Latest Updates
-
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ! -
ಮ್ಯಾಟ್ರಿಮೋನಿ ಆಪ್ಗಳಲ್ಲಿ ಆಧಾರ್ ಪರಿಶೀಲನೆ: ನಕಲಿ ಪ್ರೊಫೈಲ್ಗಳಿಗೆ ಇನ್ನು ಬ್ರೇಕ್? -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಬಾಲ್ಕನಿ ಸುರಕ್ಷಿತವಾಗಿಡಲು ತಕ್ಷಣವೇ ಈ ಕೆಲಸ ಮಾಡಿ -
ಹಬ್ಬದ ಸೀಸನ್: ನಿಮ್ಮ ಅಡುಗೆಮನೆಯಲ್ಲಿ ವಿಷವಿದೆಯೇ? ಮಹಾರಾಷ್ಟ್ರ ಎಫ್ಡಿಎ ದಾಳಿಯ ನಂತರ ಎಚ್ಚರ! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ಆಫರ್ ಮಳೆಯಲ್ಲಿ ಸಿಲುಕುವ ಮುನ್ನ ಈ 5 ಟಿಪ್ಸ್ ಮಿಸ್ ಮಾಡ್ಬೇಡಿ!
ರಷ್ಯಾ ಕಡೆ ಚಲಿಸುತ್ತಿದೆ ಕಾಂತೀಯ ಪ್ರದೇಶ..! ಭೂಮಿಗೇನು ಕೇಡು..?
ನಮ್ಮ ಭೂಮಿ ರಚನೆಗೊಂಡು ಶತಮಾನಗಳು ಉರುಳಿದ್ದರೂ ಅಂದಿನಿಂದ ಇಂದಿನವರೆಗೂ ಬದಲಾವಣೆಗಳು ನಡೆಯುತ್ತಲೇ ಇದೆ. ಭೂಮಿ ಇಂದಿಗೂ ರೂಪ ಬದಲಾಯಿಸುತ್ತಲೇ ಇದೆ. ಟೆಕ್ಟಾನಿಕ್ ಪ್ಲೇಟ್‌ಗಳ ಚಲನೆ ನಡೆಯುತ್ತಲೇ ಇದೆ. ಹೀಗಾಗಿ ಮುಂದಿನ ಶತಮಾನಗಳಲ್ಲಿ ಭೂಮಿ ಮತ್ತೊಂದು ಹೊಸ ರಚನೆ ತಾಳಬಹುದು ಎಂಬ ವಾದವೂ ಇದೆ. ಹೀಗೆ ಭೂಮಿ ಹೇಗೆ ರೂಪುಗೊಂಡಿದೆ ಎಂಬುದು ಕೂಡ ನಾವು ತಿಳಿದಿದ್ದೇವೆ.
ಭೂಮಿಯ ಉತ್ತರ ಧ್ರುವದಲ್ಲಿ ಕಾಂತೀಯ ಪ್ರದೇಶ ಹಾಗೂ ದಕ್ಷಿಣ ತುದಿಯಲ್ಲೂ ಈ ಕಾಂತೀಯ ಪ್ರದೇಶ ಎಂಬುದು ಇದೆ ಎಂಬುದನ್ನು ನಾವು ತಿಳಿದಿದ್ದೇವೆ. ಇದನ್ನೇ ನಾರ್ತ್ ಮತ್ತು ಸೌತ್ ಪೋಲ್ ಎಂದು ಕರೆಯಲಾಗುತ್ತದೆ. ಇದು ನಮ್ಮ ಭೂಮಿಯ ರಚನೆಯಲ್ಲಿ ಹಾಗೂ ಪರಿಸರಲ್ಲಿ ಇದು ಎದಷ್ಟೊಂದು ಮಹತ್ವದ ಪಾತ್ರ ವಹಿಸುತ್ತದೆ ಎಂಬುದನ್ನು ಕೂಡ ತಿಳಿದಿದ್ದೇವೆ.

ಆದ್ರೆ ಈ ಈ ಕಾಂತೀಯ ಪ್ರದೇಶ ಅತ್ಯಂತ ವೇಗವಾಗಿ ರಷ್ಯಾದ ಕಡೆಗೆ ಚಲಿಸುತ್ತಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಶತಮಾನಗಳಿಂದ ಉತ್ತರ ಧ್ರುವವನ್ನು ಟ್ರ್ಯಾಕ್ ಮಾಡುತ್ತಿದ್ದು, ಲೈವ್ ಸೈನ್ಸ್ ಪ್ರಕಾರ ಕೆನಡಾದಿಂದ ಸೈಬೀರಿಯಾದ ಕಡೆಗೆ ಸುಮಾರು 2,250 ಕಿಲೋಮೀಟರ್‌ಗಳ ಸ್ಥಳಾಂತರ ನಾವು ನೋಡಬಹುದಾಗಿದೆಯಂತೆ. 1990ರಿಂದ 2005ರ ನಡುವೆ 15 ಕಿ.ಮೀ ಪ್ರತಿ ಗಂಟೆಗೆ ಇದ್ದ ಚಲನೆಯ ವೇಗವು ಈಗ 50ರಿಂದ 60 ಕಿ.ಮೀಟರ್‌ಗೆ ಬಂದು ತಲುಪಿದೆ. ಇದು ಭೂಮಿಯ ಜಿಪಿಎಸ್, ದಿಕ್ಕುಗಳ ಪತ್ತೆ ಮಾಡುವುದನ್ನು ಸೇರಿ ಹಲವು ಕೆಲಸಗಳಲ್ಲಿ ಅಡಚಣೆ ಉಂಟು ಮಾಡಲಿದೆ.
ಕಾಂತೀಯ ಉತ್ತರ ಧ್ರುವವು ಭೌಗೋಳಿಕ ಉತ್ತರ ಧ್ರುವಕ್ಕಿಂತ ಭಿನ್ನವಾಗಿದೆ, ಇದು ಎಲ್ಲಾ ರೇಖಾಂಶದ ರೇಖೆಗಳು ಒಮ್ಮುಖವಾಗುವ ಸ್ಥಳವಾಗಿರುವುದರಿಂದ ಒಂದೇ ಆಗಿರುತ್ತದೆ. ನಾವು ಮೊಬೈಲ್‌ನಲ್ಲಿ ಕಂಪಾಸ್ ತೆರೆದರೂ ದಿಕ್ಕೂ ಸರಿಯಾಗಿ ತೋರಿಸುತ್ತದೆ. ಆದ್ರೆ ಈ ಕಾಂತೀಯ ಪ್ರದೇಶದ ಚಲನೆಯಿಂದ ಈ ದಿಕ್ಕು ಪತ್ತೆ ಮಾಡುವುದು ಕಷ್ಟವಾಗಲಿದೆ. ಇದರಿಂದ ವಾಯು ನೆಲೆಯಲ್ಲಿ ಬೋಟ್‌ಗಳು ಹಡಗುಗಳು, ವಿಮಾನಯಾನ, ನೌಕೆಗಳು ದಿಕ್ಕು ಪತ್ತೆ ಮಾಡುವುದು ಕಷ್ಟವಾಗುತ್ತಾ ಸಾಗುತ್ತದೆ. ಅಥವಾ ಈ ಪ್ರದೇಶ ಬದಲಾವಣೆಗೆ ಅವರೂ ಕೂಡ ತಮ್ಮ ತಂತ್ರಜ್ಞಾನ ಬದಲಾಯಿಸಿಕೊಳ್ಳಬೇಕಾಗುತ್ತದೆ.
ಚಲನೆಯು ಇದೇ ವೇಗದಲ್ಲಿ ಮುಂದುವರಿದರೆ, ಮುಂದಿನ ದಶಕದಲ್ಲಿ ಭೂಮಿಯ ಕಾಂತೀಯ ಉತ್ತರ ಧ್ರುವವು 660 ಕಿಲೋಮೀಟರ್ಗಳಷ್ಟು ಚಲಿಸುತ್ತದೆ. ಇದು 2040 ರ ವೇಳೆಗೆ ಎಲ್ಲಾ ದಿಕ್ಸೂಚಿಗಳು ಉತ್ತರ ದಿಕ್ಕನ್ನೂ ಪೂರ್ವದ ಕಡೆಗೆ ತೋರಿಸಬೇಕಾಗುತ್ತದೆ ಎಂದು ಬ್ರಿಟಿಷ್ ಭೂವೈಜ್ಞಾನಿಕ ಸಮೀಕ್ಷೆಯ (BGS) ವಿಜ್ಞಾನಿಗಳು ಹೇಳಿದ್ದಾರೆ.
ಉತ್ತರದಲ್ಲಿ ಈ ಕಾಂತೀಯ ಪ್ರದೇಶ ರಷ್ಯಾದ ಕಡೆಗೆ ಚಲಿಸಿದರೆ ದಕ್ಷಿಣದಲ್ಲಿ ಇದು ಅಂಟಾರ್ಕ್ಟಿಕಾದ ಮೇಲೆ ಪೂರ್ವಕ್ಕೆ ಚಲಿಸುತ್ತಿದೆ ಎಂದು ತಿಳಿದುಬಂದಿದೆ. ಇದು ಪ್ರತಿ 3 ಲಕ್ಷ ವರ್ಷಗಳಿಗೊಮ್ಮೆ ಸಂಭವಿಸುವಂತಹ ವಿದ್ಯಮಾನ ಎಂದು ವಿಜ್ಷಾನಿಗಳು ಹೇಳುತ್ತಾರೆ. ಭೂಮಿಯ ಹೊರಭಾಗದಲ್ಲಿರುವ ಕರಗಿದ ಕಬ್ಬಿಣವು ಅನಿರೀಕ್ಷಿತ ರೀತಿಯಲ್ಲಿ ಹರಿಯುತ್ತದೆ, ಇದರಿಂದಾಗಿ ಕಾಂತೀಯ ಧ್ರುವಗಳು ಬದಲಾಗುತ್ತವೆ.
ಕಾಂತೀಯ ಪ್ರದೇಶ ಮಾಯವಾದರೆ ಏನಾಗುತ್ತದೆ?
ನಮ್ಮ ಕಣ್ಣಿಗೆ ಕಾಣದ ಈ ಕಾಂತೀಯ ಪ್ರದೇಶವು ನಮ್ಮ ಅಳಿವು ಉಳಿವಿನ ಪ್ರಶ್ನೆಯಾಗಿದೆ. ಏಕೆಂದರೆ ಈ ಕಾಂತೀಯ ಪ್ರದೇಶ ಉತ್ತರದಿಂದ ದಕ್ಷಿಣದ ವರೆಗೆ ಭೂಮಿಯ ರಕ್ಷಾ ಕವಚದಂತೆ ಹರಡಿಕೊಂಡಿದೆ. ಇದು ಸೂರ್ಯನಿಂದ ಬರುವಂತ ನೇರಳಾತೀತ ಕಿರಣಗಳು ಭೂಮಿಯ ಪರಿಸರ ಪ್ರವೇಶಿಸದಂತೆ ಕಾಪಾಡುತ್ತಿದೆ. ಈ ಕಾಂತೀಯ ಪ್ರದೇಶ ಮಾಯವಾದರೆ ಈ ಕಿರಣಗಳು ನೇರವಾಗಿ ಭೂಮಿ ಸೇರಲಿದೆ.
ಈ ಕಿರಣಗಳಿಂದ ಮಾನವ ಹಾಗೂ ಪ್ರಾಣಿಗಳು ಹೆಚ್ಚು ಕಾಲ ಬದುಕುಳಿಯಲು ಸಾಧ್ಯವಿಲ್ಲ. ಕ್ಯಾನ್ಸರ್, ಚರ್ಮ ಹಾಳಾಗುವಂತಹ ಗಂಭೀರ ಸ್ವರೂಪದ ಸಮಸ್ಯೆಗಳು ಎದುರಾಗುತ್ತವೆ.



Click it and Unblock the Notifications
