Latest Updates
-
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ! -
ಡೆಂಗ್ಯೂ ಭೀತಿ: ಕೇವಲ 10 ನಿಮಿಷದಲ್ಲಿ ನಿಮ್ಮ ಮನೆಯಲ್ಲಿ ಸೊಳ್ಳೆಗಳ ಸಂತಾನೋತ್ಪತ್ತಿ ತಡೆಯಿರಿ
ಮಂಗಳ ಗೋಚರ : ಈ 4 ರಾಶಿಯವರಿಗೆ ಅಶುಭ ಫಲ!
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಆಗಸ್ಟ್ 18, 2023 ರಂದು ಮಂಗಳನು ಕನ್ಯಾರಾಶಿಗೆ ಪ್ರವೇಶಿಸಲಿದೆ. ಮಂಗಳನನ್ನು ಶಕ್ತಿ, ಭೂಮಿ, ಧೈರ್ಯ, ಶೌರ್ಯ ಇತ್ಯಾದಿಗಳ ಅಂಶವೆಂದು ಪರಿಗಣಿಸಲಾಗುತ್ತದೆ. ಹೀಗಾಗಿ ಯಾರ ರಾಶಿಯಲ್ಲಿ ಮಂಗಳನು ಉನ್ನತ ಸ್ಥಾನದಲ್ಲಿರುತ್ತಾನೋ ಅವರು ಲಾಭವನ್ನು ಪಡೆಯುತ್ತಾರೆ.

ಅದೇ ರೀತಿ ಮಂಗಳನ ಕೆಂಗಣ್ಣು ಬಿದ್ರೆ ಕೂಡ ಜೀವನದಲ್ಲಿ ಅನೇಕ ಸಂಕಷ್ಟಗಳನ್ನು ಎದುರಿಸಬೇಕಾಗುತ್ತದೆ. ಅಷ್ಟಕ್ಕು ಮಂಗಳ ಗೋಚರದಿಂದ ಯಾವೆಲ್ಲಾ ರಾಶಿಯವರಿಗೆ ಕೆಟ್ಟದಾಗಲಿದೆ ಅನ್ನೋದನ್ನು ತಿಳಿಯೋಣ.
ವೃಷಭ ರಾಶಿ
ನಿಮ್ಮ ನಾಲ್ಕನೇ ಮನೆಯಲ್ಲಿ ಮಂಗಳ ಸಾಗಲಿದೆ. ಜನ್ಮ ಕುಂಡಲಿಯಲ್ಲಿ ನಾಲ್ಕನೇ ಸ್ಥಾನವು ನಮ್ಮ ಮನೆ, ಭೂಮಿ, ವಾಹನ ಮತ್ತು ತಾಯಿಗೆ ಸಂಬಂಧಿಸಿದೆ. ಈ ಮಂಗಳ ಸಂಕ್ರಮದಿಂದ ಭೂ-ನಿರ್ಮಾಣ, ವಾಹನ ಖರೀದಿ ಮಾಡಲು ಸಾಧ್ಯವಾಗುತ್ತದೆ. ಮತ್ತು ತಾಯಿಯ ಬೆಂಬಲ ಸಿಗುತ್ತದೆ. ವಿವಾಹಿತರಿಗೆ ಈ ಸಮಯ ಒಳ್ಳೆಯದಾಗಿರಲಿದೆ. ಆದರೆ ಕೆಲಸದ ವಿಚಾರದಲ್ಲಿ ಕೆಲವೊಂದು ಅಡ್ಡಿ-ಆತಂಕ ಎದುರಾಗುತ್ತದೆ. ಇದರಿಂದ ಮನಸ್ಸಿಗೆ ನೆಮ್ಮದಿ ಅನ್ನೋದೇ ಇರೋದಿಲ್ಲ.
ಕರ್ಕಾಟಕ ರಾಶಿ
ನಿಮ್ಮ ಎರಡನೇ ಮನೆಯಲ್ಲಿ ಮಂಗಳನು ಸಾಗಲಿದೆ. ಜಾತಕದಲ್ಲಿ ಎರಡನೇ ಸ್ಥಾನವು ನಮ್ಮ ಸಂಪತ್ತು ಮತ್ತು ಸ್ವಭಾವಕ್ಕೆ ಸಂಬಂಧಿಸಿದೆ. ಈ ಮಂಗಳ ಸಂಕ್ರಮದ ಪ್ರಭಾವದಿಂದ ನಿಮಗೆ ಆರ್ಥಿಕವಾಗಿ ಲಾಭವಾಗಲಿದೆ. ಆದರೆ ಬಂದ ಹಣ ಹೆಚ್ಚು ಕಾಲ ಉಳಿಯುವುದಿಲ್ಲ. ಖರ್ಚುಗಳು ಅಧಿಕವಾಗುತ್ತದೆ. ಉಳಿತಾಯ ಈ ಸಮಯದಲ್ಲಿ ಸಾಧ್ಯವಾಗೋದಿಲ್ಲ. ನಿಮ್ಮ ಸಹೋದರರೊಂದಿಗೆ ಪ್ರೀತಿ-ಮಮತೆ ಹೆಚ್ಚಾಗುತ್ತದೆ. ಈ ಸಮಯದಲ್ಲಿ ನೀವು ಹೆಚ್ಚು ಪ್ರಯೋಜನಗಳನ್ನು ಪಡೆಯುತ್ತೀರಿ.
ತುಲಾ ರಾಶಿ
ನಿಮ್ಮ ಹನ್ನೊಂದನೇ ಮನೆಯಲ್ಲಿ ಮಂಗಳ ಸಾಗಲಿದ್ದಾನೆ. ಜಾತಕದ ಹನ್ನೊಂದನೇ ಮನೆಯು ನಮ್ಮ ಆದಾಯ ಮತ್ತು ಬಯಕೆಗಳ ಈಡೇರಿಕೆಗೆ ಸಂಬಂಧಿಸಿದೆ. ಈ ಸಮಯದಲ್ಲಿ ನಿಮ್ಮ ಆಧ್ಯಾತ್ಮಿಕ ಆಲೋಚನೆಗಳಲ್ಲಿ ನಂಬಿಕೆ ಹೆಚ್ಚಾಗುತ್ತದೆ. ನಿಮ್ಮ ಹೆತ್ತವರು ಸಹ ಆರ್ಥಿಕವಾಗಿ ಪ್ರಯೋಜನ ಪಡೆಯುತ್ತಾರೆ. ಅಲ್ಲದೆ ಈ ಸಮಯದಲ್ಲಿ ನಿಮ್ಮ ಯಾವುದೇ ವಿಶೇಷ ಆಸೆಯನ್ನು ಪೂರೈಸಲು ಸಾಧ್ಯವಾಗುತ್ತದೆ. ಈ ಸಮಯದಲ್ಲಿ ನೀವು ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ನಿಮಗೆ ಆಗಾಗ್ಗೆ ಆರೋಗ್ಯ ಸಮಸ್ಯೆ ಕಾಡುವ ಸಾಧ್ಯತೆಯಿದೆ. ಇದರಿಂದ ಆರ್ಥಿಕ ನಷ್ಟವೂ ಆಗಬಹುದು.
ಮೀನ ರಾಶಿ
ನಿಮ್ಮ ಆರನೇ ಮನೆಯಲ್ಲಿ ಮಂಗಳ ಸಾಗಲಿದೆ. ಜಾತಕದಲ್ಲಿ ಆರನೇ ಸ್ಥಾನವು ನಮ್ಮ ಸ್ನೇಹಿತರು, ಶತ್ರುಗಳು ಮತ್ತು ಆರೋಗ್ಯಕ್ಕೆ ಸಂಬಂಧಿಸಿದೆ. ಈ ಮಂಗಳನ ಸಂಕ್ರಮದಿಂದ ಸಮಾಜದಲ್ಲಿ ನಿಮ್ಮ ಶಕ್ತಿ ಹೆಚ್ಚುತ್ತದೆ. ಮತ್ತು ಅಷ್ಟರಲ್ಲಿ ನಿಮಗೆ ಸಮಾಜದ ಕೆಲವು ಒಳ್ಳೆಯ ಜನರ ಪರಿಚಯವಾಗುತ್ತದೆ. ಈ ಸಮಯದಲ್ಲಿ ನೀವು ಬೆಂಕಿಯಿಂದ ದೂರವಿರಿ. ಬೆಂಕಿಯಿಂದಲೇ ದೊಡ್ಡ ಗಂಡಾಂತರ ಎದುರಾಗುವ ಸಾಧ್ಯತೆಯಿದೆ.



Click it and Unblock the Notifications
