Latest Updates
-
ಬಿಸಿಗಾಳಿಯ ಎಚ್ಚರಿಕೆ: ಮಧ್ಯಾಹ್ನ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪು ನಿಮ್ಮ ಆರೋಗ್ಯಕ್ಕೆ ಕುತ್ತು ತರಬಹುದು! -
ಬಿಸಿಗಾಳಿಯ ನಡುವೆ ಮದುವೆ ಸಂಭ್ರಮ: ಅತಿಥಿಗಳ ಸುರಕ್ಷತೆಗಾಗಿ ನೀವು ಮಾಡಲೇಬೇಕಾದ ಬದಲಾವಣೆಗಳಿವು! -
ಬಿಸಿಗಾಳಿಯ ಅಬ್ಬರ ಶುರು: ನಿಮ್ಮ ಮನೆ ತಂಪಾಗಿರಲು ಮತ್ತು ಗಿಡಗಳನ್ನು ಉಳಿಸಲು ಈ ಸೀಕ್ರೆಟ್ ಟಿಪ್ಸ್ ಮಿಸ್ ಮಾಡ್ಬೇಡಿ! -
ಸುಡುವ ಬಿಸಿಲಿಗೆ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಆಹಾರ ಕ್ರಮ ಪಾಲಿಸಿ! -
ಮದರ್ಸ್ ಡೇ 2026: ಅಮ್ಮನಿಗೆ ಸರ್ಪ್ರೈಸ್ ನೀಡಲು ಈ ವೈರಲ್ ಟ್ರೆಂಡ್ಸ್ ಫಾಲೋ ಮಾಡಿ, ಮಿಸ್ ಮಾಡ್ಬೇಡಿ! -
ಅಮ್ಮನಿಗೆ ಈ ಬಾರಿ ವಿಶೇಷ ಉಡುಗೊರೆ: ತಾಯಂದಿರ ದಿನದಂದು 20 ನಿಮಿಷದ ಯೋಗದ ಮ್ಯಾಜಿಕ್! -
ದೆಹಲಿ ಮಳೆಯಲ್ಲಿ ಮದುವೆ ಸಂಭ್ರಮಕ್ಕೆ ಅಡ್ಡಿಯೇ? ಈ ಸಣ್ಣ ಬದಲಾವಣೆಗಳು ನಿಮ್ಮ ಮದುವೆಯನ್ನು ಉಳಿಸುತ್ತವೆ! -
ಬಿರುಗಾಳಿ ಅಬ್ಬರಕ್ಕೆ ಬಾಲ್ಕನಿ ಗಾರ್ಡನ್ ಹಾಳಾಗುತ್ತಾ? ನಿಮ್ಮ ಮನೆ ಮತ್ತು ಗಿಡಗಳನ್ನು ರಕ್ಷಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಬಿಸಿಲಿನ ಬೇಗೆಗೆ ಸುಸ್ತಾಗಿದ್ದೀರಾ? ದೆಹಲಿ ಸರ್ಕಾರದ ಈ 'ರಿಲೀಫ್ ವ್ಯಾನ್' ನಿಮ್ಮ ಜೀವ ರಕ್ಷಕವಾಗಬಹುದು! -
ಮೆಟ್ ಗಾಲಾ 2026: ದುಬಾರಿ ಫ್ಯಾಷನ್ ಅನ್ನು ನಮ್ಮೂರಿನ ಕ್ರಿಯೇಟರ್ಗಳು ದೇಸಿ ಶೈಲಿಯಲ್ಲಿ ಮರುಸೃಷ್ಟಿಸಿದ್ದು ಹೇಗೆ? ಅಚ್ಚರಿ ಪಡಬೇಡಿ!
ನೆಲದಡಿ ಸಿಕ್ತು 20ಕ್ಕೂ ಹೆಚ್ಚು ಚಿನ್ನದ ನಾಣ್ಯ..!
ಆನ್‌ಲೈನ್‌ನಲ್ಲಿ ಹರಿದಾಡುವ ಕೆಲವೊಂದು ವಿಡಿಯೋಗಳು ಎಷ್ಟು ಕುತೂಹಲ ಹಾಗೂ ಪ್ರಶ್ನೆಗಳ ಹುಟ್ಟುಹಾಕುತ್ತವೆ ಎಂಬುದು ನಮಗೆಲ್ಲಾ ಗೊತ್ತಿದೆ. ಅದರಲ್ಲೂ ಈ ನಿಧಿ ಹುಡುಕುವುದು, ಭೂಮಿ ಆಳದಿಂದ ಚಿನ್ನ, ವಜ್ರದಂತಹ ಬೆಲೆ ಬಾಳುವ ವಸ್ತುಗಳ ಹುಡುಕುವ ಮಂದಿಯಂತು ಎಲ್ಲರಲ್ಲೂ ಅಚ್ಚರಿಗೆ ಕಾರಣರಾಗುತ್ತಾರೆ.
ಅದೇ ರೀತಿ ಇಲ್ಲೊಂದು ವಿಡಿಯೋದಲ್ಲು ಸಹ ವ್ಯಕ್ತಿಯೊಬ್ಬ ಎಲ್ಲರ ಗಮನ ಸೆಳೆದಿದ್ದಾನೆ. ಆತನಿಗೆ ನೆಲದಡಿಯಿಂದ ಚಿನ್ನದ ನಾಣ್ಯಗಳು ಸಿಕ್ಕಿರುವ ವಿಡಿಯೋ ಹಂಚಿಕೊಳ್ಳಲಾಗಿದ್ದು, ಇದು ಹಲವು ಕುತೂಹಲಗಳಿಗೆ ಕಾರಣವಾಗಿದೆ. ಹಿಂದಿನ ಕಾಲದಲ್ಲಿ ಪೂರ್ವಜರು ಈ ರೀತಿ ನೆಲದಡಿಯಲ್ಲಿ ತಮ್ಮ ಸ್ವತ್ತುಗಳ, ಬೆಲೆಬಾಳುವ ವಸ್ತುಗಳ ಹೂತಿಡುತ್ತಿದ್ದರು ಎಂದು ನಾವು ಕೇಳಿದ್ದೇವೆ. ಜೊತೆಗೆ ಒಂದಿಷ್ಟು ಕಡೆಗಳಲ್ಲಿ ಈ ರೀತಿಯ ವಸ್ತು ನೆಲದ ಒಳಗೆ ಸಿಕ್ಕಿವೆ.

ಹೀಗೆ ಈ ವಿಡಿಯೋದಲ್ಲೂ ಸಹ ಆತ ಚಿನ್ನದ ನಾಣ್ಯಗಳ ಹುಡುಕಿ ತೆಗೆದಿದ್ದಾನೆ. ಪುರಾತನ ಕಾಲದಲ್ಲಿ ನಾಣ್ಯಗಳು, ಆಭರಣಗಳನ್ನು ಲೂಟಿ ಕೋರರಿಂದ, ತಮ್ಮದೇ ರಾಜರ ತರಿಗೆ, ವಸೂಲಿಗೆ ಹೆದರಿ ಮಣ್ಣಿನಲ್ಲಿ ಹೂತಿಡುತ್ತಿದ್ದರಂತೆ. ಆದರೆ ಕಾಲಕ್ರಮೇಣ ಅವು ನೆಲದಲ್ಲಿತೇ ಉಳಿದುಬಿಡುತ್ತಿದ್ದವಂತೆ.
ಈ ರೀತಿ ಅಡಗಿಸಿಟ್ಟ ಈ ಚಿನ್ನದ ನಾಣ್ಯವನ್ನು ವ್ಯಕ್ತಿಯೊಬ್ಬ ಹೊರತೆಗೆದಿರುವ ವಿಡಿಯೋ ಇದಾಗಿದೆ. ಆತ ಭೂಮಿಯೊಳಗಿರುವ ಚಿನ್ನದ ನಾಣ್ಯಗಳನ್ನು ಒಂದೊಂದಾಗಿ ಹೊರತೆಗೆಯುತ್ತಿದ್ದಾನೆ. ಈ ವಿಡಿಯೋ ಆನ್‌ಲೈನ್‌ನಲ್ಲಿ ಭಾರೀ ಆಕರ್ಷಣೆಗೆ ಒಳಗಾಗಿದೆ. ಈ ವಿಡಿಯೋದಲ್ಲಿ ಆತ ಯಾವುದೋ ಕಾಡಿನ ರೀತಿ ಕಾಣುವ ಪ್ರದೇಶದಲ್ಲಿರುವುದು ಕಂಡುಬರುತ್ತದೆ.
ಆತನ ಕೈಯಲ್ಲಿ ಭೂಮಿಯೊಳಗಿರುವು ಲೋಹಗಳ ಪತ್ತೆ ಮಾಡುವ ಆಧುನಿಕ ಯಂತ್ರವೂ ಇದೆ. ಇದರ ಸಹಾಯದಿಂದ ಆತ ಕಲ್ಲಿನ ಮೇಲೆ ಹಿಡಿದಾಗ ಆ ಯಂತ್ರ ಶಬ್ದ ಮಾಡಲು ಆರಂಭಿಸುತ್ತದೆ. ಈ ಶಬ್ದದ ಆಧಾರದಲ್ಲಿ ಆತ ಕಲ್ಲನ್ನು ಪುಡಿ ಮಾಡಲು ಮುಂದಾಗುತ್ತಾನೆ. ಆತ ತಂದಿದ್ದ ಯಂತ್ರಗಳ ನೆರವಿನಿಂದ ಕಲ್ಲನ್ನು ಒಡೆಯುತ್ತಾನೆ.
ಈ ವೇಳೆ ಇಂದು ಚಿಕ್ಕ ರಂಧ್ರದಲ್ಲಿ ಚಿನ್ನದ ನಾಣ್ಯಗಳಿರುವುದು ಕಂಡುಬರುತ್ತದೆ. ಅವುಗಳನ್ನು ಒಂದೊಂದಾಗಿ ನಿಧಾನವಾಗಿ ಆತ ಹೊರಗೆ ತೆಗೆಯುತ್ತಾನೆ. ಈ ವಿಡಿಯೋ ನೋಡುಗರನ್ನು ಬೆರಗುಗೊಳಿಸಿದೆ. ಏಕೆಂದರೆ ಈ ರೀತಿ ಚಿನ್ನದ ನಾಣ್ಯಗಳು ಸಿಗುವುದು ಅಚ್ಚರಿಯ ವಿಚಾರವೇ. ಅದರಲ್ಲೂ ಭೂಮಿಯ ಮೇಲ್ಭಾಗದಲ್ಲಿಯೇ ಈ ನಾಣ್ಯ ಆತನಿಗೆ ಸಿಕ್ಕಿದೆ.
ಆದರೆ ಈ ನಾಣ್ಯಗಳು ಕಲ್ಲುಗಳ ನಡುವೆ ಸಿಲುಕ್ಕಿದ್ದು ಹೇಗೆ ಎಂಬ ಪ್ರಶ್ನೆಯಂತು ಜನರಲ್ಲಿ ಮೂಡಿದೆ. ಆ ನಾಣ್ಯಗಳನ್ನು ಅಲ್ಲಿ ಇಟ್ಟಿದ್ಯಾರು? ಆತನಿಗೆ ನಾಣ್ಯವಿರುವ ಜಾಗ ತಿಳಿದಿದ್ದು ಹೇಗೆ ಎಂಬ ಹತ್ತಾರು ಪ್ರಶ್ನೆಗಳು ಸಹ ಮೂಡಿವೆ.
ಆತ ಒಟ್ಟು 20ಕ್ಕೂ ಹೆಚ್ಚು ಚಿನ್ನದ ನಾಣ್ಯಗಳನ್ನು ಕ್ಯಾಮರಾ ಮುಂದೆ ತೋರಿಸುತ್ತಾನೆ. ಈ ವಿಡಿಯೋ ಸುಮಾರು 2 ಲಕ್ಷಕ್ಕೂ ಅಧಿಕ ವೀಕ್ಷಣೆ ಕಂಡಿದೆ. ಆದರೆ ಹಲವರು ಈ ವಿಡಿಯೋ ಕುರಿತು ಅನುಮಾನ ವ್ಯಕ್ತಪಡಿಸಿದ್ದಾರೆ. ಮೊದಲು ಆತ ಈ ಪ್ರದೇಶ ಎಲ್ಲಿದೆ ಎಂಬುದನ್ನು ತಿಳಿಸಿಲ್ಲ. ಇನ್ನೊಂದು ಈ ವಿಡಿಯೋವನ್ನು ಪೂರ್ತಿಯಾಗಿ ಹಾಕಲಾಗಿಲ್ಲ. ಮಧ್ಯದಲ್ಲಿ ಸ್ವಲ್ಪ ಕಾಲ ವಿಡಿಯೋ ಶೂಟ್ ಮಾಡಿಲ್ಲ. ಇದು ಪೂರ್ವ ನಿಗದಿಯಾದ ವಿಡಿಯೋ ಆಗಿರಬಹುದು ಎಂದು ಶಂಕಿಸಲಾಗಿದೆ.
ಇದಲ್ಲದೆ ಈ ವಿಡಿಯೋ ಸತ್ಯಾಸತ್ಯತೆ ಕುರಿತು ಆತ ತಿಳಿಸಬೇಕಿತ್ತು. ಅಲ್ಲದೆ ಆತನಿಗೆ ಸಿಕ್ಕಿರುವುದು ಚಿನ್ನದ ನಾಣ್ಯಗಳಂತೆ ಕಾಣಿಸುತ್ತಿಲ್ಲ ಅವು ಸಾಮಾನ್ಯ ನಾಣ್ಯಗಳಂತೆ ಇವೆ ಎಂದು ಹಲವರು ಅನುಮಾನ ವ್ಯಕ್ತಪಡಿಸಿದ್ದಾರೆ. ಆದರೆ ವಿಡಿಯೋ ಮಾತ್ರ ಹಲವರಲ್ಲಿ ಅಚ್ಚರಿಗೆ ಕಾರಣವಾಗಿದೆ. ಈ ರೀತಿ ಚಿನ್ನದ ನಾಣ್ಯಗಳು ಸಿಕ್ಕಿದವರೇ ಅದೃಷ್ಟವಂತರು ಎನ್ನುತ್ತಿದ್ದಾರೆ.



Click it and Unblock the Notifications