Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ರಸ್ತೆಯಲ್ಲಿ ಹರಿಯುತ್ತಿರುವ ಮಳೆ ನೀರಿನಲ್ಲಿ ಬೆಡ್ ಮೇಲೆ ತೇಲುತ್ತಾ ಬಂದ ಯುವಕ: ಇಂಥವರಿಗೆ ಶಿಕ್ಷೆ ಕೊಡಬೇಕು
ದೇಶದ ಹಲವು ಕಡೆ ಧಾರಾಕಾರ ಮಳೆ ಬೀಳುತ್ತಿದೆ, ಇದರಿಂದಾಗಿ ಹಲವು ಕಡೆ ಹಲವು ಅನಾಹುತಗಳು ಉಂಟಾಗುತ್ತಿವೆ, ರಸ್ತೆಗಳು ನದಿಯಾಗಿ ತುಂಬಿ ಹರಿಯುತ್ತಿದೆ. ಮಳೆಯಿಂದ ಏನೆಲ್ಲಾ ಅನಾಹುತವಾಗುತ್ತಿದೆ ಎಂಬುವುದರ ಬಗ್ಗೆ ಹಲವು ವೀಡಿಯೋಗಳು ಬರುತ್ತಿವೆ.
ಆದರೆ ಈ ವೀಡಿಯೋ ಸ್ವಲ್ಪ ಭಿನ್ನವಾಗಿದೆ, ಈಗ ಎಲ್ಲರೂ ವೈರಲ್ ಆಗೋಕೆ ಏನೆಲ್ಲಾ ಪ್ಲ್ಯಾನ್ ಮಾಡುತ್ತಿದ್ದಾರೆ, ಈತ ಕೂಡ ಅದೇ ಪ್ಲ್ಯಾನ್‌ನಲ್ಲಿ ಮಾಡಿದ್ದಾನೋ ಅಥವಾ ಖುಷಿಗಾಗಿ ಮಾಡಿದ್ದು ವೈರಲ್ ಆಯ್ತೋ ಗೊತ್ತಿಲ್ಲ ಆದರೆ ಈ ವೀಡಿಯೋ ಮಾತ್ರ ವೈರಲ್ ಆಗಿದೆ.

ಮಳೆಯಿಂದ ಉಕ್ಕಿ ಬಂದ ನೀರಿನಲ್ಲಿ ವಿಹಾರಕ್ಕೆ ಹೊರಟನೇ?
ಇದು ಪುಣೆಯ ವೀಡಿಯೋ ಎಂದು ಹೇಳಲಾಗುತ್ತಿದೆ. ರಸ್ತೆಯೆಲ್ಲಾ ನೀರು, ನದಿಯಲ್ಲಿ ಗಾಡಿಗಳು ಓಡಾಡುತ್ತಿರುವಂತಿದೆ, ಈತ ಬೆಡ್‌ಮೇಲೆ ಮಲಗಿ ಹಾಯಾಗಿ ಹೋಗುತ್ತಿರುವ ದೃಶ್ಯ ವೈರಲ್ ಆಗಿದೆ.
You have to be really lucky and blessed to find someone who defends you behind your back.That is what real and genuine bonds are about! ಎಂದು ಬರೆದು ಉರ್ಮಿ ಎಂಬುವವರು ಈ ವೀಡಿಯೋ ಶೇರ್ ಮಾಡಿದ್ದು ಈ ವೀಡಿಯೋ ತುಂಬಾನೇ ಗಮನ ಸೆಳೆದಿದ್ದು ಆತ ಜನರ ಗಮನ ಸೆಳೆಯುವ ಸಲುವಾಗಿ ಈ ರೀತಿ ಮಾಡಿದ್ದರೆ ಖಂಡಿತ ಅದರಲ್ಲಿ ಯಶಸ್ವಿಯಾಗಿದ್ದಾನೆ. ಆದರೆ ಇವನಿಗೆ ಈ ರಿತಿ ಮಾಡಲು ಪರ್ಮಿಷನ್ ಕೊಟ್ಟವರು ಯಾರು, ಅದು ಅಷ್ಟೊಂದು ಗಾಡಿ ಓಡಾಡುವ ರಸ್ತೆಯಲ್ಲಿ?
Pune people got no chill? Naah, they got all the chul. #PuneRains pic.twitter.com/Im6e9ey4uR
— Urrmi (@Urrmi_) June 7, 2024
ಮಳೆಗಾಗಿ ಕಾದ ಜನರನ್ನು ಬೆಚ್ಚಿ ಬೀಳುವಂತೆ ಮಾಡುತ್ತಿದೆ ಈ ಮಳೆ
ಈ ಭೂಮಿ ಮಳೆಯಿಲ್ಲದೆ ಬೆಂದು ಹೋಗಿತ್ತು, ಇಷ್ಟು ವರ್ಷ ಇಷ್ಟೊಂದು ಸೆಕೆ ಅನುಭವಿಸಿರಲಿಲ್ಲ ಎಂದು ಜನರು ಮಾತನಾಡಿಕೊಳ್ಳುತ್ತಿದ್ದರು. ಬಿಸಿಲಿನ ತೀವ್ರತೆಗೆ ಜನ ಹೊರಗಡೆ ಹೆಜ್ಜೆ ಹಾಕಲು ಭಯ ಪಡುತ್ತಿದ್ದರು, ಒಂದು ಮಳೆಗಾಗಿ ಪ್ರಾರ್ತನೆ ಮಾಡುತ್ತಿದ್ದ ಜನರು ಈಗ ಯಾವಾಗಪ್ಪ ಈ ಮಳೆ ನಿಲ್ಲುವುದು ಎಂದು ಹೇಳುವಷ್ಟು ಮಳೆ ಬೀಳುತ್ತಿದೆ. ಪ್ರತಿದಿನ ಮಳೆ ಬರುತ್ತಿದೆ, ಇದರಿಂದಾಗಿ ನಡೆದಾಡುವ ರಸ್ತೆ ಕೂಡ ನೀರಿನಿಂದ ತುಂಬಿ ಹರಿಯುತ್ತಿದೆ.
ಮಳೆಯಿಂದಾಗಿ ಉಂಟಾಗುತ್ತಿದೆ ಆಸ್ತಿ ಪಾಸ್ತಿ ನಷ್ಟ
ಈ ಮಳೆ ಸಾಮಾನ್ಯವಾಗಿ ಬೀಳತ್ತಿಲ್ಲ, ಸುರಿದರೆ ಒಂದು ತಿಂಗಳ ಮಳೇ ಒಂದೇ ದಿನ ಬರುತ್ತಿದೆ, ಇದರಿಂದಾಗ ಕೆಲವು ಕಡೆ ಮನೆ, ಕಟ್ಟಡಗಳು ಮುಳುಗಡೆ ಆಗಿವೆ, ರೈತರಿಗೆ ಅಪಾರ ಬೆಳೆ ನಷ್ಟವಾಗಿದೆ, ಹಲವರು ಈ ಮಳೆಯಿಂದಾಗಿ ಪ್ರಾಣವನ್ನು ಕಳೆದುಕೊಳ್ಳುತ್ತಿದ್ದಾರೆ.
ಪ್ರಕೃತಿ ವಿಕೋಪದಿಂದ ಕೆಲವರ ಪ್ರಾಣಕ್ಕೆ ಹಾನಿಯಾದರೆ ಇನ್ನು ಕೆಲವರು ಹುಚ್ಚಾಟದಿಂದ ಪ್ರಾಣವನ್ನು ಕಳೆದುಕೊಳ್ಳುತ್ತಿದ್ದಾರೆ
ಹೌದು ಇದೇ ವೀಡಿಯೋ ನೋಡಿ ಅವನು ಹುಚ್ಚಾಟಕ್ಕೆ ಹಾಸಿಗೆ ಮೇಲೆ ತೇಲಿಕೊಂಡು ಬರ್ತಾ ಇದ್ದಾನೆ, ಅದೇ ರಸ್ತೆಯಲ್ಲಿ ಆಟೋ, ಬೈಕ್ ಓಡಾಡುತ್ತಿದೆ, ಇವನ ಹಾಸಿಗೆ ಬೈಕ್‌ಗೆ ತಾಗಿದರೆ ಅಷ್ಟೇ ಸಾಕು ಬೈಕ್‌ನಲ್ಲಿದ್ದವ ಕೆಳಗೆ ಬೀಳಬೇಕಾಗುತ್ತದೆ, ಇಲ್ಲ ಬೇರೆ ಗಾಡಿ ಈತನಿಗೆ ಬಡಿಯಬಹುದು, ಹುಚ್ಚಾಟಕ್ಕೆ ತಮ್ಮ ಪ್ರಾಣವನ್ನು ಲೆಕ್ಕಿಸದೆ ಇರುವುದು ಮಾತ್ರವಲ್ಲ ಇತರರಿಗೂ ತೊಂದರ ಉಂಟು ಮಾಡುತ್ತಿದ್ದಾನೆ.
ಇವನು ಈ ರೀತಿ ಬರುವಾಗ ಇತರ ಗಾಡಿಗಳಿಗೆ ಕಷ್ಟವಾಗುತ್ತಿದೆ, ಎಷ್ಟೊಂದು ಗಾಡಿ ಆ ರಸ್ತೆಯಲ್ಲಿ ಓಡಾಡುತ್ತಿದೆ, ಇಂಥವರ ವಿರುದ್ಧ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು, ಆಗ ಮಾತ್ ವೈರಲ್ ಆಗಬೇಕೆಂದು ಯೋಚಿಸುತ್ತಿರುವವರ ಹುಚ್ಚಾಟಕ್ಕೆ ಕಡಿವಾಣ ಹಾಕಬಹುದು.



Click it and Unblock the Notifications











