Latest Updates
-
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ!
ಟೆಟ್ರಾ ಪ್ಯಾಕ್‌ನ ಮಾವಿನ ಜ್ಯೂಸ್ ಹೇಗೆ ಮಾಡ್ತಾರೆ ಗೊತ್ತಾ? ಬಾಯಿ ಚಪ್ಪರಿಸುವ ಮುನ್ನ ಯೋಚಿಸಿ..!
ಮಾವಿನ ಹಣ್ಣಿನ ಜ್ಯೂಸ್ ಅಂದ್ರೆ ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ. ಮಾವಿನ ಹಣ್ಣಿನ ಸೀಸನ್‌ನಲ್ಲಂತೂ ಬೀದಿ ಬೀದಿಯಲ್ಲಿ ಮಾವಿನ ಜ್ಯೂಸ್ ಸವಿಯಲು ಸಿಗುತ್ತೆ. ಈಗಂತೂ ವರ್ಷದ ಎಲ್ಲಾ ದಿನದಲ್ಲೂ ಮಾವಿನ ಹಣ್ಣು ಮಾರುಕಟ್ಟೆಯಲ್ಲಿ ಸಿಗುತ್ತೆ. ಹಾಗೆ ಹತ್ತಾರು ಕಂಪನಿಗಳು ಮಾವಿನ ಹಣ್ಣಿನ ಜ್ಯೂಸ್ ಮಾರುಕಟ್ಟೆಗೆ ತಂದಿರುವುದಲ್ಲದೆ ವಾರ್ಷಿಕ ಬಹುಕೋಟಿ ಉದ್ಯಮವೂ ಆಗಿವೆ.
ನಾವು ಅಂಗಡಿಗಳಲ್ಲಿ ಮಾವಿನ ಜ್ಯೂಸ್ ಇರುವ ಬಾಟಲಿ ಇಲ್ಲವೆ ಟೆಟ್ರಾ ಪ್ಯಾಕ್ ಖರೀದಿಸುತ್ತೇವೆ. ಮಕ್ಕಳಿಗಂತೂ ಈ ಟೆಟ್ರಾ ಪ್ಯಾಕ್‌ನ ಜ್ಯೂಸ್ ಅಂದ್ರೆ ಪಂಚಪ್ರಾಣ. ಕೇವಲ 5 ರೂಪಾಯಿಗೆ ಈ ಟೆಟ್ರಾ ಪ್ಯಾಕ್‌ನ ಜ್ಯೂಸ್ ಸವಿಯಲು ಸಿಗುತ್ತೆ. ಇದನ್ನು ನಾವು ಮನೆಗೆ ತಂದು ವಾರಗಳ ವರೆಗೂ ಇಟ್ಟು ಸವಿದಿರುತ್ತೇವೆ.

ಆದ್ರೆ ಈ ಜ್ಯೂಸ್ ಹೇಗೆ ಮಾಡುತ್ತಾರೆ ಎಂಬುದು ನಿಮಗೆ ಗೊತ್ತಾ? ಹೌದು ಈ ಟೆಟ್ರಾ ಪ್ಯಾಕ್‌ನ ಜ್ಯೂಸ್‌ಗಳು ಸ್ಥಳೀಯವಾಗಿಯೂ ರೆಡಿಯಾಗುತ್ತವೆ. ಜೊತೆಗೆ ಹಲವು ದೊಡ್ಡ ದೊಡ್ಡ ಕಂಪನಿಗಳು ಸಹ ತಯಾರಿಸುತ್ತವೆ. ಆದ್ರೆ ಕೆಲವೊಮ್ಮೆ ನಾವು ಈ ಜ್ಯೂಸ್‌ನಲ್ಲಿ ಹುಳುಗಳು ಸಿಗುವುದು, ಹಾಳಾದ ಜ್ಯೂಸ್, ವಾಸನೆ ಬರುವುದು ಹೀಗೆ ಒಂದಲ್ಲಾ ಒಂದು ಸಮಸ್ಯೆ ಎದುರಿಸಿರಬಹುದು.
ಆದ್ರೆ ಇಲ್ಲೊಂದು ವಿಡಿಯೋದಲ್ಲಿ ಈ ಜ್ಯೂಸ್ ಹೇಗೆ ತಯಾರಾಗುತ್ತದೆ ಎಂಬುದನ್ನು ವಿವರಿಸುತ್ತಿದೆ. ಈ ವಿಡಿಯೋ ನೋಡಿದ ಮಂದಿ ಇನ್ನೆಂದು ಈ ಜ್ಯೂಸ್ ಕುಡಿಯುವುದಿಲ್ಲ ಎನ್ನುತ್ತಿದ್ದಾರೆ. ಏಕೆಂದರೆ ಇತ್ತೀಚಿಗೆ ಆರೋಗ್ಯಕರ ಆಹಾರಗಳತ್ತ ಜನ ಒಲವು ತೋರುತ್ತಿದ್ದಾರೆ, ಅದ್ರಲ್ಲೂ ಸಿಹಿಯಾದ ವಿಷವೆಂದು ಕರೆಯುವ ಸಕ್ಕರೆಯನ್ನು ನಾವು ಎಷ್ಟು ಕಡಿಮೆ ಸವಿಯುತ್ತಿವೆಯೋ ಅಷ್ಟು ಒಳ್ಳೆಯದು. ಆದ್ರೆ ಈ ವಿಡಿಯೋದಲ್ಲಿ ಮಾವಿನ ಹಣ್ಣಿನ ಜ್ಯೂಸ್ ಮಾಡುವುದು ನೋಡಿದ್ರೆ ಖಂಡಿತ ನಿಮಗೂ ಅಸಹ್ಯ ಹುಟ್ಟುತ್ತದೆ.
ಅಚ್ಚರಿ ಅಂದರೆ ಈ ಮಾವಿನ ಹಣ್ಣಿನ ಜ್ಯೂಸ್‌ಗಳಲ್ಲಿ ಬಹುತೇಕ ಮಾವಿನ ಹಣ್ಣಿನ ಅಂಶ ಇರುವುದೇ ಇಲ್ಲ. ಬದಲಿಗೆ ಮಾವಿನ ಹಣ್ಣಿನ ರುಚಿ ನೀಡುವ ಕೃತಕ ರಾಸಾಯನಿಕಗಳೇ ತುಂಬಿರುತ್ತದೆ. ಇದಕ್ಕೆ ನೀವು ಅಂದಾಜಿಸಲಾಗದಷ್ಟು ಸಕ್ಕರೆ, ಕೃತಕ ಬಣ್ಣ, ಕೃತಕ ಸಿಹಿಯನ್ನು ಸೇರಿಸಲಾಗುತ್ತದೆ. ಹಾಗೆ ಇಲ್ಲಿ ಸ್ವಚ್ಛತೆ ಎನ್ನುವುದು ದೂರದ ಮಾತಾಗಿದೆ.
ವಿಡಿಯೋದಲ್ಲಿ ದೊಡ್ಡ ಯಂತ್ರವೊಂದಕ್ಕೆ ಮಾವಿನ ಹಣ್ಣಿನ ರೀತಿ ಹೋಲುತ್ತಿರುವ ದ್ರಾವಣವನ್ನು ಹಾಕಲಾಗುತ್ತಿದೆ. ಇದರ ಜೊತೆಗೆ ಸಕ್ಕರೆ ಒಂದಿಷ್ಟು ದ್ರಾವಣ, ಬೇಗ ಹಾಳಾಗದಂತೆ ಇಡಲು ಸಹಕಾರಿಯಾಗುವ ರಾಸಾಯನಿಕ ಮಿಕ್ಸ್ ಮಾಡಲಾಗುತ್ತದೆ. ಕೊನೆಯದಾಗಿ ಪ್ಯಾಕೆಟ್‌ನ ಒಳಗೆ ಈ ಜ್ಯೂಸ್ ಹಾಕಿ ಪ್ಯಾಕಿಂಗ್ ಮಾಡಲಾಗುತ್ತಿದೆ. ಇದು ಮಾರುಕಟ್ಟೆಗೆ ಬರುವುದನ್ನು ವಿಡಿಯೋದಲ್ಲಿ ವಿವರಿಸಲಾಗಿದೆ.
ಈ ವಿಡಿಯೋ ನೋಡಿದ ಮಂದಿ ಅಕ್ಷರಶಃ ಶಾಕ್‌ಗೆ ಒಳಗಾಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವೈರಲ್ ಆಗಿದ್ದು, ಮಿಲಿಯನ್‌ಗೂ ಅಧಿಕ ವೀಕ್ಷಣೆ ಕಂಡಿದೆ. ಅಂಗಡಿಗಳಲ್ಲಿ ಪ್ಯಾಕೆಟ್ ನೋಡಿ ಖರೀದಿಸುವ ನಾವು ಅದರ ಒಳಗೆ ಜ್ಯೂಸ್ ಹೇಗಿದೆ ಎಂಬುದನ್ನು ನೋಡಲು ಸಾಧ್ಯವೇ ಆಗುವುದಿಲ್ಲ. ನೇರವಾಗಿ ಕುಡಿದು ಬಿಡುತ್ತೇವೆ. ಆದ್ರೆ ಈ ವಿಡಿಯೋ ನೋಡಿದರೆ ಇನ್ನೆಂದು ಟೆಟ್ರಾ ಪ್ಯಾಕ್‌ನ ಜ್ಯೂಸ್ ಕುಡಿಯಬೇಕು ಎನಿಸುತ್ತಿಲ್ಲ ಎಂದು ಬಳಕೆದಾರರೊಬ್ಬರು ಬರೆದುಕೊಂಡಿದ್ದಾರೆ.
ನಾನು ಕಡುಬಯಕೆ ಅಥವಾ ರುಚಿಕರವಾದ ಬಹಳಷ್ಟು ವಿಷಯಗಳನ್ನು ಕುಡಿಯುವುದನ್ನು ನಿಲ್ಲಿಸಿದ್ದೇನೆ. ಈ ಎಲ್ಲಾ ರುಚಿಕರವಾದ 200 ಪ್ರತಿಶತ ಹಣ್ಣಿನ ರಸವನ್ನು ನಾನು ಇನ್ನು ಮುಂದೆ ಕುಡಿಯುವುದಿಲ್ಲ. ಇದಕ್ಕಿಂತ ಹಣ್ಣುಗಳ ಮನೆಗೆ ತಂದು ಸವಿಯುವುದು ಉತ್ತಮ. ಇಷ್ಟು ಆಘಾತಕಾರಿ ವಿಚಾರ ನಾನೆಂದು ನೋಡಿರಲಿಲ್ಲ ಎಂದು ಮತ್ತೊಬ್ಬ ಬರೆದುಕೊಂಡಿದ್ದಾನೆ. ಇಲ್ಲಿ ಮಾವಿನ ಹಣ್ಣು ಹೊರತುಪಡಿಸಿ ಏನೆಲ್ಲಾ ಮಾನವರಿಗೆ ಕೆಟ್ಟದ್ದೋ ಅದೆಲ್ಲವೂ ಇಲ್ಲಿದೆ ಎಂದು ಮತ್ತೊಬ್ಬರು ಬರೆದಿದ್ದಾರೆ.



Click it and Unblock the Notifications
