Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
93 ದಿನ ಅಂಟ್ಲಾಟಿಕ್ ಮಹಾಸಾಗರದಲ್ಲಿದ್ದ ವ್ಯಕ್ತಿ ಮರಳಿ ಬಂದಾಗ 10 ವರ್ಷ ಚಿಕ್ಕವರಾಗಿದ್ದರು
ಮೇ 2023ರಲ್ಲಿ ದಿತುರಿ ಎಂಬ ವ್ಯಕ್ತಿ ನೀರಿನೊಳಗಡೆ 93 ದಿನಗಳವರೆಗೆ ಇರುವ ಮೂಲಕ ನೀರಿನಲ್ಲಿ ಅತಿ ಹೆಚ್ಚು ದಿನ ವಾಸ ಮಾಡಿದ ವ್ಯಕ್ತಿ ಎಂದು ಗಿನ್ನಿಸ್ ದಾಖಲೆ ಬರೆದಿದ್ದರು, ಇದರ ಜೊತೆ ಮತ್ತೊಂದು ಅಚ್ಚರಿ ಎಂದರೆ 56 ವರ್ಷದ ಅವರು ನೀರಿನಿಂದ ಹೊರಬಂದಾಗ ಅವರಲ್ಲಿ ಯೌವನದ ಕಳೆಯಿತ್ತು, ಅವರು ನೀರಿನೊಳಗೆ ಹೋಗುವಾಗ ಇದ್ದ ಲುಕ್‌ಗಿಂತ 10 ವರ್ಷ ಚಿಕ್ಕವರಂತೆ ಕಾಣುತ್ತಿದ್ದರು.

ಅವರ ಲುಕ್ ನೋಡಿದವರಿಗೆ ಅಚ್ಚರಿಯಾಗಿತ್ತು
ಅವರ ಅಟ್ಲಾಂಟಿಕ್ ಮಹಾಸಾಗರದಿಂದ ಹೊರ ಬಂದಾಗ ಏಜ್ ರಿವರ್ಸ್ ಆಗಿತ್ತು, ತುಂಬಾನೇ ಯಂಗ್ ಆಗಿ ಕಾಣುತ್ತಿದ್ದರು, ಯೌವನದ ಕಳೆ ಅವರ ಮುಖದಲ್ಲಿತ್ತು, ಯಾವ ಪ್ಲಾಸ್ಟಿಕ್ ಸರ್ಜರಿಯ ಅಗ್ಯತವಿಲ್ಲ ನಮ್ಮ ಪ್ರಕೃತ್ತಿಯಲ್ಲಿಯೇ ಎಲ್ಲವೂ ಇದೆ ಎಂಬುವುದು ಮತ್ತೊಮ್ಮೆ ಸಾಬೀತಾಗಿದೆ.
56 ವರ್ಷದ ನೌಕಾಪಡೆಯ ಆಫೀಸರ್‌ನಿಂದ ಹೊಸ ಸಾಹಸ
ಇವರ ಹೆಸರು ಜೋಸೆಫ್ ದಿತುರಿ, ಅವರು ಅಟ್ಲಾಂಟಿಕ್ ಮಹಾ ಸಾಗರದ ತಳದಲ್ಲಿ ಹೋಗಿ ಕೆಲ ದಿನಗಳು ಇದ್ದು ಬರಲು ಯೋಚಿಸುತ್ತಾರೆ. ಅದರಂತೆ 93 ದಿನಗಳವರೆಗೆ ಅಟ್ಲಾಟಿಂಕ್ ಮಹಾಸಾಗರದ ಅಡಿಯಲ್ಲಿ ಜೀವಿಸುತ್ತಾರೆ. ಅವರ ಹೊರ ಬಂದ ಮೇಲೆ ಅವರನ್ನು ವೈದ್ಯಕೀಯ ಪರೀಕ್ಷೆ ಮಾಡಲಾಯಿತು, ಆವಾಗ ವಯಸ್ಸಾಗುತ್ತಿದ್ದಂತೆ ಕ್ರೋಮೋಸೋಮ್ ಚಿಕ್ಕದಾಗುವುದು, ಆದರೆ ಇವರ ಶರೀರದಲ್ಲಿ ಶೇ. 20ರಷ್ಟು ಉದ್ದವಾಗಿತ್ತು ಯೌವನ ಕಳೆ ಮರುಕಳಿಸಿತ್ತು.
ಅವರ ಕೊಲೆಸ್ಟ್ರಾಲ್ 72 ಪಾಯಿಂಟ್ ಕಡಿಮೆಯಾಗಿತ್ತು, ಉರಿಯೂತದ ಸಮಸ್ಯೆ ಇರಲಿಲ್ಲ, ಒಟ್ಟು ಮೊತ್ತವಾಗಿ ಈತನ ಆರೋಗ್ಯ ತುಂಬಾನೇ ಚೆನ್ನಾಗಿತ್ತು. ಅವರ ಸ್ಟೆಮ್ ಸೆಲ್ ಕೌಂಟ್ ತುಂಬಾನೇ ಹೆಚ್ಚಾಗಿತ್ತು, ಒಟ್ಟಿನಲ್ಲಿ ಅವರ ದೇಹದಲ್ಲಿ ಅದ್ಭುತ ಬೆಳವಣಿಗೆಯಾಗಿತ್ತು. ಮಹಾಸಾಗರದ ಕೆಳಗಡೆ ಪರಿಸರದಲ್ಲಿ ಅತ್ಯಧಿಕ ಒತ್ತಡವಿರುತ್ತದೆ, ಇದರಿಂದಾಗಿ ಶರೀರದಲ್ಲಿ ಈ ಬದಲಾವಣೆಯಾಗಿದೆ.
ಹೈಪರ್‌ಬಾರಿಕ್ ಮೆಡಿಸಿನ್ ಮೆದುಳಿನ ಆರೋಗ್ಯಕ್ಕೆ, ಬುದ್ಧಿಶಕ್ತಿಗೆ ತುಂಬಾ ಒಳ್ಳೆಯದು. ಇದೀಗ ಮುಂದೆ ವೆಕೇಷನ್ ಕೂಡ ಆಗಬಹುದು.
ಹೊರ ಜಗತ್ತಿನ ಸಂಪರ್ಕ ಇಲ್ಲದಿರುವ ಇಂಥ ಸ್ಥಳ ಬೇಕಾಗಿದೆ, ಜನರನ್ನು ಇಲ್ಲಿಗೆ ಎರಡು ವಾರದ ವೆಕೇಷನ್‌ಗೆ ಕಳುಹಿಸಬೇಕು, ಇಲ್ಲಿ ಅವರಿಗೆ ಕಾಲುಗಳಿಗೆ ಸ್ಕ್ರಬ್ಬಿಂಗ್ ಸಿಗುತ್ತದೆ, ವಿಶ್ರಾತಿಯ ಅನುಭವ ಸಿಗುತ್ತದೆ, ಹೈಪರ್‌ಬಾರಿಕ್ ಮೆಡಿಸಿನ್‌ನ ಪ್ರಯೋಜನ ಪಡೆಯುತ್ತಾರೆ ಎಂದು ದಿತುರಿ ಹೇಳುತ್ಆರೆ.
ಸಮುದ್ರದಡಿಯಲ್ಲಿ ದಿತುರಿ ವಾರದಲ್ಲಿ 5 ದಿನ ವ್ಯಾಯಾಮ ಮಾಡುತ್ತುದ್ದರು, ಇದರಿಂದಾಗಿ ಸ್ನಾಯುಗಳು ಬಲವಾಗಲು ಸಾಧ್ಯವಾಯ್ತು, ಅವರ ಚಯಪಚಯ ಕ್ರಿಯೆ ತುಂಬಾನೇ ಉತ್ತಮವಾಯ್ತು, ಹೀಗಾಗಿ ಅವರ ಒಟ್ಟು ಮೊತ್ತ ದೇಹ ಯೌವನದ ಆರೋಗ್ಯವನ್ನು ಮರಳಿ ಪಡೆಯಿತು. ಈಗ ಅವರನ್ನು ನೋಡಿದವರು ತುಂಬಾನೇ ಆಶ್ಚರ್ಯವಾಗಿದ್ದಾರೆ, ಮಹಾಸಾಗರದ ಅಡಿಯಲ್ಲಿ ಅಷ್ಟೊಂದು ಪ್ರಯೋಜನವಿದೆಯೇ ಎಂದು ಅಚ್ಚರಿ ಪಡೆಯುತ್ತಾರೆ.
ಇದು ಸಿರಿವಂತರ ವೆಕೇಷನ್ ಆಗಬಹುದು?
ಸಮುದ್ರದೊಳಗಡೆ ಹೋಗಿ ಇದ್ದರೆ ಯೌವನ ಮರುಕಳಿಸುತ್ತೆ ಆರೋಗ್ಯ ಮರುಕಳಿಸುತ್ತೆ, ಹೀಗಾಗಿ ಈ ವೆಕೇಷನ್ ಮುಂದೆ ಖಂಡಿತ ಬರಬಹುದು, ಸೌಂದರ್ಯ, ಯೌವನಕ್ಕಾಗಿಯೇ ಲಕ್ಷಾಂತರ ರುಪಾಯಿ ಖರ್ಚು ಮಾಡುವ ಬದಲಿಗೆ ಈ ರೀತಿ ಮಹಾಸಮುದ್ರದ ಅಡಿಯಲ್ಲಿ ವೆಕೇಷನ್ ಅಂತ 2 ವಾರ ಇದ್ದರೆ ಆರೋಗ್ಯ, ಸೌಂದರ್ಯ ಚೆನ್ನಾಗಿರಲಿದೆ.
The Monk Who Sold His Ferrari ಎಂಬ ಸ್ಟೋರಿ ಬುಕ್‌ನಲ್ಲಿ ವ್ಯಕ್ತಿಯೊಬ್ಬರು ಈ ಜೀವನದ ಜಂಜಾಟದಿಂದ ದೂರ ಹೋಗಿ ಹಿಮಾಲಯಕ್ಕೆ ಹೋಗಿ ಬಂದ ಮೇಲೆ ವಯಸ್ಸಿನಲ್ಲಿ ತುಂಬಾ ಚಿಕ್ಕವರಂತೆ ಕಂಡರು ಎಂದು ಹೇಳಲಾಗಿದೆ, ಈಗ ದುತುರಿ ಕತೆ ಕೂಡ ಅದೇ ರೀತಿ ಇದೆ.



Click it and Unblock the Notifications