Latest Updates
-
ಕೋಮಾದಲ್ಲಿದ್ದ ಹರೀಶ್ ರಾಣಾ ದಯಾಮರಣಕ್ಕೆ ಸುಪ್ರೀಂ ಒಪ್ಪಿಗೆ: ಈ ಕೇಸ್ ಬಗ್ಗೆ ನಿಮಗೆ ಗೊತ್ತಾ? -
ಪಂಜಾಬಿ ಸ್ಟೈಲ್ ಮಲೈ ಲಸ್ಸಿ! ಈ ರೀತಿ ಮಾಡಿ ಗಟ್ಟಿ ಕೆನೆಯ ಢಾಬಾ ಸ್ಟೈಲ್ ಲಸ್ಸಿ.. ಬಿಸಿಲ ತಾಪಕ್ಕೆ ಬೆಸ್ಟ್ ಕೂಲ್ ಡ್ರಿಂಕ್ -
ಮಾರ್ಚ್ ಅಂತ್ಯದಲ್ಲಿ ಗಜಕೇಸರಿ ಯೋಗ: ಈ ಮೂರು ರಾಶಿಯ ಜನರಿಗೆ ಒಲಿಯಲಿದೆ ಅದೃಷ್ಟ! -
ನಾಟಿ ಸ್ಟೈಲ್ನಲ್ಲಿ ಸೋಯಾ ಚಾಪ್ಸ್ ಮಾಡಿ: ಚಪಾತಿ, ಅನ್ನ, ಮುದ್ದೆ ಎಲ್ಲದ್ದಕ್ಕೂ ಬೆಸ್ಟ್! -
ತಣ್ಣೀರು ಬೇಕಾ? ಮಡಕೆ ಕೊಳ್ಳುವಾಗ ಈ ತಪ್ಪು ಮಾಡಬೇಡಿ.. ಸಮಸ್ಯೆ ಗ್ಯಾರಂಟಿ!! ಹೇಗೆ ಆಯ್ಕೆ ಮಾಡಬೇಕು? -
ನಿಮ್ಮ ಮನೆಯ ಗಡಿಯಾರ ತಪ್ಪಾದ ದಿಕ್ಕಿನಲ್ಲಿ ಇಡಲಾಗಿದ್ಯಾ? ಈ ಸಣ್ಣ ತಪ್ಪು ದೊಡ್ಡ ಸಮಸ್ಯೆ ತರಬಹುದು! -
ಶುಗರ್ ಇದ್ದರೂ ಯುಗಾದಿಗೆ ಗುಜಿಯಾ ತಿನ್ನಬಹುದು! ಸಕ್ಕರೆ ಬೇಡ.. ರುಚಿ ಅದ್ಭುತ.. ಹೆಲ್ತ್ 100ಕ್ಕೆ 100 ಸೇಫ್! -
ದೇಹ ತಂಪಾಗಿಸಲು, ತೂಕ ಇಳಿಸಲು ಈ ಬಾರ್ಲಿ ಜ್ಯೂಸ್ ಮಾಡಿ! 5 ನಿಮಿಷದೊಳಗೆ ಸಿದ್ದ! -
ರಾಹು-ಕೇತು ಸಂಯೋಗದಿಂದ ಕಾಳಸರ್ಪ ಯೋಗ: ಈ ಎಲ್ಲಾ ರಾಶಿಯವರಿಗೆ ಅದೃಷ್ಟದ ಸಮಯ! -
ಸಂಕಷ್ಟಗಳು ದೂರ, ಐಶ್ವರ್ಯ ಹತ್ತಿರ! ಕೇತು ಸಂಚಾರದಿಂದ ಇವರ ಜೀವನವೇ ಬಂಗಾರ.. ಯಾರಿಗೆ ರಾಜಯೋಗ?
ಜುಲೈನಲ್ಲಿ ಮಂಗಳ ಗೋಚಾರ ಫಲ: ಸಿಂಹ ರಾಶಿಗೆ ಮಂಗಳ ಸಂಚಾರ, ದ್ವಾದಶ ರಾಶಿಗಳ ಮೇಲೆ ಬೀರಲಿದೆ ಈ ಪ್ರಭಾವ
ಜುಲೈ 1 ಕ್ಕೆ ಮಂಗಳ ಸೂರ್ಯ ಅಧಿಪತಿಯಾಗಿರುವ ಸಿಂಹ ರಾಶಿಗೆ ಸಂಚರಿಸಲಿದೆ. ವೈದಿಕ ಶಾಸ್ತ್ರದ ಪ್ರಕಾರ ಈ ಸಂಚಾರ ಕೆಲವರಿಗೆ ಅನುಕೂಲ ಇನ್ನು ಕೆಲವರಿಗೆ ಪ್ರತಿಕೂಲಕ ಪರಿಣಾಮ ಬೀರಲಿದೆ. ಈ ಮಂಗಳ ಸಂಚಾರ ದ್ವಾದಶ ರಾಶಿಗಳ ಮೇಲೆ ಪ್ರಭಾವ ಬೀರಲಿದ್ದು ನಿಮ್ಮ ರಾಶಿ ಮೇಲೆ ಹೇಗೆ ಪ್ರಭಾವ ಬೀರಿದೆ ಎಂದು ನೋಡೋಣ ಬನ್ನಿ:
ಮೇಷ ರಾಶಿ
ಮೇಷ ರಾಶಿಯವರಲ್ಲಿ ಮಂಗಳ ನಿಮ್ಮ ಐದನೇ ಮನೆಗೆ ಸಾಗಲಿದೆ. ಈ ಅವಧಿಯಲ್ಲಿ ವಿದ್ಯಾರ್ಥಿಗಳು ಉತ್ತಮ ಫಲಿತಾಂಶಗಳನ್ನು ಪಡೆಯಲು ಸಾಧ್ಯವಾಗುವುದು. ಈ ಸಮಯದಲ್ಲಿ, ನೀವು ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದರೆ ಅದರಲ್ಲಿ ಉತ್ತಮ ಫಲಿತಾಂಶ ಪಡೆಯುತ್ತೀರಿ. ನಿಗೂಢ ವಿಜ್ಞಾನ ಅಥವಾ ಜ್ಯೋತಿಷ್ಯವನ್ನು ಕಲಿಯುವ ವಿದ್ಯಾರ್ಥಿಗಳಿಗೂ ಈ ಅವಧಿ ಮಂಗಳಕರವಾಗಿದೆ. ಈ ಸಮಯದಲ್ಲಿ, ವ್ಯಾಪಾರಸ್ಥರು ಉತ್ತಮ ಲಾಭವನ್ನು ನಿರೀಕ್ಷಿಸಬಹುದು. ವಿದೇಶಕ್ಕೆ ಹೋಗಲು ಬಯಸುತ್ತಿರುವವರಿಗೆ ಈ ಅವಧಿ ಅನುಕೂಲಕರವಾಗಿದೆ.

ವೃಷಭ ರಾಶಿ
ವೃಷಭ ರಾಶಿಯವರಲ್ಲಿ ನಾಲ್ಕನೇ ಮನೆಗೆ ಸಂಚರಿಸಲಿದೆ. ಮಂಗಳ ಗ್ರಹದ ಸಂಚಾರವು ನಿಮ್ಮ ಮೇಲೆ ಅನುಕೂಲಕರ ಪರಿಣಾಮ ಬೀರುವುದಿಲ್ಲ. ಈ ಸಮಯದಲ್ಲಿ, ಮಂಗಳ ಗ್ರಹದ ಸಂಚಾರದಿಂದಾಗಿ ಮಾನಸಿಕ ತ್ತಡ ಹೆಚ್ಚಾಗುವುದು. ಈ ಸಮಯದಲ್ಲಿ, ಆಸ್ತಿ ಮತ್ತು ಸ್ಥಿರಾಸ್ತಿಯಲ್ಲಿ ಕೆಲಸ ಮಾಡುವವರು ಹಣದ ಸಮಸ್ಯೆಯನ್ನು ಎದುರಿಸಬೇಕಾಗಬಹುದು. ನಿಮ್ಮ ಕೆಲಸದ ಸ್ಥಳದಲ್ಲಿ ನಿಮ್ಮ ಸಹೋದ್ಯೋಗಿಗಳು ನಿಮ್ಮ ವಿರುದ್ಧ ಪಿತೂರಿ ಮಾಡಬಹುದು. ವೈವಾಹಿಕ ಜೀವನದಲ್ಲೂ ಸ್ವಲ್ಪ ಉದ್ವಿಗ್ನತೆ ಉಂಟಾಗುವ ಸಾಧ್ಯತೆ ಇದೆ. ಈ ಸಮಯದಲ್ಲಿ ನೀವು ಪಾಲುದಾರಿಕೆಯಲ್ಲಿ ಯಾವುದೇ ಕೆಲಸವನ್ನು ಮಾಡಲು ಬಯಸಿದ್ದರೆ ಅದನ್ನು ಈಗ ಮಾಡಬೇಡಿ, ಅಲ್ಲದೆ ಆರೋಗ್ಯದ ಬಗ್ಗೆ ಕಾಳಜಿವಹಿಸಿ.
ಮಿಥುನ ರಾಶಿ
ಮಿಥುನ ರಾಶಿಯವರಲ್ಲಿ ಮಂಗಖ ಮೂರನೇ ಮನೆಗೆ ಸಾಗಲಿದೆ, ಅದು ಧೈರ್ಯ ಮತ್ತು ಶಕ್ತಿಯ ಮನೆಯಾಗಿದೆ. ಈ ಮಂಗಳ ಸಂಚಾರವು ಮಿಥುನ ರಾಶಿಯವರಲ್ಲಿ ಧೈರ್ಯ ಮತ್ತು ಶೌರ್ಯವನ್ನು ಹೆಚ್ಚಿಸುತ್ತದೆ. ಈ ಸಮಯದಲ್ಲಿ, ರಿಯಲ್ ಎಸ್ಟೇಟ್ ಮತ್ತು ಆಸ್ತಿ ಕೆಲಸಕ್ಕೆ ಸಂಬಂಧಿಸಿದ ಕೆಲಸ ಮಾಡುವವರು ಉತ್ತಮ ಲಾಭವನ್ನು ಪಡೆಯಬಹುದು. ಈ ಅವಧಿಯಲ್ಲಿ ನಿಮ್ಮ ಶತ್ರುಗಳನ್ನು ಮಣಿಸಲು ಸಾಧ್ಯವಾಗುವುದು. ಈ ಸಮಯದಲ್ಲಿ ನಿಮ್ಮ ಅದೃಷ್ಟದ ಸಂಪೂರ್ಣ ಬೆಂಬಲವನ್ನು ನೀವು ಪಡೆಯುತ್ತೀರಿ. ನಿಮ್ಮ ತಂದೆಯ ಸಹಾಯದಿಂದ ಯಾವುದೇ ಅಪೂರ್ಣ ಕೆಲಸವನ್ನು ನೀವು ಪೂರ್ಣಗೊಳಿಸಬಹುದು. ಉದ್ಯೋಗಿಗಳಿಗೆ ಈ ಅವಧಿ ಅನುಕೂಲಕರವಾಗಿದ್ದು ಬಡ್ತಿ ಪಡೆಯುತ್ತೀರಿ.
ಕರ್ಕ ರಾಶಿ
ಕರ್ಕ ರಾಶಿಯವರಿಗೆ ಮಂಗಳವು ಎರಡನೇ ಮನೆಯಲ್ಲಿ ಇರಲಿದ್ದು ಇದು ಸಂಪತ್ತಿನ ಮೆನಯಾಗಿದೆ. ಈ ಅವಧಿಯಲ್ಲಿ ನಿಮ್ಮ ಪೂರ್ವಜರ ವ್ಯವಹಾರದಿಂದ ನೀವು ಲಾಭ ಪಡೆಯುವ ನಿರೀಕ್ಷೆಯಿದೆ. ನಿಮ್ಮ ತಂದೆಯ ಕೆಲಸವನ್ನು ನೀವು ನೋಡಿಕೊಳ್ಳುತ್ತಿದ್ದರೆ, ವ್ಯಾಪಾರ ಬೆಳವಣಿಗೆಯ ಎಲ್ಲಾ ಸಾಧ್ಯತೆಗಳು ಗೋಚರಿಸುತ್ತವೆ. ಈ ಸಮಯದಲ್ಲಿ ನೀವು ಯಾವುದೇ ನ್ಯಾಯಾಲಯದ ಪ್ರಕರಣದಲ್ಲಿ ಭಾಗಿಯಾಗಬೇಡಿ, ಅಲ್ಲದೆ ಬೇರೆಯವರ ಜೊತೆಗೆ ಅನಗ್ಯತ ವಾದ ಮಾಡಲು ಹೋಗಬೇಡಿ. ಸಂಬಂಧದ ಬಗ್ಗೆ ಹೇಳುವುದಾದರೆ ಈ ಅವಧಿಯಲ್ಲಿ ಭಿನ್ನಾಭಿಪ್ರಾಯವಿರಬಹುದು. ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವವರು ತಮ್ಮ ಹಣವನ್ನು ಬುದ್ಧಿವಂತಿಕೆಯಿಂದ ಹೂಡಿಕೆ ಮಾಡಬೇಕು. ಎಚ್ಚರಿಕೆಯಿಂದ ವಾಹನ ಚಲಾಯಿಸಿ.
ಸಿಂಹ ರಾಶಿ
ಮಂಗಳವು ಸಿಂಹ ರಾಶಿಗೆ ಸಂಚರಿಸುವುದರಿಂದ ನಿಮ್ಮ ಲಗ್ನ ಮನೆಯಲ್ಲಿ ಇರಲಿದೆ. ಮಂಗಳ ಗ್ರಹದ ಸಂಚಾರದಿಂದಾಗಿ ನಿಮ್ಮ ವ್ಯಕ್ತಿತ್ವದ ವರ್ಚಸ್ಸು ಹೆಚ್ಚಲಿದೆ. ನಿಮ್ಮ ಗುರಿಗಳನ್ನು ಸಾಧಿಸಲು ಇದು ಸರಿಯಾದ ಸಮಯ, ಸಮಾಜದಲ್ಲಿ ನಿಮ್ಮ ಗೌರವವೂ ಹೆಚ್ಚಾಗುತ್ತದೆ. ಮಂಗಳ ಸಾಗಣೆಯ ಪ್ರಭಾವದಿಂದ, ನೀವು ಆಸ್ತಿಯನ್ನು ಖರೀದಿಸಲು ಒಪ್ಪಂದ ಮಾಡಿಕೊಳ್ಳಹುದು. ಈ ಸಮಯದಲ್ಲಿ ತಾಯಿಯ ಆರೋಗ್ಯದ ಚಿಂತೆ ಕೂಡ ಕಾಡಬಹುದು. ವೈವಾಹಿಕ ಜೀವನದಲ್ಲಿ ಸ್ವಲ್ಪ ಹೊಂದಾನೀಕೆ ಕೊರತೆ ಇರಬಹುದು. ಈ ಅವಧಿಯಲ್ಲಿ ಸ್ನೇಹಿತರನ್ನು ಹೆಚ್ಚಾಗಿ ನಂಬಬೇಡಿ ಅಲ್ಲದೆ ಯಾರಿಗೂ ಸಾಲ ಕೊಡಬೇಡಿ, ಯಾರಿಂದಲೂ ಹಣವನ್ನು ತೆಗೆದುಕೊಳ್ಳಬೇಡಿ. ನಿಮ್ಮ ಕೆಲಸವನ್ನು ಬದಲಾಯಿಸಲು ನೀವು ಬಯಸಿದರೆ, ಸಮಯವು ನಿಮಗೆ ಅನುಕೂಲಕರವಾಗಿದೆ.
ಕನ್ಯಾ ರಾಶಿ
ಕನ್ಯಾ ರಾಶಿಯವರಲ್ಲಿ ಮಂಗಳ 12ನೇ ಮನೆಯಲ್ಲಿ ಇರಲಿದೆ. ಈ ಮನೆಯಲ್ಲಿ ಮಂಗಳನ ಉಪಸ್ಥಿತಿಯಿಂದಾಗಿ, ನೀವು ವ್ಯರ್ಥವಾಗಿ ಪ್ರಯಾಣಿಸಬೇಕಾಗಬಹುದು, ಅಲ್ಲದೆ ಆರ್ಥಿಕ ಸಮಸ್ಯೆ ಕಂಡು ಬರುವುದು. ಈ ಸಮಯದಲ್ಲಿ, ನಿಮ್ಮ ಕೆಲಸದಲ್ಲಿ ನೀವು ಬಯಸಿದ ಬಡ್ತಿಯನ್ನು ಪಡೆಯುವುದಿಲ್ಲ, ಇದರಿಂದಾಗಿ ನಿಮ್ಮ ಮನಸ್ಸು ಸ್ವಲ್ಪ ಅಸಮಾಧಾನಗೊಳ್ಳುತ್ತದೆ. ನೀವು ಉದ್ಯೋಗವನ್ನು ಬದಲಾಯಿಸುವ ಬಗ್ಗೆ ಯೋಚಿಸುತ್ತಿದ್ದರೆ ಈ ಸಮಯವು ಅನುಕೂಲಕರವಾಗಿಲ್ಲ. ಸ್ವಲ್ಪ ಸಮಯ ಕೂಡ ಕಾಯುವುದು ಒಳ್ಳೆಯದು. ಸಂಗಾತಿಯ ಆರೋಗ್ಯದ ಕಡೆ ಕಾಳಜಿವಹಿಸಿ.
ತುಲಾ ರಾಶಿ
ತುಲಾ ರಾಶಿಯ ಜನರಿಗೆ, ಮಂಗಳ ಹನ್ನೊಂದನೇ ಮನೆಯಲ್ಲಿ ಅಂದರೆ ಲಾಭಸ್ಥಾನದಲ್ಲಿ ಇರಲಿದೆ. ಈ ಮಂಗಳ ಸಂಚಾರದ ಸಮಯದಲ್ಲು ನಿಮ್ಮ ಯಾವುದೇ ಪಾಲುದಾರಿಕೆ ಒಪ್ಪಂದವು ಅಭಿವೃದ್ಧಿಯಾಗಬಹುದು. ನೀವು ಪಾಲುದಾರಿಕೆಯಲ್ಲಿ ಕೆಲವು ಕೆಲಸವನ್ನು ಪ್ರಾರಂಭಿಸಲು ಬಯಸಿದರೆ ಅಥವಾ ಪ್ರಾರಂಭಿಸಿದ್ದ ಕೆಲಸ ಅಪೂರ್ಣವಾಗಿದ್ದರೆ ಈ ಅವಧಿಯಲ್ಲಿ ನಿಮ್ಮ ಕೆಲಸವು ಪೂರ್ಣಗೊಳ್ಳುತ್ತದೆ. ಈ ಸಮಯದಲ್ಲಿ, ಷೇರು ಮಾರುಕಟ್ಟೆಯಲ್ಲಿ ಕೆಲಸ ಮಾಡುವವರು ಉತ್ತಮ ಲಾಭವನ್ನು ನಿರೀಕ್ಷಿಸಬಹುದು. ಉದ್ಯೋಗಿಗಳಿಗೆ ಈ ಅವಧಿ ಅನುಕೂಲಕರವಾಗಿದೆ.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯವರಲ್ಲಿ ಮಂಗಳ 10ನೇ ಮನೆಯಲ್ಲಿ ಇರಲಿದೆ. ಈ ಮಂಗಳ ಸಂಕ್ರಮಣವು ನಿಮಗೆ ಅನೇಕ ಯಶಸ್ಸನ್ನು ತರಲಿದೆ. ಈ ಸಮಯದಲ್ಲಿ, ನಿಮ್ಮ ಗೌರವವು ಹೆಚ್ಚಾಗಲಿದೆ. ನಿಮ್ಮ ಬುದ್ಧಿವಂತಿಕೆ ಮತ್ತು ಕಠಿಣ ಪರಿಶ್ರಮದ ಆಧಾರದ ಮೇಲೆ ನೀವು ಅತ್ಯಂತ ಕಷ್ಟಕರವಾದ ಗುರಿಗಳಲ್ಲಿ ಯಶಸ್ವಿಯಾಗುವಿರಿ. ಈ ಮಂಗಳ ಸಂಕ್ರಮಣದಿಂದಾಗಿ ನಿಮ್ಮ ಮನೆಯಲ್ಲಿ ಕೆಲವು ಶುಭ ಕಾರ್ಯಗಳನ್ನು ಆಯೋಜಿಸಬಹುದು, ನಿಮ್ಮ ಮನೆಗೂ ಖರ್ಚು ಮಾಡಬಹುದು. ಮಂಗಳನ ಈ ಸಂಚಾರವು ನಿಮ್ಮ ಪ್ರೇಮ ಜೀವನಕ್ಕೂ ಉತ್ತಮವಾಗಿರುತ್ತದೆ.
ಧನು ರಾಶಿ
ಧನು ರಾಶಿಯವರಲ್ಲಿ ಮಂಗಳ 9ನೇ ಮನೆಯಲ್ಲಿ ಇರಲಿದೆ. ಈ ಮನೆಯಲ್ಲಿ ಮಂಗಳನ ಸ್ಥಾನದಿಂದಾಗಿ, ನೀವು ಧಾರ್ಮಿಕ ಪ್ರಯಾಣವನ್ನು ಮಾಡುತ್ತೀರಿ ಮತ್ತು ನಿಮ್ಮ ಗುರುಗಳ ಬೆಂಬಲವನ್ನು ನೀವು ಪಡೆಯುತ್ತೀರಿ. ಈ ಸಮಯದಲ್ಲಿ, ವಿದೇಶಗಳೊಂದಿಗೆ ಸಂಬಂಧ ಹೊಂದಿರುವವರು ಉತ್ತಮ ಲಾಭವನ್ನು ನಿರೀಕ್ಷಿಸುತ್ತಾರೆ . ನಿಮ್ಮ ವಿದ್ಯಾಭ್ಯಾಸಕ್ಕಾಗಿ ನೀವು ವಿದೇಶಕ್ಕೆ ಹೋಗಲು ಬಯಸಿದರೆ ಸಮಯವು ಅನುಕೂಲಕರವಾಗಿರುತ್ತದೆ. ಈ ಸಮಯದಲ್ಲಿ ನೀವು ನಿಮ್ಮ ಸಹೋದರರ ಬೆಂಬಲವನ್ನು ಪಡೆಯುತ್ತೀರಿ ಮತ್ತು ಪೂರ್ವಜರ ಆಸ್ತಿಗೆ ಸಂಬಂಧಿಸಿದಂತೆ ಯಾವುದೇ ವಿವಾದವಿದ್ದರೆ, ಅದನ್ನು ಸಹ ಪರಿಹರಿಸಬಹುದು. ನೀವು ವಾಹನ ಅಥವಾ ಕಟ್ಟಡವನ್ನು ಖರೀದಿಸಬಹುದು ಅಲ್ಲದೆ ನಿಮ್ಮ ಮನೆಯಲ್ಲಿ ಕೆಲವು ಶುಭ ಕಾರ್ಯಗಳನ್ನು ಆಯೋಜಿಸಬಹುದು.
ಮಕರ ರಾಶಿ
ಮಕರ ರಾಶಿಯವರಲ್ಲಿ ಮಂಬಗಳ 8ನೇ ಮನೆಯಲ್ಲಿ ಇರಲಿದೆ. ಎಂಟನೇ ಮನೆಯೆಂದರೆ ಅದು ಹಠಾತ್ ಘಟನೆಗಳ ಮನೆಯಾಗಿದೆ. ಈ ಮನೆಯಲ್ಲಿ ಮಂಗಳ ಸಂಚಾರದಿಂದ ನಿಮಗೆ ತೊಂದರೆಯಾಗಬಹುದು. ಈ ಸಮಯದಲ್ಲಿ ನಿಮ್ಮ ವಾಹನವನ್ನು ಎಚ್ಚರಿಕೆಯಿಂದ ಚಲಾಯಿಸಿ. ಈ ಸಮಯವನ್ನು ವ್ಯಾಪಾರ ವರ್ಗಕ್ಕೆ ಅನುಕೂಲಕರವಲ್ಲ. ಈ ಸಮಯದಲ್ಲಿ ನಿಮ್ಮ ವ್ಯವಹಾರದಲ್ಲಿ ಹಣದ ಕೊರತೆಯನ್ನು ನೀವು ಎದುರಿಸಬೇಕಾಗಬಹುದು. ಈ ಸಮಯದಲ್ಲಿ, ನಿಮ್ಮ ಧೈರ್ಯ, ಆತ್ಮವಿಶ್ವಾಸ ಕಡಿಮೆಯಾಗುವುದು. ಈ ಸಮಯದಲ್ಲಿ ನೀವು ಹಣಕಾಸಿನ ವ್ಯವಹಾರಗಳಲ್ಲಿಯೂ ಜಾಗರೂಕರಾಗಿರಬೇಕು.
ಕುಂಭ ರಾಶಿ
ಕುಂಭ ರಾಶಿಯವರಲ್ಲಿ ಮಂಗಳ 7ನೇ ಮನೆಯಲ್ಲಿ ಇರಲಿದೆ. ವ್ಯಾಪಾರ ವರ್ಗದವರಿಗೆ ಈ ಮಂಗಳ ಸಂಚಾರವು ತುಂಬಾ ಒಳ್ಳೆಯದು. ಈ ಸಮಯದಲ್ಲಿ ನೀವು ಹೊಸ ಹೂಡಿಕೆಯನ್ನು ಮಾಡಿದರೆ ಅದರಲ್ಲಿ ಪ್ರಗತಿ ಕಾಣಬಹುದು. ನೀವು ಪಾಲುದಾರಿಕೆಯಲ್ಲಿ ಯಾವುದೇ ಕೆಲಸವನ್ನು ಪ್ರಾರಂಭಿಸಲು ಬಯಸಿದರೆ ಅದಕ್ಕೆ ಈ ಸಮಯ ಉತ್ತಮವಾಗಿದೆ. ಈ ಸಮಯದಲ್ಲಿ ನಿಮ್ಮ ಕುಟುಂಬದಲ್ಲಿ ನಿಮಗೆ ಕೆಲವು ದೊಡ್ಡ ಜವಾಬ್ದಾರಿಗಳನ್ನು ನೀಡಬಹುದು. ಕೋರ್ಟ್‌ನಲ್ಲಿ ಏನಾದರೂ ಕೇಸ್ ನಡೆಯುತ್ತಿದ್ದರೆ ಅದರ ತೀರ್ಪು ನಿಮ್ಮ ಪರ ಬರಲಿದೆ. ವಿದ್ಯಾರ್ಥಿ ವರ್ಗಕ್ಕೂ ಈ ಸಮಯ ತುಂಬಾ ಒಳ್ಳೆಯದು.
ಮೀನ ರಾಶಿ
ಮೀನ ರಾಶಿಯವರಲ್ಲಿ ಮಂಗಳ 6ನೇ ಮನೆಯಲ್ಲಿ ಇರಲಿದೆ. ಆರನೇ ಮನೆಯಲ್ಲಿ ಮಂಗಳನ ಸಂಚಾರವು ತುಂಬಾ ಶುಭ ಫಲಿತಾಂಶಗಳನ್ನು ನೀಡುತ್ತದೆ. ಈ ಅವಧಿಯಲ್ಲಿ ನಿಮ್ಮ ಕೆಲಸದಲ್ಲಿ ನೀವು ಬಯಸಿದ ಬಡ್ತಿಯನ್ನು ಪಡೆಯಬಹುದು. ಈ ಸಮಯದಲ್ಲಿ ನೀವು ವಿದೇಶಕ್ಕೆ ಹೋಗುವ ಅವಕಾಶವನ್ನು ಸಹ ಪಡೆಯಬಹುದು. ಈ ಸಮಯದಲ್ಲಿ ನಿಮ್ಮ ಆತ್ಮವಿಶ್ವಾಸ ಹೆಚ್ಚಿರಲಿದೆ. ಸಮಾಜದಲ್ಲಿ ನೀವು ಗೌರವವನ್ನು ಪಡೆಯುತ್ತೀರಿ.



Click it and Unblock the Notifications











