Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ನ.18ಕ್ಕೆ ನಡೆದ ಇಂಥ ದುಬಾರಿ ಮದುವೆ ಈ ಶತಮಾನದಲ್ಲಿಯೇ ನಡೆದಿಲ್ವಂತೆ, ಅಷ್ಟಕ್ಕೂ ಖರ್ಚಾದ ಹಣ ಎಷ್ಟು ಗೊತ್ತಾ?
ಕೆಲವೊಂದು ದುಬಾರಿ ಮದುವೆ ಬಗ್ಗೆ ಕೇಳಿರುತ್ತೀರಿ, ಆದರೆ ಈ ಶತಮಾನದಲ್ಲಿಯೇ ದುಬಾರಿಯಾದ ಮದುವೆ ನವೆಂಬರ್ 18ಕ್ಕೆ ನಡೆದಿದೆ. ಈ ಮದುವೆಗೆ ಖರ್ಚು ಮಾಡಿದ ದುಡ್ಡೇ ಈಗ ಎಲ್ಲರ ಗಮನ ಸೆಳೆದಿದ್ದು. ಈ ಮದುವೆಗೆ ಬರೋಬರಿ $59 ಮಿಲಿಯನ್ ಹಣ ಖರ್ಚಾಗಿದೆಯಂತೆ. ಅಂದರೆ ನಮ್ಮ ಭಾರತೀಯ ರುಪಾಯಿಗಳಲ್ಲಿ ಹೇಳುವುದಾದರೆ ಸುಮಾರು ರೂ. 4,91,55,70,250 ಹಣ ಖರ್ಚಾಗಿದೆ. ಈ ಸಂಖ್ಯೆಯನ್ನು ನೋಡಿದಾಗ ಅಬ್ಬಾ ಎಂದನಿಸದೆ ಇರಲ್ಲಾ ಅಲ್ವಾ?
ಸೌತ್ ಫ್ಲೋರಿಡಾದಲ್ಲಿ ಇಂಥದ್ದೊಂದು ಅದ್ಧೂರಿ ಮದುವೆ ನಡೆದಿದೆ. ಇದೀಗ ಈ ಮದುವೆ ಸಾಮಾಜಿಕ ತಾಣದಲ್ಲಿ ತುಂಬಾನೇ ಗಮನ ಸೆಳೆಯುತ್ತಿದೆ ಮ್ಯಾಡೆಲೈನೆ ಬ್ರೋಕ್‌ವೇ ಎಂಬ ಶ್ರೀಮಂತ ಯುವತಿಯ ಮದುವೆ ಅವಳು ತುಂಬಾ ಸಮಯದಿಂದ ಇಷ್ಟಪಡುತ್ತಿದ್ದ ಬಾಯ್‌ಫ್ರೆಂಡ್ ಜೊತೆ ಇಷ್ಟೊಂದು ಅದ್ಧೂರಿಯಾಗಿ ನಡೆದಿದೆ.

5 ದಿನಗಳ ಕಾಲ ನಡೆದ ಆ ಅದ್ದೂರಿ ಮದುವೆ ಬರೀ ಡೆಕೋರೇಷನ್‌ಗೆ ಕೋಟಿಗಟ್ಟಲೆ ಖರ್ಚಾಗಿರಬಹುದು ಎಂಬುವುದು ಅವರು ಶೇರ್ ಮಾಡಿರುವ ವಿಡಿಯೋ ನೋಡಿದಾಗ ತಿಳಿಯುತ್ತದೆ, ಅಷ್ಟೊಂದು ಅದ್ಭುತವಾಗಿದೆ. ಈ ಮದುವೆಗೆ ಅಷ್ಟೊಂದು ಹಣವನ್ನು ಹುಡುಗಿಯ ತಂದೆ ತಾಯಿ ಖರ್ಚು ಮಾಡಿದ್ದಾರೆ. ಆಕೆಯ ತಂದೆ Ussery Automotive Groupನ ಚೀಫ್ ಎಕ್ಸಿಕ್ಯೂಟಿವ್ ಆಫಿಸರ್ ಹಾಗೂ ಚೇರ್‌ಮೆನ್ ಆದರೆ ತ ಆದರೆ ಫ್ಲೋರೆಡಾದ ಮರ್ಸಿಡಿಸ್ ಬೆಂಜ್‌ನ ಕೋರಲ್ ಗೇಬಲ್ಸ್ ಶಾಖೆಯ ಉಪಾಧ್ಯಕ್ಷೆ ಆಗಿದ್ದಾರೆ, ಹೀಗಾಗಿ ತಮ್ಮ ಮಗಳ ಮದುವೆಯನ್ನು ತುಂಬಾನೇ ಅದ್ಧೂರಿಯಾಗಿ ಮಾಡಿದ್ದಾರೆ.
ಇವರ ಮದುವೆ ಒಪೆರಾ ಗಾರ್ನಿಯರ್‌ನಲ್ಲಿ ಈ ಮದುವೆ ನಡೆದಿದೆ. ಇದು ಪ್ಯಾರಿಸ್‌ನ ಪ್ರಸಿರ್ದಧ ತಾಣಗಳಲ್ಲಿ ಒಂದಾಗಿದೆ. ಪ್ಯಾರಿಸ್‌ಗೆ ಹೋದವರು ಇದರ ಮುಂದೆ ಒಂದು ಫೋಟೋ ಕ್ಲಿಕ್ಕಿಸಿಯೇ ಬರುವುದು, ಅಷ್ಟೊಂದು ಫೇಮಸ್ ಈ ಬಿಲ್ಡಿಂಗ್. ಇದರ ಮೆಟ್ಟಿಲುಗಳೇ ಅಷ್ಟೊಂದು ಗ್ರ್ಯಾಂಡ್ ಇದೆ. ಈ ಸ್ಥಳ ಪ್ರವಾಸಿಗರಿಂದ ಗಿಜಿಗುಟ್ಟತ್ತಲೇ ಇರುತ್ತದೆ. ಇಲ್ಲಿಗೆ ಭೇಟಿ ನೀಡಿದರೆ ಇಲ್ಲಿ ಪ್ರತಿಯೊಂದು ವಿಷಯವೂ ಅಚ್ಚರಿಯನ್ನು ಉಂಟು ಮಾಡುತ್ತದೆ.
ಒಪೆರಾ ಗಾರ್ನಿಯರ್ ಮೆಟ್ಟಿಲುಗಳ ಮೂಲಕ ಒಳಗೆ ಹೋದರೆ ಒಂದು ದೊಡ್ಡ ಹಾಲ್ ಸಿಗುತ್ತದೆ. ಅಂಥದ್ದೊಂದು ಹಾಲ್ ಬಹುಶಃ ಎಲ್ಲಿಯೂ ನೋಡಿರಲಿಕ್ಕಿಲ್ಲ, ಇದರ ಆಡಿಟೋರಿಯಂ ಅಷ್ಟೊಂದು ಅದ್ಭುತವಾಗಿದೆ. ಇಲ್ಲಿಯ ಸೀಲಿಂಗ್‌ಗಳು ಕೂಡ ಅಷ್ಟೊಂದು ಆಕರ್ಷಕ ವಿನ್ಯಾಸವನ್ನು ಹೋಂದಿದೆ. ಇಲ್ಲಿಯ ವಿನ್ಯಾಸ ನೋಡಿದರೆ ಬಾಯಿ ತೆರೆದು ನೋಡುತ್ತಾ ನಿಂತು ಬಿಡುತ್ತೇವೆ, ಅಷ್ಟೊಂದು ಅದ್ಭುತವಾಗಿರುತ್ತದೆ ಎಂದು ಇಲ್ಲಿಗೆ ಭೇಟಿ ನೀಡಿದವರು ಹೇಳುತ್ತಾರೆ.
ಇಂಥ ಸ್ಥಳದಲ್ಲಿ ಅಂಥ ದುಬಾರಿ ಮದುವೆ ನಡೆದಿದೆ, ಮೊದಲೇ ಈ ಬಿಲ್ಡಿಂಗ್ ಅಷ್ಟೊಂದು ಆಕರ್ಷಕವಾಗಿರುತ್ತದೆ, ಈ ಮದುವೆಗೆ ಮತ್ತಷ್ಟು ಅಲಂಕೃತಗೊಂಡ ಈ ಬಿಲ್ಡಿಂಗ್ ನೋಡಲು ಎರಡು ಕಣ್ಣು ಸಾಲದು ಅಷ್ಟೊಂದು ಅದ್ಭುತ್ತವಾಗಿತ್ತು ಎಂಬುವುದು ಅವರ ಶೇರ್ ಮಾಡಿರುವ ವೀಡಿಯೋದಲ್ಲಿ ತಿಳಿಯುತ್ತದೆ.
ಇಂಥದ್ದೊಂದು ದುಬಾರಿ ಮದುವೆ ಎಲ್ಲಿಯೂ ನಡೆದಿರಲಿಲ್ಲ. ನಮ್ಮಲ್ಲಿ ಮುಖೇಶ್ ಅಂಬಾನಿ, ಇನ್ನೂ ಕೆಲವು ಶ್ರೀಮಂತರು ಬಿಗ್ ಫ್ಯಾಟ್ ವೆಡ್ಡಿಂಗ್ ಮೂಲಕ ಗಮನ ಸೆಳೆದಿದ್ದಾರೆ. ಆದರೆ ಇವರು ಮಾಡಿದಂಥ ಮದುವೆಯನ್ನು ಇದುವರೆಗೂ ಯಾರೂ ಮಾಡಿರಲಿಲ್ಲ, ಇದನ್ನು ಈ ಶತಮಾನದಲ್ಲಿಯೇ ದುಬಾರಿ ಮದುವೆ ಎಂದು ಹೇಳಲಾಗುತ್ತಿದೆ.
BTS ಗುಂಪಿನ ಕನ್ಸರ್ಟ್ ಕೂಡ ತ ಇತ್ತು
ಅತ್ಯಾಧ್ಬುತ ಹಾಡು ಹಾಗೂ ನೃತ್ಯದ ಮೂಲಕ ಅಭಿಮಾನಿಗಳನ್ನು ಮೋಡಿ ಮಾಡಿರುವ ಬ್ಯಾಂಡ್ BTS, 7 ಹುಡುಗರ ತಂಡಕ್ಕೆ ಜಗತ್ತಿನ ಮೂಲೆ-ಮೂಲೆಯಲ್ಲೂ ಅಭಿಮಾನಿಗಳಿದ್ದಾರೆ. ಇವರ ಕಾರ್ಯಕ್ರಮ ಕೂಡ ಈ ಮದುವೆಯಲ್ಲಿತ್ತು. ಅಲ್ಲದೆ ಪ್ರಸಿದ್ಧ ಗಾಯಕರು, ವಯಲಿನ್ ನುಡಿಸುವವರು ಈ ಮದುವೆಯಲ್ಲಿ ಕಾರ್ಯಕ್ರಮ ನಡೆಸಿಕೊಟ್ಟಿದ್ದರು.
ಇಂಥ ದುಬಾರಿ ಮದುವೆಯನ್ನು ಈ ಶತಮಾನದಲ್ಲಿ ಯಾರೂ ಕಂಡಿರಲಿಲ್ಲ.



Click it and Unblock the Notifications
