Latest Updates
-
ಕಾರ್ಗಿಲ್ ವಿಜಯ್ ದಿವಸ್: ದೇಶಭಕ್ತಿಯ ನಡಿಗೆಯಲ್ಲಿ ಪಾಲ್ಗೊಳ್ಳುವ ಮುನ್ನ ಈ ಆರೋಗ್ಯ ಟಿಪ್ಸ್ ಮರೆಯದಿರಿ -
ದೇವಶಯನಿ ಏಕಾದಶಿ: ದಂಪತಿಗಳ ಬಾಂಧವ್ಯ ಹೆಚ್ಚಿಸಲು ಈ ಉಪವಾಸದ ಟಿಪ್ಸ್ ಮಿಸ್ ಮಾಡ್ಬೇಡಿ! -
ಮಳೆಗಾಲದ ತೇವಾಂಶ: ನಿಮ್ಮ ದುಬಾರಿ ಸೀರೆ ಮತ್ತು ಶೂಗಳನ್ನು ಬೂಸ್ಟ್ನಿಂದ ರಕ್ಷಿಸಲು ಈ 15 ನಿಮಿಷದ ಟಿಪ್ಸ್ ಸಾಕು! -
ಅಹಮದಾಬಾದ್ ಮಳೆ: ಪ್ರವಾಹದ ಸಮಯದಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ಈ ಸರಳ ಮಾರ್ಗಸೂಚಿಗಳನ್ನು ಅನುಸರಿಸಿ -
ಕಾಮನ್ವೆಲ್ತ್ ಗೇಮ್ಸ್ 2026: 3ನೇ ದಿನ ಭಾರತದ ಆಟಗಾರರ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ! -
ಮಳೆಗಾಲದ ಜಾರುವ ರಸ್ತೆಗಳಲ್ಲಿ ನಡೆಯುವಾಗ ಎಚ್ಚರ: ಸುರಕ್ಷಿತವಾಗಿರಲು 8 ನಿಮಿಷಗಳ ಈ ವ್ಯಾಯಾಮ ಮಾಡಿ! -
ಐಟಿಆರ್ ಸಲ್ಲಿಕೆ ಗಡುವು ಹತ್ತಿರ: ದಂಪತಿಗಳು 45 ನಿಮಿಷದಲ್ಲಿ ಟ್ಯಾಕ್ಸ್ ಫೈಲ್ ಮಾಡುವುದು ಹೇಗೆ? -
ಪ್ರವಾಹದ ನೀರು ಮನೆಯೊಳಗೆ ನುಗ್ಗಿದೆಯೇ? ಆಸ್ತಿ ಮತ್ತು ಆರೋಗ್ಯ ರಕ್ಷಣೆಗೆ ತಕ್ಷಣ ಮಾಡಬೇಕಾದ ಕೆಲಸಗಳಿವು -
ಬೆಂಗಳೂರಿನಲ್ಲಿ ಮೊಟ್ಟೆ ಬೆಲೆ ಏರಿಕೆ: ಬಜೆಟ್ ಉಳಿಸಲು ಇಲ್ಲಿದೆ ಬೆಸ್ಟ್ ಪ್ರೋಟೀನ್ ಆಯ್ಕೆಗಳು! -
ಇನ್ಸ್ಟಾಗ್ರಾಮ್ ಡೌನ್: ಆತಂಕ ಬೇಡ, ನಿಮ್ಮ ಅಕೌಂಟ್ ಸುರಕ್ಷಿತವಾಗಿಡಲು ಈ ಟಿಪ್ಸ್ ಫಾಲೋ ಮಾಡಿ
ಗಂಡು ಎಂದು ಸಾಕಿದ್ದ ನೀರು ಕುದುರೆ 7 ವರ್ಷದ ಬಳಿಕ ಹೆಣ್ಣಾಗಿತ್ತು..! ಝೂನಲ್ಲಿ ಅಚ್ಚರಿ..!
ಮಾನವರಲ್ಲಿ ಗಂಡು ಹೆಣ್ಣು ಎಂಬ ಲಿಂಗ ಹಾಗೂ ತೃತೀಯ ಲಿಂಗಿಗಳು ಮೂರು ವಿಧವನ್ನು ನಾವು ನೋಡಬಹುದು. ಆದರೆ ಒಬ್ಬ ಗಂಡಾಗಿ ಜನಿಸಿದವನು ಮುಂದೆ ಲಿಂಗ ಪರಿವರ್ತನೆ ಮಾಡಿಕೊಂಡು ಹೆಣ್ಣಾಗಿ ಬದುಕುವುದು , ಇಲ್ಲವೆ ಹೆಣ್ಣಾಗಿ ಹುಟ್ಟಿ ಮುಂದೆ ಲಿಂಗ ಪರಿವರ್ತನೆಯ ಬಳಿಕ ಗಂಡಾಗಿ ಬದುಕುವ ಸಾವಿರಾರು ಉದಾಹರಣೆ ನಮ್ಮ ಮುಂದಿದೆ. ಆದರೆ ಪ್ರಾಣಿಗಳಲ್ಲಿ ಈ ರೀತಿಯ ಘಟನೆ ನೋಡಿದ್ದೀರಾ?
ನಿಮಗಿದು ಅಚ್ಚರಿ ಎನಿಸಬಹುದು. ಪ್ರಾಣಿಗಳ ಪ್ರಪಂಚದಲ್ಲೂ ಲಿಂಗ ಪರಿವರ್ತನೆ ಎಂಬ ಅಚ್ಚರಿಯ ಬೆಳವಣಿಗೆ ಇದೆ ಎಂಬುದು ತಿಳಿದುಬಂದಿದೆ. ಅವುಗಳಲ್ಲಿ ಗಂಡಾಗಿ ಹುಟ್ಟಿ ಬಳಿಕ ಹೆಣ್ಣಾಗುವ ಪ್ರಕ್ರಿಯೆ ಇದೆ. ಅಲ್ಲದೆ ಅರ್ಧ ದೇಹ ಗಂಡು ಹಾಗೂ ಅರ್ಧ ಹೆಣ್ಣಿನ ದೇಹ ರಚನೆ ಹೊಂದಿದ್ದ ಪಕ್ಷಿಯೊಂದರ ಚಿತ್ರ ಸೆರೆಹಿಡಿದ ಉದಾಹರಣೆಯೂ ಇದೆ. ಇದೇನು ಬರಿ ಥಿಯರಿಯ ಬುಕ್‌ನಲ್ಲಿ ಇಲ್ಲ ಬದಲಿಗೆ ಝೂನಲ್ಲಿದ್ದ ಪ್ರಾಣಿಯೊಂದು ಲಿಂಗಪರಿವರ್ತನೆಗೆ ಒಳಗಾಗಿ ಎಲ್ಲರಲ್ಲೂ ಅಚ್ಚರಿಗೆ ಕಾರಣವಾಗಿದೆ.

ಜಪಾನ್‌ನ ಝೂನಲ್ಲಿದ್ದ ಹಿಪ್ಪೋಪಾಟಮಸ್ (ನೀರು ಕುದುರೆ) ಮೊದಲು ಗಂಡಾಗಿದ್ದು 7 ವರ್ಷಗಳ ಬಳಿಕ ಈ ಹೆಚ್ಚಾಗಿದೆ ಎಂದು ವರದಿಯಾಗಿದೆ. ಜಪಾನಿನ ಒಸಾಕಾ ಟೆನ್ನೊಜಿ ಝೂನಲ್ಲಿರುವ ಜೆನ್-ಚಾನ್ ಎಂಬ ಹಿಪ್ಪೋ ಕಳೆದ 7 ವರ್ಷದಿಂದ ಗಂಡು ಎಂದು ನಂಬಲಾಗಿತ್ತು, ಆದರೆ ಇದೀಗ ಈ ನೀರು ಕುದುರೆ ಹೆಣ್ಣು ಎಂದು ತಿಳಿದು ಝೂ ಸಿಬ್ಬಂದಿ ಶಾಕ್ ಆಗಿದ್ದಾರೆ.
ಈ ನೀರು ಕುದುರೆಯನ್ನು 2017ರಲ್ಲಿ ಅದು 5 ವರ್ಷವಿದ್ದಾಗ ಮೆಕ್ಸಿಕೋದ ಆಫ್ರಿಕನ್ ಸಫಾರಿ ಮೂಲಕ ಈ ಜಪಾನ್‌ನ ಝೂಗೆ ತರಲಾಗಿತ್ತು. ಈ ಆಮದು ಪ್ರಕ್ರಿಯೆ ವೇಳೆಯಲ್ಲೂ ಇದು ಗಂಡು ಎಂದೇ ನಮೂದಿಸಿ ಅಗತ್ಯ ದಾಖಲೆಗಳಲ್ಲೂ ಗಂಡು ಎಂದೇ ಹೇಳಿ ಹಸ್ತಾಂತರ ಪ್ರಕ್ರಿಯೆಯೂ ಮುಗಿಸಲಾಗಿತ್ತು.
ಆದರೆ ಜೆನ್ ಚಾನ್ ಗಂಡು ಹಿಪ್ಪೋ ಎಂಬ ದಾಖಲೆಯ ಹೊರತಾಗಿಯೂ ಅದರಲ್ಲಿ ಗಂಡು ನೀರು ಕುದುರೆಯ ಯಾವ ಲಕ್ಷಣಗಳು ಕಂಡುಬಂದಿರಲಿಲ್ಲ. ಅದು ಗಂಡು ಹಿಪ್ಪೋದ ಲಕ್ಷಣ ತೋರ್ಪಡಿಸುವುದಿರುವುದು ಹಲವು ಅನುಮಾನಕ್ಕೆ ಕಾರಣವಾಗಿತ್ತು. ಬೇರೆ ಹಿಪ್ಪೋಗಳಂತೆ ಇದು ಆಕ್ರಮಣಕಾರಿ ಮನಸ್ಥಿತಿ ಹೊಂದಿರಲಿಲ್ಲ. ಜೊತೆಗೆ ಯಾವ ಹೆಣ್ಣು ಹಿಪ್ಪೋಗಳೊಂದಿಗೆ ಬೆರೆಯಲಿಲ್ಲ. ಕೇವಲ ಶಾಂತಿಯುತ ಹಾಗೂ ಸದಾ ನೀರಿನಲ್ಲಿ ಕಳೆಯುತ್ತಿದ್ದ ಅದರ ವ್ಯಕ್ತಿತ್ವವೇ ಝೂ ಸಿಬ್ಬಂದಿಯ ಅನುಮಾನಗಳಿಗೆ ಕಾರಣವಾಗಿತ್ತು.
ಇನ್ನು ಈ ಹಿಪ್ಪೋ ಗಂಡು ಅಥವಾ ಹೆಣ್ಣು ಎಂದು ಪರಿಶೀಲನೆಗಿಳಿದಾಗ ಜನನಾಂಗ ಹಾಗೂ ಇತರೆ ಅಂಗಗಳ ದೃಶ್ಯೀಕರಣವೂ ಸಹ ಸಾಧ್ಯವಾಗಲಿಲ್ಲ ಎಂದು ಝೂ ಸಿಬ್ಬಂದಿ ಹೇಳಿದ್ದಾರೆ. ಹೀಗಾಗಿ ಅಂತಿಮವಾಗಿ ಅದರ ಡಿಎನ್‌ಎ ಪರೀಕ್ಷೆ ನಡೆಸಲು ಸಿಬ್ಬಂದಿ ಮುಂದಾದರು. ಈ ಪರೀಕ್ಷೆಯ ವರದಿಯಲ್ಲಿ ಇದು ಹೆಣ್ಣು ಹಿಪ್ಪೋ ಎಂಬ ವರದಿ ಬಂದಿತ್ತು, ಈ ವರದಿ ನಡುವೆ ಝೂ ಸಿಬ್ಬಂದಿ ಶಾಕ್ ಆಗಿದ್ದರು, ಸುಮಾರು 7 ವರ್ಷದಿಂದ ಗಂಡು ಹಿಪ್ಪೋ ಎಂದು ಬೆಳೆಸಿದ್ದ ನೀರು ಕುದುರೆ ಒಂದೇ ರಾತ್ರಿಯಲ್ಲಿ ಹೆಣ್ಣು ಎಂದು ವರದಿಯಾಗಿತ್ತು.
(ಫೋಟೋ ಕೃಪೆ-Osaka Tennoji Zoo Japan)
ಇಲ್ಲಿ ನೀರು ಕುದುರೆ ಹುಟ್ಟಿನಿಂದ ಹೆಣ್ಣಾಗಿಯೇ ಇದ್ದರೂ ಝೂ ಸಿಬ್ಬಂದಿ ಹಾಗೂ ಇತರರು ಅದನ್ನು ಗಂಡು ಎಂದು ತಪ್ಪಾಗಿ ಪರಗಣಿಸಿದ್ದಾರೆ ಎಂದು ತಿಳಿದುಬಂದಿದೆ. ಆದರೆ ಆರಂಭದಲ್ಲಿ ಸಿಬ್ಬಂದಿ ಈ ಗಂಡು ಹಿಪ್ಪೂ ಹೆಣ್ಣಾಗಿ ಪರಿವರ್ತನೆಗೊಂಡಿದೆ ಎಂದೇ ನಂಬಲಾಗಿತ್ತು. ಆದರೆ ಅಚ್ಚರಿಯ ಬೆಳವಣಿಗೆಯಲ್ಲಿ ಅದು ಗಂಡಲ್ಲ ಹೆಣ್ಣು ಎಂಬುದು ತಿಳಿದುಬಂದಿದೆ. ಸದ್ಯ ಝೂನಲ್ಲಿ ಜೆನ್-ಚಾನ್ ನೀರು ಕುದುರೆಯನ್ನು ಈಗ ಪ್ರತ್ಯೇಕವಾಗಿಟ್ಟು ವಿಶೇಷ ಕಾಳಜಿ ವಹಿಸಲಾಗಿದೆಯಂತೆ.



Click it and Unblock the Notifications
