Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಅನಕೊಂಡ ಜೊತೆ ಈಜುತ್ತಿರುವ ವ್ಯಕ್ತಿಯ ವೀಡಿಯೋ: ಮನುಷ್ಯರನ್ನು ಗುಳುಂ ಮಾಡುವಂಥ ದೈತ್ಯ ಹಾವಿದು
ಅನಕೊಂಡ ಹಾವುಗಳನ್ನು ಕೆಲವೊಂದು ಮೃಗಾಲಯದಲ್ಲಿ ನೋಡಿರುತ್ತೀರ, ಅದರ ಗಾತ್ರ ಕಾಣುವಾಗಲೇ ಅಬ್ಬಾ ಎಂಥ ಧೈತ್ಯ ಹಾವು , ಮನುಷ್ಯರನ್ನು ಮಿಠಾಯಿ ನುಂಗುವಂತೆ ನುಂಗಿ ಬಿಡುತ್ತದೆ, ಅಷ್ಟೊಂದು ದೊಡ್ಡ ಹಾವು.

ಹೆಬ್ಬಾವು ಮನುಷ್ಯನನ್ನು ಮೆಲ್ಲಮೆಲ್ಲನೆ ನುಂಗುತ್ತಾ ಹೋಗುತ್ತದೆ, ಆದರೆ ಈ ಹಾವು ಸುಲಭದಲ್ಲಿ ನುಂಗಿಬಿಡುತ್ತದೆ, ಆದ್ದರಿಂದಲೇ ಇಂಥ ಹಾವು ಕಂಡರೆ ತುಂಬಾನೇ ಭಯವಾಗುತ್ತೆ, ಆದರೆ ಇತ್ತೀಚೆಗೆ ಒಂದು ವೀಡಿಯೋವೊಂದು ವೈರಲ್ ಆಗುತ್ತಿದೆ. ಆ ವೀಡಿಯೋ ನೋಡುವಾಗ ಭಯ ಹುಟ್ಟುತ್ತೆ, ಅನಕೊಂಡ ಹಾವು ಜೊತೆ ಜೊತೆ ಜೊತೆಯಲ್ಲಿಯೇ ವ್ಯಕ್ತಿಯೊಬ್ಬರು ಈಜಿದ್ದಾರೆ. ಇದು ಬ್ರೆಜಿಲ್‌ನ ವೀಡಿಯೋ ಎಂದು ಹೇಳಲಾಗುತ್ತಿದೆ.
ಈ ವೀಡಿಯೋ ನೋಡಿದವರಿಗೆ ಅಚ್ಚರಿ ಉಂಟಾಗುತ್ತಿದೆ
ಈ ಮನುಷ್ಯ ಈ ಹಾವಿನ ಜೊತೆ ಫ್ರೆಂಡ್ ರೀತಿಯಲ್ಲಿ ತುಂಬಾ ಆರಾಮವಾಗಿ ಇದ್ದಾನೆ ಅಲ್ವಾ ಹೇಗೆ ಸಾಧ್ಯ? ಎಂದು ಜನರು ಅಚ್ಚರಿಪಡುತ್ತಿದ್ದಾರೆ. ಏಕೆಂದರೆ ಆತನಿಗೆ ಆ ಹಾವು ನೋಡಿ ಒಂದಿಷ್ಟು ಭಯ ಉಂಟಾದಂತೆ ಕಾಣುತ್ತಿಲ್ಲ. ಈತ ವೈಲ್ಡ್ ಲೈಫ್ ಹ್ಯಾಂಡ್ಲರ್ ಅಂತೆ, ಆತ ಆತನ ಸುರಕ್ಷತೆಗೆ ಎಲ್ಲಾ ಸಿದ್ಧತೆ ಮಾಡಿ ಈ ರೀತಿ ಮಾಡಿರುತ್ತಾನೆ, ಹಾಗಂತ ನೀವು ಇಂಥ ಸಾಹಸಕ್ಕೆ ಕೈ ಹಾಕಬೇಡಿ.
safari.travel.ideas ಎಂಬ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಈ ವೀಡಿಯೋ ಶೇರ್ ಆಗಿದ್ದು ಅನಕೊಂಡಾ ಜೊತೆ ಈಜಲು ಈ ವೀಡಿಯೋ ಪ್ರೇರಣೆ ನೀಡುತ್ತಿಲ್ಲ. ಈ ರೀತಿಯ ವಿಷ ಪ್ರಾಣಿಗಳಿರುವ ನೀರಿನಲ್ಲಿ ಇಳಿಯದಂತೆ ನಾವು ಸಲಹೆ ನೀಡುತ್ತೇವೆ, ಅನಕೊಂಡ ಮನುಷ್ಯರನ್ನು ಸುಲಭವಾಗಿ ತಿಂದು ಬಿಡುತ್ತದೆ.
ಆದರೆ ಕೆಲವರಿಗೆ ಈ ರೀತಿಯ ವಿಭಿನ್ನ ಕೌಶಲ್ಯ ಇರುತ್ತದೆ, ಅವರಿಗೆ ಹೇಗೆ ತಪ್ಪಿಸಿಕೊಳ್ಳಬೇಕೆಂಬುವುದು ಗೊತ್ತಿರುತ್ತದೆ, ಅವರನ್ನು ಗೌರವಿಸೋಣ, ಈ ವಿಡಿಯೋದಲ್ಲಿ ಹೇಳ ಬಯಸುವುದು ಏನೆಂದರೆ ಪಂಟಾನಲ್ ವಿಶ್ವದಲ್ಲಿ ಅತಿ ಹೆಚ್ಚು ಅನಕೊಂಡಗಳು ಇರುವ ಸ್ಥಳವಾಗಿದೆ. ಈ ಪ್ರದೇಶದಲ್ಲಿ ಅನಕೊಂಡಗಳನ್ನು ಹಾಗೂ ಚಿರತೆಗಳನ್ನು ನೋಡಬಹುದು ಎಂದು ಬರೆದಿದ್ದಾರೆ.
ಪ್ರಾಣಿಗಳ ಜೊತೆ ರಿಸ್ಕ್ ತೆಗೆದುಕೊಳ್ಳಬೇಡಿ
ಕೆಲವರು ಸುಮ್ಮನೆ ವೀಡಿಯೋಗಾಗಿ ರಿಸ್ಕ್ ತೆಗೆದುಕೊಳ್ಳುತ್ತಾರೆ, ಆ ರೀತಿಯ ಅಪಾಯ ತೆಗೆದುಕೊಳ್ಳಬೇಡಿ, ಆದರೆ ಕೆಲವರಿಗೆ ಎಂಥ ಅಪಾಯಕಾರಿ ಪ್ರಾಣಿಗಳಿಂದ ತಪ್ಪಿಸುವ ಕೌಶಲ್ಯವಿರುತ್ತದೆ. ಇನ್ನು ಕೆಲವರು ಹುಲಿ, ಚಿರತೆಯಂಥ ಪ್ರಾಣಿಗಳಿಗೆ ಫ್ರೆಂಡ್ ಆಗುತ್ತಾರೆ. ಆದರೆ ಇದರ ಬಗ್ಗೆ ಅನುಭವವಿಲ್ಲದವರು ಫೋಟೋಗಾಗಿ ಸಾಹಸ ಮಾಡಬೇಡಿ, ಅದು ಸಾಕಿದ ಆನೆಯಾದರೂ ಸರಿಯೇ.
ಅನಕೊಂಡ ಬಗ್ಗೆ ವಿಶೇಷ ಮಾಹಿತಿ ನೋಡುವುದಾದರೆ
ಹಸಿರು ಅನಕೊಂಡ ವಿಶ್ವದ ಅತಿದೊಡ್ಡ ಹಾವಾಗಿದೆ. ಇದು 30 ಅಡಿ ಉದ್ದು 550 ಪೌಂಡ್ ಅಂದರೆ 225 ಕೆಜಿಗಿಂತಲೂ ಅಧಿಕ ತೂಕವಿರುತ್ತದೆ. ಈ ಅನಕೊಂಡಗಳು ಕಚ್ಚಿದರೆ ವಿಷವಲ್ಲ, ಆದರೆ ಇವುಗಳು ಸುತ್ತಿ ಬಳಸಿದರೆ ಉಸಿರು ಹೋಗುವವರೆಗೆ ಬಿಡಲ್ಲ. ಇದು ಬಾಯಿ ಬಿಟ್ಟರೆ ದೊಡ್ಡ ಗಾತ್ರದ ಮೊಸಳೆ, ಮೀನು ಸುಲಭವಾಗಿ ನುಂಗಿ ಬಿಡುತ್ತದೆ, ಚಿರತೆಯನ್ನು ಕೂಡ ನುಂಗಿ ಬಿಡುತ್ತದೆ. ಅದರ ಬಾಯಿ ಮನುಷ್ಯ ಸುಲಭವಾಗಿ ಒಳಗೆ ಹೋಗುತ್ತೆ ಅಷ್ಟು ದೊಡ್ಡದಾಗಿರುತ್ತದೆ.
ಅನಕೊಂಡದಲ್ಲಿ ಹೆಣ್ಣು ಅನಕೊಂಡ ಗಂಡು ಅನಕೊಂಡಕ್ಕಿಂತ ಗಾತ್ರದಲ್ಲಿ ದೊಡ್ಡದಿರುತ್ತೆ, ಇದು ಉಸಿರುಕಟ್ಟಿಸಿ ಪ್ರಾಣಿಗಳನ್ನುಕೊಲ್ಲುತ್ತದೆ. ಇವುಗಳು ನೀರಿನಲ್ಲಿ ಸುಮ್ಮನೆ ಮಲಗಿರುತ್ತದೆ, ರಾತ್ರಿ ನೀರು ಕುಡಿಯಲು ಬರುವ ಚಿರತೆ, ಜಿಂಕೆ ಇಂಥ ಪ್ರಾಣಿಗಳನ್ನು ಹಿಡಿದು ಬಿಡುತ್ತದೆ. ಅನಕೊಂಡ 20-30 ವರ್ಷ ಬದುಕಿರುತ್ತದೆ. ಇವುಗಳು 4-5 ವರ್ಷಕ್ಕೆ ಮರಿ ಮಾಡುತ್ತವೆ. ಹಸಿರು ಅನಕೊಂಡ ದೊಡ್ಡ ಗಾತ್ರದಲ್ಲಿದ್ದರೆ ಹಳದಿ ಅನಕೊಂಡ ಗಾತ್ರ ಸ್ವಲ್ಪ ಕಡಿಮೆ ಇರುತ್ತದೆ.



Click it and Unblock the Notifications