Latest Updates
-
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು! -
ವಿಶ್ವ ಫಿಸಿಯೋಥೆರಪಿ ದಿನ: ಹೃದಯದ ಆರೋಗ್ಯ ಮತ್ತು ನೋವು ಮುಕ್ತ ಜೀವನಕ್ಕೆ 12 ನಿಮಿಷದ ಮ್ಯಾಜಿಕ್ ವರ್ಕೌಟ್!
ಸಿಂಹ ರಾಶಿಗೆ ಮಂಗಳನ ಸಂಚಾರ: 49 ದಿನ ಈ 3 ರಾಶಿಯವರಿಗೆ ಬಯಸಿದ್ದು ನೆರವೇರುವ ಸಮಯ
ನಮ್ಮ ರಾಶಿಯಲ್ಲಿ ಮಂಗಳನ ಸ್ಥಾನ ಚೆನ್ನಾಗಿದ್ದರೆ ಸಂತೋಷ , ಸಂಪತ್ತು, ಉತ್ತಮ ಆರೋಗ್ಯ ಮತ್ತು ತೀಕ್ಷ್ಣವಾದ ಬುದ್ಧಿಶಕ್ತಿಯನ್ನು ನೀಡುತ್ತದೆ. ನಮ್ಮ ಗೌರವ, ಸ್ಥಾನಮಾನ ಹೆಚ್ಚಿಸುತ್ತದೆ. ಜುಲೈ 1ಕ್ಕೆ ಮಂಗಳ ಗ್ರಹವು ಸಿಂಹ ರಾಶಿಗೆ ಪ್ರವೇಶಿಸುತ್ತದೆ.
49 ದಿನಗಳವರೆಗೆ ಇದೇ ರಾಶಿಯಲ್ಲಿದ್ದು ಆಗಸ್ಟ್ 18ಕ್ಕೆ ಕನ್ಯಾ ರಾಶಿಗೆ ಪ್ರವೇಶಿಸಲಿದೆ. ಈ ಅವಧಿ ಕೆಲವೊಂದು ರಾಶಿಯವರಿಗೆ ತುಂಬಾನೇ ಅನುಕೂಲಕರವಾಗಿದೆ. ಅವರಿಗೆ ಮಂಗಳನ ಬಲದಿಂದ ಅದೃಷ್ಟದ ಬೆಂಬಲವಿರುತ್ತದೆ. ಆ ಅದೃಷ್ಟದ ರಾಶಿಗಳು ಯಾವುವು ಎಂದು ನೋಡೋಣ ಬನ್ನಿ:

ಸಿಂಹ ರಾಶಿ
ಮಂಗಳ ಸಿಂಹ ರಾಶಿಗೆ ಸಂಚರಿಸಲಿದೆ. ಈ ಅವಧಿ ಸಿಂಹ ರಾಶಿಯವರಿಗೆ ತುಂಬಾನೇ ಮಂಗಳಕರವಾಗಿದೆ. ಈ ಅವಧಿಯಲ್ಲಿ ಎಲ್ಲಾ ರಾಶಿಗಳಿಗಿಂತ ಸಿಂಹ ರಾಶಿಯವರ ಮೇಲೆ ಮಂಗಳ ಗ್ರಹದ ಗೃಹಬಲ ಅಧಿಕವಾಗಿದೆ, ಇದರಿಂದಾಗಿ ನೀವು ಈ ಸಮಯದಲ್ಲಿ ಆಸ್ತಿಯನ್ನು ಖರೀದಿಸಬಹುದು ಅಥವಾ ಯಾವುದೇ ಆಸ್ತಿಯಿಂದ ಲಾಭ ಪಡೆಯಬಹುದು. ಗ ಆರ್ಥಿಕ ದೃಷ್ಟಿಯಿಂದಲೂ ಈ ಅವಧಿ ತುಂಬಾನೇ ಚೆನ್ನಾಗಿರಲಿದೆ. ಹೊಸ ಉದ್ಯೋಗಾವಕಾಶಗಳು ದೊರೆಯಲಿದೆ. ಉದ್ಯೋಗಿಗಳು ವೃತ್ತಿ ಜೀವನದಲ್ಲಿ ಬಡ್ತಿ ಪಡೆಯುತ್ತಾರೆ. ಇನ್ನು ವಿದೇಶಕ್ಕೆ ಹೋಗಬೇಕೆಂದು ಬಯಸುತ್ತಿರುವವರಿಗೂ ಈ ಅವಧಿಯಲ್ಲಿ ಒಳ್ಳೆಯ ಅವಕಾಶಗಳು ದೊರೆಯಲಿದೆ.
ವ್ಯಾಪಾರಸ್ಥರು ಈ ಅವಧಿಯಲ್ಲಿ ಹಣ ಗಳಿಸುವ ಮೂಲಕ ವ್ಯವಹಾರದಲ್ಲಿ ಯಶಸ್ಸನ್ನು ಪಡೆಯುತ್ತಾರೆ. ಮಂಗಳ ಗ್ರಹ ನಿಮ್ಮ ಲಗ್ನ ಮನೆಯಲ್ಲಿರುವ ಈ ಸಮಯದಲ್ಲಿ ವ್ಯವಹಾರದಲ್ಲಿ ಯಶಸ್ಸನ್ನು ಗಳಿಸುತ್ತೀರಿ. ಈ ಅವಧಿಯಲ್ಲಿ ನಿಮ್ಮ ಆದಾಯ ಹೆಚ್ಚಾಗಲಿದೆ. ಇದರಿಂದಾಗಿ ಹಣವನ್ನು ಉಳಿಸಲು ಸಾಧ್ಯವಾಗುವುದು. ಸಂಬಂಧದ ಬಗ್ಗೆ ನೋಡುವುದಾದರೆ ಈ ಸಂಚಾರ ಧನಾತ್ಮಕ ಫಲಿತಾಂಶಗಳನ್ನು ತರುತ್ತದೆ. ಕುಟುಂಬ ಜೀವನದಲ್ಲಿ ಸಂತೋಷ ಇರಲಿದೆ. ನಿಮ್ಮ ಆರೋಗ್ಯ ಚೆನ್ನಾಗಿರಲಿದೆ, ಆರ್ಥಿಕವಾಗಿ ಯಾವುದೇ ಚಿಂತೆ ಇರಲ್ಲ.
ಪರಿಹಾರ: ಪ್ರತಿದಿನ 21 ಬಾರಿ "ಓಂ ನಮೋ ನರಸಿಂಹಾಯ" ಜಪಿಸಿ.
ಮೇಷ ರಾಶಿ
ಮಂಗಳ ಸಿಂಹ ರಾಶಿಗೆ ಸಂಚರಿಸಿದಾಗ ಮೇಷ ರಾಶಿಯವರಲ್ಲಿ 5ನೇ ಮನೆಯಲ್ಲಿ ಇರಲಿದೆ. ಮಂಗಳನ ಈ ಸ್ಥಾನವು ದೊಡ್ಡ ನಿರ್ಧಾರಗಳನ್ನು ತೆಗೆದುಕೊಳ್ಳಲು ಅನುಕೂಲಕರವಾಗಿರುತ್ತದೆ. ಈ ಅವಧಿಯಲ್ಲಿ ನೀವು ಯಾವುದೇ ನಿರ್ಧಾರ ತೆಗೆದುಕೊಂಡರೂ ಅದರ ಸಕಾರಾತ್ಮಕ ಫಲಿತಾಂಶಗಳನ್ನು ಪಡೆಯುತ್ತೀರಿ. ಮೇಷ ರಾಶಿಯವರು ಈ ಅವಧಿಯಲ್ಲಿ ವೃತ್ತಿ ಜೀವನದಲ್ಲಿ ಪ್ರಗತಿ ಕಾಣುತ್ತಾರೆ, ಆರ್ಥಿಕ ವಿಷಯಗಳಲ್ಲಿ ಅಪಾರ ಲಾಭವನ್ನು ಪಡೆಯುವ ಸಾಧ್ಯತೆಯಿದೆ.
ಈ ಮಂಗಳ ಸಂಚಾರದ ಸಮಯದಲ್ಲಿ ವ್ಯಾಪಾರಸ್ಥರು ಉತ್ತಮ ಲಾಭವನ್ನು ಪಡೆಯಬಹುದು. ಈ ಹಿಂದೆ ವ್ಯಾಪಾರದಲ್ಲಿ ಎದುರಿಸಿದ ಸವಾಲುಗಳಿಂದ ಹೊರಬರಲು ಸಾಧ್ಯವಾಗುವುದು, ಈ ಅವಧಿ ನಿಮಗೆ ಲಾಭದಾಯಕವಾಗಲಿದೆ. ಈ ಸಮಯದಲ್ಲಿ ಹಣದ ಉಳಿತಾಯ ಮಾಡಲು ಸಾಧ್ಯವಾಗುವುದು.
ಇನ್ನು ಸಂಬಂಧದ ಬಗ್ಗೆ ಹೇಳುವುದಾದರೆ ಸಂಬಂಧದಲ್ಲಿ ಸ್ವಲ್ಪ ಏರಳಿತಗಳಿದ್ದರೂ ಸಮಸ್ಯೆ ಬಗೆಹರಿಯುವುದು. ಹಣದ ವಿಷಯದಲ್ಲಿ ಚಿಂತೆಯಿಲ್ಲ, ಆದಾಯಕ್ಕೆ ಹೊಸ ಮಾರ್ಗಗಳು ಸಿಗುವುದು, ಆರ್ಥಿಕ ಸ್ಥಿತಿ ಈ ಅವಧಿಯಲ್ಲಿ ಬಲವಾಗಲಿದೆ.
ಪರಿಹಾರ: ಪ್ರತಿದಿನ 27 ಬಾರಿ "ಓಂ ಭೌಮಾಯ ನಮಃ" ಎಂದು ಜಪಿಸಿ.
ಧನು ರಾಶಿ
ಧನು ರಾಶಿಯವರಲ್ಲಿ ಮಂಗಳ 9ನೇ ಮನೆಯಲ್ಲಿ ಇರಲಿದೆ. ಈ ಸಮಯದಲ್ಲಿ ನಿಮ್ಮ ವೃತ್ತಿ ಬದುಕಿನ ಬಗ್ಗೆ ನೋಡುವುದಾದರೆ ಈ ಮಂಗಳ ಸಂಚಾರವು ನಿಮಗೆ ಅದ್ಭುತವಾಗಿರುತ್ತದೆ. ನೀವು ಬಯಸಿದ ಬಡ್ತಿ ಪಡೆಯುತ್ತೀರಿ. ನೀವು ವಿದೇಶದಿಂದಲೂ ಉದ್ಯೋಗಾವಕಾಶಗಳನ್ನು ಪಡೆಯಬಹುದು. ಈ ಸಾಗಣೆಯ ಸಮಯದಲ್ಲಿ ಉದ್ಯಮಿಗಳು ಹೆಚ್ಚಿನ ಲಾಭವನ್ನು ಗಳಿಸುವ ನಿರೀಕ್ಷೆಯಿದೆ. ವ್ಯವಹಾರದಲ್ಲಿ ನಿಮ್ಮ ವ್ಯಾಪಾರಕ್ಕೆ ಫಲಪ್ರದವಾಗುವಂತಹ ಕೆಲವು ಸಂದರ್ಭಗಳು ಉಂಟಾಗಲಿದೆ.
ಆರ್ಥಿಕ ಸ್ಥಿತಿಯ ದೃಷ್ಟಿಯಿಂದ ಸಿಂಹ ರಾಶಿಯಲ್ಲಿ ಮಂಗಳ ಸಂಚಾರವು ಅನುಕೂಲಕರವಾಗಿರುತ್ತದೆ. ಈ ಅವಧಿಯಲ್ಲಿ ನಿಮಗೆ ಹಣವನ್ನು ಗಳಿಸಲು ಮತ್ತು ಉಳಿಸಲು ಸಾಧ್ಯವಾಗುವುದು. ಅದೃಷ್ಟವು ಪ್ರತಿ ಹಂತದಲ್ಲೂ ಅವರನ್ನು ಬೆಂಬಲಿಸುತ್ತದೆ. ಕುಟುಂಬ ಜೀವನದಲ್ಲಿ ಸಂತೋಷ ಇರಲಿದೆ. ಧನು ರಾಶಿಯವರ ಆರೋಗ್ಯ ಕೂಡ ಚೆನ್ನಾಗಿರಲಿದೆ.
ಪರಿಹಾರ: ಗುರುವಾರ ಶಿವನಿಗೆ ರುದ್ರಾಭಿಷೇಕ ಮಾಡಿ.



Click it and Unblock the Notifications
