Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಮಿನಿ ಬುಲೆಟ್ ವೀಡಿಯೋ ವೈರಲ್: ಭಾರತದಲ್ಲಿ ಈ ರೀತಿ ಬೈಕ್ ಇರುವುದು ಇದೊಂದೇ!
ಎಲ್ಲರೂ ಮಾಡಿದ್ದನ್ನು ಮಾಡಿದರೆ ಅದು ಸ್ಪೆಷಲ್ ಅನಿಸುವುದಿಲ್ಲ, ಆದರೆ ಏನೋ ಸ್ಪೆಷಲ್ ಮಾಡಿದರೆ ಮಾತ್ರ ಸ್ಪೆಷಲ್ ಅನಿಸುವುದು ಅಲ್ವಾ? ಇವರಿಗೂ ಅಷ್ಟೇ ನಾನು ಈ ಬೈಕ್ ತೆಗೆದುಕೊಂಡರೆ ಖಂಡಿತ ಗಮನ ಸೆಳೆಯುತ್ತೇನೆ ಎಂದು ಗೊತ್ತಿದೆ. ಹಾಗಾಗಿ ಪಿಂಕ್ ಕಲರ್‌ನ ಪುಟಾಣಿ ಬೈಕ್‌ನಲ್ಲಿ ರೈಡ್ ಹೋಗಿ ಗಮನ ಸೆಳೆದಿದ್ದಾರೆ. ಈ ವೀಡಿಯೋ ಇದೀಗ ಅತೀ ಹೆಚ್ಚಿನ ವೀಕ್ಷಣೆ ಪಡೆದ ವೀಡಿಯೋದಲ್ಲಿ ಒಂದಾಗಿದೆ.
ಅಲ್ಲದೆ ಇಂಥ ಬೈಕ್ ಭಾರತದಲ್ಲಿ ಇರುವುದು ಇದು ಒಂದೇ ಎನ್ನುವುದು ವಿಶೇಷ. ಈ ಬೈಕ್‌ಗೆ ಪಿಂಕ್ ಎಂದು ಹೆಸರು ಬೇರೆ ಇಡಲಾಗಿದೆ. ಕ್ಯೂಟ್ ಆಗಿರುವ ಪುಟ್ಟದಾಗಿರುವ ಈ ಬೈಕ್ ಅನ್ನು ವ್ಯಕ್ತಿಯೊಬ್ಬರು ಓಡಿಸುತ್ತಿರುವ ವೀಡಿಯೋ Rammy Ryder (@rammyryder) ಎಂಬುವರು ಶೇರ್ ಮಾಡಿದ್ದು ಮಿನಿ ಬುಲೆಟ್ ತುಂಬಾನೇ ಗಮನ ಸೆಳೆದಿದೆ.

ದೆಹಲಿಯ ರಸ್ತೆಯಲ್ಲಿ ಈ ಬೈಕ್ ಓಡಿಸುತ್ತಿದ್ದರೆ ಎಲ್ಲರ ಕಣ್ಣು ಈ ಬೈಕ್ ಮೇಲೆ ಇತ್ತು, ಕೆಲವರು ಈ ಬೈಕ್ ನೋಡಿ ಇದ್ಯಾವ ಬೈಕ್, ಈ ರೀತಿ ಇದೆಯಾ? ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಟ್ರಾಫಿಕ್‌ನಲ್ಲಿ ಆ ಗಾಡಿ ಬಂದು ನಿಂತಾಗ ಎಲ್ಲರ ಕಣ್ಣು ಆ ಗಾಡಿ ಮೇಲೆ. ನಂತರ ಜನರು ಗುಂಪು ಸೇರಿ ಆ ಗಾಡಿಯ ಫೀಚರ್, ವಿಶೇಷತೆ ಬಗ್ಗೆ ವಿಚಾರಿಸುವುದನ್ನು ಈ ವೀಡಿಯೋದಲ್ಲಿ ಕಾಣಬಹುದು.
ಪಿಂಕ್ ಕಲರ್‌ನ ಆ ಬುಲೆಟ್ ತುಂಬಾನೇ ಕ್ಯೂಟ್ ಆಗಿದೆ. ನೋಡಲು ಥೇಟ್ ಬುಲೆಟ್ ಆದರೆ ಪುಟ್ಟದಾಗಿದೆ, ಮಕ್ಕಳ ಸೈಕಲ್ ಇದೆಯೆಲ್ಲಾ ಅಷ್ಟು ಎತ್ತರ ಇದೆ. ನಾವು ದೊಡ್ಡವರು ಆದರೂ ನಮ್ಮೊಳಗಿನ ಮಗು ಮನಸ್ಸು ದೊಡ್ಡದಾಗಲು ಬಿಡಬಾರದು ಎಂದು ಕೆಲವರು ಕಮೆಂಟ್ ಮಾಡಿದರೆ ಇನ್ನು ಕೆಲವರು ನಮಗೂ ಇಂಥ ಬೈಕ್ ಬೇಕು ಎಂದು ಕಮೆಂಟ್ ಮಾಡಿದ್ದಾರೆ.
ಈ ಜಗತ್ತಿನಲ್ಲಿ ನಮ್ಮನ್ನು ಯಾರಾದರೂ ಗಮನಿಸಬೇಕೆಂದರೆ ವಿಭಿನ್ನವಾಗಿ ಏನಾದರೂ ಮಾಡಬೇಕು, ಅಂಥ ಪ್ರಯತ್ನ ಈ ವ್ಯಕ್ತಿ ಮಾಡಿದ್ದಾರೆ. ಅಷ್ಟು ದೊಡ್ಡ ವ್ಯಕ್ತಿ ಚಿಕ್ಕ ಬೈಕ್ ಓಡಿಸುವುದನ್ನು ನೋಡಿದಾಗ ವಿಚಿತ್ರ ಅನಿಸಿದರೂ ಅವರಿಗೂ ಫನ್, ನೋಡುವವರಿಗೂ ಫನ್.



Click it and Unblock the Notifications
