Latest Updates
-
ಐಟಿಆರ್ ಸಲ್ಲಿಕೆ ಗಡುವು ಹತ್ತಿರ: ದಂಪತಿಗಳು ಒಟ್ಟಾಗಿ ಕುಳಿತು ಈ ಕೆಲಸ ಮಾಡಿದರೆ ಟೆನ್ಷನ್ ಫ್ರೀ! -
ಬೆಂಗಳೂರಿಗರೇ ಗಮನಿಸಿ: ಇಂದು 6 ಗಂಟೆ ಪವರ್ ಕಟ್, ಈ ಮುನ್ನೆಚ್ಚರಿಕೆ ಮರೆಯದಿರಿ! -
ಶ್ರಾವಣ ಉಪವಾಸದಲ್ಲಿ ದಿನವಿಡೀ ಎನರ್ಜಿಯಿಂದ ಇರಬೇಕೆ? ಈ ಹೈ-ಪ್ರೋಟೀನ್ ಸಾತ್ವಿಕ ಆಹಾರ ಪದ್ಧತಿ ಫಾಲೋ ಮಾಡಿ! -
ಗುರು ಪೂರ್ಣಿಮೆ 2026: ಸರಳ ಪೂಜಾ ವಿಧಿ ಮತ್ತು ಕಡಿಮೆ ಬಜೆಟ್ನಲ್ಲಿ ಗುರುಗಳಿಗೆ ನೀಡಬಹುದಾದ ಬೆಸ್ಟ್ ಗಿಫ್ಟ್ ಐಡಿಯಾಗಳು! -
10 ನಿಮಿಷದ 'ಟೈಗರ್ ಫ್ಲೋ': ಬೆನ್ನುನೋವಿಗೆ ಮುಕ್ತಿ ನೀಡುವ ಅದ್ಭುತ ವ್ಯಾಯಾಮ ಇಲ್ಲಿದೆ! -
ಪ್ರತಿಭಟನೆಯಲ್ಲಿ ಪ್ರೀತಿ: 'ಪ್ರೊಟೆಸ್ಟ್ ನೇ ಬನಾ ದಿ ಜೋಡಿ' ಟ್ರೆಂಡ್ ಹಿಂದೆ ಅಡಗಿದೆ ದೊಡ್ಡ ಅಪಾಯ! -
ಮಳೆಗಾಲದಲ್ಲಿ ಮನೆಯಲ್ಲಿ ಬೂಷ್ಟು ಹರಡುತ್ತಿದೆಯೇ? ಈ 20 ನಿಮಿಷದ ಟಿಪ್ಸ್ ಪಾಲಿಸಿ, ಮನೆ ಫ್ರೆಶ್ ಆಗಿಡಿ! -
ಕೇವಲ 200 ರೂಪಾಯಿಯಲ್ಲಿ ಪರಿಸರ ಸ್ನೇಹಿ ಊಟ: ವಿಶ್ವ ಪ್ರಕೃತಿ ಸಂರಕ್ಷಣಾ ದಿನಕ್ಕೆ ನಿಮ್ಮ ಅಡುಗೆಮನೆಯೇ ಮೊದಲ ಹೆಜ್ಜೆ! -
CWG 2026: 6ನೇ ದಿನ ಭಾರತದ ಪದಕದ ಬೇಟೆ; ಮನೆಯಲ್ಲೇ ಕಮ್ಮಿ ಬಜೆಟ್ನಲ್ಲಿ ಅದ್ಭುತ ವಾಚ್ ಪಾರ್ಟಿ ಪ್ಲಾನ್! -
ವಿಶ್ವ ಹೆಪಟೈಟಿಸ್ ದಿನ: ಲಿವರ್ ಆರೋಗ್ಯ ಹೆಚ್ಚಿಸಲು ಈ 10 ನಿಮಿಷದ ಬೆಳಗಿನ ದಿನಚರಿ ಪಾಲಿಸಿ!
ಟೈಟಾನಿಯಂ ಹೃದಯ ಕಸಿ ಯಶಸ್ವಿ: 100 ದಿನ ಬದುಕುಳಿದ ವ್ಯಕ್ತಿ.!!
ಮಾನವನ ದೇಹಕ್ಕೆ ಬಹಳ ಮುಖ್ಯ ಅಂಗ ಅಂದ್ರೆ ಹೃದಯ ಎನ್ನಬಹುದು. ಹೃದಯದ ಆರೋಗ್ಯ ಕಾಪಾಡಿಕೊಳ್ಳುವುದು ಎಷ್ಟು ಮುಖ್ಯ ಅನ್ನೋದನ್ನು ನೀವು ಕೂಡ ತಿಳಿದಿರಬಹುದು. ಹೃದಯದ ಆರೋಗ್ಯ ಕುರಿತು ಎಷ್ಟೇ ಗಮನ ಹರಿಸಿದರು ಸಾಲದು ಎನ್ನುವ ಕಾಲವಿದು. ನಮ್ಮ ಜೀವನ ಶೈಲಿಯು ಹೃದಯದ ಮೇಲೆ ಎಷ್ಟು ಹಾನಿಕಾರಕ ಪರಿಣಾಮ ಬೀರುತಲಿದೆ ಎಂಬುದನ್ನು ನೋಡುತ್ತಿದ್ದೇವೆ.
ಹಾಗೆ ಹೃದಯದ ಸಮಸ್ಯೆ ಇರುವವರಲ್ಲಿ ಹೃದಯ ಕಸಿ, ಶಸ್ತ್ರಚಿಕಿತ್ಸೆಯಂತಹ ಅತ್ಯಾಧುನಿಕ ಚಿಕಿತ್ಸೆಗಳು ಈಗ ಬಂದಿವೆ. ಅದರಲ್ಲೂ ಕಿಡ್ನಿ ಕಸಿ, ಶ್ವಾಸಕೋಶ ಕಸಿ, ಹೃದಯದ ಕಸಿ ಚಿಕಿತ್ಸೆಯಲ್ಲಿ ವೈದ್ಯಕೀಯ ಕ್ಷೇತ್ರ ಬಹಳ ಮುಂದೆ ಹೋಗಿದೆ. ಈಗ ಇಲ್ಲೊಬ್ಬ ವ್ಯಕ್ತಿಗೆ ಟೈಟಾನಿಯಂನಿಂದ ಮಾಡಿರುವ ಹೃದಯವನ್ನು ಜೋಡಿಸಲಾಗಿದ್ದು ಆತ ಬರೋಬ್ಬರಿ 100 ದಿನಗಳಿಂದ ಅದೇ ಹೃದಯದ ಸಹಾಯದಿಂದ ಬದುಕುಳಿದಿದ್ದಾನೆ.

ಆಸ್ಟ್ರೇಲಿಯಾದ ಸೌತ್ ವೇಲ್‌ನ 40 ವರ್ಷದ ವ್ಯಕ್ತಿ ಇಂತಹ ಟೈಟಾನಿಯಂ ಹೃದಯ ಹಾಕಿಸಿಕೊಂಡಿದ್ದ ವಿಶ್ವದ 6ನೇ ವ್ಯಕ್ತಿಯಾಗಿದ್ದಾರೆ. ಆದ್ರೆ ಅತ್ಯಂತ ದೀರ್ಘಕಾಲ ಬದುಕುಳಿದ ಮೊದಲ ವ್ಯಕ್ತಿ ಎನಿಸಿದ್ದಾರೆ. ಆತ ಹೃದಯ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದಾಗ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು, ಈ ವೇಳೆ ಅವರಿಗೆ ಬೇರೊಂದು ಹೃದಯದ ಅವಶ್ಯಕತೆ ಇತ್ತು. ಆದ್ರೆ ಕೊನೆ ಟೈಟಾನಿಯಂ ಹೃದಯ ಅಳವಡಿಸಲು ಮುಂದಾಗಲಾಗಿತ್ತು.
ಕಳೆದ ನವೆಂಬರ್‌ನಲ್ಲಿ ಸಿಡ್ನಿಯ ಸೇಂಟ್ ವಿನ್ಸೆಂಟ್ ಆಸ್ಪತ್ರೆಯಲ್ಲಿ ಕಾರ್ಡಿಯೋಥೊರಾಸಿಕ್ ಮತ್ತು ಕಸಿ ಶಸ್ತ್ರಚಿಕಿತ್ಸಕ ಪಾಲ್ ಜಾನ್ಜ್ ನೇತೃತ್ವದಲ್ಲಿ 6 ಗಂಟೆಗಳ ಶಸ್ತ್ರಚಿಕಿತ್ಸೆಯ ಮೂಲಕ ಈ ಟೈಟಾನಿಯಂ ಸಾಧನವನ್ನು ಅಳವಡಿಸಲಾಗಿತ್ತು. ಈ ರೀತಿಯ ಚಿಕಿತ್ಸೆ ನಡೆಸಿದ ಆಸ್ಟ್ರೇಲಿಯಾದ ಮೊದಲ ತಂಡವಾಗಿತ್ತು. ಹಾಗೆ ಈ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ಪೂರ್ಣಗೊಂಡಿತ್ತು.
ಈ ಸಾಧನವು ಹೃದಯ ಸಂಬಂಧಿ ರೋಗಿಗೆ ಶಾಶ್ವತವಾದ ಪರಿಹಾರ ನೀಡುವುದಿಲ್ಲ ಬದಲಿಗೆ ಆತನಿಗೆ ಸೂಕ್ತವಾಗುವಂತಹ ಹೃದಯ ಕಸಿ ಆಗುವವರೆಗೂ ಇದೇ ಸಾಧನದ ಮೂಲಕ ಬದುಕಿರಬೇಕಾಗುತ್ತದೆ, ಹೃದಯ ದಾನಿಗಳು ಸಿಕ್ಕ ಬಳಿಕ ಮತ್ತೆ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾಗುತ್ತದೆ. ಆದ್ರೆ ಈ ಸಾಧನದ ಮೂಲಕ ಎಷ್ಟು ಸಮಯ ಆತ ಬದುಕಿರಲಿದ್ದಾನೆ ಎಂಬುದನ್ನು ಹೇಳಲು ಸಾಧ್ಯವಾಗುವುದಿಲ್ಲ.
ಬಿವಾಕರ್ (BiVACOR) ಎಂದರೇನು?
ಬಿವಾಕರ್ ಎಂದು ಕರೆಯಲ್ಪಡುವ ಈ ಸಾಧನವನ್ನು ಕ್ವೀನ್‌ಲ್ಯಾಂಡ್‌ನ ಡಾ. ಡೇನಿಯಲ್ ಟಿಮ್ಸ್ ಮೊಟ್ಟ ಮೊದಲು ಕಂಡು ಹಿಡಿದ. ಇದು ಹೃದಯದಂತೆ ರಚನೆ ಹೊಂದಿರುವ, ಹೃದಯದಂತೆಯೇ ಕೆಲಸ ಮಾಡುವ ಸಾಧನವಾಗಿತ್ತು. ದಾನಿಯ ಹೃದಯ ಸಿಗುವವರೆಗೂ ರೋಗಿಯು ಉಸಿರಾಟ ಪ್ರಕ್ರಿಯೆ ನಡೆಸಲು ಇದು ಸಹಕಾರಿಯಾಗಿರಲಿದೆ. ಇದೊಂದು ಚಿಕ್ಕ ನೀರಿನ ಪಂಪ್‌ನಂತೆ ಕೆಲಸ ಮಾಡುತ್ತದೆ. ದೇಹದ ಪ್ರತಿಯೊಂದು ಭಾಗಕ್ಕೆ ಅಗತ್ಯವಾಗಿ ಬೇಕಾದ ರಕ್ತವನ್ನು ಪಂಪ್ ಮಾಡುವುದು ಇದರ ಬಹುಮುಖ್ಯ ಕೆಲಸವಾಗಿರಲಿದೆ.
ಅಚ್ಚರಿ ಎಂದರೆ ಇದು ಚಾರ್ಜೇಬಲ್ ಬ್ಯಾಟರಿ ಮೂಲಕ ಕೆಲಸ ನಿರ್ವಹಿಸುತ್ತದೆ. ರಾತ್ರಿ ಮಲಗುವಾಗ ಚಾರ್ಜ್ ಮಾಡಿಕೊಳ್ಳಬಹುದು. ಹಾಗೆ ಇದು ತುಕ್ಕು ನಿರೋಧಕ ಗುಣಹೊಂದಿದ್ದು, ದೇಹದ ಮತ್ಯಾವುದೇ ಭಾಗಕ್ಕೆ ಹಾನಿ ಉಂಟು ಮಾಡುವುದಿಲ್ಲ. ಇದರಲ್ಲಿ ಒಂದು ಮೋಟಾರ್ ಬಳಸಲಾಗಿದ್ದು, ಅದರ ಕಾರ್ಯಕ್ಷಮತೆ ಬಹಳ ವರ್ಷಗಳ ಕಾಲ ಬರಬಹುದು ಎಂದು ಅಂದಾಜಿಸಲಾಗಿದೆ. ಹಾಗೆ ಇದು ಉಳಿದೆಲ್ಲಾ ಶಸ್ತ್ರಚಿಕಿತ್ಸೆಗಳಿಗೆ ಹೋಲಿಸಿದರೆ ಕಡಿಮೆ ಸಮಯ ಹಾಗೂ ನೋವು ಕೂಡ ಕಡಿಮೆ ನೀಡಲಿದೆಯಂತೆ.
ಈ ಬಿವಾಕರ್ ಯಂತ್ರವು ಹೃದಯ ಕಸಿಗೆ ಅನರ್ಹರಾಗುವಂತಹ ಅಥವಾ ಸೂಕ್ತ ದಾನಿಗಳು ಸಿಗದೇ ಇರುವ ಮಂದಿಗೆ ಈ ಟೈಟಾನಿಯಂ ಹೃದಯ ಜೀವ ಉಳಿಸಲು ಸಾಧನವಾಗಲಿದೆ. ಹಾಗೆ ಈ ಪರಿಕಲ್ಪನೆ ಮುಂದೆ ಪ್ರಸಿದ್ಧಿತವಾಗಲಿದೆ.



Click it and Unblock the Notifications