Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಕೈಗೆ ಹಿಡಿದ ಬಣ್ಣ ತೆಗಿಯೋದು ತುಂಬಾ ಸಿಂಪಲ್..! ಇಂಥಾ ಪ್ರತಿಭೆ ನೀವೆಲ್ಲೂ ನೋಡಿರಲ್ಲ..!
ಹೋಳಿ ಹಬ್ಬ ಮುಗಿದು ದಿನ ಉರುಳಿದರು ನಿಮ್ಮ ಕೈ, ಕೂದಲು, ಮುಖದ ಮೇಲೆ ಬಣ್ಣ ಹೋಗಿರುವುದಿಲ್ಲ. ಏಕೆಂದರೆ ಹೋಲಿ ಬಣ್ಣದಲ್ಲಿ ರಾಸಾಯನಿಕಗಳು ಇರುವ ಕಾರಣ ಅಷ್ಟು ಸುಲಭವಾಗಿ ಬಣ್ಣಗಳು ಹೋಗುವುದಿಲ್ಲ. ಇನ್ನು ಬಟ್ಟೆಗಳಿಗೆ ಹಿಡಿದರೆ ಆ ಬಟ್ಟೆ ಇನ್ನು ಬಳಕೆಗೆ ಬರುವುದಿಲ್ಲ. ಕೃತಕವಾಗಿ ತಯಾರಿಸಲಾಗುವ ಈ ಬಣ್ಣಗಳು ಅಷ್ಟೊಂದು ಅಪಾಯಕಾರಿಯಾಗಿರುತ್ತವೆ.
ಇನ್ನು ನಿಮ್ಮ ಕೈಗಳಿಗೆ ಹಿಡಿದಿರುವ ಬಣ್ಣವನ್ನು ಹೋಗಲಾಡಿಸಲು ನೀವು ಏನೆಲ್ಲಾ ಕಸರತ್ತು ಮಾಡಿ ಸೋತಿರುತ್ತೀರಿ. ಹಲವು ಬಗೆಯ ಸೋಪ್‌ಗಳು, ಹ್ಯಾಂಡ್ ವಾಶ್‌ಗಳು, ಮನೆಯಲ್ಲಿ ಸಿಗುವ ವಸ್ತುಗಳಿಂದಲೂ ಕೈ ತೊಳೆಯುವ ಕಸರತ್ತು ಮಾಡಿ ಸೋತಿರುತ್ತೀರಿ. ಆದ್ರೆ ಕೈಗೆ ಹಿಡಿದಿರುವ ಬಣ್ಣವನ್ನು ತೆಗೆಯಲು ಸಾಧ್ಯವಾಗಿರುವುದಿಲ್ಲ.

ಹೀಗೆ ಹೋಳಿ ಬಣ್ಣ ತೆಗೆಯಲು ಹರಸಾಹಸ ಪಡುತ್ತಿರುವವರಿಗೆ ಈ ವಿಡಿಯೋ ಶಾಕ್ ನೀಡಲಿದೆ. ಏಕೆಂದರೆ ಇಲ್ಲೊಬ್ಬ ಬರಿ ಇನೋ (ENO) ಬಳಸಿ ಕೈ ಮೇಲಿದ್ದ ರಾಸಾಯನಿಕಯುಕ್ತ ಬಣ್ಣ ಹೋಗಲಾಡಿಸಿದ್ದಾನೆ. ಗ್ಯಾಸ್ಟ್ರಿಕ್ ಹಾಗೂ ಎದೆಯುರಿಯ ಸಮಸ್ಯೆ ಇರುವವರು ನೀರಿಗೆ ಮಿಕ್ಸ್ ಮಾಡಿ ಕುಡಿಯುವ ಇನೋ ಅನ್ನು ಆತ ಕೆಮಿನಲ್‌ನಂತೆ ಬಳಸಿರುವುದು ಗಮನ ಸೆಳೆದಿದೆ.
ಆತ ಕೇವಲ ಅರ್ಧ ಕ್ಲಿನಿಕ್ ಪ್ಲಸ್ ಶಾಂಪೂ ಒಂದು ನಿಂಬೆ ಹಾಗೂ ಇನೋವನ್ನು ಬಳಸಿ ಕೈಗೆ ಹಿಡಿದಿದ್ದ ನೇರಳೆ ಬಣ್ಣವನ್ನು ನಿಮಿಷದಲ್ಲಿ ಹೋಗಲಾಡಿಸಿದ್ದು, ಈ ವಿಡಿಯೋ ವೈರಲ್ ಆಗಿದೆ. ಈ ಹೊಸ ಟ್ರಿಕ್ ನೆಟ್ಟಿಗರ ಹುಬ್ಬೇರುವಂತೆ ಮಾಡಿದೆ.
ವಿಡಿಯೋದಲ್ಲಿ ಏನಿದೆ?
ಮೊದಲಿಗೆ ಯುವಕನೊಬ್ಬ ತನ್ನ ಕೈಯಲ್ಲಿ ನೇರಳೆ ಬಣ್ಣ ಹಿಡಿದಿರುವುದನ್ನು ತೋರಿಸುತ್ತಿದ್ದಾನೆ. ಬಳಿಕ ಇನೋ ಬಳಸಿ ಈ ಕಲೆಯನ್ನು ಹೋಗಲಾಡಿಸಬಹುದು ಎನ್ನುವ ಮೂಲಕ ಈ ವಿಡಿಯೋ ಆರಂಭವಾಗುತ್ತದೆ. ಆತ ಕೈ ಮೇಲೆ ಶಾಂಪೂ ಹಾಕಿಕೊಂಡು ಬಳಿಕ ಒಂದು ನಿಂಬೆಯನ್ನು ಹಿಂಡುತ್ತಾನೆ. ಇದಾದ ಬಳಿಕ ಚಿಟಿಕೆಯಷ್ಟು ಇನೋ ಪುಡಿಯನ್ನು ಅದರ ಮೇಲೆ ಹಾಕುತ್ತಾನೆ.
ಇನೋ ಹಾಕಿದ ತಕ್ಷಣ ಅಲ್ಲಿ ಕೆಮಿಕಲ್ ರಿಯಾಕ್ಷನ್ ಮೂಲಕ ಗುಳ್ಳೆಗಳು ಬರಲು ಆರಂಭವಾಗುತ್ತದೆ. ಈ ವೇಳೆ ಆತ ಎರಡೂ ಕೈಯನ್ನು ಚೆನ್ನಾಗಿ ಉಜ್ಜಿಕೊಳ್ಳುತ್ತಾನೆ. ಒಂದು 20 ರಿಂದ 30 ಸೆಕೆಂಡುಗಳ ಕಾಲ ಉಜ್ಜಿದ ಬಳಿಕ ನೀರಿನಿಂದ ಕೈಗಳನ್ನು ತೊಳೆದು ಕ್ಯಾಮರಾದತ್ತ ತೋರಿಸುತ್ತಾನೆ. ಈ ವೇಳೆ ಆತ ಕೈ ಮೇಲಿದ್ದ ನೇರಳೆ ಬಣ್ಣ ಮಾಯವಾಗಿ ಕೈಗಳು ಪಳ ಪಳ ಹೊಳೆಯುತ್ತಿರುತ್ತವೆ.
ಈ ವಿಡಿಯೋ ನೋಡಿದ ನೆಟ್ಟಿಗರು ಈ ಟ್ರಿಕ್ ತಿಳಿಸಿಕೊಟ್ಟ ಆ ಯುವಕನಿಗೆ ಧನ್ಯವಾದ ಹೇಳಿದ್ದಾರೆ. ಏಕೆಂದರೆ ಕೆಲವರು ಈ ಹೋಳಿ ಬಣ್ಣ ಹೋಗಲಾಡಿಸಲು ಇನ್ನಿಲ್ಲದ ಕಸರತ್ತು ಮಾಡಿರುತ್ತಾರೆ. ಹೀಗಾಗಿ ಸುಲಭದ ಟ್ರಿಕ್ ಕಂಡು ಸಂತಸಗೊಂಡಿದ್ದಾರೆ.
ಈ ಟ್ರಿಕ್ ಸುರಕ್ಷಿತವೇ.?
ಆತ ಮೂರು ರೀತಿಯ ವಸ್ತು ಬಳಸಿ ಈ ಟ್ರಿಕ್ ಮಾಡಿದ್ದಾನೆ. ಅದರಲ್ಲೂ ಶಾಂಪೂ ಹಾಗೂ ನಿಂಬೆ ರಸವನ್ನು ಬೆರೆಸುವುದು ಕೆಮಿಕಲ್ ರಿಯಾಕ್ಷನ್‌ಗೆ ಕಾರಣವಾಗುತ್ತದೆ. ಈ ರೀತಿಯ ಮಿಕ್ಸ್ ಅನ್ನು ಕೈ ಕಾಲುಗಳಿಗೆ ಬಳಸಬಹುದು. ಆದರೆ ಮುಖಕ್ಕೆ ಈ ಪೇಸ್ಟ್ ಹಚ್ಚುವುದರಿಂದ ಸಮಸ್ಯೆ ಉಂಟಾಗಬಹುದು. ಇಲ್ಲವೆ ಹಲವರಲ್ಲಿ ಚರ್ಮದ ಅಲರ್ಜಿಗೆ ಇದು ಕಾರಣವಾಗಬಹುದು. ವೈದ್ಯರು ಇಲ್ಲವೆ ತಜ್ಞರು ಇದನ್ನು ಶಿಫಾರಸ್ಸು ಸಹ ಮಾಡುವುದಿಲ್ಲ. ಲ್ಯಾಬ್‌ಗಳಲ್ಲಿ ದೃಢಪಡೆದೆ ಈ ರೀತಿಯ ಸಂಯೋಜಕಗಳ ಬಳಸುವುದು ಒಳ್ಳೆಯದಲ್ಲ. ಏಕೆಂದರೆ ಕೆಲವೊಮ್ಮೆ ನಾವು ಸಂಯೋಜಿಸುವ ವಸ್ತುಗಳಿಂದ ಹಾನಿಯಾಗುವ ಸಂಭವ ಹೆಚ್ಚಿರುತ್ತದೆ. ಇವುಗಳಲ್ಲೂ ಹಲವು ರೀತಿಯ ರಾಸಾಯನಿಕಗಳಿದ್ದು, ಇವು ವ್ಯತಿರಿಕ್ತ ಪರಿಣಾಮ ಬೀರಬಹುದು. ಇಂತಹ ಟ್ರಿಕ್ ಮಾಡುವ ಮೊದಲು ಎಚ್ಚರ ವಹಿಸಿದರೆ ಉತ್ತಮ.



Click it and Unblock the Notifications
