Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
ವಿಷಕಾರಿ ಹಾವಿನ ಪೊರೆ ಕಳಚಿದ ಭೂಪ..ಸರ್ಪದೊಂದಿಗೆ ಇಂತಹ ಸರಸವೇಕೆ..?
ಹಾವುಗಳೆಂದರೆ ಯಾರಿಗೆ ಭಯವಿಲ್ಲ ಹೇಳಿ. ಹಾವು ನೋಡುದು ಇರಲಿ ಹಾವಿನ ಹೆಸರು ಕೇಳಿದಾಗಲೇ ಮೈಲು ದೂರ ಓಡುತ್ತಾರೆ. ಆದ್ರೆ ಕೆಲವರಿಗೆ ಹಾವುಗಳ ರಕ್ಷಣೆ ಒಂದು ಹವ್ಯಾಸವಾಗಿರುತ್ತೆ. ಇಂತವರು ಹಾವು ಕಂಡರೆ ಭಯಪಡಲಾರರು. ಆದ್ರೆ ಹಾವುಗಳು ತಮ್ಮ ವಿಷಕಾರಿ ಅಂಶ ಮತ್ತು ಕಚ್ಚುವಿಕೆಯ ಕಾರಣಕ್ಕೆ ಭಯ ಹುಟ್ಟಿಸುತ್ತವೆ. ಆದರೆ ಎಲ್ಲರಲ್ಲೂ ಈ ಭಯ ಇರಬೇಕು ಎಂದೇನಿಲ್ಲ. ಈ ಭಯವನ್ನು ಒಫಿಡಿಯೋಫೋಬಿಯಾ ಎಂದು ಕರೆಯುತ್ತಾರೆ.
ಇಲ್ಲೊಬ್ಬ ಇಂತಹ ವಿಷಕಾರಿ ಹಾವಿನೊಂದಿಗೆ ಹೇಗೆಲ್ಲಾ ನಡೆದುಕೊಳ್ಳುತ್ತಿದ್ದಾನೆಂದರೆ ಈ ಹಾವು ಸಹ ಆತನನ್ನು ಮನೆ ಸದಸ್ಯನಂತೆ ಕಾಣುತ್ತಿದೆ. ಆತ ಮನೆಯಲ್ಲಿ ಬೆಕ್ಕು, ನಾಯಿಗಳ ಸಾಕುವಂತೆ ಈ ಹಾವನ್ನೂ ಸಾಕಿದ್ದಾನೇನೋ ಎನ್ನುವಂತೆ ಈ ವಿಡಿಯೋದಲ್ಲಿ ಭಾಸವಾಗುತ್ತಿದೆ.

ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಲಾದ ಅಂತಹ ವ್ಯಕ್ತಿಯ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಅಲೆ ಎಬ್ಬಿಸಿದೆ. ಆತ ತನ್ನ ಕೈಯಿಂದಲೇ ಹಾವಿನ ಪೊರೆ ತೆಗೆಯುವ ಮಹಾ ಸಾಹಸ ಮಾಡಿದ್ದಾನೆ. ಜೊತೆಗೆ ಹಾವಿನ ತಲೆಗೆ ಮುತ್ತಿಟ್ಟು ಅದರ ಚರ್ಮದ ಮೇಲಿದ್ದ ಪೊರೆಯನ್ನು ಆರಾಮವಾಗಿ ಕಿಂಚಿತ್ತೂ ಭಯವಿಲ್ಲದೆ ಬಿಡಿಸುತ್ತಿದ್ದಾನೆ.
ಈ ವಿಡಿಯೋ ನೋಡಿದ ನೆಟ್ಟಿಟರು ಅಕ್ಷರಶಃ ದಂಗಾಗಿದ್ದಾರೆ. ಈತ ಕಳೆದ ಜನ್ಮದಲ್ಲಿ ಹಾವಾಗಿ, ಆ ಹಾವಿನ ಪ್ರೇಮಿಯಾಗಿ ಜನಿಸಿರಬಹುದು ಎಂದು ತಮಾಷೆಯ ಮಾತುಗಳಾಡಿದ್ದಾರೆ. ಈ ವಿಡಿಯೋದಲ್ಲಿ ಆತ ಹಾವಿನ ಮುಖದ ಮೇಲಿದ್ದ ಪೊರೆಯನ್ನು ಬಿಡುಸುವುದನ್ನು ಆರಂಭದಲ್ಲಿ ನಾವು ಕಾಣಬಹುದು. ಆತ ಹಾವಿನ ಕಣ್ಣಿನ ಭಾಗದಲ್ಲಿ ಅತ್ಯಂತ ನಾಜೂಕಾಗಿ, ಕ್ರಿಸ್‌ಮಸ್ ಉಡುಗೊರೆಯ ಬಿಡಿಸಿದಂತೆ ಪೊರೆಯನ್ನು ಹರಿಯುತ್ತಿದ್ದಾನೆ.
ಬಳಿಕ ಆತ ಹಾವನ್ನು ಹಿಡಿದು ಅದರ ತಲೆಯ ಭಾಗದಲ್ಲಿ ಮುತ್ತಿಡುತ್ತಾನೆ. ಬಳಿಕ ಇಡೀ ದೇಹದ ಮೇಲೆ ಕೈಯಾಡಿಸಿ ಅದರ ಪೊರೆಯನ್ನು ನಿಧಾನವಾಗಿ ಬಿಡಿಸುತ್ತಾನೆ. ಈ ವಿಡಿಯೋ ಇನ್ಸ್‌ಸ್ಟಾಗ್ರಾಮ್‌ನಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಬರೋಬ್ಬರಿ 10 ಮಿಲಿಯನ್ ವೀವ್ಸ್ ಕಂಡಿದೆ.
ಆದರೆ ವಿಷಕಾರಿ ಸರ್ಪದ ಜೊತೆಗಿನ ಈ ಆಟ ಸರಿಯಲ್ಲ ಎಂದು ನೆಟ್ಟಿಗರು ಅಭಿಪ್ರಾಯಪಟ್ಟಿದ್ದಾರೆ. ಆತ ಹಾವನ್ನು ಸಾಕಿರಬಹುದು ಇಲ್ಲವೆ ಆತನೊಬ್ಬ ತರಬೇತಿ ಪಡೆದಿರುವ ಉರಗ ರಕ್ಷಕನಾಗಿರಬಹುದು. ಆದರೆ ಈ ರೀತಿ ವಿಡಿಯೋ ಮಾಡುವುದು ಇತರರ ಜೀವದ ಜೊತೆ ಆಟವಾಡಿದಂತಾಗುತ್ತದೆ ಎಂದು ಅಸಮಾಧಾನವೂ ಕೇಳಿಬಂದಿದೆ.
ಈತನ ಸಾಹಸ ಕಂಡು ಬೇರೆಯವರು ಸಹ ಹಾವಿನ ಜೊತೆ ಈ ರೀತಿ ವಿಡಿಯೋ ಮಾಡಲು ನಿಂತುಬಟ್ಟರೆ ಅಪಾಯಗಳು ಸಂಭವಿಸಲಿವೆ. ಹಲವರು ತಮ್ಮ ಜೀವಕ್ಕೆ ಅಪಾಯ ತಂದುಕೊಳ್ಳುತ್ತಾರೆ. ಇಲ್ಲವೆ ಬೇರೆಯವರ ಜೀವಕ್ಕೆ ಅಪಾಯ ತರುತ್ತಾರೆ. ಅಪಾಯ ಕಾರಿ ಜೀವಿಗಳನ್ನು ಎಂದಿಗೂ ಸಾಕುಪ್ರಾಣಿಗಳಂತೆ ಬಿಂಬಿಸಬಾರದು. ಅವುಗಳ ಆರೈಕೆ ಮಾಡುವುದೇ ಅಪರಾಧ ಎಂದು ಮತ್ತೆ ಹಲವರು ಅಭಿಪ್ರಾಯ ಪಟ್ಟಿದ್ದಾರೆ.
ಹಾವು ಪೊರೆಯನ್ನು ಏಕೆ ಬಿಡುತ್ತದೆ?
ಮೊದಲನೆಯದಾಗಿ ಮರಿ ಹಾವುಗಳು ವರ್ಷಕ್ಕೆ ನಾಲ್ಕು ಬಾರಿ ತಮ್ಮ ಪೊರೆಯನ್ನು ಬಿಡುತ್ತವೆ. ದೊಡ್ಡ ಹಾವುಗಳು ವರ್ಷಕ್ಕೆ ಎರಡು ಬಾರಿ ತಮ್ಮ ಪೊರೆಗಳ ಬಿಡುತ್ತವೆ. ಏಕೆಂದರೆ ಹಾವುಗಳು ಆರೋಗ್ಯಕರ ಜೀವನವನ್ನು ಹೊಂದಲು ಪೊರೆಯನ್ನು ಬಿಡುವುದು ಮುಖ್ಯ. ಇದಲ್ಲದೆ, ಹಾವುಗಳ ಚರ್ಮದ ಜೀವಕೋಶಗಳು ವಯಸ್ಸಾದಂತೆ ಅದೇ ವೇಗದಲ್ಲಿ ಬೆಳೆಯುವುದಿಲ್ಲ. ಅದಕ್ಕಾಗಿಯೇ ಹಾವು ತನ್ನ ಪೊರೆಯನ್ನು ಬಿಡುತ್ತವೆ. ಅಲ್ಲದೆ ಹಾವುಗಳು ತಮಗೆ ಬೇಕಾದಾಗ ಪೊರೆಗಳ ಬಿಡಲು ಸಾಧ್ಯವಿಲ್ಲ, ಚರ್ಮದ ಮೇಲಿನ ಕೋಶಗಳು ಸತ್ತಂತೆ ಪೊರೆ ತಾವಾಗಿಯೇ ಕಳಚಿಕೊಳ್ಳಲು ಪ್ರಾರಂಭಿಸುತ್ತದೆ. ಆದರೆ ಪೊರೆ ಹೇಗೆ ಕಳಚಬೇಕು ಎಂಬುದನ್ನು ಹಾವು ಕಲಿಯಬೇಕಿದೆ. ಇದು ನೈಸರ್ಗಿಕವಾಗಿ ಹಾವಿಗೆ ತಿಳಿದಿರುತ್ತದೆ.



Click it and Unblock the Notifications
