Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ತಾನೇ ಸಾಕಿದ್ದ ಹಲ್ಲಿ ಕಡಿತದಿಂದ ವ್ಯಕ್ತಿ ಸಾವು..! ಅದು ಅಂತಿಂತ ಹಲ್ಲಿ ಅಲ್ಲ..!
ಕೆಲವರಿಗೆ ಸಾವು ಹೇಗೆ ಬಂದಿರುತ್ತೆ ಅಂದ್ರೆ ಅದನ್ನು ನಾವು ಊಹಿಸಲು ಸಾಧ್ಯವಿಲ್ಲ. ಹಲವು ಬಾರಿ ವಿಚಿತ್ರ ಕಾರಣದಿಂದ ವಿಚಿತ್ರ ಘಟನೆಯಿಂದ ಸಾವಾಗುತ್ತದೆ. ಇತ್ತೀಚಿಗಂತು ಮಾನವರ ಜನ್ಮ ನಶ್ವರ ಎಂಬಂತಾಗಿದೆ. ಏಕೆಂದರೆ ಈಗ ಬದುಕಿದ್ದವರೂ ಕ್ಷಣ ಮಾತ್ರದಲ್ಲಿ ನಮ್ಮಿಂದ ದೂರಾಗಬಹುದು.
ಆದ್ರೆ ಇಲ್ಲೊಬ್ಬನ ಸಾವು ಎಷ್ಟು ವಿಚಿತ್ರ ಮತ್ತು ದುರಂತವಾಗಿದೆ ಅಂದ್ರೆ ನೀವು ಸಹ ನಂಬಲು ಸಾಧ್ಯವಿಲ್ಲ. ಹೌದು ಅಮೆರಿಕದಲ್ಲಿ ವ್ಯಕ್ತಿಯೊಬ್ಬ ತಾನೇ ಸಾಕಿದ್ದ ಹಲ್ಲಿ ಜಾತಿಯ ಸರಿಸೃಪದಿಂದ ಕಡಿತಕ್ಕೊಳಗಾಗಿ ಮೃತಪಟ್ಟಿರುವ ದಾರುಣ ಘಟನೆ ನಡೆದಿದೆ. ಕೇಳಲು ವಿಚಿತ್ರ ಎನಿಸಿದರು ಈ ಘಟನೆ ನಡೆದಿರುವು ಸತ್ಯ.

ಹಲ್ಲಿ ಜಾತಿಗೆ ಸೇರಿರುವ ಗಿಲಾ ಮಾನ್‌ಸ್ಟರ್ ಎಂಬ ಸರಿಸೃಪ ಇದಾಗಿದ್ದು, ಇದು ವಿಷಕಾರಿಯಾಗಿದೆ, ಸುಮಾರು 54 ಸೆಂಟಿ ಮೀಟರ್‌ನಷ್ಟು ಉದ್ದ ಇದು ಬೆಳೆಯುತ್ತದೆ. ನೋಡಲು ಕಪ್ಪು ಬಿಳಿ, ಬೂದು ಬಣ್ಣದಲ್ಲಿ ಕಂಡುಬರುತ್ತದೆ. ಆದರೆ ಇನ್ನು ಅಮೆರಿಕದಲ್ಲಿ ಮನೆಯಲ್ಲಿ ಸಾಕುತ್ತಾರೆ.
ಇಲ್ಲಿನ ಕೊಲೊರಾಡೋದ 34 ವರ್ಷದ ವ್ಯಕ್ತಿ ಎರಡು ಗಿಲಾ ಮಾನ್‌ಸ್ಟರ್ ಹಲ್ಲಿಯನ್ನು ಸಾಕಿಕೊಂಡಿದ್ದ. ಇವು ಮಾಂಸಹಾರಿ ಸರಿಸೃಪಗಳು ಅಂದರೆ ಇವು ಆಹಾರವಾಗಿ ಹುಳು, ಕೀಟಗಳನ್ನು ಮಾತ್ರ ಸೇವಿಸುತ್ತವೆ. ಈ ಫೆಬ್ರವರಿ 12ರಂದು ಆತನಿಗೆ ಒಂದು ಹಲ್ಲಿ ಕಚ್ಚಿತ್ತು, ಸಾಮಾನ್ಯವಾಗಿ ಇವುಗಳ ಕಡಿತದಿಂದ ಸಾವು ಸಂಭವಿಸುವುದಿಲ್ಲ ಎಂಬುದು ತಜ್ಞರ ಅಭಿಪ್ರಾಯವಾಗಿತ್ತು. ಆದರೆ ಆತನ ಆರೋಗ್ಯದಲ್ಲಿ ಏರುಪೇರಾಗಿದ್ದರಿಂದ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಆತ ಮೃತಪಟ್ಟಿದ್ದಾನೆ.
ಗಿಲಾ ಮಾನ್‌ಸ್ಟರ್ ಅಮೆರಿಕ, ಆಫ್ರಿಕಾದಲ್ಲಿ ಕಂಡುಬರುತ್ತದೆ. ಅವು 54 ಸೆಂ ಮೀ ಉದ್ದ ಬೆಳೆಯುತ್ತವೆ. ಹೆಚ್ಚು ಭಾರವಿರುವ ಕಾರಣ ನಿಧಾನವಾಗಿ ಚಲಿಸುತ್ತವೆ. ಜೊತೆಗೆ ತಮ್ಮ ದೇಹಕ್ಕೆ ಅಗತ್ಯಕ್ಕಿಂತ ಹೆಚ್ಚಿನ ಆಹಾರ ಅವು ಸೇವಿಸುತ್ತವೆ. ಅಮೆರಿಕದ ಗಿಲಾ ನದಿಯ ದಡದಲ್ಲಿ ಇವು ಹೆಚ್ಚಾಗಿ ಕಂಡುಬರುವ ಕಾರಣ ಇವುಗಳಿಗೆ ಗಿಲಾ ಮಾನ್‌ಸ್ಟರ್ ಎಂದು ಕರೆಯಲಾಗಿದೆ. ಇವು ತಮ್ಮ ಕೆಳ ದವಡೆಯಲ್ಲಿ ಹಲ್ಲುಗಳ ಹೊಂದಿರುತ್ತವೆ. ಹಾವಿನಂತೆಯೇ ಹಲ್ಲಿನ ಮೂಲಕವೇ ವಿಷವು ದೇಹಕ್ಕೆ ಸೇರಿಕೊಳ್ಳುತ್ತದೆ.
ಹಲ್ಲಿ ಮಾತ್ರವಲ್ಲ ಜೇಡವೂ ಸಾಕಿದ್ದ
ಆದರೆ ಈ ಗಿಲಾ ಮಾನ್‌ಸ್ಟರ್ ಅನ್ನು ಮನೆಯಲ್ಲಿ ಸಾಕುವುದು ಕಾನೂನು ಬಾಹಿರವಂತೆ ಆದರೂ ಆತ ಒಂದಲ್ಲಾ ಎರಡು ಹಲ್ಲಿಗಳ ಸಾಕಿಕೊಂಡಿದ್ದ. ಆದರೆ ಪರವಾನಗಿ ಇದ್ದರೆ ಮಾತ್ರ ಇದನ್ನು ಸಾಕಲು ಅವಕಾಶವಿದೆ. ಈ ಹಲ್ಲಿಯ ಜೊತೆ ಆತ ಟ್ಯಾರಂಟುಲಾ ಎಂಬ ಜೇಡವನ್ನು ಸಹ ಸಾಕಿದ್ದ ಎಂದು ವರದಿಯಾಗಿದೆ.
ಈ ಸರೀಸೃಪಗಳನ್ನು ಬೇರೆ ರಾಜ್ಯದಲ್ಲಿರುವ ವನ್ಯಜೀವಿ ಪುನರ್ವಸತಿ ಕೇಂದ್ರಕ್ಕೆ ಹಸ್ತಾಂತರಿಸಲಾಗಿದೆ. ಆದರೆ ಆತನಿಗೆ ಕಚ್ಚಿದ ಹಲ್ಲಿಯನ್ನು ಮೊದಲು ಪ್ರಯೋಗಾಲಯಕ್ಕೆ ಸಾಗಿಸಲಾಗಿದ್ದು, ಪರೀಕ್ಷೆ ನಡೆದಿದೆ. ಅಲ್ಲಿ, ಅದರ ವಿಷವನ್ನು ಹೊರತೆಗೆಯಲಾಗುತ್ತದೆ ಮತ್ತು ಅದರ ಕಡಿತವು ಅದರ ಮಾಲೀಕರ ಸಾವಿಗೆ ಕಾರಣವಾಯಿತು ಎಂಬುದರ ಕುರಿತು ಇನ್ನಷ್ಟು ತಿಳಿದುಕೊಳ್ಳಲು ಅಧ್ಯಯನ ಮಾಡಲಾಗುತ್ತದೆ. ಆದರೆ ಈ ಗಿಲಾ ಮಾನ್‌ಸ್ಟರ್ ಕಡಿತದಿಂದ 1930ರಲ್ಲಿ ಸಾವಾಗಿದ್ದು ಬಿಟ್ಟರೆ ಈವರೆಗೆ ಯಾವ ಸಾವು ನೋವಿನ ವರದಿಯೂ ಆಗಿರಲಿಲ್ಲ. ಹೀಗಾಗಿ ಇದೊಂದು ಅಪರೂಪದ ಪ್ರಕರಣವಾಗಿದೆ.
ಇವುಗಳ ವಿಷವನ್ನು ಔಷಧಿಯಲ್ಲಿ ಬಳಸಲಾಗುತ್ತದೆ ಎಂಬ ಕಾರಣಕ್ಕೆ ಕಾನೂನು ಬಾಹಿರವಾಗಿ ಇವುಗಳ ಸಾಗಿಸುವ ಜಾಲವೂ ಹರಡಿಕೊಂಡಿದೆ. ಆದರೆ ಅವುಗಳ ವಿಷ ಯಾವ ಔಷಧಿಗೆ ಬಳಸಲಾಗುತ್ತದೆ ಎಂಬುದು ವೈಜ್ಞಾನಿಕವಾಗಿ ಎಲ್ಲಿಯೂ ದಾಖಲೆಗಳಿಲ್ಲ. ಕೆಲವು ಕಾನೂನು ಬಾಹಿರ ಡ್ರಗ್ ಔಷಧಗಳಲ್ಲಿ ಇದರ ವಿಷ ಬಳಕೆಯಾಗುತ್ತದೆ ಎನ್ನಲಾಗಿತ್ತಾದರೂ ಅಂತಿಮವಾಗಿ ಅದಕ್ಕೂ ಯಾವುದೇ ಪುರಾವೆ ಲಭ್ಯವಾಗಿಲ್ಲ.



Click it and Unblock the Notifications