ಮಂಗಳ ಗೋಚಾರ ಫಲ: ಜು.1-ಆ.18ರವರೆಗೆ ಈ 4 ರಾಶಿಯವರಿಗೆ ಮಂಗಳ ದೋಷ, ಪರಿಹಾರವೇನು?

ಜುಲೈ 1ಕ್ಕೆ ಮಂಗಳ ಸಿಂಹ ರಾಶಿಯನ್ನು ಪ್ರವೇಶಿಸಲಿದೆ. ಈ ಸಂಚಾರ ದ್ವಾದಶ ರಾಶಿಗಳಲ್ಲಿ ಕೆಲವು ರಾಶಿಗಳ ಮೇಲೆ ಸಕರಾತ್ಮಕ ಇನ್ನು ಕೆಲವು ರಾಶಿಗಳ ಮೇಲೆ ನಕರಾತ್ಮಕ ಪ್ರಭಾವ ಬೀರಲಿದೆ. ಈ ಅವಧಿಯಲ್ಲಿ ಅದರೆ ಆಗಸ್ಟ್‌ 18ರವರೆಗೆ ಈ ರಾಶಿಯವರು ತುಂಬಾನೇ ಜಾಗ್ರತೆವಹಿಸಬೇಕಾಗಿದೆ.

ಮೇಷ ರಾಶಿ

ಮಂಗಳ ಸಂಚಾರದ ಅವಧಿಯಲ್ಲಿ ಮೇಷ ರಾಶಿಯವರು ಕೆಲವು ಅಡೆತಡೆಗಳನ್ನು ಎದುರಿಸಬೇಕಾಗಬಹುದು. ವೃತ್ತಿಜೀವನದ ಪ್ರಗತಿಯಲ್ಲಿ ಏರಿಳಿತಗಳನ್ನು ಎದುರಿಸಬಹುದು, ಕೆಲಸದ ಜಾಗದಲ್ಲಿ ನೀವು ಬಯಸಿದಂತೆ ಲಾಭ ಗಳಿಸಲು ಸಾಧ್ಯವಾಗಲ್ಲ.

Mars Transit In Leo July 1: Unlucky To These 4 zodiac Signs

ಇಲ್ಲದಿದ್ದರೆ ಹೆಚ್ಚಿನ ಪ್ರಯೋಜನಗಳನ್ನು ಪಡೆಯುವಲ್ಲಿ ವಿಳಂಬವಾಗಬಹುದು. ವ್ಯವಹಾರಸ್ಥರಿಗೆ ಹೆಚ್ಚಿನ ಯಶಸ್ಸು ಸಿಗುವುದಿಲ್ಲ. ಆರ್ಥಿಕ ಸ್ಥಿತಿಯ ಬಗ್ಗೆ ಹೇಳುವುದಾದರೆ ಖರ್ಚುಗಳು ಹೆಚ್ಚಾಗಬಹುದು. ಈ ಅವಧಿಯಲ್ಲಿ ಉಳಿತಾಯ ಮಾಡಲು ಸ್ವಲ್ಪ ಕಷ್ಟವಾಗಬಹುದು. ಸಂಗಾತಿಯ ಜೊತೆ ಭಿನ್ನಾಭಿಪ್ರಾಯ ಉಂಟಾಗಬಹುದು, ಒಟ್ಟಿನಲ್ಲಿ ಮಂಗಳ ಸಂಚಾರದ ಈ ಅವಧಿ ನಿಮಗೆ ಸವಾಲಿನಿಂದ ಕೂಡಿದೆ.

ವೃಷಭ ರಾಶಿ

ವೃಷಭ ರಾಶಿಯವರಲ್ಲಿ ಮಂಗಳ ನಾಲ್ಕನೇ ಮನೆಯಲ್ಲಿ ಇರುತ್ತಾನೆ. ಈ ಅವಧಿಯಲ್ಲಿ ಆರೋಗ್ಯ ಸಮಸ್ಯೆ ಉಂಟಾಗಬಹುದು. ಖರ್ಚುಗಳು ಹೆಚ್ಚಾಗಬಹುದು, ಆಸ್ಪತ್ರೆಗೆ ಹೆಚ್ಚು ಹಣ ಖರ್ಚು ಬರಬಹುದು. ಆಸ್ತಿಗೆ ಸಂಬಂಧಿಸಿದ ಸಮಸ್ಯೆ ಉಂಟಾಗಬಹುದು. ವೃತ್ತಿ ಜೀವನದಲ್ಲಿ ಕೆಲವು ಅಡೆತಡೆ ಉಂಟಾಗಬಹುದು. ನೀವು ಉತ್ತಮ ಭವಿಷ್ಯಕ್ಕಾಗಿ ಕೆಲಸವನನ್ನು ಬದಲಾಯಿಸಲು ಯೋಚಿಸಿದರೂ ಈ ಅವಧಿಯಲ್ಲಿ ಸ್ವಲ್ಪ ಕಾಯುವುದು ಒಳ್ಳೆಯದು, ನೀವು ಸ್ವಲ್ಪ ಕಾಯುವುದು ಒಳ್ಳೆಯದು. ಈ ತಿಂಗಳು ಖರ್ಚು ಹೆಚ್ಚಾಗುವುದು. ಆರ್ಥಿಕ ಸಮಸ್ಯೆ ಹೆಚ್ಚಾಗುವುದು. ಈ ಸಮಯದಲ್ಲಿ ಕುಟುಂಬ ಸದಸ್ಯರ ನಡುವೆ ಭಿನ್ನಾಭಿಪ್ರಾಯವಿರಬಹುದು.

ಕನ್ಯಾ ರಾಶಿ

ಕನ್ಯಾ ರಾಶಿಯವರಲ್ಲಿ ಮಂಗಳ 12ನೇ ಮನೆಗೆ ಸಂಚರಿಸಲಿದೆ. ಈ ರಾಶಿಯವರು ಅಡೆತಡೆಗಳು ಮತ್ತು ನಷ್ಟಗಳನ್ನು ಎದುರಿಸಬೇಕಾಗಬಹುದು. ಈ ಸಾರಿಗೆಯ ಸಮಯದಲ್ಲಿ ನೀವು ಬಯಸಿದ ಫಲ ಪಡೆಯಲು ಸ್ವಲ್ಪಕಷ್ಟವಾಗುವುದು. ಈ ಸಂಚಾರದ ಸಮಯದಲ್ಲಿ ನಿಮಮ್ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ವೃತ್ತಿಜೀವನದಲ್ಲಿ ನಿಮಗೆ ಕೆಲಸದಲ್ಲಿ ಅಭದ್ರತೆ ಕಾಡಬಹುದು, ಕೆಲವರು ಕೆಲಸ ಕಳೆದುಕೊಳ್ಳಬಹುದು. ಸಿಂಹ ರಾಶಿಯಲ್ಲಿ ಮಂಗಳ ಸಂಚಾರದ ಸಮಯದಲ್ಲಿ ವ್ಯಾಪಾರ ಮಾಡುವವರು ಲಾಭ ಗಳಿಸಲು ಕಷ್ಟವಾಗುವುದು ಈ ಅವಧಿಯಲ್ಲಿ ಅವಸರದಿಮದ ನಿರ್ಧಾರ ತೆಗೆದುಕೊಳ್ಳಬೇಡಿ.

ಮಕರ ರಾಶಿ

ಮಕರ ರಾಶಿಯವರಲ್ಲಿ ಮಂಗಳ 8ನೇ ಮನೆಯಲ್ಲಿ ಇರಲಿದೆ. ಈ ಸಂಚಾರದ ಸಮಯದಲ್ಲಿ ತಮ್ಮ ಅಭಿವೃದ್ಧಿಯಲ್ಲಿ ಸಮಸ್ಯೆಗಳನ್ನು ಮತ್ತು ಅಡೆತಡೆಗಳನ್ನು ಎದುರಿಸಬೇಕಾಗುವುದು. ನೀವು ಬಯಸಿದಂತೆ ಏನು ನಡೆಯುತ್ತಿಲ್ಲ ಎಂಬ ಭಾವನೆ ಉಂಟಾಗಬಹುದು. ಮಹತ್ವಾಕಾಂಕ್ಷೆಗಳನ್ನು ಸುಲಭವಾಗಿ ಪೂರೈಸಲು ಸಾಧ್ಯವಾಗುವುದಿಲ್ಲ. ಕೆಲಸದಲ್ಲೂ ತುಂಬಾನೇ ಸವಾಲುಗಳು ಉಂಟಾಗುವುದು. ಈ ಸಾಗಣೆಯ ಸಮಯದಲ್ಲಿ, ವ್ಯಾಪಾರಸ್ಥರು ಸಮಸ್ಯೆಗಳನ್ನು ಮತ್ತು ಅಡೆತಡೆಗಳನ್ನು ಎದುರಿಸಬೇಕಾಗಬಹುದು. ಹಣಕಾಸಿನ ವಿಷಯದಲ್ಲಿ, ಈ ಸಾಗಣೆಯು ಅನುಕೂಲಕರವಾಗಿಲ್ಲದಿರಬಹುದು ಈ ಅವಧಿಯಲ್ಲಿ ಖರ್ಚು ಹೆಚ್ಚಾಗಲಾಗಿದೆ. ಆರೋಗ್ಯ ಸಮಸ್ಯೆಯನ್ನೂ ಎದುರಿಸಬೇಕಾಗಬಹುದು.

ಮಂಗಳ ದೋಷಕ್ಕೆ ಈ ಪರಿಹಾರ ಮಾಡಿ

  • ಮಂಗಳವಾರ ಶ್ರೀ ಗಣೇಶನಿಗೆ ಪೂಜೆಯನ್ನು ಮಾಡಿ.
  • ಬೆಳಗ್ಗೆ ಎದ್ದು ಪ್ರತಿದಿನ 108 ಬಾರಿ 'ಓಂ ಗಂ ಗಣಪತೆಯೇ ನಮಃ' ಪಠಿಸಿ.
  • ಸಾಧ್ಯವಾದರೆ ಮಂಗಳವಾರ ರಕ್ತದಾನ ಮಾಡಿ.
  • ಮಂಗಳ ಯಂತ್ರವನ್ನು ಪೂಜಿದಿ
  • ಮಂಗಳವಾರ ಉಪವಾಸ ಇದ್ದು ಶ್ರೀ ಗಣೇಶನನ್ನು ಪೂಜಿಸಿ.
  • ಮಾತೆ ದುರ್ಗೆಗೆ ಪ್ರತಿದಿನ ಪೂಜೆ ಮಾಡಿ ಮಂಗಳ ಚಂಡಿಕಾ ಶ್ಲೋಕ ಪಠಿಸಿ
  • ಪಕ್ಷಿಗಳಿಗೆ ಪ್ರತಿನಿತ್ಯ ಧಾನ್ಯ ಹಾಕಿ
  • ಪ್ರತಿದಿನ ಹನುಮಾನ್ ಚಾಲೀಸ ಪಠಿಸಿ.

English summary

Mars Transit In Leo July 1: Unlucky To These 4 zodiac Signs

Mars Transit In Leo July 1:This period not good for these 4 zodiac signs and what are the remedies to follow.
X
Desktop Bottom Promotion