Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ಪ್ರಾಚೀನ ಕಾಲದ ಮಡಕೆಯಲ್ಲಿತ್ತು ಬಂಗಾರದ ಆಭರಣ..! ನಂಬಲು ಸಾಧ್ಯವಿಲ್ಲದ ವಿಡಿಯೋ..!
ಪ್ರಾಚೀನ ಕಾಲದಲ್ಲಿ ಜನರು ನಾಣ್ಯ, ಬಂಗಾರ, ವಜ್ರ ಇತ್ಯಾದಿ ಬೆಲೆ ಬಾಳುವ ವಸ್ತುಗಳನ್ನು ರಾಜರಿಂದಲೋ ಅಥವಾ ಕಳ್ಳರಿಂದ, ಲೂಟಿ ಕೋರರಿಂದ ಮುಚ್ಚಿಡಲು ಭೂಮಿಯೊಳಗೆ ಹೂಳುತ್ತಿದ್ದರು ಎಂದು ಇಂದಿಗೂ ನಂಬಲಾಗಿದೆ. ಇದೇ ಕಾರಣಕ್ಕೆ ಭೂಮಿಯ ಹಲವು ಕಡೆಗಳಲ್ಲಿ ಈ ನಿಧಿಗಳಿಗಾಗಿ ನಿರಂತರ ಹುಡುಕಾಟಗಳು ಸಹ ನಡೆಯುತ್ತಲೇ ಇರುತ್ತವೆ.
ಹೀಗೆ ನಿಧಿ ಎಂಬ ಶಬ್ದ ಕಿವಿ ಮೇಲೆ ಬಿದ್ದ ತಕ್ಷಣ ನಮಗೆ ಮಡಕೆಯಲ್ಲಿಯೋ ಅಥವಾ ಒಂದು ಕೊಡದಲ್ಲಿ ಚಿನ್ನ, ಬೆಳ್ಳಿ, ನಾಣ್ಯಗಳು ಆಭರಣಗಳು ನೆನಪಿಗೆ ಬರುತ್ತವೆ. ಅದನ್ನು ಆಳವಾದ ಭೂಮಿಯಲ್ಲಿ ಹೊಂಡ ತೆಗೆದು ತೆಗೆಯಲಾಗುತ್ತೆ ಎಂಬ ಕಲ್ಪನೆ ಬರುತ್ತದೆ. ಈ ರೀತಿ ಹಲವು ಬಾರಿ ನಿಧಿ ಸಿಕ್ಕಿರುವ ಉದಾಹರಣೆಗಳು ಸಹ ಇವೆ.

ಆದರೆ ಇದೇ ನಿಧಿ ಆಸೆಗಾಗಿ ಹಲವರು ಪ್ರಾಣ ಕಳೆದುಕೊಂಡ ಅಥವಾ ಅಪಾಯಕ್ಕೆ ಸಿಲುಕಿರುವ ಘಟನೆಗಳು ಸಹ ನಡೆದಿದೆ. ಜೊತೆಗೆ ನಿಧಿಯ ಹಿಂದೆ ಹಲವು ರೀತಿಯ ಕಥೆಗಳು ಸಹ ನಾವು ಕೇಳಿದ್ದೇವೆ. ಆದರೆ ಇಲ್ಲೊಂದು ವಿಡಿಯೋದಲ್ಲಿ ವ್ಯಕ್ತಿಯೊಬ್ಬನಿಗೆ ಪ್ರಾಚೀನ ಕಾಲದ ನಿಧಿ ಪತ್ತೆಯಾಗಿದೆ ಎಂದು ಹರಿಬಿಡಲಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ.
ಈ ರೀತಿಯ ಗುಪ್ತ ನಿಧಿಗಳ ಹುಡುಕಾಟದಲ್ಲಿದ್ದ ವ್ಯಕ್ತಿಯೊಬ್ಬ ಹಳೆಯ ಬಂಗಾರದ ಆಭರಣವಿರುವ ನಿಧಿ ಪತ್ತೆ ಮಾಡಿರುವ ವಿಡಿಯೋ ಇದಾಗಿದ್ದು, ಈ ವಿಡಿಯೋ ನೋಡಿದವರು ನಿಜಕ್ಕೂ ಅಚ್ಚರಿಗೆ ಒಳಗಾಗಿದ್ದಾರೆ. ಟ್ರೆಷರ್_ಸ್ನೈಪರ್ ಎಂಬ ಇನ್ಸ್‌ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದ್ದು, ಈ ವಿಡಿಯೋ ನೋಡಿದ ಜನ ಮೂಗಿನ ಮೇಲೆ ಬೆರಳಿಟ್ಟಿದ್ದಾರೆ.
ಒಬ್ಬ ಬಂಡೆಗಳ ಕೆಳಗೆ ಭೂಮಿಯನ್ನು ಅಗೆದು ಅಲ್ಲಿ ಸಿಕ್ಕ ಒಂದು ಕಲ್ಲಿನ ಆಕಾರದ ಮಡಕೆಯನ್ನು ತೆಗೆದುಕೊಂಡು ಉಳಿಯ ಸಹಾಯದಿಂದ ಅದನ್ನು ಒಡೆಯುತ್ತಿರುವುದನ್ನು ನಾವು ವಿಡಿಯೋದಲ್ಲಿ ನೋಡಬಹುದು. ಆತ ಕಷ್ಟಪಟ್ಟು ಆ ಮಡಕೆಯನ್ನು ಒಡೆದಾಗ ಅದರ ಒಳಗೆ ಒಂದಿಷ್ಟು ಬಂಗಾರದ ಆಭರಣಗಳಿರುವುದು ಕಾಣುತ್ತದೆ. ಅಲ್ಲಿಗೆ ಆ ವಿಡಿಯೋ ಕೊನೆಯಾಗುತ್ತದೆ.
ವೈರಲ್ ಆಗಿರುವ ವಿಡಿಯೋದಲ್ಲಿ ಈ ಸ್ಥಳ ಯಾವುದು? ಯಾವಾಗ ಈ ರೀತಿಯ ನಿಧಿ ಪತ್ತೆಯಾಗಿದೆ. ಯಾವ ಸಮಯದಲ್ಲಿ ವಿಡಿಯೋ ಮಾಡಲಾಗಿದೆ. ನಿಧಿ ಸಿಕ್ಕಿರುವ ವ್ಯಕ್ತಿ ಯಾರು ಎಂಬ ಹತ್ತು ಹಲವು ಪ್ರಶ್ನೆಗಳಿಗೆ ಉತ್ತರವಿಲ್ಲ. ಆದರೆ ಆತ ನಿಧಿ ಹುಡುಕುವಲ್ಲಿ ನಿಸ್ಸೀಮ ಅನ್ನುವುದಂತು ಈ ವಿಡಿಯೋ ಸಾಬೀತುಪಡಿಸುತ್ತಿದೆ.
ನೆಟ್ಟಿಗರ ಪ್ರಶ್ನೆಗಳೇನು.?
ಈ ನಿಧಿ ಪತ್ತೆಯಾದ ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರಲ್ಲಿ ಹಲವು ರೀತಿಯ ಪ್ರಶ್ನೆ ಉದ್ಭವಿಸಿದೆ. ಅದೇನೆಂದರೆ ನಿಧಿ ಭೂಮಿಯಲ್ಲಿ ಸಿಗುವುದು ನಿಜವಾದರು ಇಷ್ಟು ಮೇಲಕ್ಕೆ ಹೇಗೆ ಸಿಗಲು ಸಾಧ್ಯ ಎಂಬುದನ್ನು ಪ್ರಶ್ನಿಸಿದ್ದಾರೆ. ಇದರ ಜೊತೆ ಆತನಿಗೆ ನಿಧಿ ಇರುವ ಜಾಗ ತಿಳಿದಿದ್ದು ಹೇಗೆ? ಅಥವಾ ನಿಧಿ ಪತ್ತೆಗಾಗಿ ಆತ ಯಾವ ಆಧುನಿಕ ಯಂತ್ರವನ್ನು ಬಳಸಿದ್ದಾನೆ. ಯಾವ ಮಾಹಿತಿ ಮೇಲೆ ಆತ ನಿಧಿ ಹುಡುಕಾಟ ನಡೆಸಿದ್ದಾನೆ ಎಂಬ ಪ್ರಶ್ನೆ ಅವರಲ್ಲಿ ಮೂಡಿದೆ.
ಇನ್ನು ಕೆಲವರು ಇದು ನಕಲಿ ವಿಡಿಯೋ ಎಂದೂ ಆತನೇ ಮೊದಲು ಆ ಆಭರಣ ಮಡಕೆ ಒಳಗೆ ಇಟ್ಟು ಅದನ್ನು ಮತ್ತೆ ಹೊರತೆಗೆದು ವಿಡಿಯೋ ಮಾಡಿದ್ದಾನೆ. ಇದು ಬಹುಬೇಗ ಫೇಮಸ್ ಆಗಲು ಇರುವ ಟ್ರಿಕ್ಸ್ ಎಂದು ಕೆಲವರು ಕಮೆಂಟ್ ಮೂಲಕ ಬರೆದುಕೊಂಡಿದ್ದಾರೆ.
ಆದರೆ ಈ ವಿಡಿಯೋ ಸತ್ಯಾಸತ್ಯತೆ ಬಗ್ಗೆ ಆ ವಿಡಿಯೋದಲ್ಲಿರುವ ವ್ಯಕ್ತಿ ಮಾತ್ರವೇ ಬಹಿರಂಗಪಡಿಸಲು ಸಾಧ್ಯವಿದ್ದು, ಎಲ್ಲಾ ಪ್ರಶ್ನೆಗಳಿಗೂ ಉತ್ತರ ನೀಡಬೇಕಿದೆ. ಆದರೆ ಈ ವಿಡಿಯೋ ನೋಡಿದ ಒಂದಿಷ್ಟು ಮಂದಿಯಂತು ನಿಧಿ ಹುಡುಕಾಟದ ತಮ್ಮ ಕನಸ್ಸನ್ನು ಮತ್ತೆ ನನಸು ಮಾಡಿಕೊಳ್ಳಲು ಮುಂದಾಗುವುದಂತು ನಿಜವಾಗಿದೆ.



Click it and Unblock the Notifications
