Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
ಮಾರುಕಟ್ಟೆಗೆ ಗೋಣಿ ಚೀಲದ ಕುರ್ತಾ-ಪೈಜಾಮ ಎಂಟ್ರಿ..! ವಿಚಿತ್ರ ಫ್ಯಾಶನ್ ಎಂದ ನೆಟ್ಟಿಗರು
ಫ್ಯಾಶನ್ ಲೋಕದಲ್ಲಿ ನಿತ್ಯ ಒಂದಲ್ಲಾ ಒಂದು ಸುದ್ದಿ ಹೊರಬೀಳುತ್ತವೆ. ಅದರಲ್ಲಿ ಬಹುಪಾಲು ವಿಚಿತ್ರ ಸುದ್ದಿಗಳೇ ತುಂಬಿರುತ್ತವೆ. ಅದರಲ್ಲೂ ಆನ್‌ಲೈನ್ ಮೀಡಿಯಾಗಳಲ್ಲಿ ಫ್ಯಾಶನ್ ಲೋಕಕ್ಕೆ ಸಂಬಂಧಿಸಿದಂತೆ ಚಿತ್ರ ವಿಚಿತ್ರ ಬಟ್ಟೆಯಲ್ಲಿ ಜನರು ಕಾಣಿಸಿಕೊಳ್ಳುವುದನ್ನು ನಾವು ನೋಡಿದ್ದೇವೆ.
ಅದಕ್ಕೆ ಸೂಕ್ತ ಉದಾಹರಣೆ ಎಂದರೆ ಬಾಲಿವುಡ್‌ನ ಊರ್ಫಿ ಜಾವೆದ್. ಆಕೆ ಮನೆಯಿಂದ ಹೊರಬರುವಾಗಲೆಲ್ಲ ಚಿತ್ರ ವಿಚಿತ್ರ ಬಟ್ಟೆ ಧರಿಸಿ ಎಲ್ಲರಿಗೂ ಶಾಕ್ ನೀಡುತ್ತಿರುತ್ತಾಳೆ. ಆಕೆಯ ಉಡುಪು ಯಾರು ಊಹಿಸದ ರೀತಿಯಲ್ಲಿರುತ್ತದೆ. ಆಕೆ ತನ್ನ ಉಡುಪಿನ ಕಾರಣದಿಂದಾಗಿಯೇ ಹಲವು ವಿವಾದಗಳ ಮೈಮೇಲೆ ಎಳೆದುಕೊಂಡಿದ್ದಾಳೆ.

ಆದ್ರೆ ಇದೀಗ ಇಲ್ಲೊಂದು ಹೊಸ ಫ್ಯಾಶನ್ ನಿಮಗೆ ಅಚ್ಚರಿ ಹುಟ್ಟಿಸುತ್ತೆ. ಯುವಕನೊಬ್ಬ ಗೋಣಿಚೀಲದಲ್ಲಿ ಮಾಡಿರುವ ಕುರ್ತಾ ಧರಿಸುತ್ತಿರುವ ವಿಡಿಯೋ ಇದಾಗಿದ್ದು, ಈ ಹೊಸ ಫ್ಯಾಶನ್ ಕಂಡು ಜನ ನಿಬ್ಬೆರಗಾಗಿದ್ದಾರೆ.
ಇನ್ಸ್‌ಸ್ಟಾಗ್ರಾಮ್ ಪೇಜ್‌ನಲ್ಲಿ ತಮ್ಮ ಹೊಸ ಉತ್ಪನ್ನ ಎಂದು ಈ ಗೋಣಿ ಚೀಲದ ಕುರ್ತಾವನ್ನು ಹಂಚಿಕೊಳ್ಳಲಾಗಿದೆ, ಕುರ್ತಾ ಹಾಗೂ ಪ್ಯಾಂಟ್ ಸಹ ಗೋಣಿ ಚೀಳದಿಂದಲೇ ಮಾಡಲಾಗಿದೆ. ಇದನ್ನು ಧರಿಸುವ ಯುವಕನನ್ನು ನಾವು ವಿಡಿಯೋದಲ್ಲಿ ನೋಡಬಹುದು. ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು, ಜನರು ಶಾಕ್ ಆಗಿದ್ದಾರೆ.
ಫ್ಯಾಶನ್ ಲೋಕದಲ್ಲಿ ಹೊಸತನ ತರುವ ಬದಲಾಗಿ ಈ ಗೋಣಿಚೀಲದತ್ತ ಮುಖ ಮಾಡಿರುವುದು ಹಲವರಿಗೆ ನಂಬಲಸಾಧ್ಯ ಪ್ರಕ್ರಿಯೆ ಎನಿಸಿದೆ. ಇನ್ನು ಇದರ ದರ ಸಹ ಕೆಲವರಿಗೆ ಶಾಕ್ ನೀಡಿದೆ.
ಈ ಪೋಸ್ಟರ್‌ನಲ್ಲಿ ಹಂಚಿಕೊಂಡಿರುವ ಮಾಹಿತಿಯಂತೆ, ಈ ಗೋಣಿ ಚೀಲದ ಕುರ್ತಾ ನಿಮಗೆ ಬೇಕಾದಲ್ಲಿ ನೀವು ಮೊದಲು 250 ರೂಪಾಯಿಯನ್ನು ಅಡ್ವಾನ್ಸ್ ಆಗಿ ನೀಡಿ ಬುಕ್ ಮಾಡಿಕೊಳ್ಳಬೇಕು. ಬಳಿಕ ಡೆಲಿವರಿ ವೇಳೆ ಸಂಫೂರ್ಣ ಹಣ ನೀಡಬೇಕು ಎಂದು ತಿಳಿಸಲಾಗಿದೆ. ಜೊತೆಗೆ ಈ ಪೋಸ್ಟ್ ಜೊತೆ ಅವರ ಮೊಬೈಲ್ ನಂಬರ್‌ಗಳನ್ನು ಸಹ ನೀಡಲಾಗಿದೆ.
ಗೋಣಿ ಚೀಲದ ಕುರ್ತಾ ಕಂಡು ಜನ ಹೇಳಿದ್ದೇನು?
ಈ ವಿಡಿಯೋವನ್ನು ಕೆಲವೇ ದಿನಗಳ ಹಿಂದೆ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಲಾಗಿದ್ದು, ಇದೀಗ 53 ಮಿಲಿಯನ್ ವೀಕ್ಷಣೆಗಳನ್ನು ದಾಟಿದೆ. ಆದರೆ ಇದನ್ನು ಕಂಡ ಜನರು ಅಷ್ಟೇನು ಇಷ್ಟಪಟ್ಟಂತೆ ಕಾಣುತ್ತಿಲ್ಲ. ಏಕೆಂದರೆ ಅವರು ಈ ಗೋಣಿ ಚೀಲದ ಫ್ಯಾಷನ್ ವಿರುದ್ಧ ಕಮೆಂಟ್‌ಗಳ ಮಾಡಿದ್ದಾರೆ. ಗೋಣಿ ಚೀಲದ ಕುರ್ತಾ ಧರಿಸುವ ಬದಲು ಅದೇ ಬೆಲೆಗೆ ಬ್ರಾಂಡೆಡ್ ಬಟ್ಟೆಗಳೇ ಬರುತ್ತಿತ್ತು. ಅಷ್ಟು ಹಣ ನೀಡಿ ಗೋಣಿ ಚೀಲವನ್ನು ಯಾರು ತಾನೆ ಮೈ ಮೇಲೆ ಹಾಕಿಕೊಂಡು ಓಡಾಡುತ್ತಾರೆ ಎಂದು ಪ್ರಶ್ನಿಸಿದ್ದಾರೆ.
ಜೊತೆಗೆ ಗೋಣಿ ಚೀಲ ಹಾಕಿಕೊಂಡು ಹೊರಬಂದರೆ ಬಿಸಿಲಿನ ತಾಪದಲ್ಲಿ ಮತ್ತಷ್ಟು ಮೈ ಸುಡುತ್ತದೆ. ಗೋಣಿ ಚೀಲ ಶಾಖ ವಿರೋಧಿಯಾಗಿ ವರ್ತಿಸುವುದಿಲ್ಲ, ಬದಲಾಗಿ ಮತ್ತಷ್ಟು ಬಿಸಿಯಾಗಿಸುತ್ತದೆ. ಆದರೆ ಇದು ಹಿಮಾ ತುಂಬಿರುವ ಪ್ರದೇಶ ಇಲ್ಲವೆ ಹೆಚ್ಚು ಚಳಿ ಇರುವ ಪ್ರದೇಶದಲ್ಲಿ ಉಪಯೋಗಕ್ಕೆ ಬರಬಹುದು ಎಂಬುದು ನೆಟ್ಟಿಗರ ಸಹಮತವಾಗಿದೆ.
ಇನ್ನೂ ಈ ಮೊದಲು ಮಾಲ್‌ವೊಂದರಲ್ಲಿ ಈ ಗೋಣಿ ಚೀಲದಿಂದ ಮಾಡಲಾಗಿದ್ದ ಪ್ಯಾಂಟ್ ಒಂದರ ಬೆಲೆ ವೈರಲ್ ಆಗಿತ್ತು. ಅದರ ಬೆಲೆ ಸುಮಾರು 60 ಸಾವಿರ ಎಂದು ನಮೂದಿಸಲಾಗಿತ್ತು. ಹೌದು ಆ ಪ್ಯಾಂಟ್‌ಗೆ ಬರೋಬ್ಬರಿ 60 ಸಾವಿರ ರೂಪಾಯಿ ಬೆಲೆಯಾಗಿತ್ತು. ಈ ಗೋಣಿ ಚೀಲದ ಪ್ಯಾಂಟ್ ಕಂಡು ಜನ ನಿಬ್ಬೆರಗಾಗಿದ್ರು. ಇಷ್ಟು ಹಣ ನೀಡಿ ಅದನ್ನು ಯಾರು ತಾನೆ ಖರೀದಿಸುತ್ತಾರೆ ಎಂಬ ಪ್ರಶ್ನೆ ಸಹ ಎದ್ದಿತ್ತು.



Click it and Unblock the Notifications
