Latest Updates
-
ಅಮಾವಾಸ್ಯೆಯ ದಿನ ಜಗಳ ಬೇಡ: ದಂಪತಿಗಳ ನಡುವಿನ ಪ್ರೀತಿ ಹೆಚ್ಚಿಸಲು ಈ ಸಂಭಾಷಣೆ ಸೂತ್ರಗಳು -
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು
ಮಾಜಿ ಗರ್ಲ್‌ಫ್ರೆಂಡ್‌ಗೆ 50 ಫುಡ್ಸ್ ಆರ್ಡರ್ ಮಾಡಿದ ವ್ಯಕ್ತಿ, ಈತ ಕ್ವಾಟ್ಲೆ ಕೊಡಲು ಹೋಗಿದ್ದು ಆಕೆಗೆ ಆದ್ರೆ ತಲೆನೋವಾಗಿದ್ದು
ಈ ಘಟನೆ ನಡೆದಿರುವುದು ಕಳೆದ ವಾರದಲ್ಲಿ ನಡೆದಿರುವುದು. ಇದನ್ನುಬಾಯ್‌ಫ್ರೆಂಡ್‌ನ ಸೇಡಯ ಅನ್ನಬೇಕಾ, ರೆಸ್ಟೋರೆಂಟ್‌ಗಳಿಗೆ ಮಾಡಿದ ಫ್ರಾಂಕ್ ಅನ್ನಬೇಕಾ? ಗೊತ್ತಾಗಲ್ಲ, ಆದರೆ ಇಲ್ಲಿ ಬಲಿ ಕಾ ಬಕರಾ ಆಗಿರುವುದು ಮಾತ್ರ ಪಾಪ ರೆಸ್ಟೋರೆಂಟ್‌ನವರು. ಈ ವಿಚಿತ್ರ ಘಟನೆ ನಡೆದಿರುವುದು ಟರ್ಕಿಯಲ್ಲಿ. ಈ ಘಟನೆ ಏನಪ್ಪಾ ಎಂದು ನೋಡುವುದಾದರೆ...
ಟರ್ಕಿಯ ಇಜ್ಮಿರ್ ಬಾಲ್ಕೋವಾ ಜಿಲ್ಲೆಯಲ್ಲಿ ಸಿಮನ್ ಸ್ಟ್ರೀನ್ ಮುಂದೆ 50ಕ್ಕೂ ಅಧಿಕ ಫುಡ್ ಡೆಲಿವರಿ ಬಾಯ್ಸ್ ಬರುತ್ತಾರೆ. ಅವರು ಅಷ್ಟೂ ಜನ ಬಂದಿರುವುದು ಒಂದೇ ಮನೆಯಲ್ಲಿ ಡೆಲಿವರಿ ನೀಡಲು. ಅಷ್ಟಕ್ಕೂ ಆ ಮನೆಯವರು ಆ ಫುಡ್ ಆರ್ಡರ್ ಮಾಡಿಯೇ ಇರಲಿಲ್ಲ, ಆದರೂ ಅಷ್ಟೂ ಫುಡ್ಸ್ ಬಂದಿತ್ತು.

ಸುಮಾರು 50ಕ್ಕೂ ಫುಡ್ಸ್ ಐಟಂ ಇತ್ತು. ಸಮಯ ರಾತ್ರಿ 9 ಗಂಟೆ , ಎರಡು ಡಜನ್‌ಗಿಂತಲೂ ಹೆಚ್ಚಿನ ಫುಡ್ ಡೆಲಿವರಿ ಬಾಯ್ಸ್ ಅಲ್ಲಿಗೆ ಬರುತ್ತಾರೆ. ಆದರೂ ಪುಡ್ ಪಡೆಯಲು ಮಾತ್ರ ಆ ಅಡ್ರೆಸ್‌ನವರು ಒಪ್ಪಲಿಲ್ಲ.
ಯಾರೋ ತಪ್ಪಾದ ಫೋನ್ ನಂಬರ್ ನೀಡಿ ಫುಡ್ ಆರ್ಡರ್ ಮಾಡಿದ್ದರು, ಕೆಲವೊಂದು ಆಹಾರಗಳಿಗೆ ಕ್ಯಾಶ್ ಆನ್ ಡೆಲಿವರಿ ಕೂಡ ಆಗಿತ್ತು. ಆದರೆ ಅದಕ್ಕೂ ರಾಂಗ್ ಅಡ್ರೆಸ್ ನೀಡಲಾಗಿತ್ತು. ಪಾಪ ಅಷ್ಟೂ ಫುಡ್ ಡೆಲಿವರಿ ಬಾಯ್ಸ್ ಅಲ್ಲಿಗೆ ಬಂದು ಅವರಿಗೆ ಟೈಮ್ ವೇಸ್ಟ್, ಬ್ಯುಸ್‌ನೆಸ್ ನಷ್ಟ.
ಈ ರೀತಿ ಮಾಡಿದ್ದು ಆ ಮನೆಯಲ್ಲಿರುವ ಮಹಿಳೆಯ ಮಾಜಿ ಬಾಯ್‌ಫ್ರೆಂಡ್ ಎಂಬುವುದು ಎಂದು ತಿಳಿದು ಬಂದಿದೆ. ಆದರೆ ಯಾವುದೇ ರೆಸ್ಟೋರೆಂಟ್‌ನವರು ಆ ವ್ಯಕ್ತಿ ಬಗ್ಗೆ ಕಂಪ್ಲೇಂಟ್ ಮಾಡಿಲ್ಲ. ಕೆಲವೊಂದು ಫುಡ್ ರಿಟರ್ನ್ ಬಂದಿದ್ದು ಮತ್ತೆ ಬಳಕೆ ಮಾಡಲು ಸಾಧ್ಯವಾಗಿರಲಿಲ್ಲ ಹಾಗಾಗಿ ಅದನ್ನು ಬಿಸಾಡಬೇಕಾಯ್ತು ಎಂದು ರೆಸ್ಟೋರೆಂಟ್‌ನವರು ಹೇಳುದ್ದಾರೆ.
ಒಂದು ರೆಸ್ಟೋರೆಂಟ್ ಓನರ್ ಈ ಫೇಕ್ ಆರ್ಡರ್ ಬಗ್ಗೆ ಮಾಹಿತಿ ನೀಡಲು ಬೇರೆ ರೆಸ್ಟೋರೆಂಟ್‌ನವರು ಕರೆ ಮಾಡಿದ್ದರು, ಆದರೆ ಅಷ್ಟರಲ್ಲಿ ಫುಡ್ ರೆಸ್ಟೋರೆಂಟ್‌ನಿಂದ ಡೆಲಿವರಿ ಬಾಯ್ ತೆಗೆದುಕೊಂಡು ಹೋಗಿ ಆಗಿತ್ತು. ಅಲ್ಲಿ ಬಂದು ನೋಡಿದರೆ ಒಬ್ಬೊಬ್ಬರೇ ಫುಡ್ಸ್ ತರುತ್ತಿದ್ದಾರೆ, ವಿವಿಧ ರೆಸ್ಟೋರೆಂಟ್‌ಗಳಿಂದ ಫುಡ್ಸ್ ಬಂದಿದೆ, ಅದರೆ ಯಾರೂ ಆ ಪಾರ್ಸಲ್ ಖರೀದಿಸಲು ಬಂದಿರಲಿಲ್ಲ, ಅಡ್ರೆಸ್ ಇದ್ದ ಮನೆಗೆ ಹೋದರರೆ ನಾವು ಆರ್ಡರ್ ಮಾಡಿಲ್ಲ ಎಂದು ನಿರಾಕರಿಸುತ್ತಾರೆ. ಡೆಲಿವರಿ ಬಾಯ್ಸ್ ಮುಖ-ಮುಖ ನೋಡಿಕೊಳ್ಳುವ ಪರಿಸ್ಥಿತಿ ಬರುತ್ತದೆ.
ರೆಸ್ಟೋರೆಂಟ್‌ಗೆ ಫೋನ್ ಮಾಡಿ ವಿಚಾರಿಸಿದರೆ 0555 555 55 55ನಿಂದ ಈ ಆಹಾರ ಬುಕ್ ಆಗಿದೆ ಎಂಬುವುದು ತಿಳಿಯುತ್ತದೆ, ಅವಾಗ ಯಾರೋ ಮೋಸ ಮಾಡಿರುವುದು ಗೊತ್ತಾಗುತ್ತೆ. ಆತ ಫುಡ್ಸ್ ಆರ್ಡರ್ ಮಾಡಿ ಕ್ಯಾಶ್ ಆನ್ ಡೆಲಿವರಿ ನೀಡಿದ್ದ.
ಗಮನ ಸೆಳೆದ ವೀಡಿಯೋ
ಸುಮಾರು 25ಕ್ಕೂ ಅಧಿಕ ಡೆಲಿವರಿ ಬಾಯ್ಸ್ ಫುಡ್ ಡೆಲಿವರಿ ಕೊಡಲು ಕಾಯುತ್ತಿರುವ ದೃಶ್ಯ ವೀಡಿಯೋದಲ್ಲಿ ನೋಡಬಹುದು.
ಈ ರೀತಿ ಮಾಡುವವರಿಗೆ ಶಿಕ್ಷೆ ನೀಡಬೇಕು ಎನ್ನುತ್ತಿದ್ದಾರೆ ಜನರು
ರೆಸ್ಟೋರೆಂಟ್‌ನವರು ಈ ವಿಷಯವನ್ನು ಕೇಸ್ ಮಾಡಲು ಹೋಗಿಲ್ಲ, ಆದರೆ ಈ ಸುದ್ದಿ ಹೊರ ಬಂದಾಗ ಈ ರೀತಿ ಮಾಡಿದ ವ್ಯಕ್ತಿಗೆ ಶಿಕ್ಷೆಯಾಗಬೇಕು ಎಂದು ಹೇಳುತ್ತಿದ್ದಾರೆ. ಆತ ಆತನ ಮಾಜಿ ಗರ್ಲ್ ಫ್ರೆಂಡ್‌ಗೆ ಮುಜುಗರ ತರಲು ಈ ರೀತಿ ರೆಸ್ಟೋರೆಂಟ್‌ಗಳಿಗೆ ಮೋಸ ಮಾಡುವುದು ಸರಿಯೇ? ಈ ರೀತಿ ಮಾಡಿದರೆ ಕ್ಯಾಶ್ ಆನ್ ಡೆಲಿವರಿ ಮಾಡಲು ಹಿಂದೇಟು ಹಾಕುತ್ತಾರೆ ಅಲ್ವಾ?



Click it and Unblock the Notifications
