Latest Updates
-
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ!
ವ್ಯಕ್ತಿಗೆ ಭೂಮಿ ಅಗೆದಾಗ ಸಿಕ್ತು ಕೊಡ ತುಂಬಾ ನಿಧಿ, ಹಾವು ಆ ನಿಧಿ ಕಾಯುತ್ತಿತ್ತು!: ವೀಡಿಯೋ ವೈರಲ್
ನಿಧಿ ಇರುವ ಕಡೆ ಹಾವು ಆ ನಿಧಿಯನ್ನು ಕಾವಲು ಕಾಯುತ್ತಿರುತ್ತದೆ ಎಂದು ಕತೆಗಳಲ್ಲಿ ಓದಿದ್ದೇವೆ, ಆದರೆ ಅಂಥದ್ದೊಂದು ಘಟನೆ ನಡೆದಿದ್ದು ಬೆಳಕಿಗೆ ಬಂದಿದ್ದು ಅದರ ವೀಡಿಯೋ ತುಂಬಾನೇ ವೈರಲ್ ಆಗುತ್ತಿದೆ.
ಕೆಲವರು ನಿಧಿಗಾಗಿ ಹುಡುಕಾಡುತ್ತಾರೆ, ನಿಧಿ ಆಸೆಗೆ ಕಾನೂನು ಬಾಹಿರ ಚಟುವಟಿಕೆ ಕೂಡ ಮಾಡಿ ಕೊನೆಗೆ ಸಿಕ್ಕಿ ಬೀಳುತ್ತಾರೆ, ಇಲ್ಲೊಬ್ಬ ವ್ಯಕ್ತಿ ಭೂಮಿ ಅಗೆಯುವಾಗ ಕೊಡ ತುಂಬಾ ಚಿನ್ನ ಸಿಕ್ಕಿದೆ, ಅಚ್ಚರಿಯೆಂದರೆ ಆ ಕೊಡದಲ್ಲಿಯೇ ಹಾವು ಕೂಡ ಕಂಡು ಬಂದಿದೆ.

ಆತನಿಗೆ ಚಿಕ್ಕ ಮಣ್ಣಿನ ಮಡಿಕೆ ಅಥವಾ ಕೊಡ ಕಣ್ಣಿಗೆ ಬಿದ್ದಿದೆ, ಅದರಲ್ಲಿ ಹೊಳೆಯುವ ವಸ್ತುಗಳು ಕಂಡಾಗ ಏನು ಅಮತ ನೋಡಿದ್ದಾನೆ ನೋಡಿದರೆ ಚಿನ್ನ. ನಂತರ ಅದರಲ್ಲಿ ಏನೇನು ಇದೆ ಎಂದು ಕೊಡವಿ ನೋಡುತ್ತಾರೆ, ಅದರೊಳಗಡೆ ಹಾವು ಕೂಡ ಇತ್ತು ಚಿನ್ನದ ಉಂಡೆಗಳು, ಕಲ್ಲಿರುವ ಉಂಗುರ ಹಾಗೂ ಚಿನ್ನದ ತ್ರಿಶೂಲ ಸಿಕ್ಕಿದೆ.
ಆ ಮಣ್ಣಿನ ಪಾತ್ರೆಯಿಂದ ಹೊರಬಂದ ಹಾವು ಮೆಲ್ಲನೆ ಅಲ್ಲಿಂದ ಹೋಗುವುದನ್ನು ಕಾಣಬಹುದು. ಅಲ್ಲದೆ ಚಿನ್ನ ಫಳ ಫಳ ಹೊಳೆಯುತ್ತಿದೆ, ಆತ ಅದರಲ್ಲಿದ್ದ ಉಂಗುರ ತನ್ನ ಕೈ ಬೆರಳಿಗೆ ಧರಿಸಿ ತೋರಿಸುತ್ತಾನೆ, ಈ ವಿಡಿಯೋ ಇದೀಗ ತುಂಬಾನೇ ವೈರಲ್ ಆಗುತ್ತಿದೆ.
ಇದು ನಕಲಿ ನಿಧಿ ಇರಬಹುದು ಎಂಬ ಸಂಶಯ ಮೂಡುತ್ತಿದೆ?
ಈ ವೀಡಿಯೋ ನೋಡುವಾಗ ಖಂಡಿತ ಸಂಶಯ ಮೂಡುತ್ತಿದೆ, ವೀಡಿಯೋ ರೀಚ್‌ಗಾಗಿ ನಕಲಿ ಸೃಷ್ಟಿ ಇರಬಹುದು ಎಂದು ಅನಿಸುವುದು, ಏಕೆಂದರೆ ಮೊದಲಿಗೆ ಅಗೆಯುವಾಗಲೇ ನಿಧಿ ಇತ್ತು ಎಂದು ಗೊತ್ತಿರಲಿಲ್ಲ, ನಂತರ ನಿಧಿ ಇರುವ ಕೊಡ ಸಿಕ್ಕಿದೆ, ಆದರೆ ಅವರು ಮಣ್ಣು ಅಗೆಯುತ್ತಿರುವ ವೀಡಿಯೋ ಮಾಡಿದ್ದಾರೆ, ಅಲ್ಲಿ ಅವರ ಕಣ್ಣಿಗೆ ಬಿದ್ದ ಮಡಿಕೆ ತೋರಿಸುತ್ತಾರೆ.
ನಂತರ ಅದನ್ನು ಮೆಲ್ಲನೆ ತೆಗೆಯುತ್ತಾರೆ, ಹೀಗೆ ತೆಗೆಯುವಾಗ ಮೊದಲಿಗೆ ಚಿಕ್ಕ ತ್ರಿಶೂಲ ಸಿಗುತ್ತೆ, ಅದರೊಳಗಡೆ ಹಾವು ಇರುವುದನ್ನು ತೋರಿಸುತ್ತಾರೆ, ನಂತರ ತ್ರಿಶೂಲ ತೆಗೆದಾಗ ಹಾವು ಮೆಲ್ಲನೆ ಹೊರ ನಡೆಯುತ್ತದೆ, ನಂತರೆ ಅದರಲ್ಲಿರುವ ಆಭರಣಗಳನ್ನು ನೆಲಕ್ಕೆ ಕೊಡುವುತ್ತಾರೆ, ನೋಡಿದರೆ ಫಳ ಫಳ ಹೊಳೆಯುವ ವಸ್ತುಗಳು, ಮಣ್ಣಿನೊಳಗಡೆ ವರ್ಷಗಟ್ಟಲೆ ಇರುವ ಚಿನ್ನ ಅಷ್ಟೊಂದು ಹೊಳೆಯಲು ಹೇಗೆ ಸಾಧ್ಯ? ಚಿನ್ನದ ಶಾಪ್‌ನಲ್ಲಿದ್ದ ಆಭರಣ ತಂದು ಬಳಸಲು ಆರಂಭಿಸಿದಾಗ ಅಂಥ ಹೊಳಪು ಮಾಸುವುದು, ಅಂಥದ್ದರಲ್ಲಿ ಮಣ್ಣಿನ ಅಡಿಯಲ್ಲಿರುವ ಚಿನ್ನ ರೀತಿ ಕಾಣಲು ಹೇಗೆ ಸಾಧ್ಯ?
ವೀಡಿಯೋಗಾಗಿ ಮಾಡಿಸಿರುವಂತಿದೆ
ಹೌದು ಕತೆಗಳಲ್ಲಿ ಇರುವಂತೆ ಒಂದು ಹಾವು ಹಿಡಿದು ಈ ರೀತಿ ಮಡಿಕೆಯಲ್ಲಿ ಹಾಕಿ ನಂತರ ಮಣ್ಣಿನಲ್ಲಿ ನದಿ ಸಿಕ್ಕಿದಂತೆ ಅದಕ್ಕೆ ಹಾವು ಕಾವಲು ಇದ್ದಂತೆ ವೀಡಿಯೋ ಮಾಡಿದ್ದಾರೆ. ವೀಡಿಯೋ ರೀಚ್ ಆಗಿದ್ದಕ್ಕೆ ಈ ಪ್ಲ್ಯಾನ್ ವರ್ಕೌಟ್ ಆಗಿದೆ, ಇಲ್ಲ ನಿಜವಾಗಿಯೂ ನಿಧಿ ಸಿಕ್ಕಿದ್ದರೆ ಬಂಪರ್ ಹೊಡೆದಿದ್ದಾರೆ, ನಿಮ್ಮ ಅಭಿಪ್ರಾಯವೇನು?



Click it and Unblock the Notifications
