Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಮೆಟ್ರೋದಲ್ಲಿ ಸೈಕಲ್ ಕೊಂಡೊಯ್ದ ವ್ಯಕ್ತಿ: ವೀಡಿಯೋ ವೈರಲ್
ಮೆಟ್ರೋ ಬಂದ ಮೇಲೆ ದಿನನಿತ್ಯದ ಓಡಾಟಕ್ಕೆ ಎಷ್ಟೊಂದು ಉಪಕಾರವಾಯ್ತು ಎಂಬುವುದು before metro-after metro ಅನುಭವ ಇರುವವರಿಗೆ ಚೆನ್ನಾಗಿ ಗೊತ್ತಿರುತ್ತದೆ, ಆದರೆ ಮೆಟ್ರೋ ಇಳಿದು ಆಫೀಸ್‌ಗೆ ಸ್ವಲ್ಪ ದೂರ ನಡೆಯುವಂತಿದ್ದಾಗ ಒಂದು ಸೈಕಲ್ ಇದ್ದರೆ ಇನ್ನೂ ಒಳ್ಳೆಯದು ಅಲ್ವಾ? ಇಲ್ಲೊಬ್ಬ ಸೋಷಿಯಲ್ ಮೀಡಿಯಾ ಇನ್‌ಫ್ಲೂಯನ್ಸರ್ ಮೆಟ್ರೋದ ಸೌಲಭ್ಯವನ್ನು ಹೇಗೆ ಬಳಸಿಕೊಳ್ಳಬೇಕು ಎಂದು ವೀಡಿಯೋ ಮಾಡಿ ಹಾಕಿದ್ದಾರೆ. ಇದೀಗ ಈ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ತುಂಬಾನೇ ಗಮನ ಸೆಳೆದಿದೆ.

ವಿಭಿನ್ನ ಪ್ರಯತ್ನ
ಯಾರೂ ಮೆಟ್ರೋದಲ್ಲಿ ಸೈಕಲ್ ತೆಗೆದುಕೊಂಡು ಹೋಗಿದ್ದನ್ನು ನೋಡಿರಲಿಲ್ಲ, ಆದರೆ ಕೆಲ ಮೆಟ್ರೋದಲ್ಲಿ ಅಂಥದ್ದೊಂದು ಸೌಲಭ್ಯ ಇದೆ. ಮುಂಬೈಯ ಯಲ್ಲೋ ಮೆಟ್ರೋದಲ್ಲಿ ಈ ಸೈಕಲ್ ಕೊಂಡೊಯ್ಯಲಾಗಿದೆ. ಅನುರಾಗ್ ಎಂಬ ವ್ಯಕ್ತಿ ಮೆಟ್ರೋ ಟಿಕೆಟ್ ಪಡೆದು ಎಸ್ಕೆಲೇಟರ್ ಮೂಲಕ ಕೊಂಡೊಯ್ದು ನಂತರ ಮೆಟ್ರೋದಲ್ಲಿ ಸೈಕಲ್ ಇಡುವ ಸ್ಟ್ಯಾಂಡ್‌ನಲ್ಲಿ ಇಟ್ಟು ಕೂರುವುದನ್ನು ವೀಡಿಯೋ ಮಾಡಿ ಸಾಮಾಜಿಕ ತಾಣದಲ್ಲಿ ಹಾಕಿದ್ದಾರೆ. ಈ ರಿತಿ ಕೊಂಡೊಯೊದ್ದದು ಸಾಹಸಮಯ ಪ್ರಯಾಣದಂತೆ ಅನಿಸಿತು ಎಂದು ಕೂಡ ಹೇಳಿದ್ದಾರೆ.
ಕೆಲವರು ಇವರು ಮೆಟ್ರೋ ಸೌಲಭ್ಯವನ್ನು ಚೆನ್ನಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದು ಕಮೆಂಟ್ ಮಾಡಿದರೆ ಇನ್ನು ಕೆಲವರು ಸಕತ್ ಕೂಲ್ ಐಡಿಯಾ ಎಂದು ಕಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ಮೆಟ್ರೋದಲ್ಲಿ ಸೈಕಲ್ ಕೊಂಡೊಯ್ಯಬಹುದು ಎಂದು ಗೊತ್ತೇ ಇರಲಿಲ್ಲ ಎಂದಿದ್ದಾರೆ.
ಇಡೀ ಸಿಟಿಯನ್ನು ಸುತ್ತಾಡಿ ನೋಡಬೇಕು ಎಂದು ಬಯಸುವವರಿಗೆ ಇದು ಒಳ್ಳೆಯ ಐಡಿಯಾವಾಗಿದೆ. ಸ್ವಲ್ಪ ದೂರದ ಸ್ಥಳಗಳಿಗೆ ಮೆಟ್ರೋದಲ್ಲಿ ಹೋಗಿ ನಂತರ ಸೈಕಲ್‌ನಲ್ಲಿ ಸುತ್ತಾಡಬಹುದು. ಈ ವೀಡಿಯೋ ನೋಡಿ ನಿಮಗೂ ಈ ರೀತಿ ಸೈಕಲ್ ತೆಗೆದುಕೊಂಡು ಹೋಗುವ ಐಡಿಯಾ ಬಂತೇ? ನಮ್ಮ ಮೆಟ್ರೋದಲ್ಲಿಯೂ ಸೈಕಲ್ ತೆಗೆದುಕೊಮಡು ಹೋಗಬಹುದು, ಆದರೆ ಲಾಸ್ಟ್ ಕೋಚ್‌ನಲ್ಲಿ ಮಾತ್ರ ಸಾಧ್ಯ. ಫೋಲ್ಡ್ ಮಾಡಬಹುದಾದ 15 ಕೆಜಿ ಒಳಗಿನ ಸೈಕಲ್‌ಗೆ ಯಾವುದೇ ಚಾರ್ಜ್ ಇರುವುದಿಲ್ಲ ಎಂದು BMRCL ಹೇಳಿದೆ.



Click it and Unblock the Notifications
