Latest Updates
-
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ! FSSAI ಹೊಸ ನಿಯಮದ ಹಿಂದಿನ ಅಸಲಿ ಸತ್ಯವೇನು? -
ಭಾರತದ ಆಕಾಶದಲ್ಲಿ ಬೆಂಕಿಯ ಉಂಡೆಗಳ ಸಂಭ್ರಮ: ಈ ಅದ್ಭುತ ಉಲ್ಕಾಪಾತವನ್ನು ಮಿಸ್ ಮಾಡ್ಬೇಡಿ! -
ಶ್ವಾಸಕೋಶದ ಆರೋಗ್ಯಕ್ಕೆ 7 ನಿಮಿಷದ ಬೆಳಗಿನ ಅಭ್ಯಾಸ: ಕಲುಷಿತ ಗಾಳಿಯಿಂದ ರಕ್ಷಣೆ ಪಡೆಯುವುದು ಹೇಗೆ? -
ಡೇಟಿಂಗ್ ಆಪ್ ಬಳಸುತ್ತೀರಾ? ಈ 'ರೆಡ್ ಫ್ಲ್ಯಾಗ್'ಗಳಿದ್ದರೆ ನೀವು ಹನಿಟ್ರ್ಯಾಪ್ ಬಲೆಗೆ ಬೀಳಬಹುದು! -
ವಿದ್ಯುತ್ ಬಿಲ್ ಚಿಂತೆಯೇ? ಪಿಎಂ ಸೂರ್ಯ ಘರ್ ಯೋಜನೆಯಲ್ಲಿ 5.75% ಬಡ್ಡಿಗೆ ಸೋಲಾರ್ ಪಡೆಯಿರಿ! -
ವಿಶ್ವ ಸ್ತನ್ಯಪಾನ ಸಪ್ತಾಹ: ಕೇವಲ 250 ರೂಪಾಯಿಯಲ್ಲಿ ತಾಯಂದಿರಿಗೆ ಸಿಗುತ್ತಾ ಪೂರ್ಣ ಪೋಷಣೆ? ಇಲ್ಲಿದೆ ಬೆಸ್ಟ್ ಡಯಟ್ ಪ್ಲಾನ್ -
ಬೆಂಗಳೂರಿನಲ್ಲಿ ನೀರಿನ ಉಳಿತಾಯ ಕಡ್ಡಾಯ: ಜುಲೈ 31ರೊಳಗೆ ನಿಮ್ಮ ಮನೆಯ ನಲ್ಲಿಗಳಿಗೆ ಏರೇಟರ್ ಅಳವಡಿಸಿ! -
ಅಂತರಾಷ್ಟ್ರೀಯ ಸ್ನೇಹ ದಿನ: ಗೆಳೆಯರೊಂದಿಗೆ 'ಬಡ್ಡಿ ವರ್ಕೌಟ್' ಮಾಡಿ ಆರೋಗ್ಯ ಮತ್ತು ಬಾಂಧವ್ಯ ಹೆಚ್ಚಿಸಿಕೊಳ್ಳಿ!
ಖುಲಾಯಿಸಿತು ಅದೃಷ್ಟ: ಫ್ಯಾಂಟಸಿ ಗೇಮ್‌ನಲ್ಲಿ ₹1.5 ಕೋಟಿ ಗೆದ್ದ ಮೆಕ್ಯಾನಿಕ್..!
ನೀವು ಅದೃಷ್ಟ ಮತ್ತು ಲಾಟರಿ ಬಗ್ಗೆ ಕೇಳಿರುತ್ತೀರಿ. ಲಾಟರಿ ಮೂಲಕ ಅದೆಷ್ಟೋ ಮಂದಿ ರಾತ್ರೋ ರಾತ್ರಿ ಶ್ರೀಮಂತರಾಗುವ ಉದಾಹರಣೆಗಳನ್ನು ಸಹ ನೀಡು ನೋಡಿರುತ್ತೀರಿ. ಆದರೆ ಭಾರತದ ಬಹುತೇಕ ರಾಜ್ಯದಲ್ಲಿ ಲಾಟರಿ ನಿಷೇಧವಾಗಿದೆ. ಆದರೆ ಕೆಲ ರಾಜ್ಯದಲ್ಲಿ ಅಲ್ಲಿನ ಸರ್ಕಾರಗಳ ನಿಯಮಗಳಿಗೆ ಒಳಪಟ್ಟು ಲಾಟರಿ ನಡೆಸುತ್ತಿವೆ.
ಇದಲ್ಲದೆ ದೇಶದೆಲ್ಲೆಡೆ ನಾವು ಆನ್‌ಲೈನ್ ಜುಗಾರಿಗಳ ನೋಡಬಹುದು, ಫ್ಯಾಂಟಸಿ ಗೇಮ್ ಎಂದು ಕರೆಯಲ್ಪಡುವ ಈ ಗೇಮ್‌ನಲ್ಲಿ ಕೋಟಿ ಕೋಟಿ ಗೆಲ್ಲಬಹುದು. ಹಾಗೆ ಇಲ್ಲೊಬ್ಬ ಐಪಿಎಲ್ ಫ್ಯಾಂಟಸಿ ಗೇಮ್‌ನಲ್ಲಿ ಕೋಟಿ ಗೆದ್ದು ರಾತ್ರೋ ರಾತ್ರಿ ಕೋಟ್ಯಧಿಪತಿಯಾಗಿದ್ದಾನೆ. ಹೌದು ಆತ ರಾತ್ರಿ ಮಲಗಿ ಬೆಳಗೆ ಆಗುವುದರೊಳಗೆ ಕೋಟ್ಯಧಿಪತಿಯಾಗಿದ್ದಾನೆ.

ನಿಮಗೆ ಈ ಡ್ರೀಮ್ 11, ಮೈ ಟೀಮ್ ಇಲವೆನ್, ಎಂಪಿಎಲ್ ಹೀಗೆ ಹತ್ತಾರು ಆಪ್‌ಗಳ ಮೂಲಕ ಫ್ಯಾಂಟಸಿ ಟೀಮ್ ಮಾಡಿ ಆಡುವ ಅಭ್ಯಾಸ ಇರಬಹುದು. ಇಲ್ಲೊಬ್ಬ ಬಿಹಾರದ ವ್ಯಕ್ತಿ ಕ್ರಿಕೆಟ್ ಬಗ್ಗೆ ಒಂದಿಷ್ಟು ಗೊತ್ತಿಲ್ಲದೆ ಫ್ಯಾಂಟಸಿ ಟೀಮ್ ರಚಿಸಿ ಈಗ 1.5 ಕೋಟಿ ರೂಪಾಯಿ ಗೆದ್ದು ಎಲ್ಲರ ಹುಬ್ಬೇರುವಂತೆ ಮಾಡಿದ್ದಾನೆ.
ಬಿಹಾರದ ಆಹ್ರಾ ಜಿಲ್ಲೆಯ ಕೊಹ್ಡಾ ಹಳ್ಳಿಯ ದೀಪು ಓಜಾ ಎಂಬಾತ ಡ್ರೀಮ್ 11 ಆಪ್ ಮೂಲಕ ಫ್ಯಾಂಟಸಿ ಗೇಮ್‌ನಲ್ಲಿ ತನ್ನ ಡ್ರೀಮ್ ಟೀಂ ರಚಿಸಿ ಬರೋಬ್ಬರಿ 1.5 ಕೋಟಿ ರೂಪಾಯಿ ಗೆದ್ದು ಬೀಗಿದ್ದಾನೆ. ಕಳೆದ ಮೂರು ದಿನದ ಹಿಂದೆ ನಡೆಸಿದ್ದ ಕೊಲ್ಕತ್ತಾ ನೈಟ್ ರೈಡರ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಐಪಿಎಲ್ ಪಂದ್ಯದ ವೇಳೆ ಆತ ತಮ್ಮ ಡ್ರೀಮ್ ಟೀಮ್ ರಚಿಸಿದ್ದ.
8ನೇ ತರಗತಿಯಲ್ಲಿ ಪಾಸ್ ಆಗದೇ ಗ್ಯಾರೇಜ್ ನಡೆಸುತ್ತಿರುವ ಆತ ಐಪಿಎಲ್ ಆರಂಭಗೊಂಡಾಗಿನಿಂದ ಈ ಫ್ಯಾಂಟಸಿ ಗೇಮ್ ಆಡುತ್ತಾ ಬಂದಿರುವುದಾಗಿ ಹೇಳಿಕೊಂಡಿದ್ದಾನೆ. ಆತನಿಗೆ ಎರಡೂ ಟೀಮ್‌ನಲ್ಲಿರುವ ಐಪಿಎಲ್ ಆಟಗಾರರ ಹೆಸರು ಸಹ ಗೊತ್ತಿಲ್ಲವಂತೆ. ಆದರೂ ಕಳೆದ 6 ತಿಂಗಳಿಂದ ಒಂದಲ್ಲಾ ಒಂದು ಪಂದ್ಯ ಆಡುತ್ತಾ ಬಂದಿದ್ದನಂತೆ. ಕಳೆದ ಕೆಕೆಆರ್ ಹಾಗೂ ಆರ್‌ಸಿಬಿ ಪಂದ್ಯದ ವೇಳೆ ಆತ ಕೆಕೆಆರ್ ತಂಡದ ಆಟಗಾರ ಆಂಡ್ರು ರಸೆಲ್‌ನನ್ನು ನಾಯಕನಾಗಿ ಮಾಡಿ ಒಂದು ಟೀಮ್ ಮಾಡಿದ್ದನಂತೆ.
ಮೊದಲು ನಾನು ಈ ಆಪ್ ನಂಬಲಿಲ್ಲ ನಾನು ಗೆದ್ದ ಬಳಿಕ ನನಗೆ ನಂಬಿಕೆಯೇ ಬರಲಿಲ್ಲ. ಇವರು ಹಣ ನೀಡುವುದಿಲ್ಲ ಎಂದುಕೊಂಡಿದ್ದೆ. ಕ್ರಿಕೆಟ್ ಬಗ್ಗೆ ನನಗೆ ಏನು ತಿಳಿದಿಲ್ಲ ಎಂದು ಹಣ ಗೆದ್ದಿರುವ ಕುರಿತಂತೆ ಆತ ಸಂಸತ ಹಂಚಿಕೊಂಡಿದ್ದಾನೆ.
ಇದಕ್ಕೂ ಮೊದಲು 2023ರಲ್ಲಿ ಮಹಾರಾಷ್ಟ್ರದ ಪಿಂಪ್ರಿ ಚಿಂಚ್‌ವಾಡ್ ಪ್ರದೇಶದ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಒಬ್ಬರು ಇದೇ ರೀತಿ 49 ರೂಪಾಯಿಯ ಫ್ಯಾಂಟಸಿ ಗೇಮ್ ಆಡಿ ಬರೋಬ್ಬರಿ 1.5 ಕೋಟಿ ರೂಪಾಯಿ ಗೆದ್ದು ಕೊಂಡಿದ್ದರು. ಈ ವಿಚಾರ ಎಲ್ಲೆಡೆ ವೈರಲ್ ಆದ ಬಳಿಕ ಪೊಲೀಸ್ ಇಲಾಖೆ ಆತನನ್ನು ಅಮಾನತು ಮಾಡಿತ್ತು. ಪೊಲೀಸ್ ಇಲಾಖೆಯಲ್ಲಿದ್ದುಕೊಂಡು ಜನರನ್ನು ಫ್ಯಾಂಟಸಿ ಗೇಮ್‌ನತ್ತ ಸೆಳೆಯಲು ಆತ ಪ್ರಯತ್ನಿಸಿದ ಎಂಬ ನೆಪವೊಡ್ಡಿ ಆತನ ಅಮಾನತು ಮಾಡಲಾಗಿತ್ತು.
ಈ ರೀತಿಯ ಫ್ಯಾಂಟಸಿ ಗೇಮ್ ಆಡಲೆಂದೇ ಹತ್ತಾರು ಆಪ್‌ಗಳಿವೆ. ನಿತ್ಯವು ಕೋಟಿ ಕೋಟಿ ರೂಪಾಯಿ ವ್ಯವಹಾರ ನಡೆಸುತ್ತವೆ. ಆದರೆ ಇಡೀ ಗೇಮ್‌ನಲ್ಲಿ ಒಬ್ಬನೇ ಜಯಶಾಲಿ ಆಗುತ್ತಾನೆ ಉಳಿದ ಕೋಟ್ಯಂತರ ಮಂದಿ ಆ ದಿನ ಹಣ ಕಳೆದುಕೊಳ್ಳುತ್ತಾರೆ. ಅಂದರೆ ಇಲ್ಲಿ ಹಣ ಗೆಲ್ಲುವವರಿಗಿಂತ ಕಳೆದುಕೊಳ್ಳುವವರ ಸಂಖ್ಯೆ ಹೆಚ್ಚಾಗಿರುತ್ತದೆ. ಆದರೆ ಇದೊಂದು ವ್ಯವಸ್ಥಿತ ಜಾಲದಂತಿದ್ದು, ಹಣ ಹೂಡಿದವರಿಗೆ ಲಾಭಕ್ಕಿಂತ ನಷ್ಟವೇ ಹೆಚ್ಚು, ಆದರೆ ಅದೃಷ್ಟ ನಿಮ್ಮ ಕಡೆ ಇದ್ದರೆ ಮಾತ್ರ ಹಣ ಗಳಿಸಬಹುದಷ್ಟೇ..



Click it and Unblock the Notifications