Latest Updates
-
ಅಮಾವಾಸ್ಯೆಯ ದಿನ ಜಗಳ ಬೇಡ: ದಂಪತಿಗಳ ನಡುವಿನ ಪ್ರೀತಿ ಹೆಚ್ಚಿಸಲು ಈ ಸಂಭಾಷಣೆ ಸೂತ್ರಗಳು -
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು
12 ವರ್ಷಕ್ಕೊಮ್ಮೆ ನಡೆಯುವ ಮಹಾ ಕುಂಭಮೇಳಕ್ಕೆ ಹೋಗುತ್ತಿದ್ದೀರಾ? ಲಕ್ಷುರಿ ಟೆಂಟ್‌ಗಳಲ್ಲಿ ಸ್ಟೇ ಮಾಡಲು ಬುಕ್ಕಿಂಗ್ ಹೇಗೆ?
2025ರ ಮಹಾ ಕಂಭಮೇಳಕ್ಕೆ ಎಲ್ಲ ಸಿದ್ಧತೆಗಳು ನಡೆಯುತ್ತಿದೆ. ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಕುಂಭಮೇಳಕ್ಕೆ ಲಕ್ಷಾಂತರ ಹಿಂದೂಗಳು ಹೋಗಿ ಭಾಗವಹಿಸುತ್ತಾರೆ, ಹಿಂದೂ ಸಂಸ್ಕೃತಿಯನ್ನು ಬಿಂಬಿಸುವ ಈ ಕುಂಭಮೇಳ ವಿಶ್ವದ ಗಮನ ಸೆಳೆಯುತ್ತದೆ.ಈ ಕುಂಭಮೇಳಕ್ಕೆ ಹೋಗ ಬಯಸುವವರೆಗೆ ಯಾವುದೇ ಸಮಸ್ಯೆಯಾಗದಿರಲಿ ಎಂದು ಎಲ್ಲಾ ವ್ಯವಸ್ಥೆಯನ್ನು ತುಂಬಾನೇ ಕ್ರಮಬದ್ಧವಾಗಿ ಮಾಡುತ್ತಿದೆ.
ಈ ವರ್ಷ ಮಹಾಕುಂಭಮೇಳಕ್ಕೆ ಭಾಗವಹಿಸುವ ಭಕ್ತರಿಗೆ ಲಕ್ಷುರಿ ಟೆಂಟ್‌ಗಳ ವ್ಯವಸ್ಥೆ ಕಲ್ಪಿಸಲಾಗಿದೆ. ಈ ವರ್ಷ IRCTC (Indian Railway Catering and Tourism Corporation) ಭಕ್ತಾಧಿಗಳಿಗೆ ಲಕ್ಷುರಿ ಟೆಂಟ್ ನಿರ್ಮಿಸಿದೆ.

ಈ ಟೆಂಟ್‌ಗಳು ಎಲ್ಲಿವೆ
ಸಂಗಮ್‌ನಿಂದ 3.5 ಕಿ.,ಮೀ ದೂರದಲ್ಲಿ ಈ ಟೆಂಟ್‌ಗಳಿವೆ. ಬಹಳ ಸುಂದರ ಪ್ರಕೃತಿಯ ಮಡಿಲಿನಲ್ಲಿ ಈ ಟೆಂಟ್‌ಗಳಿವೆ. ಈ ಟೆಂಟ್‌ಗಳಲ್ಲಿ ಪ್ರೈವೆಟ್ ಬಾತ್‌ರೂಂ (ಬಿಸಿ ನೀರು, ತಣ್ಣೀರು) ಏರ್ ಬ್ಲೋವರ್ ಎಲ್ಲಾ ಇದ್ದು ವಾಸ ಮಾಡುವಾಗ ಲಕ್ಷುರಿ ಫೀಲ್ ನೀಡುವಂತಿದೆ.
ಲಕ್ಷುರಿ ವಿಲ್ಲಾಗಳಿವೆ
ಇನ್ನೂ ಲಕ್ಷುರಿ ಬೇಕೆನ್ನುವವರು ವಿಲ್ಲಾಗಳನ್ನು ಆಯ್ಕೆ ಮಾಡಬಹುದು, ಈ ವಿಲ್ಲಾಗಳ ಬುಕ್ಕಿಂಗ್ ಜನವರಿ 10ರಿಂದ ಪ್ರಾರಂಭವಾಗಿ ಫೆಬ್ರವರಿ 28ರವರೆಗೆ ಬುಕ್ಕಿಂಗ್ ಇದೆ. ಆದರೆ ಬುಕ್ಕಿಂಗ್ ಆದಷ್ಟು ಬೇಗ ಮಾಡಿದರೆ ಒಳ್ಳೆಯದು, ಕೊನೆಗೆ ಕಾದರೆ ಎಲ್ಲಾ ವಿಲ್ಲಾಗಳು ಬುಕ್ ಆದರೆ ಕಷ್ಟ. ವಿಲ್ಲಾಗಳ ಒಂದು ದಿನ ಬಾಡಿಗೆ 18 ಸಾವಿರದಿಂದ 20 ಸಾವಿರದವರೆಗೆ ಕೂಡ ಇದೆ, ಅದಕ್ಕೆ ಬೆಲೆ ಬಾಳುವ ವಿಲ್ಲಾಗಳು ಇದೆ.
ಬುಕ್ಕಿಂಗ್ ಹೇಗೆ ಮಾಡಬಹುದು?
ಆನ್‌ಲೈನ್ ಮೂಲಕ ಬುಕ್ಕಿಂಗ್ ಮಾಡಬಹುದು
www.irctctourism.com/mahakumbhgram ವೆಬ್‌ಸೈಟ್‌ಗೆ ಭೇಟಿ ನೀಡಿ
IRCTC ಕ್ರೆಡಿನ್ಷಿಯಲ್ ಅಥವಾ ರಿಜಿಸ್ಟರ್ ಮೂಲಕ ಲಾಗಿನ್ ಆಗಬಹುದು. ಗೆಸ್ಟ್ ಆಪ್ಷನ್ ಮೂಲಕ
ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್,UPI, ಅಥವಾ ನೆಟ್ ಬ್ಯಾಂಕಿಂಗ್ ಇವುಗಳ ಮೂಲಕ ಮಾಡಬಹುದು.
ಬುಕ್ಕಿಂಗ್ ಕನ್‌ಫರ್ಮ್ ಆದಾಗ ಇಮೇಲ್ ಅಥವಾ ಎಸ್‌ಎಂಎಸ್ ಬರುತ್ತದೆ.
ಇಂಥ ಸ್ಥಳಗಳಲ್ಲಿ ತಂಗುವುದರ ಪ್ರಯೋಜನವೇನು?
ಈ ಸ್ಥಳಗಳಲ್ಲಿ ತಂಗಿದರೆ ಕುಮಭಮೇಳದ ಕಾರ್ಯಕ್ರಮಗಳನ್ನು ಕಣ್ತುಂಬಿಕೊಳ್ಳುವುದು ಸುಲಭವಾಗುವುದು, ಅಲ್ಲದೆ ಕುಂಭಮೇಳ್ಕೆ ಸಮೀಪದ ಸ್ಥಳದಲ್ಲಿ ಇರುವುದರಿಂದ ನಡೆದುಕೊಂಡೇ ಹೋಗಬಹುದಾಗಿದೆ.
ಕುಂಭ ಮೇಳ ಯಾವಾಗ ನಡೆಯಲಿದೆ?
ಈ ವರ್ಷ ಮಹಾಕುಂಭಮೇಳ ಜನವರಿ 13ರಿಂದ ಫೆಬ್ರವರಿ 26ರವರೆಗೆ ನಡೆಯಲಿದೆ. ಈ ಕುಂಭಮೇಳಕ್ಕೆ ಭೇಟಿ ನೀಡುವ ಭಕ್ತರು ಅಯೋಧ್ಯೆಯ ಶ್ರೀರಾಮನ ದರ್ಶನ ಪಡೆದು ಹೋಗಬಹುದು.
ತ್ರಿವೇಣಿ ಸಂಗಮದಲ್ಲಿ ನಡೆಯುವ ಕುಂಭಮೇಳ
ಈ ಕುಂಭಮೇಳಕ್ಕೆ 700 ವರ್ಷಗಳ ಇತಿಹಾಸವಿದೆ, ಪ್ರಯಾಗ್‌ರಾಜ್‌ನಲ್ಲಿ ನಡೆಯಲಿರುವ ಸರಸ್ವತಿ, ಗಂಗಾ ಹಗೂ ಯಮುನಾ ನದಿಗಳ ಸಂಗಮ ಕ್ಷೇತ್ರದಲ್ಲಿ ಕುಂಭಮೇಳ ನಡೆಸಲಾಗುವುದು. ಈ ವರ್ಷ ನಡೆಯುತ್ತಿರುವ ಮಹಾ ಕುಂಭಮೇಳ. 12 ವರ್ಷಗಳಿಗೊಮ್ಮೆ ಮಹಾಕುಂಭಮೇಳ ನಡೆಯಲಿದೆ.
ಈ ಕುಂಭಮೇಳಕ್ಕೆ ನಾಗ ಸಾಧುಗಳು, ಸಂನ್ಯಾಸಿಗಳು, ಜ್ಯೋತಿಷಿಗಳು ಧಾರ್ಮಿಕ ಕ್ಷೇತ್ರದಲ್ಲಿ ತೊಡಗಿಸಿಕೊಂಡವರ ಜೊತೆಗೆ ಲಕ್ಷಾಂತರ ಭಕ್ತರು ಭಾಗಿಯಾಗಲಿದ್ದಾರೆ.



Click it and Unblock the Notifications
