Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಪ್ರಭಾಸ್ ಫೋಟೋದ ಮೂಲ ಹುಡುಕಿದವರಿಗೆ ₹5 ಲಕ್ಷ ಬಹುಮಾನ..! ನೀವೆ ಲಕ್ಕಿ ಆಗಬಹುದು..!
ತೆಲುಗು ರೆಬಲ್ ಸ್ಟಾರ್ ಪ್ರಭಾಸ್ ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಬಾಹುಬಲಿ ಬಳಿಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿರುವ ಅವರು ಸಲಾರ್ 2 ಸೇರಿದಂತೆ ರಾಜಾಸಾಬ್, ಕಣ್ಣಪ್ಪ, ಸ್ಪಿರಿಟ್ ಸೇರಿ ಒಂದಿಷ್ಟು ಸಿನಿಮಾಗಳ ಪಟ್ಟಿ ಅವರ ಬಳಿ ಇದೆ. ಹೀಗಾಗಿ ಮುಂದಿನ 5 ವರ್ಷದಲ್ಲಿ ಪ್ರಬಾಸ್ ಅವರು ಬಹುಕೋಟಿ ಸಿನಿಮಾಗಳ ಮಾಡಲಿದ್ದಾರೆ. ಹಾಗೆ ಬಾಕ್ಸ್ ಆಫಿಸ್‌ನಲ್ಲಿಯೂ ಸಾವಿರಾರು ಕೋಟಿ ರೂಪಾಯಿ ದುಡಿಯುವ ಗೆಲ್ಲುವ ಕುದುರೆಯಾಗಿದ್ದಾರೆ.
ಹೀಗಿರುವಾಗ ಅವರ ಮುಂಬರುವ ಸಿನಿಮಾಗಳಲ್ಲಿ ಅವರ ಗೆಟಪ್ ಕುರಿತು ಬಹಳಷ್ಟು ಕುತೂಹಲ ಇದೆ. ಅಭಿಮಾನಿಗಳು ಸೇರಿದಂತೆ ಸಿನಿ ಪಂಡಿತರು ಅವರ ಮುಂದಿನ ಸಿನಿಮಾಗಳಲ್ಲಿ ಯಾವ ರೀತಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಕುತೂಹಲಕ್ಕೆ ಒಳಗಾಗಿದ್ದಾರೆ. ಇತ್ತೀಚಿಗೆ ಅವರು ರಾಜಾಸಾಬ್ ಫಸ್ಟ್ ಲುಕ್ ರಿವೀಲ್ ಮಾಡಿದಾಗಲೂ ಸಾಲ್ಟ್ ಎಂಡ್ ಪೆಪ್ಪರ್ ಲುಕ್ ಕಂಡು ಅಭಿಮಾನಿಗಳು ಫಿದಾ ಆಗಿದ್ರು.

ಒಂದೊಂದು ಸಿನಿಮಾಕ್ಕೂ ಒಂದೊಂದು ರೀತಿಯ ಅವರ ಲುಕ್ ನೋಡಿ ಕುತೂಹಲ ಮತ್ತಷ್ಟು ಮೂಡುವಂತೆ ಆಗಿದೆ. ಆದ್ರೆ ಈಗ ಅವರ ಮುಂದಿನ ಸಿನಿಮಾ ಕಣ್ಣಪ್ಪದ ಫೋಟೋವೊಂದು ವೈರಲ್ ಆಗಿದ್ದು ಚಿತ್ರತಂಡ ಆಘಾತಕ್ಕೊಳಗಾಗಿದೆ. ಹೌದು ಒಂದು ಫೋಟೋ ಲೀಕ್ ಆದರೆ ಏನಾಗುತ್ತದೆ ಎಂದು ನೀವು ಕೇಳಬಹುದು. ಆದ್ರೆ ಚಿತ್ರತಂಡದಿಂದ ಅಫಿಶಿಯಲ್ ಆಗಿ ಘೋಷಣೆಗೂ ಮುನ್ನ ಅವರ ಚಿತ್ರೀಕರಣದ ಫೋಟೋವೊಂದು ಹರಿದಾಡಿದೆ. ಇದು ಚಿತ್ರತಂಡದಲ್ಲಿ ಆತಂಕಕ್ಕೆ ಕಾರಣವಾಗಿದೆ.
ಫೋಟೋ ಮೂಲ ಹುಡುಕಿದವರಿಗೆ 5 ಲಕ್ಷ ರೂ ಬಹುಮಾನ
ಈ ಫೋಟೊ ಸಾಮಾಜಿಕ ಜಾಲತಾಣದಲ್ಲಿ ಸೋರಿಕೆಯಾದ ಬಳಿಕ ಪ್ರಭಾಸ್ ಲುಕ್ ನೋಡಿದ ಮಂದಿ ಅವರ ಹೊಸ ಅವತಾರ ಕಂಡು ಫಿದಾ ಆಗಿದ್ರು, ಆದ್ರೆ ಚಿತ್ರತಂಡಕ್ಕೆ ಇದೊಂದು ಸಹಿಸಲಾಗದ ಸಂಕಟ ತಂದಿದೆ. ಅವರ ಚಿತ್ರೀಕರಣದ ಯಾವುದೇ ಮಾಹಿತಿ ಹಂಚಿಕೊಳ್ಳದೆ ಗೌಪ್ಯವಾಗಿ ಇಡಬೇಕು ಎಂದು ಚಿತ್ರತಂಡದ ಕನಸು ಭಗ್ನವಾದಂತಾಗಿದೆ.
ಹೀಗಾಗಿ ಈ ಫೋಟೋ ಸೋರಿಕೆಗೆ ಕಾರಣವಾದ ಮೂಲವನ್ನ ಹುಡುಕಿ ಕೊಟ್ಟವರಿಗೆ 5 ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ ಚಿತ್ರತಂಡ ಘೋಷಿಸಿದೆ, ಈ ಘೋಷಣೆ ಕಂಡ ಅಭಿಮಾನಿಗಳು ಈಗ ಈ ಫೋಟೋ ಎಲ್ಲಿಂದ ಬಂದಿದೆ ಎಂಬುದನ್ನು ಹುಡುಕಾಡುತ್ತಿದ್ದಾರೆ. ಆದ್ರೆ ಸಾಮಾಜಿಕ ಜಾಲತಾಣದಲ್ಲಿ ಈ ರೀತಿ ಸೋರಿಕೆಯಾದ ಫೊಟೋ, ವಿಡಿಯೋಗಳ ಮೂಲ ಹುಡುಕುವುದು ಅಷ್ಟೊಂದು ಸುಲಭದ ಕಲಸವಲ್ಲ. ಇದು ಸೈಬರ್ ಕ್ರೈಮ್‌ನಿಂದಲೂ ಕಷ್ಟವಾಗುವ ಕೆಲಸವಾಗಿದೆ.
ಆದ್ರೆ 5 ಲಕ್ಷ ರೂಪಾಯಿ ಆಸೆಗಾಗಿ ಯಾರಾದರು ಈ ಚಿತ್ರ ಸೋರಿಕೆಗೆ ಕಾರಣರಾದವರ ಮಾಹಿತಿ ಹಂಚಿಕೊಳ್ಳಲಿದ್ದಾರೆ ಎಂಬುದು ಚಿತ್ರತಂಡದ ಆಸೆಯಾಗಿದೆ. ಹಾಗೆ ಅವರ ಮೇಲೆ ಸೂಕ್ತ ಕ್ರಮಕ್ಕೆ ಮುಂದಾಗುವ ಇಚ್ಛೆ ಹೊಂದಿದೆ. ಅಚ್ಚರಿ ಎಂದರೆ ಈ ಫೋಟೋವನ್ನು ಚಿತ್ರೀಕರಣದ ಸಮಯದಲ್ಲಿ ಅಲ್ಲಿದ್ದ ಸಿಬ್ಬಂದಿಯೇ ಸೆರೆಹಿಡಿದಿರುವ ಸಾಧ್ಯತೆ ಇದ್ದು ಅವರನ್ನು ಗುರುತಿಸಿ ಚಿತ್ರೀಕರಣದಿಂದ ಹೊರಗಿಡುವ ಉದ್ದೇಶ ಈ ಚಿತ್ರತಂಡದ್ದಾಗಿದೆ. ಹೀಗಾಗಿ ಬಹುಮಾನ ಘೋಷಿಸಿದೆ.
ಕಣ್ಣಪ್ಪ ಸಿನಿಮಾಗಾಗಿ ಸುಮಾರು 7 ವರ್ಷಕ್ಕಿಂತ ಹೆಚ್ಚು ಸಮಯ ನಿರ್ದೇಶಕ ಮುಖೇಶ್ ಕುಮಾರ್ ಶ್ರಮಿಸಿದ್ದಾರಂತೆ. ಕನ್ನಡದಲ್ಲಿ ಡಾ.ರಾಜ್‌ಕುಮಾರ್ ಮಾಡಿದ್ದ ಬೇಡರ ಕಣ್ಣಪ್ಪ ನಿಮಗೆ ನೆನಪಿರಬಹುದು, ಇಲ್ಲಿಯೂ ಅದೇ ಕಣ್ಣಪ್ಪನ ಕಥೆಯಾಗಿದೆ. ಆದ್ರೆ ಪ್ರಬಾಸ್ ಸಿನಿಮಾ ಯಾವ ರೀತಿ ಮೂಡಿ ಬರಲಿದೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ. ಈ ಸಿನಿಮಾದಲ್ಲಿ ದೊಡ್ಡ ತಾರಾಗಣ ಪ್ರಬಾಸ್ ಜೊತೆಗೆ ತೆರೆ ಮೇಲೆ ನೋಡಬಹುದಾಗಿದೆ.
ಬಾಲಿವುಡ್ ಕಿಲಾಡಿ ಅಕ್ಷಯ್ ಕುಮಾರ್, ಸೂಪರ್ ಸ್ಟಾರ್ ಮೋಹನ್ ಲಾಲ್, ಕಾಜಲ್ ಅಗರ್ವಾಲ್, ಪ್ರೀತಿ ಮುಖುಂದನ್ ಸೇರಿ ಹಲವು ಪ್ರಮುಖ ನಟರು ಈ ಸಿನಿಮಾದಲ್ಲಿ ಬಣ್ಣ ಹಚ್ಚಲಿದ್ದಾರೆ.



Click it and Unblock the Notifications
