Latest Updates
-
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ!
ಟ್ರಂಪ್ ಭವಿಷ್ಯ ನುಡಿದಾತನಿಂದ ಭೂಕಂಪನ ಕುರಿತು ಭಯಾಕನ ಭವಿಷ್ಯ..! ಆತ ಹೇಳಿರೋದೇನು?
ಭೂಮಿ ಮೇಲೆ ಸಂಭವಿಸಬಹುದಾದ ಘಟನೆಗಳ ಕುರಿತು ಹಲವರು ಭವಿಷ್ಯ ನುಡಿಯುವುದನ್ನು ನಾವು ನೋಡಬಹುದು. ಅದರಲ್ಲೂ ಈ 2025ರಲ್ಲಿ ಹಲವು ರೀತಿಯ ಘಟನೆಗಳು ನಡೆಯಲಿವೆ ಎಂಬುದನ್ನು ಹಲವರು ಮೊದಲೇ ಊಹಿಸಿದ್ದಾರೆ. ಅದರಲ್ಲಿ ಖ್ಯಾತ ತತ್ವಜ್ಞಾನಿ ನಾಸ್ಟ್ರಾಡಾಮಸ್, ಬಾಬಾ ವಂಗಾ, ಪ್ರಮುಖರು. ಅವರು ಊಹಿಸಿರುವ ಭವಿಷ್ಯದ ಘಟನೆಗಳಲ್ಲಿ ಹಲವು ನಿಜವಾಗಿರುವುದು ಕೂಡ ನೋಡಬಹುದು.
ಹಾಗೆ ಈಗ ಮತ್ತೊಬ್ಬ ಪ್ರಮುಖ ವ್ಯಕ್ತಿ 2025ರಲ್ಲಿ ನಡೆಯಲಿರುವ ಮಹಾ ದುರಂತವೊಂದನ್ನು ಊಹಿಸಿದ್ದಾರೆ. ಆತ ಈ ಮೊದಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹತ್ಯೆಗೆ ಯತ್ನ ನಡೆಯಲಿದೆ ಎಂಬ ಆಘಾತಕಾರಿ ಭವಿಷ್ಯ ನುಡಿದ್ದರು. ಈ ಭವಿಷ್ಯ ನಿಜವಾಗಿದ್ದು ಕೂಡ ನಾವು ನೋಡಬಹುದು.

ಓಕ್ಲಹೋಮ್‌ನ ಸ್ವಯಂ ಘೋಷಿತ ಪಾದ್ರಿ ಬ್ರಾಂಡನ್ ಡೇಲ್ ಬಿಗ್ಸ್ ಈ ರೀತಿ ಭವಿಷ್ಯ ನುಡಿಯುವ ವ್ಯಕ್ತಿಯಾಗಿದ್ದಾನೆ. ಆತ ಟ್ರಂಪ್ ಅವರ ಹತ್ಯೆಯ ಪ್ರಯತ್ನ ನಡೆಯಲಿದೆ ಎಂದು ವಿಡಿಯೋವೊಂದರಲ್ಲಿ ಮಾತನಾಡುವಾಗ ಹೇಳಿದ್ದರು. ಹಾಗೆ ಕಿವಿಯ ಪಕ್ಕದಲ್ಲಿ ಸಣ್ಣದಾಗಿ ಗಾಯವಾಗಲಿದೆ ಎಂದು ಕೂಡ ಊಹಿಸಿದ್ದರು. ಅವರು ಹೇಳಿದ್ದಂತೆಯೇ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಿದ್ದ ಟ್ರಂಪ್ ಮೇಲೆ ಗುಂಡಿನ ದಾಳಿ ನಡೆದಿತ್ತು. ಹಾಗೆ ಕಿವಿಗೆ ಗುಂಡು ತಾಕಿ ಗಾಯವಾಗಿತ್ತು.
ಈಗ ಇದೇ ಪಾದ್ರಿ ಹೇಳಿರುವ ಮತ್ತೊಂದು ಭವಿಷ್ಯ ಎಲ್ಲರನ್ನು ನಡುಗಿಸುವಂತಿದೆ. ಆತನ ಪ್ರಕಾರ, ಈ ವರ್ಷ 10ಕ್ಕಿಂತ ಹೆಚ್ಚು ಮ್ಯಾಗ್ನಿಟ್ಯೂಡ್‌ನ ಭೂಕಂಪ ಸಂಭವಿಸಲಿದೆಯಂತೆ. 10ಕ್ಕಿಂತ ಹೆಚ್ಚಿನ ಮ್ಯಾಗ್ನಿಟ್ಯೂಡ್ ಅಂದರೆ ಸಾವಿರಾರು ಜನರು ಪ್ರಾಣ ಕಳೆದುಕೊಳ್ಳುವುದು ಖಚಿತ. ಈವರೆಗೂ ಇಷ್ಟೊಂದು ಮಹಾ ಭೂಕಂಪನ ಸಂಭವಿಸಿಯೇ ಇಲ್ಲ.
ಅಮೇರಿಕಾದಾದ್ಯಂತ ಸಾವಿರಾರು ಜನರ ಸಾವಿಗೆ ಕಾರಣವಾಗುವ 10-ತೀವ್ರತೆಯ ಭೂಕಂಪ ಸಂಭವಿಸಲಿದೆ. ಭೂಕಂಪವು ಮಿಸೌರಿ, ಅರ್ಕಾನ್ಸಾಸ್, ಟೆನ್ನೆಸ್ಸೀ, ಕೆಂಟುಕಿ ಮತ್ತು ಇಲಿನಾಯ್ಸ್ ಮೂಲಕ ವ್ಯಾಪಿಸಿರುವ ನ್ಯೂ ಮ್ಯಾಡ್ರಿಡ್ ರೇಖೆಯಲ್ಲಿ ಅಪ್ಪಳಿಸಲಿದೆ ಎಂದಿದ್ದಾರೆ. ಇದು ಸಾವಿರಾರು ಜನರ ಸಾವಿಗೆ ಕಾರಣವಾಗಲಿದೆ ಎಂದಿದ್ದಾರೆ.
ಮಿನ್ನಿಸಿಪಿ ನದಿ ಪಾತ್ರದಲ್ಲಿ ಮಹಾ ಕಂಪನದ ಕೇಂದ್ರ ಬಿಂದು ಇರಲಿದೆ. ಇದು ಸುಮಾರು 1 ಸಾವಿರ ಕಿ.ಲೋ ಮೀಟರ್ ವರೆಗೂ ದುರಂತ ಸೃಷ್ಟಿಸಲಿದೆ ಎಂದಿದ್ದಾರೆ. ಅವರ ಈ ಭವಿಷ್ಯ ಕುರಿತು ಜನರಲ್ಲಿ ಆತಂಕ ಮೂಡುವಂತಾಗಿದೆ. ಏಕೆಂದರೆ ಈಗಾಗಲೇ ಲಾಸ್ ಏಂಜಲಿಸ್‌ನ ಕಾಡ್ಗಿಚ್ಚು ಇಡೀ ವಿಶ್ವವನ್ನೇ ಆತಂಕಕ್ಕೆ ತಳ್ಳಿದೆ.
10ರ ತೀವ್ರತೆಯೆ ಭೂ ಕಂಪನ ಸಾಧ್ಯವೇ?
ಈವರೆಗೆ ಭೂಮಿ ಮೇಲೆ ಸಂಭವಿಸಿರುವ ಭೂಕಂಪನದಲ್ಲಿ ಅತೀ ಹೆಚ್ಚು ತೀವ್ರತೆಯ ಕಂಪನವು 1960 ಮೇ 22 ರಂದು ನಡೆದಿತ್ತು. ಚಿಲಿಯಲ್ಲಿ 9.5ರಷ್ಟು ತೀವ್ರತೆಯ ಭೂಕಂಪನ ಉಂಟಾಗಿ ಬಹುದೊಡ್ಡ ದುರಂತವೇ ನಡೆದಿತ್ತು. ಆದ್ರೆ 10ಕ್ಕಿಂತ ಹೆಚ್ಚು ತೀವ್ರತೆಯ ಭೂಕಂಪನ ಸಂಭವಿಸಿಲ್ಲ. ಹಾಗೆ ಈ ತೀವ್ರತೆಯ ಕಂಪನ ಉಂಟಾಗುವ ಸಂಭವವೂ ಕೂಡ ಕಡಿಮೆ ಎಂದು ಯುನೈಟೆಡ್ ಸ್ಟೇಟ್ಸ್ ಭೂವೈಜ್ಞಾನಿಕ ಸಮೀಕ್ಷೆ ತಿಳಿಸಿದೆ.
ಇತರೆ ಭವಿಷ್ಯವಾಣಿಗಳು
ಇನ್ನು 2025ರಲ್ಲಿ ನಡೆಯಲಿರುವ ಕೆಲವೊಂದು ಘಟನೆಗಳನ್ನು ಕೆಲವರು ಮೊದಲೇ ಊಹಿಸಿದ್ದಾರೆ. 2025ರಲ್ಲಿ ದೈತ್ಯ ಕ್ಷುದ್ರಗ್ರಹವೊಂದು ಭೂಮಿಗೆ ಡಿಕ್ಕಿಯಾಗಬಹುದು ಅಥವಾ ಅತ್ಯಂತ ಸಮೀಪಕ್ಕೆ ಬರಬಹುದು ಎಂದು ನಾಸ್ಟ್ರಾಡಾಮಸ್ ಈ ಮೊದಲೇ ಹೇಳಿದ್ದಾರೆ. ಸದ್ಯ ಈ ಎರಡು ಭವಿಷ್ಯವಾಣಿಗಳ ಕುರಿತಾಗಿ ಭಾರೀ ಕುತೂಹಲವಿದೆ ಹಾಗೆ ಎಲ್ಲರ ಆತಂಕಕ್ಕೂ ಇದು ಕಾರಣವಾಗಿದೆ.



Click it and Unblock the Notifications
