Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಸಚಿವರ ಮನೆಯ ಬೇವಿನ ಮರದಲ್ಲಿ ಮಾವಿನ ಹಣ್ಣು..! ವಿಡಿಯೋ ವೈರಲ್
ಈಗಂತು ಎಲ್ಲಾ ಕಡೆ ಮಾವಿನ ಹಣ್ಣಿನ ಸೀಸನ್ ಆರಂಭವಾಗಿದೆ. ಮಾರುಕಟ್ಟೆಯಿಂದ ಹಿಡಿದು ತೋಟಗಳಲ್ಲೂ ಮಾವಿನ ಹಣ್ಣುಗಳ ರಾಶಿ ನೋಡಬಹುದು. ಈ ಬಾರಿಯ ಇಳುವರಿ ಸಹ ಹೆಚ್ಚಾಗಿಯೇ ಬಂದಿದೆ. ಮಾವು ಬೆಳೆದ ರೈತರ ಮುಖದಲ್ಲಿ ಸಂತಸವೂ ಮೂಡಿದೆ.
ಇನ್ನು ಮಾವಿನ ಮರಗಳ ಪೋಷಣೆ ಸಿಕ್ಕಾಪಟ್ಟೆ ಕಷ್ಟದ ಕೆಲಸಗಳಲ್ಲಿ ಒಂದು ಎಂಬುದು ರೈತರ ಮಾತಾಗಿದೆ. ಆದರೆ ಇಲ್ಲೊಂದು ಕಡೆ ಬೇವಿನ ಮರದಲ್ಲಿ ಮಾವಿನ ಹಣ್ಣು ಬಿಟ್ಟಿರುವ ವಿಚಿತ್ರ ಘಟನೆ ನಡೆದಿದೆ. ಅಚ್ಚರಿ ಎನಿಸಿದರು ಇದು ಸತ್ಯ. ಬೇವಿನ ಮರದಲ್ಲಿ ಒಂದು ರೆಂಬೆಯಲ್ಲಿ ಮಾವಿನ ಹಣ್ಣುಗಳು ಬಿಟ್ಟಿರುವ ವಿಡಿಯೋ ಈಗ ವೈರಲ್ ಆಗಿದೆ.

ಕೇಂದ್ರ ಸಚಿವ ಪ್ರಹ್ಲಾದ್ ಸಿಂಗ್ ಪಟೇಲ್ ಅವರು ತಮ್ಮ ಭೋಪಾಲ್ ನಿವಾಸದಲ್ಲಿ ಈ ರೀತಿಯ ವಿಚಿತ್ರ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಬೇವಿನ ಮರದಲ್ಲಿ ಮಾವಿನ ಹಣ್ಣುಗಳಿರುವುದು ವಿಡಿಯೋದಲ್ಲಿ ಸ್ಪಷ್ಟವಾಗಿ ಕಾಣಿಸುತ್ತಿದೆ. ಈ ವಿದ್ಯಮಾನ ಕಂಡು ಖುದ್ದು ಸಚಿವರೆ ಶಾಕ್ ಆಗಿದ್ದಾರೆ.
ಈ ವಿಡಿಯೋವನ್ನು ಕೇಂದ್ರ ಸಚಿವ ಪ್ರಹ್ಲಾದ್ ಸಿಂಗ್ ತಮ್ಮ ಎಕ್ಸ್ ಖಾತೆಯಲ್ಲಿಯೂ ಹಂಚಿಕೊಂಡಿದ್ದಾರೆ. 'ಇಂದು ನಾನು ಭೋಪಾಲ್‌ನಲ್ಲಿರುವ ನಿವಾಸಕ್ಕೆ ಭೇಟಿ ನೀಡಿದಾಗ ಬೇವಿನ ಮರದಲ್ಲಿ ಮಾವಿನ ಹಣ್ಣುಗಳನ್ನು ನೋಡಲು ಹತ್ತಿರ ಹೋದಾಗ, ನನ್ನ ಹೃದಯವು ಸಂತೋಷದಿಂದ ತುಂಬಿತ್ತು. ಕೆಲವು ನುರಿತ ತೋಟಗಾರರು ಈ ಪ್ರಯೋಗವನ್ನು ಹಲವು ವರ್ಷಗಳ ಹಿಂದೆ ಮಾಡಿರಬೇಕು, ಇದು ಆಶ್ಚರ್ಯಕ್ಕಿಂತ ಕಡಿಮೆಯಿಲ್ಲ' ಎಂದು ಬರೆದುಕೊಂಡಿದ್ದಾರೆ.
ಸಾಮಾನ್ಯವಾಗಿ ಬೇವಿನ ಮರದಲ್ಲಿ ಈ ಮಾವಿನ ಹಣ್ಣು ಬಿಡಲು ಸಾಧ್ಯವೇ ಇಲ್ಲ. ಆದರೆ ಬೇವಿನ ಮರದಲ್ಲಿ ಮಾವಿನ ಮರದ ರೆಂಬೆ ಹಬ್ಬಿಕೊಂಡು ಈ ಕೆಲಸಕ್ಕೆ ಕಾರಣಾಗಿರುವ ಸಾಧ್ಯತೆ ತಳ್ಳಿಹಾಕುವಂತಿಲ್ಲ. ಗ್ರಾಫ್ಟಿಂಗ್ ಎಂದು ಕರೆಯಲ್ಪುಡುವ ಪ್ರಕ್ರಿಯೆಯಲ್ಲಿ ಈ ರೀತಿ ಉದ್ದೇಶ ಪೂರ್ವಕವಾಗಿ ಮಾಡಲಾಗುತ್ತದೆ.
ಸರಳವಾಗಿ ಹೇಳುವುದಾದರೆ ಒಂದು ವಯಸ್ಸಾದ ಹಾಗೂ ಆರೋಗ್ಯಕರ ಮರಕ್ಕೆ ಮತ್ತೊಂದು ಹಣ್ಣಿನ ಮರದ ರೆಂಬೆಯನ್ನು ಕಸಿ ಮಾಡುವುದು ಇದನ್ನು ಗ್ರಾಫ್ಟಿಂಗ್ ಎನ್ನಲಾಗುತ್ತದೆ. ಆಗ ಅತೀ ಕಡಿಮೆ ಸಮಯದಲ್ಲಿ ಫಸಲು ಪಡೆಯಬಹುದು. ಆದರೆ ಎಲ್ಲಾ ಪ್ರಯೋಗದಲ್ಲೂ ಇದು ಯಶಸ್ವಿಯಾಗುವುದಿಲ್ಲ. ಬಹುಶಃ ಇಲ್ಲಿಯೂ ಬೇವಿನ ಮರದ ಜೊತೆ ಮಾವಿನ ಮರದ ಗ್ರಾಫ್ಟಿಂಗ್ ಆಗಿರಬಹುದು ಎಂದು ಶಂಕಿಸಲಾಗಿದೆ.
ಆದರೆ ಈ ವಿಡಿಯೋ ವೈರಲ್ ಆದ ಬಳಿಕ ಸಾವಿರಾರು ಕಮೆಂಟ್‌ಗಳು ಬಂದಿವೆ. ಅದರಲ್ಲಿ ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ. ಕೆಲವರು ಇದರಲ್ಲಿ ಎರಡು ಮರಗಳಿವೆ ಒಂದು ಮರದ ಜೊತೆ ಮಾವಿನ ಮರವೂ ಇದೆ ಹೀಗಾಗಿ ಅದರ ರೆಂಬೆ ಬೇವಿನ ಮರದೊಳಗೆ ಬಂದು ಹಣ್ಣು ಬಿಟ್ಟಿದೆ ಎಂದು ಹಲವರು ಹೇಳಿದ್ದಾರೆ.
ಮತ್ತೆ ಕೆಲವರು ಇದರಲ್ಲಿ ವಿಶೇಷವೇನಿಲ್ಲ. ಒಂದು ಮರದಲ್ಲಿ ಕಸಿ ಮಾಡಲಾದ ಮಾವಿನ ಮರವಿದೆ. ಹೀಗಾಗಿ ಮಾವಿನ ಹಣ್ಣು ಬಿಟ್ಟಿದೆ ಎಂದಿದ್ದಾರೆ. ಜನರು ಇದನ್ನು ಏಕೆ ವಿಸ್ಮಯ ಎಂದು ಕರೆಯುತ್ತಿದ್ದಾರೆಂದು ನನಗೆ ಅರ್ಥವಾಗುತ್ತಿಲ್ಲ, ಮಾವಿನ ಎಲೆಗಳು ಗೋಚರಿಸುತ್ತವೆ ಮತ್ತು ದೂರದಲ್ಲಿ ಮಾವಿನ ಮರವಿದೆ, ಅದರ ಕೊಂಬೆಗಳು ಬೇವಿನ ಮರವನ್ನು ಆಸರೆಯಾಗಿ ತೆಗೆದುಕೊಂಡಿವೆ. ಆದರೆ ಯಾರೂ ಇನ್ನೂ ಗಮನಿಸಿಲ್ಲ, "ಎಂದು ಬಳಕೆದಾರರೊಬ್ಬರು ಬರೆದುಕೊಂಡಿದ್ದಾರೆ.
ಜೊತೆಗೆ 'ಈ ಮಾವಿನಹಣ್ಣು ಬೇವಿನ ಗಿಡದಲ್ಲಿಯೇ ಬಿಟ್ಟಿದ್ದರೆ ಅದು ಅತ್ಯಂತ ಉತ್ತಮ ಔಷಧಿ ಗುಣ ಹೊಂದಿರುವ ಮಾವಿನ ಹಣ್ಣಾಗಿರುತ್ತದೆ. ಅದನ್ನು ಸೇವಿಸಿ ನೋಡಿ ಅದರ ರುಚಿ ಹೇಗಿದೆ ಎಂದು ಹೇಳಿ' ಎಂದು ಬಳಕೆದಾರರೊಬ್ಬರು ಸಚಿವರಿಗೆ ಮನವಿ ಮಾಡಿದ್ದಾರೆ.



Click it and Unblock the Notifications