Latest Updates
-
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ!
12 ಸಾವಿರ ಮಂದಿ ಅನ್ಯಗ್ರಹಕ್ಕೆ..! 2025ರಲ್ಲಿ ನಡೆಯಲಿದೆಯಂತೆ ಈ 4 ಮಹಾದುರಂತ.!
ಭೂಮಿ ಮೇಲೆ ನಡೆಯುವ ಭವಿಷ್ಯದ ಘಟನೆಗಳನ್ನು ಹಲವಾರು ಮಂದಿ ಊಹಿಸಿದ್ದಾರೆ. ಅದರಲ್ಲೂ ನಾಸ್ಟ್ರಾಡಾಮಸ್, ಬಾಬಾ ವಂಗಾ, ಐನ್‌ಸ್ಟೈನ್ ರೀತಿ ಹಲವರು ಭವಿಷ್ಯ ನುಡಿಯುವುದು ನಾವು ನೋಡಬಹುದು. ಅವರೆಲ್ಲರು ಹಲವು ವರ್ಷಗಳ ಹಿಂದೆಯೇ ಈ ಕುರಿತು ಹೇಳಿಕೊಂಡಿದ್ದಾರೆ. ಭೂಮಿ ಮೇಲೆ ನಡೆಯಲಿರಯವ ಅಪರೂಪದ ಘಟನೆಗಳಿಂದ ಹಿಡಿದು ಬಹುದೊಡ್ಡ ದುರಂತಗಳ ಕುರಿತಂತೆಯೂ ವಿವರಿಸಿದ್ದಾರೆ.
ಅದರಲ್ಲಿ ಕೆಲವೊಂದು ನಿಜವಾಗುತ್ತಿವೆ. ಹಾಗೆ ಮತ್ತೆ ಕೆಲವು ವಿಶ್ಲೇಷಣೆಗೆ ಒಳಪಡುತ್ತಲೇ ಇವೆ. ಈ ಭವಿಷ್ಯವಾಣಿಗಳ ಕೇಳಿ ಮಂದಿ ಅಚ್ಚರಿ ಹಾಗೂ ಶಾಕ್‌ಗೂ ಒಳಗಾಗುತ್ತಾರೆ. ಏಕೆಂದರೆ ಈ ಎಲ್ಲಾ ಭವಿಷ್ಯ ವಾಣಿಗಳು ದುರಂತಗಳನ್ನೇ ವಿವರಿಸುತ್ತವೆ. ಈಗ ಇಲ್ಲೊಬ್ಬ ನುಡಿದಿರುವ ಭವಿಷ್ಯ ನಡುಕ ಹುಟ್ಟಿಸುವಂತಿದೆ. ಆತ ಹೇಳಿರುವ ಒಂದೊಂದು ಭವಿಷ್ಯ ಕೂಡ ಆಘಾತ ಹುಟ್ಟಿಸುವಂತಿದೆ.

ಆತ ತಾನು ಭವಿಷ್ಯಕ್ಕೆ ಟೈಮ್ ಟ್ರಾವಲಿಂಗ್ ಮಾಡಿರುವುದಾಗಿ ಹೇಳಿಕೊಂಡಿದ್ದು, 2025ರಲ್ಲಿ ಏನೆಲ್ಲಾ ಘಟನೆಗಳು ನಡೆಯಲಿವೆ ಎಂಬುದನ್ನು ವಿವರಿಸಿದ್ದಾನೆ. ಸ್ವಯಂ ಘೋಷಿತ ಟೈಮ್ ಟ್ರಾವಲರ್ ಎಲ್ವಿಸ್ ಥಾಂಪ್ಸನ್ ತನ್ನ ಇನ್ಸ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ವಿಡಿಯೋ ಎಲ್ಲರ ಗಮನ ಸೆಳೆದಿರುವ ಜೊತೆಗೆ ಆಘಾತ ಹುಟ್ಟಿಸಿದೆ.
ಆತ ಹಂಚಿಕೊಂಡಿರುವ ವಿಡಿಯೋ ಪ್ರಕಾರ ನೋಡುವುದಾದರೆ ಏಪ್ರಿಲ್ 6ರಿಂದ ಈ ಭೂಮಿ ಮೇಲೆ ಹಲವು ರೀತಿಯ ದುರಂತಗಳು ನಡೆಯಲಿವೆ ಎಂದು ಆತ ಹೇಳಿಕೊಂಡಿದ್ದಾನೆ. ಏಪ್ರಿಲ್ 6ರಂದು ಗಂಟೆಗೆ 1046 ಕಿ.ಮೀ ವೇಗವಾಗಿ ಬೀಸುವ ಗಾಳಿಯೊಂದಿಗೆ ಸುಂಟರಗಾಳಿಯೊಂದು ಅಮೆರಿಕವನ್ನು ಅಪ್ಪಳಿಸಲಿದೆ ಎಂದಿದ್ದಾನೆ. ಒಕ್ಲಹೋಮದಲ್ಲಿ ಈ ಚಂಡಮಾರುತ ದುರಂತ ಸೃಷ್ಟಿಸಲಿದೆ ಎಂದಿದ್ದಾನೆ.
ಹಾಗೆ ಎರಡನೇ ದುರಂತವು ಮೇ 27ರಂದು ನಡೆಯಲಿದೆಯಂತೆ. ಅಮೆರಿಕದ ಅಂತರ್ಯುದ್ಧ ಸ್ಫೋಟಗೊಳ್ಳಲಿದೆ. ಇದು ಟೆಕ್ಸಾಸ್ ಪ್ರತ್ಯೇಕ ದೇಶವಾಗುತ್ತದೆ. ಪರಮಾಣು ಪರೀಕ್ಷೆಗೂ ಇದು ಕಾರಣವಾಗುತ್ತದೆ. ಮುಂದೆ ಇದು ಜಾಗತಿಕ ಸಂಘರ್ಷಕ್ಕೆ ಕಾರಣವಾಗಲಿದೆ ಎಂದು ಆತ ಹೇಳಿಕೊಂಡಿದ್ದಾನೆ. ಈ ಯುದ್ಧದಲ್ಲಿ ಹಲವು ರಾಷ್ಟ್ರಗಳು ಭಾಗಿಯಾಗುತ್ತವೆ ಎಂದಿದ್ದಾನೆ.
ಹಾಗೆ ಸೆಪ್ಟೆಂಬರ್ 1ರಂದು ಅನ್ಯಗ್ರಹ ಜೀವಿಯ ಎದುರು ಮಾನವ ನಿಲ್ಲಬೇಕಾಗುತ್ತದೆ ಎಂದಿದ್ದಾನೆ. ಚಾಂಪಿಯನ್ ಎಂಬ ಅನ್ಯಗ್ರಹ ಜೀವಿಯ ವಾಹನವೊಂದು ಭೂಮಿಗೆ ಇಳಿಯಲಿದೆಯಂತೆ. ಈ ವಾಹನದಲ್ಲಿ 12 ಸಾವಿರ ಜನರನ್ನು ಬಲವಂತವಾಗಿ ಅನ್ಯಗ್ರಹಕ್ಕೆ ಹೊತ್ತೊಯ್ಯಲಿದೆಯಂತೆ ಎಂದಿದ್ದಾನೆ. ಹಾಗೆ ಇದೇ ಸೆಪ್ಟೆಂಬರ್ 19ರಂದು ಅಮೆರಿಕದ ಪೂರ್ವ ಕರಾವಳಿಯಲ್ಲಿ ಭಾರಿ ಚಂಡಮಾರುತವೊಂದು ಅಪ್ಪಳಿಸುತ್ತದೆ ಎಂದು ಥಾಂಪ್ಸನ್ ಭವಿಷ್ಯ ನುಡಿದಿದ್ದಾನೆ.
ಹಾಗೆ ನವೆಂಬರ್ 3ರಂದು ನೀಲಿ ತಿಮಿಂಗಿಲಕ್ಕಿಂತ 6 ಪಟ್ಟು ದೊಡ್ಡದಾದ ಸೆರೆನ್ ಕ್ರೌನ್ ಎಂಬ ಹೆಸರಿನ ಬೃಹತ್ ಸಮುದ್ರ ಜೀವಿ ಪೆಸಿಫಿಕ್ ಮಹಾಸಾಗರದಲ್ಲಿ ಪತ್ತೆಯಾಗುತ್ತದೆ ಎಂದಿದ್ದಾನೆ.
ಥಾಂಪ್ಸನ್ ಅವರ ವೀಡಿಯೊ ವೇಗವಾಗಿ ವೈರಲ್ ಆಗಿದ್ದು 20 ಮಿಲಿಯನ್‌ಗಿಂತಲೂ ಹೆಚ್ಚು ವೀಕ್ಷಣೆ ಕಂಡಿದೆ. ಆದ್ರೆ ಈ ಎಲ್ಲಾ ಘಟನೆಗಳು ನಡೆಯುವ ಯಾವುದೇ ಖಾತರಿ ಇಲ್ಲ. ಹಲವರು ಈ ಕುರಿತ ವಿಡಿಯೋಗೆ ಕಮೆಂಟ್‌ಗಳ ಮಾಡಿದ್ದು, ಈ ಎಲ್ಲಾ ಭವಿಷ್ಯಗಳು ಸುಳ್ಳು ಎಂದು ವಾದಿಸುತ್ತಿದ್ದಾರೆ. ಇದ್ಯವುದು ನಡೆಯುವುದಿಲ್ಲ ಎಂಬುದು ಹಲವರ ವಾದವಾಗಿದೆ.



Click it and Unblock the Notifications
