Latest Updates
-
ಅಮಾವಾಸ್ಯೆಯ ದಿನ ಜಗಳ ಬೇಡ: ದಂಪತಿಗಳ ನಡುವಿನ ಪ್ರೀತಿ ಹೆಚ್ಚಿಸಲು ಈ ಸಂಭಾಷಣೆ ಸೂತ್ರಗಳು -
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು
ಮಾರ್ಚ್ ತಿಂಗಳಿನಲ್ಲಿ ಬರುವ ವ್ರತಗಳು, 3 ದೊಡ್ಡ ಹಬ್ಬಗಳು ಜೊತೆಗೆ ಈ ವಿಶೇಷ ದಿನಗಳು
ಅಬ್ಬಾ 2024 ಪ್ರಾರಂಭವಾಗಿ ಮೂರನೇ ತಿಂಗಳು ಮಾರ್ಚ್ ಬಂದಾಯ್ತು, ಈ ಮಾರ್ಚ್ ತಿಂಗಳು ಕೆಲವು ಕಾರಣಗಳಿಂದ ತುಂಬಾನೇ ಸ್ಪೆಷಲ್ ಅನಿಸುವುದು. ಶಿವರಾತ್ರಿ, ಹೋಳಿ ಹೀಗೆ ಹಲವು ಹಬ್ಬಗಳು, ವ್ರತಗಳು ಈ ತಿಂಗಳಿನಲ್ಲಿ ಇರುವುದರಿಂದ ಈ ತಿಂಗಳ ಬಹುತೇಕ ದಿನಗಳು ವಿಶೇಷ ದಿನಗಳಾಗಿವೆ.
ಬನ್ನಿ ಮಾರ್ಚ್ ತಿಂಗಳಿನಲ್ಲಿ ಯಾವೆಲ್ಲಾ ದಿನಗಳು ಹಬ್ಬಗಳು, ವ್ರತಗಳು ಅಂತ ವಿಶೇಷವಾಗಿದೆ ಎಂದು ನೋಡೋಣ ಬನ್ನಿ:

ಮಾರ್ಚ್ 2: ಶನಿವಾರ, ಯಶೋಧ ಏಕಾದಶಿ
ಮಾರ್ಚ್ 3: ಭಾನುವಾರ: ಭಾನು ಸಪ್ತಮಿ, ಶಬರಿ ಜಯಂತಿ, ಕಾಲಾಷ್ಟಮಿ, ಮಾಸಿಕ ಕೃಷ್ಣ ಜನ್ಮಾಷ್ಟಮಿ
ಮಾರ್ಚ್ 4: ಸೋಮವಾರ ಜಾನಕಿ ಜಯಂತಿ
ಮಾರ್ಚ್ 5: ಮಂಗಳವಾರ, ದಯಾನಂದ ಸರಸ್ವತಿ ಜಯಂತಿ
ಮಾರ್ಚ್ 6: ಬುಧವಾರ, ವಿಜಯ ಏಕಾದಶಿ
ಮಾರ್ಚ್ 7: ಗುರುವಾರ: ವೈಷ್ಣವ ವಿಜಯ ಏಕಾದಶಿ
ಮಾರ್ಚ್ 8: ಮಾಸಿಕ ಶಿವರಾತ್ರಿ, ಮಹಾಶಿವರಾತ್ರಿ, ಪ್ರದೋಷ ವ್ರತ
ಮಾರ್ಚ್ 10: ಭಾನುವಾರ, ಅಮವಾಸ್ಯೆ
ಮಾರ್ಚ್ 12: ರಾಮಕೃಷ್ಣ ಜಯಂತಿ
ಮಾರ್ಚ್ 13: ವಿನಾಯಕ ಚತುರ್ಥಿ
ಮಾರ್ಚ್ 15: ಶುಕ್ರವಾರ, ಸ್ಕಂದ ಷಷ್ಠಿ
ಮಾರ್ಚ್ 16: ರೋಹಿಣಿ ವ್ರತ
ಮಾರ್ಚ್ 17: ಮಾಸಿಕ ದುರ್ಗಾಷ್ಟಮಿ
ಮಾರ್ಚ್ 20: ಅಮಲಕ್ಕಿ ಏಕಾದಶಿ
ಮಾರ್ಚ್ 22: ಪ್ರದೋಷ ವ್ರತ
ಮಾರ್ಚ್ 22 : ಯುಗಾದಿ
ಮಾರ್ಚ್ 25: ಹೋಳಿ
ಮಾರ್ಚ್ 28: ಛತ್ರಪತಿ ಶಿವಾಜಿ ಜಯಂತಿ
ಮಾರ್ಚ್ 30: ರಂಗ ಪಂಚಮಿ, ರಾಮ ನವಮಿ
ಉಳಿದಂತೆ ಮಾರ್ಚ್‌ನಲ್ಲಿ ವಿಶೇಷ ದಿನಗಳು
ಮಾರ್ಚ್ 1: ಬೇಧಭಾವದ ವಿರುದ್ಧ ಅಸಹಿಷ್ಣುತೆ (Zero Discrimination Day)
ಲಿಂಗ, ಜಾತಿ, ಮೈ ಬಣ್ಣ , ಎತ್ತರ, ದಪ್ಪ ಇವುಗಳ ಹೆಸರಿನಲ್ಲಿ ಬೇಧ ಮಾಡುವಂತಿಲ್ಲ.
ಮಾರ್ಚ್ 1: ವರ್ಲ್ಡ್ ಸಿವಿಲ್ ಡಿಫೆನ್ಸ್ ಡೇ: ನಾಗರಿಕ ಸಮಾಜದ ಸುರಕ್ಷತೆ ಹೋರಾಡಿದವರ ಸ್ಮರಿಸುವ ದಿನ)
ಮಾರ್ಚ್ 3: ವಿಶ್ವ ವನ್ಯಜೀವಿ ದಿನ
ಮಾರ್ಚ್ 3: ವಿಶ್ವ ಕೇಳಿಸುವ ದಿನ
ಮಾರ್ಚ್ 4: ರಾಷ್ಟ್ರೀಯ ಸುರಕ್ಷತೆ ದಿನ
ಮಾರ್ಚ್ 4: ಉದ್ಯೋಗಿಗಳ ಕೆಲಸಕ್ಕೆ ಮೆಚ್ಚುಗೆ ತೋರಿಸುವ ದಿನ
ಮಾರ್ಚ್ 8: ಅಂತರರಾಷ್ಟ್ರೀಯ ಮಹಿಳಾ ದಿನ
ಮಾರ್ಚ್ 13: ಧೂಮಪಾನ ನಿಷೇಧ ದಿನ
ಮಾರ್ಚ್ 15: ವಿಶ್ವ ಗ್ರಾಹಕರ ಹಕ್ಕು ದಿನ
ಮಾರ್ಚ್ 16: ರಾಷ್ಟ್ರೀಯ ಲಸಿಕೆ ದಿನ
ಮಾರ್ಚ್ 17: ವಿಶ್ವ ನಿದ್ರೆ ದಿನ
ಮಾರ್ಚ್ 20: ಅಂತರರಾಷ್ಟ್ರೀಯ ಖುಷಿಯ ದಿನ
ಮಾರ್ಚ್ 20: ವಿಶ್ವ ಗುಬ್ಬಚ್ಚಿ ದಿನ
ಮಾರ್ಚ್ 20: ವಿಶ್ವ ದಂತ ಆರೋಗ್ಯ ದಿನ
ಮಾರ್ಚ್ 21: ವಿಶ್ವ ಡೌನ್‌ಸಿಂಡ್ರೋಮ್ ದಿನ
ಈ ತಿಂಗಳಿನಲ್ಲಿರುವ ಪ್ರಮುಖ ಮೂರು ಹಬ್ಬಗಳು'
ಶಿವರಾತ್ರಿ: ದೇಶದೆಲ್ಲಡೆ ಶಿವ ಭಕ್ತರು ಶಿವರಾತ್ರಿಯನ್ನು ತುಂಬಾ ಖುಷಿಯಿಂದ ಭಕ್ತಿಯಿಂದ ಆಚರಿಸುತ್ತಾರೆ. ಈ ದಿನ ಉಪವಾಸವಿದ್ದು ರಾತ್ರಿ ಜಾಗರಣೆ ಮಾಡಿ ಶಿವ ಧ್ಯಾನ ಮಾಡುತ್ತಾರೆ, ಹೀಗೆ ಶಿವ ಧ್ಯಾನ ಮಾಡುವುದರಿಂದ ಕಷ್ಟವೆಲ್ಲವೂ ದೂರವಾಗುವುದು ಎಂಬ ನಂಬಿಕೆ. ಈ ದಿನ ಶಿವ ದೇವಾಲಯಗಳಲ್ಲಿ ಶಿವನಿಗೆ ಅಭಿಷೇಕ ಮಾಡಿ ಅದ್ಧೂರಿಯಿಂದ ಆಚರಿಸಲಾಗುವುದು.
ಹೋಳಿ: ಬಣ್ಣದ ಹಬ್ಬ ಹೋಳಿ, ಬಣ್ಣದ ಹಬ್ಬ ಬದುಕಿನಲ್ಲಿಯೂ ಬಣ್ಣಗಳನ್ನು ತುಂಬಿ ಬದುಕನ್ನು ಹರ್ಷಗೊಳಿಸಲು, ಕೆಟ್ಟತನ ದೂರಾಗಿ ಒಳ್ಳೆಯತ ವಿಜಯಶಾಲಿಯಾಗಲಿ ಎಂಬುವುದೇ ಈ ಆಚರಣೆಯ ಹಬ್ಬ.
ರಾಮನವಮಿ: ಈ ವರ್ಷ ರಾಮ ನವಮಿ ಸಡಗರ ಮತ್ತಷ್ಟು ಹೆಚ್ಚಾಗಬಹುದು. ಏಕೆಂದರೆ ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆ ಆಗಿದೆ, ಆದ್ದರಿಂದ ಅಯೋಧ್ಯೆಯಲ್ಲಿ ಈ ದಿನ ಸಂಭ್ರಮ ಹೆಚ್ಚುವುದು.



Click it and Unblock the Notifications
