Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ಬೆಂಗಳೂರು ಟ್ರಾಫಿಕ್‌ನಲ್ಲಿ ಸಿಂಗಲ್ ವ್ಹೀಲ್ ರೈಡ್, ಮೊಮ್ಮಗಳ ಮದುವೆಯಲ್ಲಿ ಸಕತ್ ಸ್ಟೆಪ್ಸ್:ವೈರಲ್ ವೀಡಿಯೋ
ಬೆಂಗೂರಿನಲ್ಲಿ ಪ್ರತಿದಿನ ಏನಾದರು ಒಂದು ವಿಚಿತ್ರಘಟನೆ, ಅಚ್ಚರಿಯ ಘಟನೆ ಗಮನ ಸೆಳೆಯುತ್ತಿರುತ್ತಿದೆ, ಬೆಂಗಳೂರಿನಲ್ಲಿ ಎಲ್ಲರೂ ಭಯಪಡುವ ಒಂದು ವಿಷಯವೆಂದರೆ ಅದು ಟ್ರಾಫಿಕ್. ಪೀಕ್ ಅವರ್‌ನಲ್ಲಿ ಅಂತೂ ತಲೆಕೆಟ್ಟೇ ಹೋಗುತ್ತದೆ, ಗಾಡಿಯಲ್ಲಿ ಹೋಗುವ ಬದಲಿಗೆ ನಡೆಯಲಾರಂಭಿಸಿದರೆ ಒಳ್ಳೆಯದು ಎಂದು ಅನಿಸುತ್ತದೆ, ಇಲ್ಲೊಬ್ಬರು ಬೆಂಗಳೂರಿನ ಟ್ರಾಫಿಕ್‌ಗೆ ಪರ್ಯಾಯ ಉಪಾಯ ಮಾಡಿದ್ದಾರೆ, ಆ ವೀಡಿಯೋ ಕೂಡ ಈಗ ವೈರಲ್ ಆಗುತ್ತಿದೆ.

ಸಿಂಗಲ್ ವ್ಹೀಲ್‌ನಲ್ಲಿ ಹೋಗುತ್ತಿರುವ ವ್ಯಕ್ತಿಯ ವೈರಲ್ ವೀಡಿಯೋದಲ್ಲಿ
ವೈರಲ್ ವೀಡಿಯೋದಲ್ಲಿ ವ್ಯಕ್ತಿಯೊಬ್ಬರು ಸಿಂಗಲ್ ವ್ಹೀಲ್‌ನಲ್ಲಿ ಹೋಗುತ್ತಿದ್ದಾರೆ. ತಲೆಗೆ ಹೆಲ್ಮೆಟ್ ಹಾಕಿ ಯಾವುದೇ ಶ್ರಮವಿಲ್ಲದೆ ಸಿಂಗಲ್ ವ್ಹೀಲ್‌ನಲ್ಲಿ ಹೋಗುತ್ತಿದ್ದಾರೆ, ಈ ವೀಡಿಯೋ ಈಗ ತುಂಬಾನೇ ವೈರಲ್ ಆಗುತ್ತಿದೆ. ಅದೇ ದಾರಿಯಲ್ಲಿ ಬಸ್‌ಗಳು, ಬೈಕ್‌ಗಳು, ಕಾರುಗಳು ಓಡಾಡುತ್ತಿವೆ, ಆತ ಮಾತ್ರ ತುಂಬಾನೇ ಸಲೀಸಾಗಿ ಹೋಗುತ್ತಿದ್ದಾನೆ.
ಈತ ಔಟರ್ ರಿಂಗ್ ರೋಡ್(ORR) ಟ್ರಾಫಿಕ್‌ನಲ್ಲಿ ಹೋಗುತ್ತಿರುವಾಗ ತೆಗೆದ ವೀಡಿಯೋ ಇದಾಗಿದ್ದು ಈ ವೀಡಿಯೋ ತುಂಬಾನೇ ವೈರಲ್ ಆಗುತ್ತಿದೆ.
ಈ ವೀಡಿಯೋ ವೈರಲ್ ಆಗಿದ್ದು ಇದನ್ನು ನೋಡಿದ ನೆಟ್ಟಿಗರು ತುಂಬಾನೇ ಕಮೆಂಟ್ ಮಾಡುತ್ತಿದ್ದಾರೆ. ಕೆಲವರು ಈತನ ತಲೆಯನ್ನು ಮೆಚ್ಚಿಕೊಂಡು ಕಮೆಂಟ್ ಹಾಕಿದರೆ ಇನ್ನು ಕೆಲವರು ಇದು ರಿಸ್ಕಿ ಎಂದು ಹೇಳುತ್ತಿದ್ದಾರೆ.
ಮತ್ತೊಬ್ಬರು ಹೀಗೂ ಉಂಟೇ ಎಂದು ಕಮೆಂಟ್ ಮಾಡಿದರೆ, ಈತನಿಗೆ ತಲೆಯಲ್ಲಿ ನಾನು ಯುಎಸ್‌ನಲ್ಲಿದ್ದೇನೆ ಎಂಬ ಭ್ರಮೆಯಲ್ಲಿದ್ದಾನೆ, ಆದರೆ ರಸ್ತೆಯಲ್ಲಿ ಗುಂಡಿಗಳು ಸಿಕ್ಕಾಗ ಈತನಿಗೆ ನಾನಿರುವುದು ನಮ್ಮ ಬೆಂಗಳೂರಿನಲ್ಲಿ ಎಂದು ಅರಿವಿಗೆ ಬರುತ್ತದೆ.
ಮತ್ತೊಬ್ಬರು ನಾವಿರುವುದು 2025ರಲ್ಲಿ ಆತ 2050ಕ್ಕೆ ಈಗಲೇ ತಲುಪಿದ್ದಾನೆ ಎಂದು ಕಮೆಂಟ್ ಮಾಡುತ್ತಿದ್ದಾರೆ. ಏನೇ ಆಗಲಿ ಈತನ ಐಡಿಯಾ ಮಾತ್ರ ಸೂಪರ್ ಆಗಿದೆ, ಈ ರೀತಿ ಎಲ್ಲರೂ ಪ್ರಾರಂಭಿಸಿದರೆ ಟ್ರಾಫಿಕ್ ಚಿಂತೆ ಇರಲ್ಲ, ಆದರೆ ಬೆಂಗಳೂರಿನ ರಸ್ತೆಯಲ್ಲಿ ಚಲಾಯಿಸುವಾಗ ಗುಂಡಿಗಳಿಗೆ ಕೊರತೆಯಿಲ್ಲ, ಸ್ವಲ್ಪ ಹೆಚ್ಚುಕಮ್ಮಿಯಾದರೆ ಕೈ ಕಾಲು ಮುರಿಯುತ್ತೆ ಅಥವಾ ಬೇರೆ ವಾಹನದಿಂದಾಗಿ ಅಪಘಾತ ಉಂಟಾಗಬಹುದು ಹಾಗಾಗಿ ಬೆಂಗಳೂರಿನ ರಸ್ತೆಗೆ ಈ ರೀತಿಯ ಸವಾರಿ ಸೂಕ್ತ ಅಲ್ವೇ ಅಲ್ಲ.
ಸೈಕಲ್, ಸ್ಕೇಟಿಂಗ್, ಸಿಂಗಲ್ ವ್ಹೀಲ್ ರೈಡಿಂಗ್‌ಗೆ ಪ್ರತ್ಯೇಕ ರಸ್ತೆ ಬಂದರೆ ಈ ರೀತಿ ಹೋಗಬಹುದು, ಆದರೆ ಈಗ ಇರುವ ರಸ್ತೆಯಲ್ಲಿ ಈ ರೀತಿ ಸಿಂಗಲ್ ವ್ಹೀಲ್ ರೈಡಿಂಗ್ ಅಷ್ಟೊಂದು ಸೇಫ್ ಅಲ್ಲ.
ನೆಟ್ಟಿಗರನ್ನು ಮೋಡಿ ಮಾಡಿದ ಮೊಮ್ಮಗಳ ಮದುವೆಯಲ್ಲಿ ಅಜ್ಜನ ನೃತ್ಯ
ಮೊಮ್ಮಗಳ ಮದುವೆಯಲ್ಲಿ ಖುಷಿ-ಖುಷಿಯಿಂದ ಡ್ಯಾನ್ಸ್ ಮಾಡುತ್ತಿರುವ ನೃತ್ಯ ವೈರಲ್ ಆಗುತ್ತಿದೆ. ಅಜ್ಜ-ಮೊಮ್ಮಗಳ ಸ್ಟೆಪ್ಸ್ ತುಂಬಾನೇ ಕ್ಯೂಟ್ ಆಗಿದ್ದು ವೀಡಿಯೋ ತುಂಬಾನೇ ವೈರಲ್ ಆಗುತ್ತಿದೆ. ಮೊಮ್ಮಗಳ ಮದುವೆಯೆಂದು ತಾತನಿಗೆ ತುಂಬಾ ಖುಷಿಯಾಗಿದ್ದಾರೆ, ಖುಷಿ-ಖುಷಿಯಾಗಿ ಡ್ಯಾನ್ಸ್ ಮಾಡುವುದನ್ನು ನೋಡುವುದಕ್ಕೆ ಖುಷಿಯಾಗುತ್ತಿದೆ.



Click it and Unblock the Notifications
