Latest Updates
-
ಸೋಶಿಯಲ್ ಮೀಡಿಯಾದಲ್ಲಿ ನಿಮ್ಮ ಸಂಬಂಧವನ್ನು ರಹಸ್ಯವಾಗಿಡಬೇಕಾ? ನೆಮ್ಮದಿಯ ಬದುಕಿಗೆ ಈ ಡಿಜಿಟಲ್ ಬೌಂಡರಿಗಳು ಮಸ್ಟ್! -
ದೆಹಲಿ-ಎನ್ಸಿಆರ್ನಲ್ಲಿ ಬಿರುಗಾಳಿ ಅಬ್ಬರ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಮುನ್ನೆಚ್ಚರಿಕೆ ಮರೆಯದಿರಿ! -
ಅಡುಗೆಮನೆಯಲ್ಲಿ ಕಡಲೆ ಹಿಟ್ಟು ಬಳಸುವ ಮುನ್ನ ಎಚ್ಚರ: FSSAI ಜಾರಿಗೆ ತಂದಿದೆ ಹೊಸ ಕಠಿಣ ನಿಯಮಗಳು! -
ಫ್ಲಿಪ್ಕಾರ್ಟ್ GRWM ಸೇಲ್: ಟ್ರೆಂಡಿ ಲುಕ್ ಪಡೆಯಲು ಇನ್ಫ್ಲುಯೆನ್ಸರ್ ಸಜೆಸ್ಟ್ ಮಾಡಿದ ಬೆಸ್ಟ್ ಡೀಲ್ಗಳು ಇಲ್ಲಿವೆ! -
ಬಿಸಿಲಿನಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ಹೀಟ್ಸ್ಟ್ರೋಕ್ ಕಟ್ಟಿಟ್ಟ ಬುತ್ತಿ, ಎಚ್ಚರವಿರಲಿ! -
ಅಸ್ಸಾಂನಲ್ಲಿ ಲಿವ್-ಇನ್ ಸಂಬಂಧದಲ್ಲಿದ್ದೀರಾ? ಹೊಸ ಕಾನೂನಿನ ಪ್ರಕಾರ ನೋಂದಣಿ ಮಾಡದಿದ್ದರೆ ಜೈಲು ಶಿಕ್ಷೆ ಕಟ್ಟಿಟ್ಟ ಬುತ್ತಿ! -
ಬಿಸಿಲಿಗೆ ಗಿಡಗಳು ಬಾಡುತ್ತಿವೆಯೇ? ಈ ಮ್ಯಾಜಿಕ್ ಟಿಪ್ಸ್ ಬಳಸಿ ನಿಮ್ಮ ಬಾಲ್ಕನಿ ಗಾರ್ಡನ್ ಅನ್ನು ಹಸಿರಾಗಿಡಿ! -
ಬಿಸಿಲ ಝಳಕ್ಕೆ ಸುಸ್ತಾಗಿದ್ದೀರಾ? ಹೀಟ್ಸ್ಟ್ರೋಕ್ನಿಂದ ಪಾರಾಗಲು ಈ ತಂಪು ಪದಾರ್ಥಗಳು ನಿಮ್ಮ ಆಹಾರದಲ್ಲಿರಲಿ, ಇಂದೇ ಟ್ರೈ ಮಾಡಿ! -
ಬಕ್ರೀದ್ 2026: ಈ ಬಾರಿಯ ಹಬ್ಬದ ಸಂಭ್ರಮದಲ್ಲಿ ಮಿಂಚಲು ನೀವು ಮಿಸ್ ಮಾಡಲೇಬಾರದ ಫ್ಯಾಷನ್ ಟ್ರೆಂಡ್ಸ್ ಮತ್ತು ಸ್ಟೈಲಿಂಗ್ ಟಿಪ್ಸ್! -
ಬಿಸಿಲ ಬೇಗೆಯಲ್ಲಿ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಕಾದಿದೆ ದೊಡ್ಡ ಅಪಾಯ!
2025ರಲ್ಲಿ 3ನೇ ಮಹಾಯುದ್ಧ ಫಿಕ್ಸ್..! ನಿಜವಾಗಿವೆ ಆತ ಹೇಳಿದ್ದ ಭವಿಷ್ಯ..!!
ಜಗತ್ತಿನಲ್ಲಿ ನಡೆಯಬಹುದಾದ ಘಟನೆಗಳನ್ನು ಮೊದಲೇ ಊಹಿಸಿ ಅದು ನಿಜವಾದ ಅದೇಷ್ಟೋ ಉದಾಹರಣೆಯನ್ನು ನಾವು ನೋಡಿದ್ದೇವೆ. ಅದರಲ್ಲೂ ನಾಸ್ಟ್ರಾಡಾಮಸ್ ಹಾಗೆ ಬಾಬಾವಂಗಾ ಹೆಸರು ಬಹಳ ಚಿರಪರಿಚಿತ. ಈ ಇಬ್ಬರ ಭವಿಷ್ಯವಾಣಿಗಳು ಯಾವಾಗಲು ಜನರ ಅಚ್ಚರಿ, ಕುತೂಹಲಕ್ಕೆ ಕಾರಣವಾಗಿವೆ. ಮುಂದಿನ ಹಲವು ವರ್ಷಗಳ ಕಾಲ ಭೂಮಿಯ ಮೇಲೆ ನಡೆಯುವ ಹಲವು ಪ್ರಮುಖ ಘಟನೆಗಳ ಕುರಿತು ಅವರು ಭವಿಷ್ಯ ನುಡಿದಿದ್ದಾರೆ.
ಆದ್ರೆ ಈಗ ಮತ್ತೋರ್ವ ನುಡಿದಿರುವ ಭವಿಷ್ಯ ಇಡೀ ವಿಶ್ವವನ್ನೇ ಅಚ್ಚರಿಗೆ ತಳ್ಳಿದೆ. ಆತ ಈ ಹಿಂದೆ ನುಡಿದಿದ್ದ ಭವಿಷ್ಯಗಳು ನಿಜವಾಗಿರುವುದು ಈ ಅಚ್ಚರಿಗೆ ಕಾರಣವಾಗಿದೆ. ಇಡೀ ಜಗತ್ತಿಗೆ ಕೊರೊನಾ ಕುರಿತಂತೆ ಎಚ್ಚರಿಕೆ ನೀಡಿದ್ದ 38 ವರ್ಷದ ವ್ಯಕ್ತಿ ನುಡಿದಿರುವ ಭವಿಷ್ಯ ಈಗ ಎಲ್ಲರ ಹುಬ್ಬೇರುವಂತೆ ಮಾಡಿದೆ. ಅದರಲ್ಲೂ ಮೂರನೇ ಮಹಾಯುದ್ಧ ಕುರಿತಂತೆ ಆತನ ಭವಿಷ್ಯ ಆಘಾತಕ್ಕೆ ಕಾರಣವಾಗಿದೆ.

ದಿ ಮಿರರ್‌ನ ವರದಿಯ ಪ್ರಕಾರ, ಲಂಡನ್ ಮೂಲದ ನಿಕೋಲಸ್ ಔಜುಲಾ 2025ರಲ್ಲಿ ನಡೆಯಲಿರುವ ಘಟನೆಗಳ ಕುರಿತು ಹೇಳಿರುವ ಭವಿಷ್ಯಗಳ ಕಂಡು ಜನರೇ ಅಚ್ಚರಿಗೆ ಒಳಗಾಗಿದ್ದಾರೆ. ಆತ 2019ರ ಕೋವಿಡ್ ಕುರಿತು ಭವಿಷ್ಯ ನುಡಿದಿದ್ದ. ಜಗತ್ತಿಗೆ ಕಣ್ಣಿಗೆ ಕಾಣದ ವೈರಸ್‌ವೊಂದು ಸಾವು ನೋವಿಗೆ ಕಾರಣವಾಗಲಿದೆ. ಜನರ ಕೈ ಕಟ್ಟಿಹಾಕಲಿದೆ ಎಂದಿದ್ದ.
ಈ ಕೋವಿಡ್ ಭವಿಷ್ಯ ನಿಜವಾದ ಬಳಿಕ ಆತನ ಹೆಸರು ಇಡೀ ಜಗತ್ತಿನಲ್ಲಿ ಫೇಮಸ್ ಆಗಿತ್ತು. ಹಾಗೆ ಆತ ಮುಂದೆ ನುಡಿಯುತ್ತಿದ್ದ ವಿಚಾರಗಳ ಕುರಿತು ಜನರು ಹೆಚ್ಚು ಗಮನವಿಡುತ್ತಿದ್ದರು. ಆತ ಈಗ 2025ರ ಕುರಿತು ಹೇಳಿರುವ ಮಾತುಗಳು ಮತ್ತಷ್ಟು ಜನರಿಗೆ ಶಾಕ್ ನೀಡಿದೆ. ಅದರಲ್ಲೂ 3ನೇ ಮಹಾಯುದ್ಧ ಕುರಿತು ಆತನ ಭವಿಷ್ಯ ಕುತೂಹಲ ಮೂಡಿಸಿದೆ.
3ನೇ ಮಹಾಯುದ್ಧ ಕುರಿತು ಹಲವರು ಹಲವು ವರ್ಷದಿಂದ ಭವಿಷ್ಯ ನುಡಿದಿರುವುದು ನಾವು ನೋಡಬಹುದು. 2025 ರಲ್ಲಿ ಮೂರನೇ ಮಹಾಯುದ್ಧ ಸಂಭವಿಸುತ್ತದೆ. ಇದು ಯಾವುದೇ ಸಹಾನುಭೂತಿ ಇಲ್ಲದ ವರ್ಷವಾಗಿರುತ್ತದೆ. ಧರ್ಮ ಮತ್ತು ರಾಷ್ಟ್ರೀಯತೆಯ ಹೆಸರಿನಲ್ಲಿ ಜನರು ಪರಸ್ಪರ ಕತ್ತು ಕತ್ತರಿಸುವುದನ್ನು ಕಾಣಬಹುದು. ರಾಜಕೀಯ ಕೊಲೆಗಳು ನಡೆಯುತ್ತವೆ. ದಾಳಿ, ಹಿಂಸೆ ಅಂತಹ ಘಟನೆಗಳು ಸಾಮಾನ್ಯ ಎನ್ನುವಂತಾಗಲಿದೆ ಎಂದು ಆತ ಹೇಳಿದ್ದಾನೆ.
ನಿಕೋಲಸ್ ಔಜುಲಾ ಹೇಳಿದಂತೆ ಈ ವರ್ಷವು ಹಲವು ರೀತಿಯ ನೈಸರ್ಗಿಕ ವಿಕೋಪಗಳಿಗೂ ಕಾರಣವಾಗಲಿದೆಯಂತೆ. ಪ್ರವಾಹ, ವಿನಾಶಕಾರಿ ಭೂಕಂಪನ, ಚಂಡಮಾರುತದಂಹ ವಿಕೋಪಗಳ ಜರುಗಲಿದೆ. ಇದರಿಂದ ಲಕ್ಷಾಂತರ ಜನರು ನಿರಾಶ್ರಿತರಾಗುತ್ತಾರೆ. ಸಮುದ್ರ ಮಟ್ಟ ವೇಗವಾಗಿ ಏರಿಕೆಯಾಗಲಿದೆ. ಇದು ನಗರಗಳ ಮುಳುಗಿಸಲಿದೆ ಎಂದು ಹೇಳಿದ್ದಾರೆ.
ಈ ಮೊದಲು ಬ್ರಿಟಿಷ್ ಪ್ರಧಾನ ಮಂತ್ರಿ ಕೀರ್ ಸ್ಟಾರ್ಮರ್ ಅವರ ರಾಜಕೀಯ ಅವನತಿ, ಹಣದುಬ್ಬರದ ಹೆಚ್ಚಳ. ಬ್ರಿಟನ್ ಪ್ರಿನ್ಸ್ ವಿಲಿಯಂ ಮತ್ತು ಹ್ಯಾರಿ ನಡುವಿನ ಸಂಬಂಧದ ಕುರಿತಂತೆಯೂ ಆತ ಭವಿಷ್ಯ ನುಡಿದ್ದಾನೆ. ನಿಕೋಲಸ್ ಔಜುಲಾ ಅವರು 17ನೇ ವಯಸ್ಸಿನಲ್ಲಿಯೇ ಈ ರೀತಿ ಮುಂದಾಗುವ ವಿಚಾರಗಳ ಭವಿಷ್ಯ ನುಡಿಯುವ ಕಾರ್ಯ ಮಾಡಲು ಆರಂಭಿಸಿದ್ದನಂತೆ.
ಆತ ಆರಂಭದಲ್ಲಿ ಕನಸಿನಲ್ಲಿ ಇಂತಹ ವಿಚಾರಗಳ ಊಹಿಸಲು ಆರಂಭಿಸಿದ್ದ, ಹಿಂದಿನ ದಿನ ಬೀಳುತ್ತಿದ್ದ ಕನಸುಗಳು ನಿಜವಾಗುತ್ತಿದ್ದವಂತೆ. ಬ್ಲ್ಯಾಕ್ ಲೈವ್ಸ್ ಮ್ಯಾಟರ್ ಚಳುವಳಿ, ಡೊನಾಲ್ಡ್ ಟ್ರಂಪ್ ಅವರ ಅಧ್ಯಕ್ಷೀಯ ಗೆಲುವು, ಕೃತಕ ಬುದ್ಧಿಮತ್ತೆಯ ಉದಯ, ನೊಟ್ರೆ ಡೇಮ್ ಕ್ಯಾಥೆಡ್ರಲ್‌ನಲ್ಲಿನ ಬೆಂಕಿ, ಕೋವಿಡ್ ಸೇರಿ ಹಲವು ಘಟನೆಗಳ ಮೊದಲೇ ಊಹಿಸಿದ್ದ ಎನ್ನಲಾಗಿದೆ. ಇದು ನಿಜವಾಗಿರುವುದು ನಮ್ಮ ಕಣ್ಣ ಮುಂದೆ ಇದೆ.



Click it and Unblock the Notifications