ಮಾಸಿಕ ರಾಶಿಫಲ: ಜುಲೈ ತಿಂಗಳು ಮಕರ ರಾಶಿಯವರ ವೃತ್ತಿ, ಆರ್ಥಿಕ, ಪ್ರೇಮ-ವಿವಾಹ, ಕುಟುಂಬ ಭವಿಷ್ಯ

ಗ್ರಹಗತಿಗಳ ಆಧಾರದ ಮೇಲೆ ಜುಲೈ 2023ರ ರಾಶಿಫಲ ನೀಡಲಾಗಿದ್ದು ನಾವಿಲ್ಲಿ ಮಕರ ರಾಶಿಯವರಿಗೆ ಜೂನ್‌ ತಿಂಗಳು ಹೇಗಿರಲಿದೆ? ಅವರ ಆರ್ಥಿಕ ಭವಿಷ್ಯ, ವೃತ್ತಿ ಜೀವನ ಭವಿಷ್ಯ, ವ್ಯಾಪಾರ, ಆರೋಗ್ಯ, ಕುಟುಂಬ ಹಾಗೂ ಪ್ರೀತಿಯ ಭವಿಷ್ಯದ ಬಗ್ಗೆ ಹೇಳಲಾಗಿದೆ. ಅಷ್ಟಕ್ಕು ಜುಲೈ ತಿಂಗಳಲ್ಲಿ ಮಕರ ರಾಶಿಯವರ ಬಾಳಿನಲ್ಲಿ ಏನೆಲ್ಲಾ ಬದಲಾವಣೆಗಳು ಆಗಲಿದೆ ಅನ್ನೋದನ್ನು ತಿಳಿಯೋಣ.

ಈ ತಿಂಗಳು ಗುರುವು ನಿಮ್ಮ ನಾಲ್ಕನೇ ಮನೆಯಲ್ಲಿ ಮೂರನೇ ಮನೆಯ ಅಧಿಪತಿಯಾಗಿ ಕುಳಿತುಕೊಳ್ಳುತ್ತಾನೆ. ಹೀಗಾಗಿ ಈ ಸಮಯದಲ್ಲಿ ನೀವು ಹೆಚ್ಚು ಹಣವನ್ನು ಗಳಿಸಲು ಸಾಧ್ಯವಾಗದಿರಬಹುದು. ಗುರುವು ನಿಮ್ಮ ನಾಲ್ಕನೇ ಮನೆಯಲ್ಲಿರುವುದರಿಂದ ನೀವು ಪ್ರಯಾಣ ಮಾಡುವಾಗ ಹಣವನ್ನು ಕಳೆದುಕೊಳ್ಳುವ ಸಾಧ್ಯತೆಗಳಿವೆ. ನಾಲ್ಕನೇ ಮನೆಯಲ್ಲಿ ರಾಹು ಇರುವುದರಿಂದ ಕುಟುಂಬಕ್ಕೆ ಸಂಬಂಧಿಸಿದ ಖರ್ಚುಗಳು ಹೆಚ್ಚಾಗಬಹುದು.

Makara Rashi (Capricorn) July 2023 Monthly Horoscope in Kannada

ವೃತ್ತಿ ಜೀವನ

ಈ ತಿಂಗಳು ಮಕರ ರಾಶಿಯವರು ಒಳ್ಳೆಯ ಮತ್ತು ಕೆಟ್ಟ ಫಲಿತಾಂಶಗಳನ್ನು ಪಡೆಯುವ ಸಾಧ್ಯತೆಯಿದೆ. ಶನಿಯು ನಿಮ್ಮ ಎರಡನೇ ಮನೆಯಲ್ಲಿ ಮತ್ತು ಕೇತು ನಿಮ್ಮ ಹತ್ತನೇ ಮನೆಯಲ್ಲಿರುತ್ತಾನೆ. ಹತ್ತನೇ ಮನೆಯಲ್ಲಿ ಕೇತು ಸ್ಥಿತನಾಗಿರೋದ್ರಿಂದ ನೀವು ಎಲ್ಲಾ ಕೆಲಸವನ್ನು ತಾರ್ಕಿಕವಾಗಿ ಮಾಡಲಾಗುತ್ತದೆ. ಈ ರಾಶಿಯವರು ತಮ್ಮ ವೃತ್ತಿಗೆ ಸಂಬಂಧಿಸಿದಂತೆ ವಿದೇಶಕ್ಕೆ ಹೋಗುವ ಅವಕಾಶವನ್ನು ಪಡೆಯಬಹುದು. ನಿಮ್ಮ ಮೂರನೇ ಮನೆಯ ಅಧಿಪತಿಯಾಗಿ ನಾಲ್ಕನೇ ಮನೆಯಲ್ಲಿ ಇರುವ ಗುರುವಿನ ಉಪಸ್ಥಿತಿಯಿಂದಾಗಿ ಇದು ಸಾಧ್ಯವಾಗುತ್ತದೆ.

ಹತ್ತನೇ ಮನೆಯ ಅಧಿಪತಿಯಾಗಿ ಏಳನೇ ಮನೆಯಲ್ಲಿ ಶುಕ್ರನ ಉಪಸ್ಥಿತಿಯಿಂದಾಗಿ ಈ ತಿಂಗಳಲ್ಲಿ ನೀವು ಕೆಲಸದಲ್ಲಿ ತೃಪ್ತಿಯನ್ನು ಪಡೆಯಬಹುದು. ಇನ್ನೂ ಹೆಚ್ಚಿನ ಸಮಯವನ್ನು ವೃತ್ತಿ ಸಂಬಂಧಿತ ಪ್ರಯಾಣಗಳಲ್ಲಿ ಕಳೆಯುವ ಸಾಧ್ಯತೆಯಿದೆ.

ಆರ್ಥಿಕ ಜೀವನ

ಈ ತಿಂಗಳಿನಲ್ಲಿ ಲಾಭದ ಜೊತೆಗೆ ನಿಮ್ಮ ಖರ್ಚು-ವೆಚ್ಚಗಳೂ ಹೆಚ್ಚಾಗುವುದು. ಶನಿಯು ನಿಮ್ಮ ಎರಡನೇ ಮನೆಯಲ್ಲಿರುತ್ತಾನೆ . ಆದ್ದರಿಂದ ನೀವು ಲಾಭ ಗಳಿಸಲು ಕಷ್ಟಪಡಬೇಕಾಗಬಹುದು. ಆದಾಯದ ಹರಿವಿಗೆ ಅಡ್ಡಿಯಾಗಬಹುದು. ಅಥವಾ ಈ ಬಾರಿ ಸಾಮಾನ್ಯಕ್ಕಿಂತ ಕಡಿಮೆ ಗಳಿಸುವ ಸಾಧ್ಯತೆಯಿದೆ. ಹೀಗಾಗಿ ನೀವು ಹಣ ಉಳಿಸಲು ಕಷ್ಟ ಪಡಬೇಕಾಗುತ್ತದೆ.

ಗುರು ನಾಲ್ಕನೇ ಸ್ಥಾನದಲ್ಲಿರೋದ್ರಿಂದ ನಿಮ್ಮ ಖರ್ಚುಗಳು ಹಠಾತ್ ಹೆಚ್ಚಾಗಬಹುದು. ಮತ್ತು ಕೆಲವೊಮ್ಮೆ ನಿಮ್ಮ ಅಗತ್ಯಗಳನ್ನು ಪೂರೈಸಲು ನಿಮಗೆ ಕಷ್ಟವಾಗಬಹುದು. ನೀವು ಮನೆಕೆಲಸಗಳಿಗೆ ಹಣವನ್ನು ಖರ್ಚು ಮಾಡಬೇಕಾಗಬಹುದು. ಈ ತಿಂಗಳಲ್ಲಿ ಈ ರಾಶಿಯವರಿಗೆ ತಾವು ಸಂಪಾದಿಸಿದ ಹಣವನ್ನು ಉಳಿಸಲು ಸಾಧ್ಯವಾಗುವುದಿಲ್ಲ. ಯಾವುದೇ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳೋದಕ್ಕೆ ಹೋಗಬೇಡಿ. ಇಲ್ಲದಿದ್ದರೆ ಇದರಿಂದ ನೀವು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು.

ವ್ಯಾಪಾರ

ಸ್ವಂತ ವ್ಯಾಪಾರ ಹೊಂದಿರುವವರು ವ್ಯಾಪಾರದಲ್ಲಿ ನಷ್ಟ ಮತ್ತು ಪಾಲುದಾರರೊಂದಿಗೆ ಭಿನ್ನಾಭಿಪ್ರಾಯಗಳನ್ನು ಎದುರಿಸಬಹುದು. ಈ ತಿಂಗಳು ನಿಮಗೆ ಅಪೇಕ್ಷಿತ ಪ್ರಯೋಜನಗಳನ್ನು ಪಡೆಯಲು ಕಷ್ಟವಾಗಬಹುದು. ಹಾಗೆಯೇ ಧನ ನಷ್ಟವಾಗೋ ಸಾಧ್ಯತೆಯೂ ಇರುತ್ತದೆ. ಇದನ್ನು ಹೊರತುಪಡಿಸಿ ವ್ಯವಹಾರದಲ್ಲಿ ಪ್ರತಿಸ್ಪರ್ಧಿಗಳಿಂದ ನೀವು ಕಠಿಣ ಸ್ಪರ್ಧೆಯನ್ನು ಎದುರಿಸುವ ಸಾಧ್ಯತೆಯಿದೆ. ಅದು ನಿಮ್ಮ ಲಾಭದ ಮೇಲೆ ಪರಿಣಾಮ ಬೀರಬಹುದು. ನಿಮ್ಮ ವ್ಯಾಪಾರದ ಬಗ್ಗೆ ಅಭದ್ರತೆ ಹೆಚ್ಚಾಗಬಹುದು.

ಆರೋಗ್ಯ

ಈ ತಿಂಗಳಿನಲ್ಲಿ ಮಕರ ರಾಶಿಯವರು ಯಾವುದೇ ಪ್ರಮುಖ ಆರೋಗ್ಯ ಸಂಬಂಧಿತ ಸಮಸ್ಯೆಗಳನ್ನು ಎದುರಿಸಬೇಕಾಗಿಲ್ಲ. ಆದರೆ ಕಣ್ಣುಗಳಿಗೆ ಸಂಬಂಧಿಸಿದ ಸಮಸ್ಯೆಗಳಾದ ಕಣ್ಣಿನ ನೋವು ಮತ್ತು ಸೋಂಕು ಇತ್ಯಾದಿಗಳು ಕಾಣಿಸಿಕೊಳ್ಳುವ ಸಾಧ್ಯತೆಯಿದೆ. ಈ ತಿಂಗಳು ಗುರು ನಿಮ್ಮ ನಾಲ್ಕನೇ ಮನೆಯಲ್ಲಿ ಇರೋದ್ರಿಂದ ನಿಮ್ಮ ಕುಟುಂಬದ ವೆಚ್ಚಗಳಲ್ಲಿ ಅನಗತ್ಯ ಹೆಚ್ಚಳವಾಗಬಹುದು. ಅಲ್ಲದೆ, ರಾಹು ನಾಲ್ಕನೇ ಮನೆಯಲ್ಲಿರುವುದರಿಂದ ಈ ರಾಶಿಯವರಿಗೆ ತಲೆನೋವು ಮತ್ತು ಜೀರ್ಣಕ್ರಿಯೆಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.

ಪ್ರೀತಿ ಮತ್ತು ವೈವಾಹಿಕ ಜೀವನ

ಈ ತಿಂಗಳು ಮಕರ ರಾಶಿಯವರು ಸಂಗಾತಿಯ ಜೊತೆಗೆ ವಿವಾದವನ್ನು ಹೊಂದುತ್ತಾರೆ. ಇದೇ ಕಾರಣದಿಂದ ನೀವು ಪ್ರತ್ಯೇಕತೆಯನ್ನು ಎದುರಿಸುವ ಸಾಧ್ಯತೆಯಿದೆ. ಇನ್ನೂ ಈಗಾಗಲೇ ಪ್ರೀತಿಯಲ್ಲಿ ಇರುವವರಿಗೆ ಪ್ರೇಮ ಜೀವನ ಕೊಂಚ ಕಷ್ಟ ಅನ್ನಿಸಬಹುದು. ಶತ್ರು ರಾಶಿಯಲ್ಲಿ ನಿಮ್ಮ ಏಳನೇ ಮನೆಯಲ್ಲಿ ಶುಕ್ರನು ಅಶುಭ ಸ್ಥಾನದಲ್ಲಿರುತ್ತಾನೆ. ಹೀಗಾಗಿ ನಿಮ್ಮ ಪ್ರೇಮ ಜೀವನದಲ್ಲಿ ಏರುಪೇರಾಗುವ ಸಾಧ್ಯತೆಯಿದೆ. ಮತ್ತು ವಿವಾಹಿತರು ಅಥವಾ ಮದುವೆಯಾಗಲಿರುವವರು ತಮ್ಮ ಸಂಗಾತಿಯೊಂದಿಗೆ ಹೊಂದಾಣಿಕೆಯ ಕೊರತೆಯನ್ನು ಎದುರಿಸುವ ಸಾಧ್ಯತೆಯಿದೆ.

ಸಂವಹನದ ಕೊರತೆಯಿಂದ ನಿಮ್ಮ ಸಂಸಾರದಲ್ಲಿ ಸಮಸ್ಯೆಗಳಾಗುವ ಸಾಧ್ಯತೆಯಿದೆ. ಒಬ್ಬರು ತೋರುವ ಅಹಂಕಾರದಿಂದ ದಾಂಪತ್ಯಲ್ಲಿ ಕಲಹಗಳಾಗುವ ಸಾಧ್ಯತೆಯಿದೆ. ಹೀಗಾಗಿ ಪ್ರತಿಯೊಂದು ಸಂದರ್ಭದಲ್ಲೂ ಮುನ್ನೆಚ್ಚರಿಕೆಯಿಂದ ಹೆಜ್ಜೆ ಇಟ್ಟರೆ ಉತ್ತಮ.

ಪರಿಹಾರಗಳು

ದಿನಕ್ಕೆ 108 ಬಾರಿ "ಓಂ ನಮಃ ಶಿವಾಯ" ಪಠಿಸಿ.
ಪ್ರತಿದಿನ 21 ಬಾರಿ "ಓಂ ಹನುಮಾನ್ ನಮಃ" ಪಠಿಸಿ.
ಪ್ರತಿದಿನ 11 ಬಾರಿ "ಓಂ ನಮೋ ನಾರಾಯಣ" ಪಠಿಸಿ.

English summary

Makara Rashi (Capricorn) July 2023 Monthly Horoscope in Kannada

Here Jully Month Makara Rashi (Capricorn) People career, financial, Health, love-family horoscope Read on.
Story first published: Tuesday, June 27, 2023, 10:21 [IST]
X
Desktop Bottom Promotion