Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
2028ಕ್ಕೆ ಮತ್ತೆ ಭೂಮಿಗೆ ಬರಲಿವೆ ಮ್ಯಾಮೋಥ್-ಟ್ಯಾಸ್ಮೆನಿಯನ್ ಹುಲಿ..! ಹೇಗೆ ಗೊತ್ತಾ?
ನಮ್ಮ ಭೂಮಿಯ ಮೇಲೆ ಡೈನೋಸಾರ್‌ಗಳ ನಂತರ ಬದುಕಿದ್ದ ಅತೀ ದೊಡ್ಡ ಜೀವಿಗಳೆಂದರೆ ಮ್ಯಾಮೋಥ್‌ಗಳು ಆನೆಯಂತಹ ದೊಡ್ಡ ಗಾತ್ರದ ಈ ಜೀವಿಗಳು ದೊಡ್ಡ ಕೋರೆಗಳ ಹೊಂದಿದ್ದ ಪ್ರಾಣಿಗಳು ಕನ್ನಡದಲ್ಲಿ ಇವನ್ನು ಮಹಗಾಜಗಳು ಎಂದು ಕರೆಯಬಹುದು. ಇವುಗಳ ಕೋರೆ ಎಷ್ಟು ದೊಡ್ಡದಾಗಿರುತ್ತೆ ಅಂದ್ರೆ ಸೊಂಡಿಲಿಗಿಂತ ಉದ್ದವಾಗಿರುತ್ತದೆ. ಆದ್ರೆ ಇವು ಕೂಡ ಡೈನೋಸಾರ್‌ಗಳಂತೆಯೇ ಅಳಿವು ಹೋಗಿವೆ. ಆದರೆ ಇವು ಭೂಮಿ ಮೇಲೆ ಬದುಕಿದ್ದವು ಎಂಬುದಕ್ಕೆ ಸಾಕಷ್ಟು ಪುರಾವೆಗಳಂತು ಇವೆ.
ಈಗ ಅಳಿವಿನಂಚಿನಲ್ಲಿರುವ ಹಾಗೂ ಸಂಪೂರ್ಣವಾಗಿ ಅಳಿವು ಹೋಗಿರುವ ಪ್ರಾಣಿಗಳನ್ನು ಮತ್ತೆ ಭೂಮಿ ಮೇಲೆ ತರುವಂತಹ ಪ್ರಯತ್ನಗಳು ನಡೆಯುತ್ತಲೇ ಇದೆ. ಅದರಲ್ಲೀ ಒಂದಿಷ್ಟು ಪ್ರಾಣಿಗಳ ಡಿಎನ್‌ಎಗಳು, ಮೊಟ್ಟೆಗಳ ಸಂರಕ್ಷಿಸಿಡುವ ಪ್ರಯತ್ನಗಳು ನಡೆದಿದ್ದರೂ ಯಾವುದೇ ಫಲವಿಲ್ಲದ ಈ ಕೆಲಸಕ್ಕೆ ಫಲಿತಾಂಶ ಸಿಗುವ ಯಾವುದೇ ಲಕ್ಷಣ ಕಂಡುಬಂದಿರಲಿಲ್ಲ.

ನಾವು ಪ್ರಸಿದ್ಧ ಜುರಾಸಿಕ್ ಪಾರ್ಕ್ ಸಿನಿಮಾದಲ್ಲಿ ನೋಡಿದ್ದೆವು ಅಳಿವು ಹೋಗಿದ್ದ ಡೈನೋಸಾರ್‌ಗಳನ್ನು ಲ್ಯಾಬ್‌ನಲ್ಲಿ ಮತ್ತೆ ಜೀವಂತವಾಗಿ ಬರುವಂತೆ ಮಾಡುವುದು, ಇಂತಹ ಕಾರ್ಯ ಈಗ ನಿಜವಾಗಿಯೂ ನಡೆಯುತ್ತಿದೆ. ಅದು ಕೂಡ ಮ್ಯಾಮೋಥ್‌ಗಳನ್ನು ಮತ್ತೆ ಭೂಮಿಯ ಮೇಲೆ ತರುವ ಪ್ರಯತ್ನ ನಡೆದಿದೆ.
ಹೌದು ಕಂಪನಿಯೊಂದು ಈಗ ಮ್ಯಾಮೋಥ್‌ಗಳನ್ನು ಮತ್ತೆ ಭೂಮಿಗೆ ಪರಿಚಯಿಸಲು ಮುಂದಾಗಿದೆ. ಬರಿ ಮ್ಯಾಮೋಥ್ ಮಾತ್ರವಲ್ಲ ಈ ಕಂಪನಿ ಅಳಿದು ಹೋಗಿರುವ ಡೋಡೊ ಎಂಬ ಪಕ್ಷಿ ಹಾಗೂ ಟ್ಯಾಸ್ಮೆನಿಯನ್ ಹುಲಿ (ನಾಯಿಯಂತೆ ಕಾಣುತ್ತಿದ್ದ ಹುಲಿ) ಅನ್ನು ಕೂಡ ಮತ್ತೆ ಭೂಮಿ ಮೇಲೆ ತರಲು ಮುಂದಾಗಿದೆ.
ಪ್ಯಾರಿಸ್ ಹಿಲ್ಟನ್ ಮತ್ತು ಕ್ರಿಸ್ ಹೆಮ್ಸ್‌ವರ್ತ್ ಬೆಂಬಲಿತ ಕಂಪನಿಯು ಅಳಿವಿನಂಚಿನಲ್ಲಿರುವ ಹಿಮಯುಗದ ಪ್ರಾಣಿಯನ್ನ ಆದಷ್ಟು ಬೇಗ ಭೂಮಿ ಮೇಲೆ ತರಲಿದೆಯಂತೆ. ಈ ಕಂಪನಿ ಅಳಿವಿನಂಚಿನ ಪ್ರಾಣಿಗಳನ್ನು ಉಳಿಸುವ ಮೊದಲ ಕಂಪನಿ ಎಂದು ಹೇಳಿಕೊಂಡಿದೆ. ಸಾವಿರಾರು ವರ್ಷಗಳಿಂದ ಅಳಿವಿನಂಚಿನಲ್ಲಿರುವ ಪ್ರಾಣಿಗಳ ಕೋರ್ ಜೀನ್‌ಗಳನ್ನು ಪುನರುಜ್ಜೀವನಗೊಳಿಸುವ ವಿಧಾನವನ್ನು ಅಭಿವೃದ್ಧಿಪಡಿಸುತ್ತಿದೆ ಎಂದು ತಿಳಿದುಬಂದಿದೆ.
ಕಂಪನಿಯ ಸಿಇಒ, ಬೆನ್ ಲ್ಯಾಮ್ ಹೇಳಿರುವಂತೆ, ನಾವು 2028ರಲ್ಲಿ ನಾವು ಭೂಮಿ ಮೇಲೆ ಮತ್ತೆ ಮ್ಯಾಮೋಥ್ ಅನ್ನು ತರುವ ಗುರಿ ಹೊಂದಿದ್ದೇವೆ. ಇದರ ಕುರಿತು ನಾವು ಉತ್ತಮ ಪ್ರಗತಿಯನ್ನು ಕಂಡಿದ್ದೇವೆ ಎಂದಿದ್ದಾರೆ.
ಮ್ಯಾಮೋಥ್ ಮಾಯವಾಗಿದ್ದು ಹೇಗೆ?
ಮ್ಯಾಮೋಥ್‌ಗಳೆಂಬ ದೊಡ್ಡ ಗಾತ್ರದ ಆನೆಗಳು ಇಡೀ ಭೂಮಿಯಲ್ಲಿ ಆವರಿಸಿಕೊಂಡಿದ್ದವು. ಸುಮಾರು 10 ಸಾವಿರ ವರ್ಷಗಳ ಹಿಂದೆ ಈ ಬೃಹತ ಆನೆಗಳಿದ್ದವು. ಆದರೆ ಭೂಮಿಯಲ್ಲಿ ಹವಾಮಾನ ಬದಲಾವಣೆ ಹಾಗೂ ಮಾನವರ ವಿಪರೀತ ಬೇಟೆಯ ಕಾರಣದಿಂದಾಗಿ ಭೂಮಿಯಿಂದ ಮರೆಯಾಗಿದೆ.
10 ಸಾವಿರ ವರ್ಷದ ಹಿಂದೆ ಮಾನವ ಆಗತಾನೆ ಭೂಮಿಯಲ್ಲಿ ಬೇರೂರಿ ತನ್ನ ನೆಲೆ ಕಂಡುಕೊಳ್ಳುತ್ತಿದ್ದ. ಈ ವೇಳೆ ಆಹಾರಕ್ಕಾಗಿ ಇವುಗಳ ಬೇಟೆಯಾಡಿದ್ದಾನೆ. ಹಾಗೆ ಮ್ಯಾಮೋಥ್‌ಗಳ ಚರ್ಮ ದಪ್ಪ ಹಾಗೂ ದೊಡ್ಡದಾಗಿರುತ್ತಿದ್ದ ಕಾರಣ ಮಾನವ ಚಳಿ, ಗಾಳಿ, ಮಳೆಯಿಂದ ರಕ್ಷಣೆ ಪಡೆಯಲು ಇವುಗಳ ಬೇಟೆಯಾಡಿ ಅವುಗಳ ಚರ್ಮ ಬಳಸುತ್ತಿದ್ದ.
ಇನ್ನೊಂದು ಕಡೆ ಡೋಡೋ ಪಕ್ಷಿ 1600 ದಶಕದಲ್ಲಿ ಮರೆಯಾಯಿತು. ಇದು ಕೂಡ ಆಹಾರದ ಕಾರಣದಿಂದಾಗಿ ಬೇಟೆಯಾಡಿ ಕೊಲ್ಲಲ್ಪಟ್ಟ ಕಾರಣ ಭೂಮಿಯಿಂದ ನಾಶವಾಯಿತು. ಇದಾದ ಬಳಿಕ ಟ್ಯಾಸ್ಮೆನಿಯನ್ ಹುಲಿ 1980ರ ಬಳಿಕ ಮರೆಯಾಯಿತು. ಆದರೆ ನಾಯಿಯನ್ನು ಹೋಲುವ ಈ ಹುಲಿಯನ್ನು ಇತ್ತಿಚಿಗೆ ನೋಡಿರುವುದಾಗಿಯೂ ವರದಿಯಾಗಿತ್ತು, ಆದರೆ ಯಾವುದೇ ದಾಖಲೆಗಳು ಸಿಗಲಿಲ್ಲ.
ಸದ್ಯ ಕಂಪನಿ ಹೇಳಿಕೊಂಡಂತೆ ನಡೆದರೆ 2028ರ ವೇಳೆಗೆ ಭೂಮಿ ಮೇಲೆ ಬೃಹತ್ ಆನೆಗಳ ನೋಡಲು ಸಾಧ್ಯವಾಗಬಹುದು.



Click it and Unblock the Notifications
