Latest Updates
-
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್
ಶ್ರೀಮಂತರ ಮದುವೆ ಆಗುವುದು ಹೇಗೆ? ಲವ್ ಟಿಪ್ಸ್ ನೀಡಿ ಕೋಟಿ ದುಡಿಯುವ ಯುವತಿ..!!
ಶ್ರೀಮಂತರ ಮದುವೆಯಾಗೋದು ಸಹ ಈಗ ಒಂದು ದೊಡ್ಡ ಹಗರಣ. ಹೀಗಂದ್ರೆ ನಿಮಗೆ ಅಚ್ಚರಿಯಾಗಬಹುದು. ಈಗ ಹಣಕ್ಕಾಗಿ ಏನು ಬೇಕಾದರೂ ಮಾಡುತ್ತಾರೆ, ಅದಕ್ಕೆ ಪೂರಕವಾಗಿ ಹಣವಂತರನ್ನ ಮದುವೆಯಾಗೋದು ಸಹ ಇದೆ. ವಿಶ್ವದ ಹಲವು ದೇಶಗಳಲ್ಲಿ ಈಗ ಹಣವಂತರ ಹುಡುಕಿ ಮದುವೆಯಾಗೋದು ನಡೆಯುತ್ತಿದೆ.
ಯಾಕಂದ್ರೆ ಹಣವಂತರ ಮದುವೆಯಾದರೆ ಜೀವನ ನಡೆಸೋದು ಸುಲಭ, ಐಷಾರಾಮಿ ಬದುಕು ಕಟ್ಟಿಕೊಳ್ಳಬಹುದು ಎಂಬುದು ಅವರ ಉದ್ದೇಶವಾಗಿರುತ್ತೆ. ಆದ್ರೆ ಶ್ರೀಮಂತರನ್ನ ಮದುವೆಯಾಗೋದು ಹೇಗೆ? ಈ ಪ್ರಶ್ನೆ ಎಲ್ಲರಿಗೂ ಕಾಡಿರುವುದಿಲ್ಲ. ಅದ್ರೆ ಇಲೊಬ್ಬ ಯುವತಿ ಶ್ರೀಮಂತರ ಮದುವೆ ಆಗೋದು ಹೇಗೆ ಎಂದು ಹೇಳಿಕೊಂಡುವ ಮೂಲಕವೇ ಕೋಟಿ ಕೋಟಿ ಸಂಪಾದಿಸುತ್ತಿದ್ದಾಳೆ.

ಕೆಲವರು ಹಣ ಸಂಪಾದನೆಗೆ ಯಾವ ರೀತಿಯ ದಾರಿ ಆಯ್ಕೆ ಮಾಡಿಕೊಳ್ಳುತ್ತಾರೆ ಅನ್ನೋದೆ ಅಚ್ಚರಿ ಮೂಡಿಸುತ್ತೆ, ಇಲ್ಲೊಬ್ಬಾಕೆ ಸಹ ವಿಚಿತ್ರ ರೀತಿಯಲ್ಲಿ ಹಣ ಸಂಪಾದಿಸುತ್ತಿದ್ದಾಳೆ. ಆಕೆ ಶ್ರೀಮಂತರನ್ನು ಮದುವೆಯಾಗುವುದು ಹೇಗೆ ಎಂಬುದನ್ನು ಹೇಳಿಕೊಡುವ ಮೂಲಕ ಕೋಟಿ ಕೋಟಿ ಸಂಪಾದಿಸುತ್ತಾಳೆ.
ಚೀನಾದ ಚುವಾನ್ ಕ್ಯು ಅಲಿಯಾಸ್ ಕ್ಯುಕ್ಯು ಬಿಗ್ ವುಮನ್ ಪ್ರಖ್ಯಾತ ಇನ್‌ಫ್ಲುಯೆನ್ಸರ್‌ಗಳಲ್ಲಿ ಒಬ್ಬಳಾಗಿದ್ದಾಳೆ. ಹುಡುಗಿಯರಿಗೆ ಶ್ರೀಮಂತ ಹುಡುಗರನ್ನು ಹೇಗೆ ಪ್ರೀತಿಯಲ್ಲಿ ಬೀಳಿಸಿಕೊಳ್ಳಬೇಕು ಎಂಬುದನ್ನು ಹೇಳಿಕೊಡುತ್ತಾಳೆ. ಈ ಮೂಲಕ ಶುಲ್ಕ ಪಡೆಯುತ್ತಾಳೆ. ಅಚ್ಚರಿ ಎಂದರೆ ಆಕೆ ಬಳಿ ಸಲಹೆ ಪಡೆದ ಹಲವರು ಶ್ರೀಮಂತರನ್ನು ಮದುವೆಯಾಗುವಲ್ಲಿ ಯಶಸ್ವಿಯೂ ಆಗಿದ್ದಾರೆ. ಹೀಗಾಗಿ ಆಕೆಯ ಖ್ಯಾತಿ ಹೆಚ್ಚುತ್ತಲೇ ಇದೆ.
ಈಕೆ ತನ್ನ ವಿಡಿಯೋವನ್ನು ಲೈವ್ ಸ್ಟ್ರೀಮಿಂಗ್ ಮಾಡುವ ಮೂಲಕ ಬರೋಬ್ಬರಿ 163 ಕೋಟಿ ರೂಪಾಯಿ ಗಳಿಸುತ್ತಾಳೆ. ಶ್ರೀಮಂತ ಹುಡುಗರನ್ನು ಹೇಗೆ ಆಯ್ಕೆ ಮಾಡಿಕೊಳ್ಳಬೇಕು ಅವರನ್ನು ಹೇಗೆ ಪ್ರೀತಿಯಲ್ಲಿ ಬೀಳಿಸಿಕೊಳ್ಳಬೇಕು. ಅವರು ಸಿಂಗಲ್ ಆಗಿದ್ದಾರೆಯೇ ಎಂದು ಹೇಗೆ ಕಂಡು ಹಿಡಿಯಬೇಕು ಎಂಬುದನ್ನ ಆಕೆ ವಿವರಿಸುತ್ತಾಳೆ.
ಆಕೆ ವಿಶೇಷ ದರದಲ್ಲಿ ಕೋರ್ಸ್‌ಗಳನ್ನು ಸಹ ಮಾಡುತ್ತಾಳೆ. ಈ ಕೋರ್ಸ್‌ಗಳು 12 ಸಾವಿರದಿಂದ ಆರಂಭಗೊಂಡಿ 43 ಸಾವಿರ ಹಾಗೂ 1 ಲಕ್ಷ ರೂಪಾಯಿಗೂ ಮೀರಿದ ಶುಲ್ಕವಿದೆ. ಇಷ್ಟೇ ಅಲ್ಲ ಅಕೆ ಡೇಟಿಂಗ್ ಸಂಬಂಧಿ ಕಾರ್ಯಗಾರಗಳು ಸೆಮಿನಾರ್‌ಗಳನ್ನು ಸಹ ಆಯೋಜಿಸುತ್ತಾಳೆ. ಈ ಕಾರ್ಯಗಾರಕ್ಕೆ ಭಾಗಿಯಾಗಲು ಸಾವಿರಾರು ಮಂದಿ ಸಾವಿರಾರು ರೂಪಾಯಿ ನೀಡಿ ನೋಂದಾಯಿಸಿಕೊಳ್ಳುತ್ತಾರೆ.
ಆಕೆಯ ಈ ಕೆಲವಕ್ಕೆ ಭಾರೀ ವಿರೋಧ ವ್ಯಕ್ತವಾಗಿದ್ದರೂ ಇದರಿಂದ ಕುಗ್ಗದೆ ಮತ್ತಷ್ಟು ಕೆಲಸದ ಕಡೆ ಆಕೆ ಗಮನ ಹರಿಸಿದ್ದಾಳಂತೆ, ಇದರಿಂದ ಹಲವರಿಗೆ ಉಪಯೋಗವೂ ಆಗಿದೆಯಂತೆ. ಜೀವನದಲ್ಲಿ ಹಣ ಮಾಡಬೇಕು ಎಂದು ಅಡ್ಡದಾರಿ ಹಿಡಿಯುವ ಬದಲು ಆಕೆಯ ಯೋಜನೆಯಂತೆ ಶ್ರೀಮಂತರನ್ನೇ ಮದುವೆಯಾಗಿ ಸುಖವಾಗಿ ಇರಲು ಇಚ್ಛಿಸಿದ್ದಾರಂತೆ.
ಆದ್ರೆ ಕೆಲವರು ಇದೊಂದು ವ್ಯವಸ್ಥಿತ ಜಾಲ ಎದು ಆಕೆ ವಿರುದ್ಧ ತಿರುಗಿ ಬಿದ್ದಿದ್ದಾರೆ. ಈ ರೀತಿ ಶ್ರೀಮಂತ ಹುಡುಗರನ್ನು ಬಲೆಗೆ ಬೀಳಿಸಿ ಮದುವೆಯಾಗುವುದು ಒಂದು ರೀತಿಯ ಮೋಸ ಇದ್ದಂತೆ. ಆ ಹುಡುಗಿ ಆತನ ಆಸ್ತಿ ನೋಡಿ ಮದುವೆಯಾಗುತ್ತಿದ್ದಾಳೆ. ಮದುವೆ ಆದವಳೇ ಆಸ್ತಿ ಭಾಗಕ್ಕಾಗಿ ವಿಚ್ಛೇದನ ಪಡೆಯುತ್ತಾಳೆ. ಇದೊಂದು ವ್ಯವಸ್ಥಿತ ಪಿತೂರಿಯಾಗುತ್ತದೆ. ಹೀಗಾಗಿ ಈ ಯುವತಿ ವಿರುದ್ಧ ಕ್ರಮ ಜರುಗಿಸಬೇಕು ಆಗ್ರಹ ಕೇಳಿಬರುತ್ತಿದೆ. ಆದ್ರೆ ಆಕೆ ಇದನ್ನೇ ತನ್ನ ವೃತ್ತಿಯಾಗಿ ಆಯ್ಕೆ ಮಾಡಿಕೊಂಡಿದ್ದು, ಕೋಟಿ ಕೋಟಿ ರೂಪಾಯಿ ಹಣ ಗಳಿಸುತ್ತಿದ್ದಾಳೆ. ಸದ್ಯ ಚೀನಾದ ಲವ ಗುರು ಅಂತಲೇ ಫೇಮಸ್ ಆಗಿದ್ದು, ಶ್ರೀಮಂತ ಮದುಗೆಯಾಗಲು ಬಯಸುವ ಮಂದಿ ಸಾವಿರಾರು ರೂಪಾಯಿ ಹಣ ನೀಡಿ ಆಕೆಯ ಬಳಿ ಸಲಹೆ ಪಡೆಯುತ್ತಿದ್ದಾರಂತೆ.



Click it and Unblock the Notifications
