Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಬಾಹ್ಯಾಕಾಶದಲ್ಲಿದ್ದೇನೆ ಆಮ್ಲಜನಕ ಬೇಕೆಂದು ವೃದ್ಧೆಗೆ 5.5 ಲಕ್ಷ ವಂಚಿಸಿದ ವ್ಯಕ್ತಿ!!
ಜನರನ್ನು ಈಗ ವಂಚನೆ ಎಸಗುವವರು ಹೇಗೆಲ್ಲಾ ಮೋಸ ಮಾಡುತ್ತಾರೆ ಎಂಬುದನ್ನು ನೀವು ಕೂಡ ತಿಳಿದಿರಬಹುದು. ಅದ್ರಲ್ಲೂ ಹಣ ಕೀಳಲೆಂದು ಹಲವು ರೀತಿಯಲ್ಲಿ ಗಾಳ ಹಾಕುವುದು ನೋಡಬಹುದು. ಸಾಮಾನ್ಯವಾಗಿ ಡಿಜಿಟಲ್ ಸೈಬರ್ ಕ್ರೈಮ್‌ನಲ್ಲಿ ನೀವು ಆಪ್, ಲಿಂಕ್, ಫೇಕ್ ಜಾಬ್ ಲಿಂಕ್, ಒಟಿಪಿ, ಕೆವೈಸಿ, ಆದಾರ್ ಅಪ್‌ಡೇಟ್ ಇಂತಹ ಹಲವು ರೀತಿಯಲ್ಲಿ ವಂಚಕರು ಹಣ ಕೀಳಲು ಮುಂದಾಗೋದು ನೋಡಬಹುದು.
ಆದ್ರೆ ಇಲ್ಲೊಂದು ಪ್ರಕರಣ ಮಾತ್ರ ನೀವು ನಂಬಲು ಕೂಡ ಸಾಧ್ಯವಿಲ್ಲ. ಇಲ್ಲೊಬ್ಬ ತಾನು ಗಗನಯಾತ್ರಿ ಎಂದು ನಂಬಿಸಿ ಆಮ್ಲಜನಕ ಖರೀದಿಸಲು ಹಣವಿಲ್ಲ ಎಂದು ವೃದ್ಧೆಯೊಬ್ಬರಿಂದ ಬರೋಬ್ಬರಿ 5.5 ಲಕ್ಷ ರೂಪಾಯಿ ವಂಚಿಸಿರುವ ಘಟನೆ ವರದಿಯಾಗಿದೆ. ಈ ಪ್ರಕರಣ ನಿಮಗೆ ಅಚ್ಚರಿ ತರಿಸಬಹುದು. ಆದ್ರೆ ಈ ರೀತಿಯಾಗಿಯೂ ವಂಚಿಸಿರುವುದು ವರದಿಯಾಗಿದೆ.
ಜಪಾನಿನಲ್ಲಿ ಒಂಟಿಯಾಗಿ ನೆಲೆಸಿದ್ದ 80 ವರ್ಷದ ವೃದ್ಧೆಯೊಬ್ಬರಿಗೆ ಆತ ಆನ್‌ಲೈನ್ ಮೂಲಕ ಪರಿಚಯವಾಗಿದ್ದ. ತನ್ನನ್ನು ಗಗನಯಾತ್ರಿ ಎಂದು ಆತ ಪರಿಚಯ ಮಾಡಿಕೊಂಡಿದ್ದ. ಈಗ ಬಾಹ್ಯಾಕಾಶ ನೌಕೆಯಲ್ಲಿ ಬಾಹ್ಯಾಕಾಶದಲ್ಲಿದ್ದೇನೆ ಮತ್ತು ಅಪಾಯದಲ್ಲಿದ್ದೇನೆ ಎಂದು ಹಣ ಎಗರಿಸಿದ್ದಾನೆ ಎಂದು ವರದಿಯಾಗಿದೆ.

ಆತ ಆರಂಭದಲ್ಲಿ ಆಕೆಯ ನಂಬಿಕೆ ಗಳಿಸಲು ಒಂದಿಷ್ಟು ಫೋಟೋಗಳ ಕಳುಹಿಸಿದ್ದನಂತೆ. ಹಾಗೆ ಬಹಳ ಪ್ರೀತಿಯಿಂದ ಮಾತನಾಡುತ್ತಿದ್ದನಂತೆ. ಬಾಹ್ಯಾಕಾಶದಿಂದ ಬಂದೊಡನೆ ಆಕೆಯನ್ನು ಭೇಟಿಯಾಗುವುದಾಗಿ ಹೇಳುತ್ತಿದ್ದನಂತೆ. ಆದ್ರೆ ಸರಿಯಾದ ಸಮಯಕ್ಕೆ ಕಾಯುತ್ತಿದ್ದ ಆತ 5.5 ಲಕ್ಷವನ್ನು ತನ್ನ ಖಾತೆಗೆ ಹಾಕಿಸಿಕೊಂಡಿದ್ದಾನೆ.
ಆತ ತಾನು ಗಗನಯಾತ್ರೆ ಮಾಡುತ್ತಿರುವುದಾಗಿ ನಂಬಿಸಿದ್ದಾನೆ. ಹಾಗೆ ಅಲ್ಲಿ ಆಮ್ಲಜನಕ ಖಾಲಿಯಾಗುತ್ತಿದ್ದು, ಖರೀದಿಸಲು ತುರ್ತು ಹಣ ಬೇಕಾಗಿದೆ. ಇಲ್ಲದಿದ್ದರೆ ನಾನು ಅಪಾಯದಲ್ಲಿ ಸಿಲುಕಲಿದ್ದೇನೆ ಎಂಬುದಾಗಿ ಹೇಳಿಕೊಂಡಿದ್ದಾನೆ. ಇದನ್ನು ನಂಬಿದ ವೃದ್ಧೆ ಆತನ ಖಾತೆಗೆ 5.5 ಲಕ್ಷ ರೂಪಾಯಿ ಸಂದಾಯ ಮಾಡಿದ್ದಾರೆ. ಆದ್ರೆ ಅನಂತರ ಆತನ ಖಾತೆಯಾಗಲಿ ಆತನ ಸುಳಿವಿಲ್ಲದ ಕಾರಣ ವೃದ್ಧೆಗೆ ವಂಚನೆಗೊಳಗಾಗಿರುವುದು ತಿಳಿದುಬಂದಿದೆ.
ಸದ್ಯ ಈ ವಂಚಕರು ಹಿರಿಯನ್ನೇ ಟಾರ್ಗೆಟ್ ಮಾಡುತ್ತಿರುವುದು ವರದಿಯಾಗುತ್ತಿದೆ, ಅದ್ರಲ್ಲೂ ಜಪಾನ್‌ನಲ್ಲಿ ಈ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿದೆ. ಅಲ್ಲಿ 80 ವರ್ಷ ಮೇಲ್ಪಟ್ಟವರ ಸಂಖ್ಯೆ ಅಧಿಕವಿದ್ದು, ಅವರನ್ನೇ ಟಾರ್ಗೆಟ್ ಮಾಡುತ್ತಿರುವುದು ಕೂಡ ಹೆಚ್ಚಾಗಿದೆ. ಜಪಾನ್‌ನ ರಾಷ್ಟ್ರೀಯ ಪೊಲೀಸ್ ಸಂಸ್ಥೆಯ ಪ್ರಕಾರ 2024 ರ ಮೊದಲ 11 ತಿಂಗಳುಗಳಲ್ಲಿ 3,326 ಹನಿಟ್ರ್ಯಾಪ್ ಪ್ರಕರಣಗಳು ವರದಿಯಾಗಿವೆ. 2023 ರಲ್ಲಿ ಅದೇ ಅವಧಿಗೆ ಹೋಲಿಸಿದರೆ ಎರಡು ಪಟ್ಟು ಹೆಚ್ಚು. 2024ರಲ್ಲಿ ಒಟ್ಟು ಜಪಾನ್ ಹಣದಲ್ಲಿ ¥34.6 ಬಿಲಿಯನ್ ಮೊತ್ತ ವಂಚಕರ ಪಾಲಾಗಿದೆ ಎಂದು ತಿಳಿದುಬಂದಿದೆ.
ಈ ಪ್ರಕರಣವು ಜಾಗತಿಕವಾಗಿತೂ ಏರಿಕೆಯಾಗುತ್ತಿದೆ. ಇಂಗ್ಲೆಂಡ್‌ನಲ್ಲಿ 10 ಮಂದಿ ವಯಸ್ಕರಲ್ಲಿ ಒಬ್ಬರು ಈ ವಂಚನೆ ಪ್ರಕರಣದಲ್ಲಿ ಸಿಲುಕಿದ್ದಾರೆ ಎಂದು ತಿಳಿದುಬಂದಿದೆ. 61 ವರ್ಷಕ್ಕಿಂತ ಮೇಲ್ಪಟ್ಟ ಹೆಚ್ಚಿನ ವಯಸ್ಸಿನ ಮಂದಿ ಕಳೆದ ವರ್ಷ ಸರಾಸರಿ £19,000 ಕಳೆದುಕೊಂಡಿದ್ದಾರೆ. ಯುನೈಟೆಡ್ ಸ್ಟೇಟ್ಸ್‌ನಲ್ಲಿ 2023 ರಲ್ಲಿ 64,000 ಕ್ಕೂ ಹೆಚ್ಚು ಜನರು $1 ಬಿಲಿಯನ್‌ಗಿಂತಲೂ ಹೆಚ್ಚು ಹಣ ಕಳದುಕೊಂಡಿದ್ದಾರೆ ಎಂದು ವರದಿಯಾಗಿದೆ. ಇದು ನಾಲ್ಕು ವರ್ಷದಲ್ಲೇ ಅತ್ಯಧಿಕ ಸಂಖ್ಯೆ ಎಂದು ಕೂಡ ವರದಿಯಾಗಿದೆ.
ಸದ್ಯ ಈ ಜಪಾನ್ ಪ್ರಕರಣ ಈಗ ಎಲ್ಲ ಹುಬ್ಬೇರುವಂತೆ ಮಾಡಿ. ಗಗನಯಾತ್ರಿ ಎಂದು ಸುಳ್ಳು ಹೇಳಿ ಆಮ್ಲಜನಕ ಖರೀದಿಗಾಗಿ ವೃದ್ಧೆ ಬಳಿಕ ಲಕ್ಷ ಲಕ್ಷ ವಸೂಲಿ ಮಾಡಿದ್ದ ಸುದ್ದಿ ಈಗ ಎಲ್ಲಾ ಕಡೆ ಹರಡುತ್ತಿದೆ. ಹಾಗೆ ಇಂತಹ ಪ್ರಕರಣಗಳು ಈಗ ಒಂದೊಂದಾಗಿಯೇ ಹೊರಬೀಳುತ್ತಿದೆ. ಇನ್ನು ವಂಚಿಸಿದ ವ್ಯಕ್ತಿಯ ಟ್ರ್ಯಾಕಿಂಗ್ ಮುಂದುವರೆದಿದೆ ಎಂದು ತಿಳಿದುಬಂದಿದೆ.



Click it and Unblock the Notifications