Latest Updates
-
ಅಮಾವಾಸ್ಯೆಯ ದಿನ ಜಗಳ ಬೇಡ: ದಂಪತಿಗಳ ನಡುವಿನ ಪ್ರೀತಿ ಹೆಚ್ಚಿಸಲು ಈ ಸಂಭಾಷಣೆ ಸೂತ್ರಗಳು -
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು
ಏಷ್ಯಾ-ಯುರೋಪ್ ಖಂಡವನ್ನು ಹಗ್ಗದ ಮೇಲೆ ದಾಟಿದ ಸಾಹಸಿಗ..! ಯಾರು ಈತ?
ಜೀವನ ಹಗ್ಗದ ಮೇಲಿನ ನಡಿಗೆ ಎಂದು ಹೇಳುವುದನ್ನು ಕೇಳಿರುತ್ತೇವೆ. ಏಕೆಂದರೆ ಹಗ್ಗದ ಮೇಲೆ ನಡೆಯಬೇಕು ಅಂದರೆ ಅದು ಅತ್ಯಂತ ಕಷ್ಟದ ಕೆಲಸ. ಯಾವಾಗ ಏನು ಬೇಕಾದರು ಸಂಭವಿಸಬಹುದು ಎಂಬುದು ಅದರ ಅರ್ಥ. ಹೀಗಾಗಿ ಹಗ್ಗದ ಮೇಲಿನ ನಡಿಗೆ ಎಂಬ ಮಾತು ಬಂದಿದೆ. ಹಾಗೆ ಕೆಲವರು ಹಗ್ಗದ ಮೇಲೆ ನಡೆಯುವ ಮೂಲಕ ಸಾಹಸ ಪ್ರದರ್ಶನ ಮಾಡುತ್ತಾರೆ.
ಮತ್ತೆ ಕಲವರು ಜಾತ್ರೆಗಳಲ್ಲಿ ಜನ ಸಂದಣಿ ಇರುವ ಕಡೆ ಹಗ್ಗದ ಮೇಲೆ ನಡೆದು ತಮ್ಮ ಹೊಟ್ಟೆ ತುಂಬಿಸಿಕೊಳ್ಳುವ ಕಾರ್ಯಕ್ಕು ಮುಂದಾಗುವುದನ್ನು ನಾವು ನೋಡಿದ್ದೇವೆ. ಆದ್ರೆ ಇಲ್ಲೊಬ್ಬ ನೋವ್ಯಾರು ಅಂದುಕೊಂಡಿರದ ಸಾಹಸ ಮಾಡಿ ಇಡೀ ವಿಶ್ವವೇ ಹುಬ್ಬೇರಿಸಿಕೊಂಡು ನೋಡುವಂತೆ ಮಾಡಿದ್ದಾನೆ. ಆತ ಹಗ್ಗದ ಮೇಲೆ ಏಷ್ಯಾ ಖಂಡದಿಂದ ಯೂರೋಪ್ ಖಂಡ ದಾಟುವ ಮೂಲಕ ದಾಖಲೆ ಬರೆದಿದ್ದಾನೆ.

ಜಾನ್ ರೂಸ್ ಎಂಬ ಸಾಹಸಿಗ ಈ ಮೊದಲ ಸಾಹಸಕ್ಕೆ ಕಾರಣನಾಗಿರುವ ವ್ಯಕ್ತಿ. ಆತ ರೆಡ್‌ಬುಲ್ ಅಥೀಟ್ ಸಹ ಆಗಿದ್ದು ಈವರೆಗೆ ಯಾರು ಮಾಡಿರದ ಸಾಹಸ ಮಾಡಿದ್ದಾನೆ. ಇಸ್ತಾನ್‌ಬುಲ್‌ನ ಹುತಾತ್ಮರ ಸೇತುವೆಯ ಎರಡು ಖಂಡಗಳನ್ನು ದಾಟುವ ಮೂಲಕ ಎಲ್ಲರ ಅಚ್ಚರಿಗೆ ಕಾರಣನಾಗಿದ್ದಾನೆ. ಏಷ್ಯಾದಿಂದ ಯೂರೋಪ್ ಖಂಡಕ್ಕೆ ಬರೋಬ್ಬರಿ 47 ನಿಮಿಷಗಳ ಕಾಲದ ಹಗ್ಗದ ಮೇಲಿನ ನಡಿಗೆ ಮೂಲಕ ಎಲ್ಲರಿಗೂ ಶಾಕ್ ನೀಡಿದ್ದಾನೆ.
ಏಷ್ಯಾದಿಂದ ಯುರೋಪ್‌ಗೆ 47 ನಿಮಿಷಗಳಲ್ಲಿ ಹಗ್ಗದ ಮೇಲೆ ಅದರಲ್ಲು ಇಷ್ಟೊಂದು ಎತ್ತರದಲ್ಲಿ ನಡೆದ ಮೊದಲ ವ್ಯಕ್ತಿಯಾಗಿದ್ದಾನೆ. ಈ ಘಟನೆಯು ಕಾಂಟಿನೆಂಟಲ್ ಪಾಸ್‌ನ ಭಾಗವಾಗಿತ್ತು ಎಂದು ಟರ್ಕಿಶ್ ಸುದ್ದಿ ವೆಬ್‌ಸೈಟ್ ಹುರಿಯೆಟ್ ಡೈಲಿ ನ್ಯೂಸ್ ವರದಿ ಮಾಡಿದೆ. ರೂಸ್ ಹಗ್ಗದ ಮೇಲೆ 1,074 ಮೀಟರ್‌ಗಳನ್ನು ಎತ್ತರದಲ್ಲಿ ಸುಮಾರು 165 ಮೀಟರ್ ದೂರ ಕ್ರಮಿಸಿದ್ದಾರೆ.
ಸೇತುವೆಯ ಬುಡದಿಂದ ಕಟ್ಟಿದ್ದ ಹಗ್ಗವು ಸುಮಾರು 1,074 ಮೀಟರ್ ಉದ್ದವಾಗಿದೆ, ಆದರೆ ಅದು ಮಧ್ಯದಲ್ಲಿ ಕುಗ್ಗುತ್ತದೆ. ಹಗ್ಗವು ಕೆಲವು ನೂರು ಕಿಲೋಗಳಷ್ಟು ತೂಗುತ್ತದೆ ಮತ್ತು ಗಾಳಿಯೊಂದಿಗೆ ಒತ್ತಡವು ಬದಲಾಗುತ್ತದೆ. ಮಧ್ಯದಲ್ಲಿ, 35-40 ಮೀಟರ್ ಸಂಕುಚಿತ ದಾರಿ ಸಿಗುತ್ತದೆ. ಈ ವಿಡಿಯೋವನ್ನು ಯೂಟ್ಯೂಬರ್ ಹಂಚಿಕೊಂಡಿದ್ದು ಅವರು ಹಗ್ಗದ ಮೇಲೆ ನಡೆಯುತ್ತಿರುವುದನ್ನು ನೋಡಬಹುದು.
ಇದಕ್ಕೂ ಮೊದಲು ಜುಲೈನಲ್ಲಿ ಜಾನ್ ರೂಸ್ ವಿಶ್ವದ ಅತ್ಯಂತ ಉದ್ದವಾದ ಹಗ್ಗದ ಮೇಲಿನ ನಡಿಗೆಯನ್ನು ಸಹ ಯಶಸ್ವಿಯಾಗಿ ಮಾಡಿ ಮುಗಿಸಿದ್ದಾರೆ. ಇಟಲಿಯ ಮುಖ್ಯ ಭೂಭಾಗದಿಂದ ಸಿಸಿಲಿಗೆ 200 ಮೀಟರ್ ಎತ್ತರದಲ್ಲಿ 3.6 ಕಿ.ಮೀ ದೂರ ಹಗ್ಗದ ಮೇಲೆ ನಡೆದು ದಾಖಲೆ ಬರೆದಿದ್ದಾರೆ.
2,710 ಮೀ ದಾಟುವ ಸಂದರ್ಭದಲ್ಲಿ ಜಾನ್ ಹಿಂದಿನ ವಿಶ್ವ ದಾಖಲೆಯನ್ನು ಮೀರಿಸಿದರು. ಆದರೆ ಆರಂಭದಲ್ಲಿ ಅವರು ಹಗ್ಗದ ಮೇಲಿನಿಂದ ಕೆಳಗೆ ಬಿದ್ದಿದ್ದರು. ಆದರೆ ಸಪೋರ್ಟಿವ್ ಹಗ್ಗವಿರುವ ಕಾರಣ ಯಾವುದೆ ಅಪಾಯ ಸಂಭವಿಸಲಿಲ್ಲ. ಹೀಗಿದ್ದರು ಅವರು ಹಗ್ಗದ ಮೇಲೆ ಬರೋಬ್ಬರಿ 3 ಗಂಟೆಗಳ ಕಾಲ ಕ್ರಮಿಸಿದ್ದರು.
ಅತ್ಯಂತ ವೇಗದ ಗಾಳಿ ಹಾಗೂ ಇಡೀ ಪ್ರಯಾಣದಲ್ಲಿ ಮಧ್ಯಕ್ಕೆ ಬಂದಾಗ ಹಗ್ಗವು ಕೆಳಗೆ ಜಗ್ಗುವುದು, ಸಮತೋಲನ ಕಾಪಾಡಿಕೊಳ್ಳುವಂತಹ ಕ್ಲಿಷ್ಟಕರ ಸ್ಥಿತಿಯಲ್ಲಿ ಅವರು ಗುರಿ ತಲುಪಿದ್ದರು.
ಇನ್ನು ನವೆಂಬರ್ 2023ರಲ್ಲಿ ಜಾನ್ ರೂಸ್ ಮತ್ತೊಂದು ಸಾಹಸ ಮಾಡಿದ್ದರು. ನೈಜೀರಿಯಾದ ಪ್ರಮುಖ ನಗರವಾದ ಲಾಗೋಸ್‌ನಲ್ಲಿರುವ ಸ್ಟರ್ಲಿಂಗ್ ಟವರ್ಸ್‌ನಿಂದ ಒನೊಮ್ ರಿಗ್ ಮರೀನಾಕ್ಕೆ ಹಗ್ಗದ ಮೇಲೆ ನಡೆದು ಅಚ್ಚರಿ ಮೂಡಿಸಿದ್ದರು. ಸೇತುವೆ ನಡುವೆ ಹಗ್ಗ ಕಟ್ಟಿ ನದಿ ದಾಟಿದ್ದರು. ಇದು ಎಲ್ಲರ ಅಚ್ಚರಿಗೆ ಕಾರಣವಾಗಿತ್ತು. ಜಾನ್ ರೂಸ್ 18 ನೇ ವಯಸ್ಸಿನಲ್ಲಿ ಸ್ಲಾಕ್ಲೈನಿಂಗ್ ಪ್ರಾರಂಭಿಸಿದರು. ಅವರು ಎಸ್ಟೋನಿಯಾದಲ್ಲಿ ಜನಿಸಿದವರು. ಅನೇಕ ವಿಶ್ವ ದಾಖಲೆಗಳನ್ನು ಹೊಂದಿದ್ದಾರೆ ಮತ್ತು ಮೂರು ಬಾರಿ ವಿಶ್ವ ಚಾಂಪಿಯನ್ ಆಗಿದ್ದಾರೆ.



Click it and Unblock the Notifications
