Latest Updates
-
ಟೆಲಿಗ್ರಾಂ ಬಳಕೆದಾರರೇ ಗಮನಿಸಿ: ಸೇವೆ ಆರಂಭವಾದರೂ ಈ ಬದಲಾವಣೆ ಮರೆಯದಿರಿ! -
ಬಿಸಿಗಾಳಿಯ ಎಚ್ಚರಿಕೆ: ಅಡುಗೆ ಮಾಡದೆಯೇ ದೇಹಕ್ಕೆ ತಂಪು ನೀಡುವ ಪ್ರೋಟೀನ್ ಆಹಾರಗಳಿವು! -
ಮಳೆಯ ನಡುವೆ ಯುಜಿಸಿ ನೆಟ್ ಪರೀಕ್ಷೆ: ಸಂಗಾತಿಯ ಈ ಸಣ್ಣ ಬೆಂಬಲವೇ ಯಶಸ್ಸಿನ ಗುಟ್ಟು -
ಮಳೆಗಾಲದಲ್ಲಿ ಮನೆಯ ಪೀಠೋಪಕರಣ ಹಾಳಾಗುತ್ತಿದೆಯೇ? ಬೂಸು ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಮುಂಬೈ ಆರೆಂಜ್ ಅಲರ್ಟ್: ಮಳೆಯಲ್ಲಿ ಆಫೀಸ್ ಹೋಗುವವರೇ, ಈ 'ನೋ-ಕುಕ್' ಪ್ರೋಟೀನ್ ಮೀಲ್ಸ್ ಮಿಸ್ ಮಾಡ್ಬೇಡಿ! -
ಅಮೆಜಾನ್ ಪ್ರೈಮ್ ಡೇ ಸೇಲ್: ಕಡಿಮೆ ಬೆಲೆಗೆ ವಸ್ತುಗಳನ್ನು ಖರೀದಿಸಲು ಈ ಸ್ಮಾರ್ಟ್ ಟ್ರಿಕ್ಸ್ ಮಿಸ್ ಮಾಡ್ಬೇಡಿ! -
ಯೋಗದ ನಂತರ ಮೈಕೈ ನೋವು ಕಾಡುತ್ತಿದೆಯೇ? ಕಚೇರಿಯಲ್ಲಿ ಕೆಲಸ ಮಾಡುವಾಗ ಈ 12 ನಿಮಿಷದ ಟಿಪ್ಸ್ ಪಾಲಿಸಿ -
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ
ಶನಿ ಮಂಗಳ ದೋಷ: ಈ 5 ರಾಶಿಯವರು ಜಾಗ್ರತೆವಹಿಸಬೇಕಾಗಿದೆ!
ಜುಲೈ 1ಕ್ಕೆ ಮಂಗಳ ಸಿಂಹ ರಾಶಿಯನ್ನು ಪ್ರವೇಶಿಸಲಿದೆ. ಮಂಗಳ ಅಗ್ನಿಯ ಅಂಶ, ಇದು ಸಿಂಹ ರಾಶಿಯನ್ನು ಪ್ರವೇಶಿಸಿದಾಗ ಇದರ ಪ್ರಭಾವ ತುಂಬಾನೇ ತೀವ್ರವಾಗುವುದು. ಇದಲ್ಲದೆ ಶನಿ ಮತ್ತು ಮಂಗಳವು ಸಂಸಪ್ತಕ ಯೋಗವನ್ನು ರೂಪಿಸುತ್ತದೆ. ಶನಿಯು ಇದೀಗ ಕುಂಭ ರಾಶಿಯಲ್ಲಿ ಹಿಮ್ಮುಖ ಚಲನೆಯಲ್ಲಿದೆ. ಅಂತಹ ಪರಿಸ್ಥಿತಿಯಲ್ಲಿ, ಶನಿ ಮತ್ತು ಮಂಗಳ ಮುಖಾಮುಖಿಯಾದಾಗ ಸಂಸಪ್ತಕ ಯೋಗ ಏರ್ಪಡುವುದು. ಇದು ಕೆಲವು ರಾಶಿಯವರಿಗೆ ತುಂಬಾನೇ ಪ್ರತಿಕೂಲವಾಗಿದೆ. ಸಂಸಪ್ತಕ ಯೋಗದ ಸಮಯದಲ್ಲಿ ಈ ರಾಶಿಯವರು ಹೆಚ್ಚು ಜಾಗ್ರತೆವಹಿಸಬೇಕು.

ಮೇಷ ರಾಶಿ
ಮೇಷ ರಾಶಿಯವರು ಈ ಸಮಯದಲ್ಲಿ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿವಹಿಸಬೇಕಾಗಿದೆ. ಈ ಅವಧಿಯಲ್ಲಿ ಹೊಟ್ಟೆಯ ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆ ಉಂಟಾಗಬಹುದು. ಈ ಅವಧಿಯಲ್ಲಿ ನೀವು ಆಹಾರಕ್ರಮದ ಕಡೆಗೆ ತುಂಬಾನೇ ಗಮನಹರಿಸಬೇಕಾಗಿದೆ. ನೀವು ಉರಿದ ಹಾಗೂ ಮಸಾಲೆಯುಕ್ತ ಪದಾರ್ಥಗಳಿಂದ ದೂರವಿರಿ. ಈ ಅವಧಿಯಲ್ಲಿ ವಾಹನ ಚಲಾಯಿಸುವಾಗ ಹೆಚ್ಚು ಜಾಗ್ರತೆವಹಿಸಬೇಕು. ಪ್ರೇಮಿಗಳಿಗೂ ಈ ಅವಧಿ ಅನುಕೂಲಕರವಲ್ಲ. ಒಟ್ಟಾರೆಯಾಗಿ ಹೇಳುವುದಾದರೆ ಶನಿ ಮತ್ತು ಮಂಗಳನ ಪ್ರಭಾವವು ನಿಮ್ಮ ವೈಯಕ್ತಿಕ ಜೀವನದ ಮೇಲೆ ಹೆಚ್ಚಿನ ಒತ್ತಡ ಬೀರಲಿದೆ.
ಕಟಕ ರಾಶಿ
ಈ ಅವಧಿಯಲ್ಲಿ ಕಟಕ ರಾಶಿಯವರ ವರ್ತನೆಯಲ್ಲಿ ಬದಲಾವಣೆಯಾಗಬಹುದು, ನೀವು ಸ್ವಲ್ಪ ಒರಟಾಗಿ ನಡೆದುಕೊಳ್ಳಬಹುದು, ನಿಮ್ಮ ತೀಕ್ಷ್ಣ ಮಾತು ನಿಮ್ಮವರನ್ನು ನೋಯಿಸಬಹುದು. ನೀವು ನಿಮ್ಮ ಮಾತಿನ ಮೇಲೆ ಗಮನಹರಿಸಬೇಕಾಗಿದೆ. ಯಾರ ಜೊತೆಗಾದರೂ ವಾದ ಮಾಡಲು ಹೋಗಬೇಡಿ. ನಿಮ್ಮ ಸಂಬಂಧದ ಕಡೆಗೆ ವಿಶೇಷ ಗಮನಹರಿಸಬೇಕಾಗಿದೆ. ಈ ಅವಧಿ ವಿದ್ಯಾರ್ಥಿಗಳಿಗೆ ಉತ್ತಮವಾಗಿದೆ.
ಕನ್ಯಾ ರಾಶಿ
ಕನ್ಯಾ ರಾಶಿಯವರು ಕೂಡ ಈ ಅವಧಿಯಲ್ಲಿ ಜಾಗ್ರತೆವಹಿಸಬೇಕಾಗಿದೆ. ನೀವು ನೋಡಿಕೊಂಡು ಖರ್ಚು ಮಾಡಬೇಕು. ಇಲ್ಲದಿದ್ದರೆ ಆರ್ಥಿಕ ಸಮಸ್ಯೆಗೆ ಸಿಲುಕಬೇಕಾಗಿದೆ. ವಿದೇಶಕ್ಕೆ ಹೋಗುವ ಪ್ಲ್ಯಾನ್ ಮಾಡುತ್ತಿದ್ದರೆ ಸ್ವಲ್ಪ ಸಮಯ ಕಾಯಬೇಕಾಗುತ್ತದೆ. ಈ ಸಮಯದಲ್ಲಿ ನೀವು ಕೆಲವು ಆರೋಗ್ಯ ಸಂಬಂಧಿತ ಸಮಸ್ಯೆಗಳನ್ನು ಕೂಡ ಎದುರಿಸಬಹುದು. ಹಾಗಾಗಿ ನಿಮ್ಮ ಆರೋಗ್ಯದ ಕಡೆಗೆ ಗಮನಹರಿಸಿ. ಅತಿಯಾಗಿ ಒತ್ತಡವನ್ನು ತೆಗೆದುಕೊಳ್ಳಬೇಡಿ.
ಮಕರ ರಾಶಿ
ಶನಿ ಮತ್ತು ಮಂಗಳ ಸಂಸಪ್ತಕ ಯೋಗ ಮಕರ ರಾಶಿಯವರ ಮೇಲೆ ಅನಾನುಕೂಲಕರ ಪ್ರಭಾವ ಬೀರಿದೆ. ಈ ಅವಧಿಯಲ್ಲಿ ನೀವು ಹೆಚ್ಚು ಹಣ ಖರ್ಚು ಮಾಡುತ್ತೀರಿ. ವಾಹನವನ್ನು ಜಾಗ್ರತೆಯಿಂದ ಚಲಾಯಿಸಿ. ಸಾಧ್ಯವಾದರೆ ವಾಹನ ಬಳಕೆ ಕಡಿಮೆ ಮಾಡಿ. ಕುಟುಂಬದಲ್ಲಿಯೂ ಹಲವು ಸಮಸ್ಯೆಗಳಿರಬಹುದು. ನಿಮ್ಮ ಕುಟುಂಬದ ವಿಷಯದಲ್ಲಿ ಮೂರನೇಯವರು ಹಸ್ತಕ್ಷೇಪ ಮಾಡಲು ಬಿಡಬೇಡಿ. ಖರ್ಚನ್ನು ಮಿತಿಯಲ್ಲಿ ಖರ್ಚು ಮಾಡಿ.
ಮೀನ ರಾಶಿ
ಮಂಗಳ ಮತ್ತು ಶನಿಯ ಸಂಸಪ್ತಕ ಯೋಗ ಮೀನ ರಾಶಿಯವರಿಗೆ ಕೂಡ ಪ್ರತಿಕೂಲವಾಗಿದೆ. ಈ ಸಮಯದಲ್ಲಿ ನಿಮ್ಮ ಕೆಲಸವನ್ನು ಪೂರ್ಣಗೊಳಿಸುವಲ್ಲಿ ನೀವು ಯಶಸ್ವಿಯಾಗುತ್ತೀರಿ, ಆದರೆ ನಿಮ್ಮ ಗುರಿ ಮುಟ್ಟಲು ಹೆಚ್ಚು ಶ್ರಮ ಹಾಕಬೇಕಾಗುತ್ತದೆ. ಕೆಲಸದ ಕಡೆಗೆ ಹೆಚ್ಚಿನ ಗಮನಹರಿಸಿ. ನಿಮ್ಮ ಸ್ವಭಾವದಲ್ಲಿ ಅಹಂಕಾರ ಕಂಡುಬರಬಹುದು, ಇದರಿಂದ ನಿಮ್ಮ ಆಪ್ತರು ನೊಂದುಕೊಳ್ಳುತ್ತಾರೆ. ಜೀವನದಲ್ಲಿನ ಸಮಸ್ಯೆಗಳನ್ನು ತಾಳ್ಮೆಯಿಂದ ನಿಭಾಯಿಸಿ.



Click it and Unblock the Notifications