Latest Updates
-
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ?
1 ಕೆಜಿ ಬೆಂಡೆಕಾಯಿಗೆ ರು. 600, ಮಾವಿನ ಹಣ್ಣಿಗೆ 2400: ಭಾರತದ ಆಹಾರಕ್ಕೆ ಇಷ್ಟೊಂದು ಬೆಲೆಯೇ?
ಹಾಲಿನಿಂದ ಹಿಡಿದು ತರಕಾರಿ ರೇಟ್ ಎಲ್ಲವೂ ಹೆಚ್ಚಾಗಿದೆ, ಜನಸಾಮಾನ್ಯರರು ತರಕಾರಿ ರೇಟ್ ಕೇಳಿದಾಗ ಅಯ್ಯೋ ಏನಪ್ಪಾ ಮಾಡುವುದು ಅನ್ನುವಂತಿದೆ. ಇನ್ನು ಲಂಡನ್‌ನಲ್ಲಿ ಭಾರತೀಯ ತರಕಾರಿ ಬೆಲೆ ಕೇಳಿದರೆ ತಲೆಯೇ ತಿರುಗುತ್ತದೆ.
ಭಾರತೀಯರು ವಿದೇಶದ ಎಲ್ಲಿಯೇ ಹೋದರೂ ಭಾರತೀಯ ಶೈಲಿಯ ಅಡುಗೆಯನ್ನೇ ಮಾಡಿ ತಿನ್ನಲು ಬಯಸುತ್ತಾರೆ, ಅಲ್ಲಿ ಇಂಡಿಯನ್ ಸ್ಟೋರ್‌ಗಳು ಕೂಡ ಲಭ್ಯವಿರುತ್ತದೆ. ಆದರೆ ಲಂಡನ್‌ನಲ್ಲಿ ಭಾರತದ ಸ್ಟೋರ್‌ಗಳಲ್ಲಿ ಇಲ್ಲಿಯ ಆಹಾರ ಸ್ವಲ್ಪ ದುಬಾರಿ ಆಗಿರುತ್ತದೆ, ಆದರೂ ಅಲ್ಲಿ ನೆಲೆಸಿರುವ ಭಾರತೀಯರು ಖರೀದಿ ಮಾಡಲು ಹಿಂದೇಟು ಹಾಕುತ್ತಿರಲಿಲ್ಲ.

ಆದರೆ ಈಗ ತರಕಾರಿ ಬೆಲೆ ಕೇಳಿದರೆ ಅಬ್ಬಾ ಅನಿಸುವಷ್ಟು ಇದೆ, ಒಂದು ಕೆಜಿ ಬೆಂಡೆಕಾಯಿ ಬೆಲೆ 600 ರುಪಾಯಿ, ಒಂದು ಕೆಜಿ ಮಾವಿನ ಹಣ್ಣಿನ ಮೇಲೆ 2400 ರುಪಾಯಿ. ಇಂಗ್ಲೆಂಡ್‌ನಲ್ಲಿ ನೆಲೆಸಿರುವ ಭಾರತೀಯ ಮಹಿಳೆಯೊಬ್ಬರು ಇದರ ಬಗ್ಗೆ ವೀಡಿಯೋ ಮಾಡಿದ್ದು ಆ ವೀಡಿಯೋ ವೈರಲ್ ಆಗಿದೆ.
ಇಲ್ಲಿ 20 ರುಪಾಯಿಗೆ ಸಿಗುವ ಚಿಪ್ಸ್‌ಗೆ ಅಲ್ಲಿ 95ರುಪಾಯಿ, ಮ್ಯಾಗಿಗೆ 300 ರುಪಾಯಿ, ಪನ್ನೀರ್ ರುಪಾಯಿ 700, ಬೆಂಡೆಕಾಯಿ ರು.650, ಹಾಗಲಕಾಯಿ ರು.1000, 6 ಆಲ್ಫೋನ್ಸೋ ಮಾವಿನ ಹಣ್ಣಿನ ಬೆಲೆ ರು.2400 ಹೀಗೆ ಎಲ್ಲವೂ ದುಬಾರಿ ಬಲು ದುಬಾರಿ.
ಈ ವೀಡಿಯೋ ಅಪ್‌ಲೋಡ್ ಆದದ್ದೇ ತಡ ವೈರಲ್ ಆಗಿದೆ 6.2 ಜನರು ಈ ವೀಡಿಯೋ ವೀಕ್ಷಣೆ ಮಾಡಿದ್ದಾರೆ. ಭಾರತದಲ್ಲಿಯೂ ತರಕಾರಿಗಳು ದುಬಾರಿಯಾಗಿವೆ, ಹಾಗಾಗಿ ಇಲ್ಲಿಂದ ಅಲ್ಲಿಗೆ ಎಕ್ಸ್‌ಪೋರ್ಟ್ ಆದಾಗ ತರಕಾರಿ ಹಣ್ಣಿನ ಬೆಲೆ ಮತ್ತಷ್ಟು ದುಬಾರಿಯಾಗುತ್ತಿದೆ.
ಬೆಂಗಳೂರಿನಲ್ಲಿ ತರಕಾರಿ ಇವತ್ತಿನ ದರ
ಟೊಮೆಟೊ ರು. 76
ಬೀನ್ಸ್ ರು 140
ಬೀಟ್ರೂಟ್ ರು. 50
ಹಾಗಲಕಾಯಿ ರು.90
ಬದನೆಕಾಯಿ ರು 53
ಕ್ಯಾರೆಟ್ ರು.90
ಒಂದು ಕಟ್ಟು ಕೊತ್ತಂಬರಿ ಸೊಪ್ಪು ರು. 35
ಹೀಗೆ ನಮ್ಮಲ್ಲಿಯೂ ಪ್ರತಿಯೊಂದು ತರಕಾರಿಯ ಬೆಲೆ ದುಬಾರಿಯಾಗಿದೆ, ಇದು ಹೋಲ್‌ಸೇಲ್ ರೇಟ್, ರಿಟೀಲ್ ಅಂಗಡಿಗಳಲ್ಲಿ ಇನ್ನೂ ದುಬಾರಿಗೆ ಮಾರಲಾಗುತ್ತಿದೆ.
ನಮಗೆ ಬೇಕಾದ ಅಗ್ಯತ ತರಕಾರಿ ಬೆಳೆಯುವುದೇ ಬುದ್ಧಿವಂತಿಕೆ
ಎಲ್ಲಾ ತರಕಾರಿಯೂ ಬೆಳೆಯಲು ನಮ್ಮಿಂದ ಸಾಧ್ಯವಾಗದಿರಬಹುದು, ಆದರೆ ಕೆಲವೊಂದು ತರಕಾರಿಗಳನ್ನು ಸುಲಭವಾಗಿ ಬೆಳೆಯಬಹುದು, ಜಾಗ ಇಲ್ಲ ಅಂದರೂ ಅಲ್ಪ ಜಾಗದಲ್ಲಿ ಚೀಲದಲ್ಲಿ ಮಣ್ಣು ತುಂಬಿ ಬೆಳೆಯಬಹುದು, ಕ್ಯಾರೆಟ್, ಮೂಲಂಗಿ, ಸೊಪ್ಪು, ಟೊಮೆಟೊ ಈ ಬಗೆಯ ತರಕಾರಿಗಳನ್ನು ಸುಲಭವಾಗಿ ಬೆಳೆಯಬಹುದು.



Click it and Unblock the Notifications
