Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
ಶಿವರಾತ್ರಿ ಜಾಗರಣೆಗೂ ಮುನ್ನ ಈ ನಿಯಮ ಚಾಚೂ ತಪ್ಪದೇ ಪಾಲಿಸಿ..!
ಇಂದು ಮಹಾಶಿವರಾತ್ರಿಯ ದಿನದಂದು ದೇಶದ ಹಲವು ಕಡೆಗಳಲ್ಲಿ ಶಿವನಿಗೆ ವಿಶೇಷ ಪೂಜೆ ನೆರವೇರಿದೆ. ಹಲವು ದೇವಾಲಯಗಳಲ್ಲಿ ಇಂದು ರಾತ್ರಿ ಜಾಗರಣೆ ನೆರವೇರಲಿದೆ. ಇಂದು ರಾತ್ರಿ ಶಿವನ ಆರ್ಶೀವಾದ ಪಡೆಯಲು ಜಾಗರಣೆ ಆಚರಿಸಲಾಗುತ್ತದೆ. ಶಿವನು ಇಂದು ತಾಂಡವ ನೃತ್ಯ ಮಾಡುತ್ತಾನೆ ಎಂಬ ನಂಬಿಕೆ ಇದೆ.
ಮಹಾಶಿವರಾತ್ರಿ ಹಬ್ಬವು ಹಿಂದೂ ಧರ್ಮದ ಪ್ರಮುಖ ಉಪವಾಸಗಳು ಮತ್ತು ಹಬ್ಬಗಳಲ್ಲಿ ಒಂದಾಗಿದೆ. ಪಂಚಾಂಗದ ಪ್ರಕಾರ, ಮಹಾಶಿವರಾತ್ರಿ ಉಪವಾಸವನ್ನು ಪ್ರತಿ ವರ್ಷ ಫಾಲ್ಗುಣ ಮಾಸದ ಕೃಷ್ಣ ಪಕ್ಷದ ಚತುರ್ದಶಿಯಂದು ಆಚರಿಸಲಾಗುತ್ತದೆ. ಧಾರ್ಮಿಕ ನಂಬಿಕೆಗಳ ಪ್ರಕಾರ, ಈ ದಿನದಂದು ಶಿವನು ಪಾರ್ವತಿಯನ್ನು ವಿವಾಹವಾದ ಎಂದು ನಂಬಲಾಗಿದೆ. ಶಿವ ಪಾರ್ವತಿಯನ್ನು ವರಿಸಲು ಕಠಿಣ ತಪಸ್ಸು ಮಾಡಿದ್ದ ಎಂದು ನಂಬಲಾಗಿದೆ.

ಈ ಶಿವರಾತ್ರಿಯ ದಿನದಂದು ಭಕ್ತರು ಮಹಾದೇವ ಮತ್ತು ಮಾತಾ ಪಾರ್ವತಿಯರನ್ನು ಪೂಜಿಸುತ್ತಾರೆ ಮತ್ತು ಉಪವಾಸವನ್ನು ಆಚರಿಸುತ್ತಾರೆ. ಈ ವ್ರತವನ್ನು ಆಚರಿಸುವುದರಿಂದ ಸಕಲ ಕರ್ಮ ಪಾಪಗಳಿಂದ ಆತ ಮುಕ್ತಿ ಪಡೆಯುತ್ತಾನೆ. ಜೀವನದಲ್ಲಿ ಉನ್ನತಿ ಪಡೆಯುತ್ತಾನೆ ಎಂದು ನಂಬಲಾಗಿದೆ. ಹಾಗಾದರೆ ಈ ಶಿವರಾತ್ರಿಯ ಉಪವಾಸದಂದು ಇಲ್ಲವೆ ಜಾಗರಣೆಯಂದು ಏನು ಮಾಡಬೇಕು ಎಂಬುದನ್ನು ನೋಡಿ.
ಸೂರ್ಯಾಸ್ತದ ನಂತದ ಶಿವನಿಗೆ ನೀರು-ಹಾಲು ಅರ್ಪಿಸಬೇಡಿ
ಶಿವರಾತ್ರಿಯಂದು ಜಾಗರಣೆ ಮಾಡುವವರು ಯಾವಾಗಲೂ ಗಮನಿಸಿರಬೇಕಾದ ಅಂಶವೆಂದರೆ ಶಿವನಿಗೆ ಪೂಜೆ ಮಾಡುವ ವಿಧಾನವನ್ನು ನಾವು ತಿಳಿದಿರಬೇಕು. ಜಾಗರಣೆ ಮಾಡುವ ಮುನ್ನ ಸೂರ್ಯಾಸ್ತದ ನಂತರ ಶಿವನಿಗೆ ನೀರು ಇಲ್ಲವೆ ಹಾಲನ್ನು ಅರ್ಪಿಸಬಾರದು ಎಂದು ನಂಬಲಾಗಿದೆ. ಈ ವೇಳೆ ಶಿವ ಕೈಲಾಸದಲ್ಲಿ ಧ್ಯಾನಸ್ತನಾಗುತ್ತಾನೆ ಎಂದು ನಂಬಲಾಗಿದೆ. ಹೀಗಾಗಿ ಸೂರ್ಯಾಸ್ತವಾದ ಮೇಲೆ ಮಾತ್ರ ನೀರಿನ ಅಭಿಷೇಕ ಮಾಡಬೇಕು ಎಂದು ಹೇಳಲಾಗಿದೆ. ಬೆಳಿಗ್ಗೆ 05 ರಿಂದ 11 ಗಂಟೆಯವರೆಗೆ ಶಿವಲಿಂಗಕ್ಕೆ ನೀರನ್ನು ಅರ್ಪಿಸಲು ಉತ್ತಮ ಸಮಯವೆಂದು ಪರಿಗಣಿಸಲಾಗಿದೆ.
ತುಪ್ಪದ ದೀಪ ಬೆಳಗಿ
ಜಾಗರಣೆಯ ಸಮಯದಲ್ಲಿ ಶಿವನ ಮುಂದೆ ತುಪ್ಪದ ದೀಪ ಬೆಳಗಬೇಕಂತೆ. ಆ ದೀಪ ಬೆಳಗ್ಗೆ ವರೆಗೂ ಕೆಡದಂತೆ ನೋಡಿಕೊಳ್ಳಬೇಕು. ಅದಕ್ಕೆ ಯಾವಾಗಲು ತುಪ್ಪವನ್ನು ಹಾಕಿ ಬೆಳಗುವಂತೆ ಮಾಡಬೇಕು. ಇದರಿಂದ ನಿಮ್ಮ ಇಡೀ ದಿನದ ಪ್ರಾರ್ಥನೆಯ ಫಲ ಸಿಗಲಿದೆ ಎಂದು ನಂಬಲಾಗಿದೆ.
ಈ ವಸ್ತುಗಳನ್ನು ಸೇವಿಸಬೇಡಿ
ಮಹಾಶಿವರಾತ್ರಿಯ ದಿನದಂದು ತಪ್ಪಾಗಿಯೂ ಮಾಂಸ, ಮದ್ಯ ಸೇವಿಸಬಾರದು. ಇದಲ್ಲದೆ, ಬೆಳ್ಳುಳ್ಳಿ ಮತ್ತು ಈರುಳ್ಳಿಯನ್ನು ಬಳಸುವ ತಾಮಸಿಕ್ ಆಹಾರದಿಂದ ದೂರವಿರಬೇಕು. ಮಹಾಶಿವರಾತ್ರಿ ಉಪವಾಸದ ಸಮಯದಲ್ಲಿ ಆಹಾರವು ಸಾತ್ವಿಕವಾಗಿರಬೇಕು, ಆಗ ಮಾತ್ರ ನೀವು ಉಪವಾಸದ ಸಂಪೂರ್ಣ ಫಲಿತಾಂಶವನ್ನು ಪಡೆಯಬಹುದು.
ಜಾಗರಣೆ ವೇಳೆ ಮಲಗಬಾರದು
ಜಾಗರಣೆ ಮಾಡುವವರು ಮಧ್ಯದಲ್ಲಿ ಒಂದು ಗಂಟೆ, ಇಲ್ಲವೆ ಅರ್ಧ ಗಂಟೆ ಮಲಗಿ ಏಳುವುದು ಮಾಡಬಾರದು. ಜಾಗರಣೆ ಸಂಪೂರ್ಣ ಬೆಳಗ್ಗೆ ವರೆಗೂ ಮಾಡಬೇಕು. ಮಧ್ಯದಲ್ಲಿ ಏಕಾಗೃತೆ ಬೇರೆಡೆ ಹೋಗಬಾರದು, ಇಲ್ಲವೆ ಅರ್ಧದಲ್ಲಿ ಜಾಗರಣೆ ಬಿಟ್ಟು ಬೇರೆ ಕೆಲಸಗಳ ಮಾಡಬಾರದು. ಈ ವೇಳೆ ಜಾಗರಣೆಯಲ್ಲಿ ಸಂಪೂರ್ಣ ಮಗ್ನನಾಗಬೇಕು.
ಟಿವಿ, ಮೊಬೈಲ್ ತ್ಯಜಿಸಿ
ಜಾಗರಣೆಯ ಸಮಯದಲ್ಲಿ ನೀವು ಟಿ.ವಿ ಮೊಬೈಲ್ ಬಳಕೆ ಮಾಡುವುದನ್ನು ಆದಷ್ಟು ತಪ್ಪಿಸಿ. ಶಿವನಿಗೆ ಸಂಪೂರ್ಣವಾಗಿ ನಿಮ್ಮನ್ನು ಅರ್ಪಿಸಿಕೊಳ್ಳಿ. ಈ ವೇಳೆ ಶಿವನ ಮಂತ್ರ, ಇಲ್ಲವೆ ಶಿವನ ಹಾಡುಗಳು, ಜಪಗಳ ಹಾಡಿ. ಆದರೆ ಹಲವರು ಶಿವನ ಸಿನಿಮಾಗಳು, ಶಿವನ ಸಿನಿಮಾ ಹಾಡುಗಳನ್ನು ಕೇಳುತ್ತಾರೆ. ಹೀಗೆ ಮಾಡುವುದು ಅಷ್ಟು ಉತ್ತಮವಲ್ಲ. ಇದರ ಹೊರತಾಗಿ ನೀವು ಶಿವನ ನಾಮಸ್ಮರಣೆ ಮಾಡುವುದು ಉತ್ತಮ ಎನ್ನಲಾಗಿದೆ.



Click it and Unblock the Notifications
