ಬೆಂಗಳೂರಿಗೆ ಬಂತು ಚಲಿಸುವ ಬಟ್ಟೆ ಅಂಗಡಿ..!! ಏನಿದರೆ ಕಥೆ ಗೊತ್ತಾ?

ಸ್ಟಾರ್ಟ್‌ಅಪ್‌ಗಳ ತವರೂರು ಅಂತಲೇ ಕರೆಸಿಕೊಳ್ಳುವ ಬೆಂಗಳೂರು ಸಣ್ಣ ಸಣ್ಣ ಉದ್ಯಮ, ಐಡಿಯಾಗಳಿಗೆ ಹೆಸರುವಾಸಿಯಾಗಿದೆ. ನೀವೆಲ್ಲೂ ಕಾಣದ ಅನ್ವೇಷಣೆಗಳು, ಹೊಸ ಹೊಸ ಲೈಫ್‌ಸ್ಟೈಲ್‌ಗಳು ಬೆಂಗಳೂರಿನಲ್ಲಿ ಹುಟ್ಟಿಕೊಳ್ಳುತ್ತವೆ. ಹೊಸ ಐಡಿಯಾಗಳ ಹೊರತರಲು ಬೆಂಗಳೂರು ಸೂಕ್ತ ಸ್ಥಳವೂ ಆಗಿದೆ. ಇದೀಗ ಬಟ್ಟೆ ಅಂಗಡಿಯ ಹೊಸ ಐಡಿಯಾವೊಂದು ಬೆಂಗಳೂರಿಗೆ ಬಂದಿದ್ದು, ಜನರ ಗಮನ ಸೆಳೆದಿದೆ.

ನೀವು ಚಲಿಸುವ ವಾಹನದಲ್ಲಿ ಊಟ ತಿಂಡಿ ನೀಡುವುದನ್ನು ನೋಡಿರುತ್ತೀರಿ. ಆದ್ರೆ ಇಲ್ಲೊಬ್ಬ ಮಿನಿ ಬಟ್ಟೆ ಶೋರೂಮ್ ಅನ್ನೇ ಟ್ರಕ್‌ನಲ್ಲಿ ತರುವ ಪ್ಲಾನ್ ಮಾಡಿದ್ದಾನೆ. ಹೌದು ಚಲಿಸುವ ಬಟ್ಟೆ ಅಂಗಡಿಯ ವಾಹನ ಬೆಂಗಳೂರು ರಸ್ತೆಯಲ್ಲಿ ಕಂಡುಬಂದಿದೆ. ಅದನ್ನು ಕಂಡ ನೆಟ್ಟಿಗರು ಇದು ಬೆಂಗಳೂರು ಐಡಿಯಾ ಎಂದು ಕೊಂಡಾಡಿದ್ದಾರೆ.

ಪಕ್ಚಿಕ್ಪಾಕ್ ರಾಜಾ ಬಾಬು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ ಚಿತ್ರವು ಕಪ್ಪು ಟ್ರಕ್ ಅನ್ನು ತೋರಿಸುತ್ತದೆ, ಅದರೊಳಗೆ ಬಟ್ಟೆಗಳನ್ನು ಸೊಗಸಾಗಿ ಜೋಡಿಸಲಾಗಿದೆ. ಇದನ್ನು ತಕ್ಷಣ ನೋಡಿದರೆ ಯಾವುದೋ ಮಾಲ್‌ನೊಳಗಿರುವ ಸಣ್ಣ ಬಟ್ಟೆಯ ಶೋರೂಮ್‌ನಂತೆ ಇದು ಕಂಡುಬರುತ್ತಿದೆ. ಆದರೆ ಯುವ ಸಮುದಾಯವನ್ನು ಸೆಳೆಯಲು ಆತ ಕಂಡುಕೊಂಡ ದಾರಿ ಇದಾಗಿದೆ.

Trucks With Walk-In Apparel

ಚಲಿಸುವ ಬಟ್ಟೆಯ ಶೋ ರೂಮ್‌ಗಾಗಿಯೇ ಈ ಟ್ರಕ್‌ ಅನ್ನು ವಿನ್ಯಾಸಗೊಳಿಸಲಾಗಿದೆ. ಮೇಲ್ನೋಟಕ್ಕೆ ಇದು ಗ್ಲಾಸ್‌ನಂತೆ ಕಂಡುಬರುತ್ತಿದೆ. ಎಲ್ಲಾ ಕಡೆಗಳಿಂದ ಬಟ್ಟೆಗಳನ್ನು ನೋಡಲು ಅವಕಾಶವಿದೆ. ಆದರೆ ಇದನ್ನು ಹೇಗೆ ಮುಚ್ಚಿಡುತ್ತಾರೆ ಎಂಬುದು ರಹಸ್ಯವಾಗಿ ಉಳಿದಿದೆ. ಟ್ರಕ್‌ಗೆ ಕಪ್ಪು ಬಣ್ಣ ಬಳಿಯಲಾಗಿದ್ದು, ಅದರ ಮೇಲೆ ಡಿಸೈನ್ ಸಹ ಮಾಡಲಾಗಿದೆ.

ಬೆಂಗಳೂರಲ್ಲಿ ಸಣ್ಣ ಅಂಗಡಿ ತೆರೆಯಲು ಲಕ್ಷ ಲಕ್ಷ ಹಣ ನೀಡಬೇಕಿದೆ. ಇಷ್ಟು ಹಣ ನೀಡಿದರು ವ್ಯಪಾರ ಕೈಹಿಡಿಯುತ್ತೆ ಎಂಬ ನಂಬಿಕೆ ಇರದು. ಅಲ್ಲದೆ ಆ ಕಟ್ಟಡದ ನಿರ್ವಾಹಣೆ ವೆಚ್ಚವು ಹೆಚ್ಚಾಗುತ್ತದೆ. ಇದೇ ಸಮಸ್ಯೆ ತಲೆದೂರಿದ್ದ ವ್ಯಕ್ತಿಯೊಬ್ಬ ಕಡಿಮೆ ಖರ್ಚಿನಲ್ಲಿ ಚಲಿಸುವ ಬಟ್ಟೆ ಅಂಗಡಿಯ ಮೊರೆ ಹೋಗಿದ್ದಾನೆ. ಆತ ಖಾಲಿ ಸ್ಥಳದಲ್ಲಿ ಎಲ್ಲಿ ಬೇಕಾದರು ಈ ಗಾಡಿಯನ್ನು ನಿಲ್ಲಿಸಿಕೊಳ್ಳಬಹುದು. ಎಲ್ಲಿ ಬೇಕಾದರು ತನ್ನ ಬಟ್ಟೆ ಅಂಗಡಿ ಪ್ರದರ್ಶಿಸಿ ವ್ಯಾಪಾರ ಮಾಡಬಹುದು.

ಬೆಂಗಳೂರಲ್ಲಿ ಇಂತಹ ನಿದರ್ಶನಗಳು ಹೊಸದೇನಲ್ಲ. ಈ ರೀತಿಯ ಹಲವು ಐಡಿಯಾಗಳು ಬೆಂಗಳೂರಲ್ಲಿ ಹುಟ್ಟಿಕೊಂಡಿವೆ. ಅದರಲ್ಲೂ ನೂರಾರು ಸ್ಟಾರ್ಟ್‌ಅಪ್‌ಗಳು ಸಹ ಇಂತಹ ವಿಭಿನ್ನ ಐಡಿಯಾಗಳಿಂದಲೇ ದೇಶದಾದ್ಯಂತ ಸುದ್ದಿಯಾಗಿವೆ.

ಪೀಕ್ ಬೆಂಗಳೂರಲ್ಲಿ ಏನೆಲ್ಲಾ ಸುದ್ದಿಯಾಗ್ತಿದೆ ಗೊತ್ತಾ?

ಮಹಿಳೆಯೊಬ್ಬರು ಟ್ರಾಫಿಕ್‌ನಲ್ಲಿ ಸಿಲುಕಿದ್ದಾಗ ಅಡುಗೆಗೆ ತರಕಾರಿ ಸಿದ್ದಪಡಿಸಿ ಸುದ್ದಿಯಾಗಿದ್ದರು. ಪ್ರಿಯ ಎನ್ನುವವರು ಪೋಸ್ಟ್ ಮಾಡಿದ್ದ ಈ ಘಟನೆಯಲ್ಲಿ ಅವರು ಟ್ರಾಫಿಕ್‌ನಲ್ಲಿ ಗ‍ಂಟೆಗಳ ಕಾಳ ಸಿಲುಕಿದ್ದರಿಂದ ಕಾರಿನಲ್ಲಿಯೇ ತರಕಾರಿಯಿಂದ ಬೀಜ ತೆಗೆಯಲು ಆರಂಭಿಸಿ ಆ ಕೆಲಸ ಮುಗಿಸಿದ್ದರು. ಇದೂ ಸಿಕ್ಕಾಪಟ್ಟೆ ಸುದ್ದಿಯಾಗಿತ್ತಲ್ಲದೆ ಬೆಂಗಳೂರಲ್ಲಿ ಟ್ರಾಫಿಕ್‌ ಎಷ್ಟಿರುತ್ತದೆ ಎಂಬ ಕುರಿತು ಚರ್ಚೆಗೂ ಕಾರಣವಾಗಿತ್ತು.

ಆರ್‌ಸಿಬಿ ಪಂದ್ಯದ ವೇಳೆ ಒಬ್ಬ ಇಂದಿರಾನಗರದಲ್ಲಿ 2 ಬಿಹೆಚ್‌ಕೆ ಮನೆ ಬಾಡಿಗೆಗೆ ಹುಡುಕಿಕೊಡಿ ಎಂದು ಪೋಸ್ಟರ್ ಹಿಡಿದು ಕ್ಯಾಮರಾಗಳಿಗೆ ಪೋಸ್ ಕೊಟ್ಟಿದ್ದ. ಬೆಂಗಳೂರಲ್ಲಿ ಮನೆ ಹುಡುಕುವುದು ಎಷ್ಟು ಕಷ್ಟ ಎಂಬ ಕುರಿತು ಚರ್ಚೆ ನಡೆದಿತ್ತು. ಆತ ಮನೆ ಹುಡುಕಲಾಗದೆ ಈ ರೀತಿ ಐಡಿಯಾ ಮಾಡಿದ್ದ.

ಬೆಂಗಳೂರಲ್ಲಿ ಬಾಡಿಗೆ ಮನೆ ಎಷ್ಟು ದುಬಾರಿ ಎನ್ನುವುದಕ್ಕೆ ಇಲ್ಲೊಂದು ಘಟನೆ ಸಾಕ್ಷಿಯಾಗಿತ್ತು. ಒಂದು ರೂಮ್ ಇರುವ ಜಾಗಕ್ಕೆ ಬರೋಬ್ಬರಿ 12 ಸಾವಿರ ಬಾಡಿಗೆ ಎಂದು ನೀಡಿದ್ದ ಜಾಹೀರಾತು ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಮಹದೇವಪುರದಲ್ಲಿ ಮಲಗಲು ಮಾತ್ರ ಜಾಗವಿದ್ದ ರೂಮಿಗೆ 12 ಸಾವಿರ ಬಾಡಿಗೆ ಎಂದು ಮಾಲೀಕರು ಜಾಹೀರಾತು ನೀಡಿದ್ದರು. ಇದು ಬೆಂಗಳೂರಿನ ದುಬಾರಿ ಜೀವನ ಎಂದು ನೆಟ್ಟಿಗರು ಹಂಚಿಕೊಂಡಿದ್ದರು.

ಬೆಂಗಳೂರಿನ ಕ್ಯಾಬ್ ಡ್ರೈವರ್ ಒಬ್ಬ ಓಲಾ, ಊಬರ್ ನಂತಹ ಥರ್ಡ್‌ ಪಾರ್ಟಿ ಆಪ್ ಬದಲಿಗೆ ತನ್ನದೇ ಸ್ವಂತ ಆಪ್ ಆರಂಭಿಸಿ ಸುದ್ದಿಯಾಗಿದ್ದ. ನ್ಯಾನೋ ಟ್ರಾವೆಲ್ಸ್ ಎಂಬ ಆಪ್ ಆತನೇ ಹೊರತಂದು ಶಾಕ್ ನೀಡಿದ್ದ. ಲೋಕೇಶ್ ಎಂಬ ಇಂಜಿನಿಯರಿಂಗ್ ಮುಗಿಸಿದ್ದ ಆತ ಕ್ಯಾಬ್ ಡ್ರೈವರ್ ಆಗಿದ್ದ. ಆದರೆ ಬೇರೆ ಆಪ್‌ಗಳಿಗೆ ತಾವೇ ಕಮಿಷನ್ ನೀಡುತ್ತಿದ್ದರಿಂದ ಆತನೇ ಹೊಸ ಆಪ್ ಹೊರತಂದು ಸುದ್ದಿಯಾಗಿದ್ದ. ಇದೆಲ್ಲಾ ಪೀಕ್ ಬೆಂಗಳೂರು ಎಂಬ ಟ್ಯಾಗ್‌ನಲ್ಲಿ ಸಿಕ್ಕಾಪಟ್ಟೆ ಸುದ್ದಿಯಾಗಿದ್ದ ವಿಷಯಗಳಾಗಿವೆ.

English summary

Man Spots Trucks With Walk-In Apparel Shop In Bangalore Road

The city is known for its bold spirit and its consistent generation of innovations that often defy the ordinary. In yet another instance of a "Peak Bengaluru" moment, a man spotted a truck that looked like a mobile walk-in apparel showroom.
Story first published: Tuesday, January 16, 2024, 11:05 [IST]
X
Desktop Bottom Promotion