Latest Updates
-
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ!
ಗಮನಿಸಿ: ಮಾರ್ಚ್ 1ರಿಂದ ಬದಲಾಗುತ್ತಿವೆ ಈ ನಿಯಮಗಳು.!
ಫೆಬ್ರವರಿ ಮುಗಿದಿದೆ. ಹೊಸ ತಿಂಗಳು ಮಾರ್ಚ್ ಆರಂಭವಾಗುತ್ತಿದೆ, ಮಾರ್ಚ್ ತಿಂಗಳು ಅಂದರೆ ಹಲವು ರೀತಿಯಲ್ಲಿ ಬದಲಾವಣೆಯ ತಿಂಗಳು, ಮೊದಲನೇದಾಗಿ ಹವಾಮಾನ ಬದಲಾವಣೆ ನೋಡಬಹುದು. ಹಾಗೆ ಮಾರ್ಚ್‌ನಲ್ಲಿ ಹಣಕಾಸು ವರ್ಷ ಅಂತ್ಯವಾಗುತ್ತದೆ. ಹೀಗಾಗಿ ಈ ತಿಂಗಳಲ್ಲಿಯೇ ಹಣಕಾಸು ವಿಚಾರಗಳಿಗೆ, ತೆರಿಗೆ ಸಂಬಂಧದ ಕೆಲಸಗಳು ಹೆಚ್ಚಾಗುತ್ತವೆ.
ಇನ್ನು ಮಾರ್ಚ್ 1ರಿಂದ ಕೆಲವೊಂದು ನಿಯಮಗಳು ಬದಲಾಗುತ್ತಿದೆ. ಈ ವರ್ಷದ ಮಾರ್ಚ್‌ನಿಂದ ಕೆಲವು ನಿಯಮದಲ್ಲಿ ಬದಲಾವಣೆ ನೋಡಬಹುದು. ಹಾಗಾದ್ರೆ ಮಾರ್ಚ್ 1ರಿಂದ ಏನೆಲ್ಲಾ ಬದಲಾಗಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.

ಮಾರ್ಚ್‌ನಿಂದ ಸೆಬಿಯ ಹೊಸ ನಿಯಮ
ನೀವು ಹಣಕಾಸು ವ್ಯವಹಾರದಲ್ಲಿ ತೊಡಗಿದ್ದರೆ ಅದರಲ್ಲೂ ಮ್ಯೂಚುಯಲ್ ಫಂಡ್, ಹೂಡಿಕೆ, ಸೇರು ಡಿಮ್ಯಾಟ್ ಖಾತೆಗಳ ಹೊಂದಿದ್ದರೆ ಅಂತಹ ಖಾತೆಗಳಿಗೆ ನೀವು ಇನ್ನು ಮುಂದೆ 10 ಮಂದಿಯ ಹೆಸರನ್ನು ನಾಮಿನಿಯಾಗಿ ಸೇರಿಸಬಹುದು. ಹೂಡಿಕೆದಾರರ ಅನಾರೋಗ್ಯ ಅಥವಾ ಮರಣದ ಸಂದರ್ಭದಲ್ಲಿ ಆಸ್ತಿ ವರ್ಗಾವಣೆಯನ್ನು ಸುಲಭಗೊಳಿಸಲು ಉದ್ದೇಶಿಸಲಾಗಿದ್ದು, ಹೀಗಾಗಿ 10 ಮಂದಿ ಹೆಸರು ನಾಮಿನಿ ಮಾಡಬಹುದಾಗಿದೆ.
ಎಲ್‌ಪಿಜಿ ಗ್ಯಾಸ್ ದರ ಬದಲಾವಣೆ
ಪ್ರತಿ ತಿಂಗಳ ಮೊದಲ ದಿನದಂದು ತೈಲ ಕಂಪನಿಗಳು ಎಲ್‌ಪಿಜಿ ಸಿಲಿಂಡರ್ ದರವನ್ನು ನವೀಕರಣಗೊಳಿಸಲಿದೆ. ಹೀಗಾಗಿ ಮಾರ್ಚ್ 1ರಂದು ಕೂಡ ಬೆಲೆಯಲ್ಲಿ ಏರುಪೇರಾಗಬಹುದು. ಕಳೆದ ತಿಂಗಳು ಕೂಡ ದರ ಏರಿಕೆಯಾಗಿತ್ತು. ಬೆಳಗ್ಗೆ 6 ಗಂಟೆ ಸುಮಾರಿಗೆ ಹೊಸ ದರ ನಿಗದಿಯ ಪ್ರಕಟಣೆಗಳು ಹೊರಬೀಳುತ್ತವೆ.
ಎಫ್ ಡಿ ಬಡ್ಡಿದರದಲ್ಲಿ ಬದಲಾವಣೆ ನಿರೀಕ್ಷೆ
ಮಾರ್ಚ್ 1 ರಿಂದ ಕೆಲವು ಬ್ಯಾಂಕ್‌ಗಳು ತಮ್ಮ ಸ್ಥಿರ ಠೇವಣಿ ಬಡ್ಡಿದರಗಳನ್ನು ಪರಿಷ್ಕರಿಸಬಹುದು. ಅನೇಕ ಬ್ಯಾಂಕ್‌ಗಳು ಇತ್ತೀಚಿಗೆ ಬಡ್ಡಿ ದರ ಪರಿಷ್ಕರಣೆ ಮಾಡಿವೆ. ಹಾಗೆ ಎಫ್‌ಡಿ ಬಡ್ಡಿದರ ಏರಿಕೆ ಮಾಡಬಹುದು.
ಮಾರ್ಚ್‌ನಲ್ಲಿ ಹೊಸ ತೆರಿಗೆ ನೀತಿ
ಈ ಬಾರಿಯ ಬಜೆಟ್‌ನಲ್ಲಿ ಹಲವರಿಗೆ ತೆರಿಗೆ ವಿನಾಯಿತಿ ನೀಡಿರುವುದು ಈ ಮಾರ್ಚ್ ತಿಂಗಳಿಂದ ಫಲಾನುಭವಿಗಳಿಗೆ ಅದರ ಲಾಭ ಪಡೆಯಬಹುದು. ಹಳೆಯ ಸ್ಲ್ಯಾಬ್‌ಗೆ ಈ ತೆರಿಗೆಯ ಮಿತಿ ಪರಿಷ್ಕರಿಸುವ ಸಾಧ್ಯತೆ ಇದೆ. ಇದು ತೆರಿಗೆದಾರರಿಗೆ ವಿನಾಯಿತಿ ನೀಡಲಿದೆ.
ಸಿಎನ್‌ಜಿ ಪಿಎನ್‌ಜಿ ಮತ್ತು ಎಟಿಎಫ್ ಬೆಲೆ ಬದಲಾವಣೆ
ಪ್ರತಿ ತಿಂಗಳ ಆರಂಭದಲ್ಲಿ ಸಿಎನ್‌ಜಿ (CNG), ಪಿಎನ್‌ಜಿ (PNG), ಮತ್ತು ಎಟಿಎಫ್ (ATF) ಬೆಲೆಗಳನ್ನು ಪರಿಷ್ಕರಿಸಲಾಗುತ್ತದೆ. 1ನೇ ತಾರೀಖಿನಂದು ತೈಲ ಕಂಪನಿಗಳು ಹೊಸ ದರ ಪರಿಷ್ಕರಿಸುತ್ತವೆ.
ಜಿಎಸ್‌ಟಿ ಪೋರ್ಟಲ್ ಮೇಲ್ದರ್ಜೆಗೆ
ಜಿಎಸ್‌ಟಿ ಪೋರ್ಟಲ್‌ಗೆ ಒಂದೇ ದಿನ ಲಕ್ಷಾಂತರ ಮಂದಿ ಭೇಟಿ ನೀಡುತ್ತಾರೆ, ಹಾಗೆ ಈ ಪೋರ್ಟಲ್‌ನಲ್ಲಿ ತಮ್ಮ ಆಧಾರ್, ಪಾನ್, ಬ್ಯಾಂಕ್ ಮಾಹಿತಿ ಸೇರಿ ಹಲವು ಮಾಹಿತಿ ಹಂಚಿಕೊಳ್ಳುತ್ತಾರೆ ಹೀಗಾಗಿ ಮತ್ತಷ್ಟು ಭದ್ರತಾ ಕ್ರಮಕ್ಕೆ ಮುಂದಾಗಲಾಗುತ್ತದೆ. GST-ಸಂಬಂಧಿತ ಪ್ರಕ್ರಿಯೆಗಳಿಗೆ ಸುರಕ್ಷಿತ ಆನ್‌ಲೈನ್ ಸೇವೆ ಪಡೆಯಬಹುದು. ಹಾಗೆ ವೇಗ ಕೂಡ ಹೆಚ್ಚಾಗುತ್ತದೆ.



Click it and Unblock the Notifications
