಣಾಮ ಹೇಗಿರಲಿದೆ
ಕನ್ಯಾ ರಾಶಿಯಲ್ಲಿ ಮಂಗಳ ಸಂಚಾರ ಮಾಡಲಿದ್ದಾನೆ. ಮಂಗಳನ ಈ ಸಂಚಾರವು ಕೆಲ ರಾಶಿಯವರಿಗೆ ಶುಭ ಫಲಗಳನ್ನು ನೀಡಿದರೆ ಇನ್ನೂ ಕೆಲವು ರಾಶಿಯ ಜನರಿಗೆ ಅಶುಭ ಫಲಗಳನ್ನು ನೀಡಲಿದ್ದಾನೆ. ಹಾಗಾದ್ರೆ ಕನ್ಯಾ ರಾಶಿಯಲ್ಲಿ ಮಂಗಳ ಸಂಚಾರ ಮಾಡುತ್ತಿರೋದ್ರಿಂದ ದ್ವಾದಶ ರಾಶಿಗಳ ಮೇಲೆ ಯಾವ ರೀತಿ ಪರಿಣಾಮ ಬೀಳಲಿದ್ದಾನೆ ಅನ್ನೋದನ್ನ ತಿಳಿಯೋಣ.

ಮೇಷ ರಾಶಿ
ಕನ್ಯಾರಾಶಿಯಲ್ಲಿ ಮಂಗಳ ಸಂಚಾರ ಮಾಡುತ್ತಿರೋದ್ರಿಂದ ಮೇಷ ರಾಶಿಯ ಜನರಿಗೆ ವಿಶೇಷವಾಗಿ ಶುಭ ಕಾಲ ಅಂತಾನೇ ಹೇಳಬಹುದು. ಆರೋಗ್ಯ ಮತ್ತು ದೈನಂದಿನ ದಿನಚರಿಯ ಬಗ್ಗೆ ಕೊಂಚ ಗಮನಕೊಡಿ. ಉದ್ಯೋಗಿಗಳಿಗೆ ಈ ಸಮಯ ತುಂಬಾನೇ ಒಳ್ಳೆಯದು. ಯಾವುದಾದರೂ ವಿಚಾರಕ್ಕೆ ಇತರರು ಟೀಕಿಸುವಾಗ ಒತ್ತಡಕ್ಕೆ ಒಳಗಾಗುತ್ತೀರಿ. ಆದರೆ ನಿಮ್ಮ ಜುಟ್ಟನ್ನು ಯಾರ ಕೈಗೂ ಕೊಡಬೇಡಿ. ಅಂದರೆ ನಿಮ್ಮ ನಿರ್ಧಾರ ನಿಮ್ಮದಾಗಿರಲಿ.
ವೃಷಭ ರಾಶಿ
ಕನ್ಯಾರಾಶಿಯಲ್ಲಿ ಮಂಗಳ ಸಂಚಾರ ಮಾಡುತ್ತಿರೋದ್ರಿಂದ ವೃಷಭ ರಾಶಿಯ ವ್ಯಕ್ತಿಗಳ ಸೃಜನಶೀಲತೆ, ವ್ಯಕ್ತಿತ್ವದ ಮೇಲೆ ಪ್ರಭಾವ ಬೀರುವ ಸಾಧ್ಯತೆಗಳಿದೆ. ವೃಷಭ ರಾಶಿಯವರು ತಮ್ಮ ಕಲಾತ್ಮಕ ಅನ್ವೇಷಣೆಗಳು, ಹವ್ಯಾಸಗಳನ್ನು ಮತ್ತೊಬ್ಬರು ಪ್ರೋತ್ಸಾಹಿಸುವಂತಾಗುತ್ತದೆ. ಕನ್ಯಾರಾಶಿಯಲ್ಲಿ ಮಂಗಳ ಸಂಚಾರ ಮಾಡುತ್ತಿರೋದ್ರಿಂದ ಉದ್ಯೋಗಕ್ಕೆ ಸಂಬಂಧಿಸಿದಂತೆ ಉತ್ತಮ ಫಲ ನಿರೀಕ್ಷಿಸಬಹುದು. ಆರೋಗ್ಯದ ಬಗ್ಗೆ ಚಿಂತೆ ಮಾಡಬೇಕಾಗಿಲ್ಲ.
ಮಿಥುನ ರಾಶಿ
ಕನ್ಯಾರಾಶಿಯಲ್ಲಿ ಮಂಗಳ ಸಂಚಾರ ಮಾಡುತ್ತಿರೋದ್ರಿಂದ ಮಿಥುನ ರಾಶಿಯವರ ಮನೆ, ಕುಟುಂಬ ಮತ್ತು ಭಾವನಾತ್ಮಕ ವಿಚಾರಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳಿದೆ. ನೀವು ಮನೆ ಕಟ್ಟುವ ವಿಚಾರಕ್ಕೆ ಹಾಗೂ ಕುಟುಂಬದಲ್ಲಿ ಕೆಲ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಮನೆಯಲ್ಲಿ ಘರ್ಷಣೆಯೂ ಏರ್ಪಡುವ ಸಾಧ್ಯತೆಗಳಿಗೆ. ಹೀಗಾಗಿ ಮಾತನಾಡುವಾಗ ಹುಷಾರಾಗಿರಿ. ಈ ಸಮಯದಲ್ಲಿ ತಾಳ್ಮೆ ಕಾಯ್ದುಕೊಳ್ಳೋದು ತುಂಬಾನೇ ಮುಖ್ಯ.
ಕರ್ಕಾಟಕ ರಾಶಿ
ಕನ್ಯಾರಾಶಿಯಲ್ಲಿ ಮಂಗಳ ಸಂಚಾರ ಮಾಡುತ್ತಿರೋದ್ರಿಂದ ಕರ್ಕಾಟಕ ರಾಶಿಯವರಿಗೆ ಇದು ಶುಭ ಸಮಯವಲ್ಲ. ಸಂವಹನ, ಕಲಿಕೆಯ ವಿಚಾರದಲ್ಲಿ ಸಮಸ್ಯೆ ಎದುರಾಗುತ್ತದೆ. ಯಾರ ಜೊತೆಗಾದರೂ ಸಂವಹನ ಮಾಡುವಾಗ ತುಂಬಾ ಹುಷಾರಾಗಿರಬೇಕು. ನಿಮ್ಮ ಒಂದು ಮಾತು ಬಹುದೊಡ್ಡ ಸಮಸ್ಯೆಯನ್ನೇ ಹುಟ್ಟು ಹಾಕಬಹುದು. ಹೀಗಾಗಿ ತಾಳ್ಮೆ ಕಾಯ್ದುಕೊಳ್ಳುವುದು ಅಗತ್ಯವಾಗಿದೆ. ಮಾತು ಮನೆಯನ್ನೇ ಕೆಡಿಸಿಬಿಡಬಹುದು.
ಸಿಂಹ ರಾಶಿ
ಕನ್ಯಾರಾಶಿಯಲ್ಲಿ ಮಂಗಳ ಸಂಚಾರ ಮಾಡುತ್ತಿರೋದ್ರಿಂದ ಸಿಂಹ ರಾಶಿಯ ವ್ಯಕ್ತಿಗಳ ಮೇಲೆ ಹಣಕಾಸು, ಆಸ್ತಿಯ ವಿಚಾರದಲ್ಲಿ ಕೆಟ್ಟ ಪರಿಣಾಮವನ್ನು ಬೀರಲಿದೆ. ಆಸ್ತಿಯ ವಿಚಾರಕ್ಕೆ ನಿಮ್ಮ ಸ್ವಾಭಿಮಾನಕ್ಕೆ ಧಕ್ಕೆಯುಂಟಾಗುವ ಪ್ರಸಂಗ ಎದುರಾಗಬಹುದು. ಹೀಗಾಗಿ ಈ ಸಂದರ್ಭವನ್ನು ಜಾಗರೂಕತೆಯಿಂದ ನಿಭಾಯಿಸಿ. ಇದ್ದಕ್ಕಿದ್ದ ಹಾಗೇ ಅನವಶ್ಯಕವಾಗಿ ಖರ್ಚು ಮಾಡಬೇಕಾದ ಪರಿಸ್ಥಿತಿ ಎದುರಾಗಬಹುದು. ಆರ್ಥಿಕ ಒತ್ತಡ ಅನುಭವಿಸುತ್ತೀರಿ.
ಕನ್ಯಾರಾಶಿ
ಕನ್ಯಾರಾಶಿಯಲ್ಲಿ ಮಂಗಳ ಸಂಚಾರ ಮಾಡುತ್ತಿರೋದ್ರಿಂದ ಕನ್ಯಾ ರಾಶಿಯ ವ್ಯಕ್ತಿಗಳ ಮೇಲೆ ಇದು ನೇರವಾಗಿ ಪರಿಣಾಮವನ್ನು ಉಂಟು ಮಾಡಲಿದೆ. ಯಾವುದಾದರೂ ಒಂದು ವಿಚಾರಕ್ಕೆ ನಿಮ್ಮಲ್ಲಿ ಹೆಚ್ಚಿನ ಶಕ್ತಿ, ದೃಢತೆ ಮತ್ತು ಪ್ರೇರಣೆಯನ್ನು ಉಂಟುಮಾಡಬಹುದು. ನಿಮ್ಮ ಕುಟುಂಬದಲ್ಲಿ ಒತ್ತಡ, ಸಂಘರ್ಷ ಏರ್ಪಡುತ್ತದೆ. ಈ ವೇಳೆ ನೀವು ಇತರರಿಂದ ಸುಖಾ ಸುಮ್ಮನೆ ಟೀಕೆಗೆ ಒಳಗಾಗಬೇಕಾದ ಪರಿಸ್ಥಿತಿ ಎದುರಾಗುತ್ತದೆ.
ತುಲಾ ರಾಶಿ
ಕನ್ಯಾರಾಶಿಯಲ್ಲಿ ಮಂಗಳ ಸಂಚಾರ ಮಾಡುತ್ತಿರೋದ್ರಿಂದ ತುಲಾ ರಾಶಿಯ ಜನರಲ್ಲಿ ಆಧ್ಯಾತ್ಮಿಕತೆ, ಏಕಾಂತತೆ ಹೆಚ್ಚಾಗುತ್ತದೆ. ಯಾವುದಾದರೂ ವಿಚಾರಕ್ಕೆ ನಿಮ್ಮಲ್ಲಿ ಸ್ವಯಂ ಅರಿವು ಉಂಟಾಗುತ್ತದೆ. ಮತ್ತು ಆಳವಾದ ಆತ್ಮಾವಲೋಕನವನ್ನು ಮಾಡುತ್ತೀರಿ. ಆಧ್ಯಾತ್ಮಿಕತೆಯ ಕಡೆಗೆ ನಿಮ್ಮ ಒಲವು ಹೆಚ್ಚಾಗಿರೋದ್ರಿಂದ ಕುಟುಂಬದಲ್ಲಿ ಯಾವುದೇ ರೀತಿ ಸಂಘರ್ಷ ನಡೆದರೂ ನೀವು ಅದಕ್ಕೆ ತಲೆ ಹಾಕೋದಕ್ಕೆ ಇಷ್ಟ ಪಡೋದಿಲ್ಲ.
ವೃಶ್ಚಿಕ ರಾಶಿ
ಕನ್ಯಾರಾಶಿಯಲ್ಲಿ ಮಂಗಳ ಸಂಚಾರ ಮಾಡುತ್ತಿರೋದ್ರಿಂದ ವೃಶ್ಚಿಕ ರಾಶಿಯವರ ಉದ್ಯೋಗದ ಮೇಲೆ ನೇರವಾದ ಪರಿಣಾಮ ಬೀರುತ್ತದೆ. ನಿಮ್ಮ ಭವಿಷ್ಯದ ದೃಷ್ಟಿಯಿಂದ ನೀವು ಹೆಚ್ಚು ಕೆಲಸ ಮಾಡಲು ಪ್ರೇರಣೆಯನ್ನು ಪಡೆಯುತ್ತೀರಿ. ವಿಶೇಷವಾಗಿ ರಾಜಕಾರಣಿಗಳು ಈ ಸಮಯದಲ್ಲಿ ಹುಷಾರಾಗಿರಬೇಕು. ಯಾವುದೇ ರೀತಿ ಸಂಘರ್ಷ, ಹೋರಾಟದಲ್ಲಿ ತೊಡಗಿಕೊಳ್ಳಲು ಹೋಗಬೇಡಿ. ಇದು ನಿಮ್ಮ ಭವಿಷ್ಯಕ್ಕೆ ತೊಂದರೆಯುಂಟು ಮಾಡಬಹುದು.
ಧನು ರಾಶಿ
ಕನ್ಯಾರಾಶಿಯಲ್ಲಿ ಮಂಗಳ ಸಂಚಾರ ಮಾಡುತ್ತಿರೋದ್ರಿಂದ ಧನುರಾಶಿಯವರ ವೃತ್ತಿ, ಪ್ರತಿಷ್ಠೆ ಹಾಗೂ ಸಾರ್ವಜನಿಕ ಜೀವನದ ಮೇಲೆ ಪರಿಣಾಮ ಬೀರಲಿದೆ. ವೃತ್ತಿಪರ ಕೆಲಸಗಳಲ್ಲಿ ಪ್ರಗತಿಯನ್ನು ಸಾಧಿಸುತ್ತೀರಿ. ನಿಮ್ಮ ಕೆಲಸ ಮೇಲಾಧಿಕಾರಿಗಳಿಗೆ ಇಷ್ಟವಾಗಿ ಅವರಿಂದ ಪ್ರಶಂಸೆ ಪಡೆಯುತ್ತೀರಿ. ಯಾವುದೇ ಕಾರಣಕ್ಕೂ ಉದ್ಯೋಗವನ್ನು ಬದಲಾಯಿಸಲು ಏಕಾ ಏಕಿ ನಿರ್ಧಾರವನ್ನು ತೆಗೆದುಕೊಳ್ಳಬೇಡಿ. ಬೇರೆ ಉದ್ಯೋಗಕ್ಕೆ ಹೋಗುವ ಮುನ್ನ ನಿಮ್ಮ ಭವಿಷ್ಯದ ಬಗ್ಗೆ ಚಿಂತಿಸಿ.
ಮಕರ ರಾಶಿ
ಕನ್ಯಾರಾಶಿಯಲ್ಲಿ ಮಂಗಳ ಸಂಚಾರ ಮಾಡುತ್ತಿರೋದ್ರಿಂದ ಮಕರ ರಾಶಿಯವರಿಗೆ ಉನ್ನತ ಶಿಕ್ಷಣ, ಪ್ರಯಾಣ ಮತ್ತು ತತ್ತ್ವಶಾಸ್ತ್ರದ ಕ್ಷೇತ್ರಗಳ ಮೇಲೆ ಪ್ರಭಾವವನ್ನು ಬೀರುತ್ತದೆ. ನಿಮ್ಮ ಕಲಿಕೆಯ ಮೇಲೆ ಕೆಟ್ಟ ಪರಿಣಾಮ ಬೀರಬಹುದು. ಓದಲು ಏಕಾಗ್ರತೆ ಇಲ್ಲದಂತಾಗುತ್ತದೆ. ಉನ್ನತ ಶಿಕ್ಷಣವನ್ನು ಆಯ್ದುಕೊಳ್ಳುತ್ತಿರುವ ವಿದ್ಯಾರ್ಥಿಗಳು ಇದನ್ನು ನಿಮ್ಮಿಂದ ನಿಭಾಯಿಸಲು ಸಾಧ್ಯವಾಗುತ್ತಾ ಅನ್ನೋದನ್ನು ಯೋಚಿಸಿ. ಇನ್ನೂ ಅನವಶ್ಯಕವಾಗಿ ಪ್ರಯಾಣ ಮಾಡೋದನ್ನು ತಪ್ಪಿಸಿ.
ಕುಂಭ ರಾಶಿ
ಕನ್ಯಾರಾಶಿಯಲ್ಲಿ ಮಂಗಳ ಸಂಚಾರ ಮಾಡುತ್ತಿರೋದ್ರಿಂದ ಕುಂಭರಾಶಿಯವರಿಗೆ ಆರ್ಥಿಕ ತೊಂದರೆ ಉಂಟಾಗುತ್ತದೆ. ಅನವಶ್ಯಕವಾಗಿ ಖರ್ಚು ಮಾಡೋದಕ್ಕೆ ಹೋಗಬೇಡಿ. ಇದರಿಂದ ಆರ್ಥಿಕವಾಗಿ ಒತ್ತಡಕ್ಕೆ ಸಿಲುಕುತ್ತೀರಿ. ಇನ್ನೂ ಆರೋಗ್ಯದ ಬಗ್ಗೆ ಕಾಳಜಿ ವಹಿಸಿದರೆ ಉತ್ತಮ. ಕುಟುಂಬದಲ್ಲಿ ಕಲಹ, ಮನಸ್ಥಾಪ ಉಂಟಾಗುವ ಸಾಧ್ಯತೆ ಇದೆ. ಆದಷ್ಟು ನಿಮ್ಮ ಮಾತನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಿ. ಆಗುವ ಅನಾಹುತಗಳನ್ನು ತಪ್ಪಿಸಿ.
ಮೀನ ರಾಶಿ
ಕನ್ಯಾರಾಶಿಯಲ್ಲಿ ಮಂಗಳ ಸಂಚಾರ ಮಾಡುತ್ತಿರೋದ್ರಿಂದ ಮೀನ ರಾಶಿಯ ಮೇಲೆ ಕೆಲವೊಂದು ಪರಿಣಾಮಗಳನ್ನು ಬೀರಲಿದೆ. ಪಾಲುದಾರಿಕೆಯಲ್ಲಿ ವ್ಯಾಪಾರಕ್ಕೆ ಇಳಿಯಬೇಡಿ. ಇದು ಒಳ್ಳೆಯ ಸಮಯವಲ್ಲ. ಉದ್ಯೋಗದ ವಿಚಾರದಲ್ಲಿ ಸಂಘರ್ಷಗಳನ್ನು ಎದುರಿಸಬೇಕಾಗುತ್ತದೆ. ನಿಮ್ಮ ಜೊತೆ ಕೆಲಸ ಮಾಡುವವರ ಜೊತೆಗೆ ಜಗಳ ಸಂಭವಿಸುವ ಸಾಧ್ಯತೆ ಇದೆ. ಆದ್ದರಿಂದ ತಾಳ್ಮೆ ಕಾಯ್ದುಕೊಳ್ಳಿ. ನೀವು ನಿರೀಕ್ಷಿಸದ ಕೆಲವೊಂದು ಘಟನೆಗಳು ನಿಮ್ಮ ಬಾಳಿನಲ್ಲಿ ನಡೆಯುತ್ತದೆ.



Click it and Unblock the Notifications
