Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಚಂದ್ರ ಗ್ರಹಣ 2023 : ಈ ರಾಶಿಯವರಿಗೆ ಉದ್ಯೋಗ ಮತ್ತು ವ್ಯಾಪಾರದಲ್ಲಿ ಶುಭ ಫಲ
ಈ ವರ್ಷದ ಮೊದಲ ಚಂದ್ರ ಗ್ರಹಣ ಮೇ 5 ರಂದು ಸಂಭವಿಸಿದೆ. ಮೊದಲ ಚಂದ್ರಗ್ರಹಣವು ವೈಶಾಖ ಪೂರ್ಣಿಮೆಯಂದು ಸಂಭವಿಸಿದೆ. ಚಂದ್ರಗ್ರಹಣದ ಸಮಯದಲ್ಲಿ ಮೇಷ ರಾಶಿಯಲ್ಲಿ ಚಂದ್ರನ ಜೊತೆಗೆ ರಾಹು, ಸೂರ್ಯ, ಬುಧ ಮತ್ತು ಗುರು ಗ್ರಹಗಳಿರುವುದರಿಂದ ಒಟ್ಟಾಗಿ ಚತುರ್ಗ್ರಾಹಿ ಯೋಗವುಂಟಾಗಲಿದೆ. ಇದರ ಪರಿಣಾಮವಾಗಿ ಕೆಲ ರಾಶಿಗಳಿಗೆ ಉದ್ಯೋಗ ಸೇರಿದಂತೆ ಅನೇಕ ವಿಚಾರಗಳಲ್ಲಿ ಶುಭ ಫಲವಿದೆ. ಅಷ್ಟಕ್ಕು ಆ ರಾಶಿಗಳು ಯಾವುದು ಅನ್ನೋದನ್ನು ನೋಡೋಣ.
ಮಿಥುನ ರಾಶಿ
ಗ್ರಹಣದ ಸಮಯದಲ್ಲಿ ಮಂಗಳ ಮತ್ತು ಶುಕ್ರನ ಸಂಯೋಗವು ಮಿಥುನ ರಾಶಿಯಲ್ಲಿ ಆಗುತ್ತದೆ. ಮತ್ತು ಬುಧನು ಕೂಡ ಮಿಥುನ ರಾಶಿಯಲ್ಲಿರುತ್ತಾನೆ. ಇದರಿಂದಾಗಿ ಮಿಥುನ ರಾಶಿಯವರು ಲಾಭವನ್ನು ಪಡೆಯುತ್ತಾರೆ. ನಿಮಗೆ ಬರಬೇಕಾಗಿದ್ದ ಹಣ ವಾಪಾಸ್ಸಾಗುತ್ತದೆ. ವೈವಾಹಿಕ ಜೀವನ ಸಾಮರಸ್ಯ ಹೆಚ್ಚಾಗುತ್ತದೆ. ಮಕ್ಕಳಿಂದ ಶುಭ ಸುದ್ದಿ ಪಡೆಯಲಿದ್ದೀರಿ. ಮಕ್ಕಳನ್ನು ಹೊಂದಲು ಬಯಸುವವರಿಗೆ ಸಮಯವು ಅನುಕೂಲಕರವಾಗಿದೆ. ನೀವು ಏನು ಅಂದುಕೊಂಡಿದ್ದೀರಿ ಆ ಆಸೆಗಳೆಲ್ಲಾ ಈಡೇರುತ್ತದೆ.

ಸಿಂಹ ರಾಶಿ
ಮೇ 5 ರ ಚಂದ್ರಗ್ರಹಣ ಸಂಭವಿಸಿದ್ದರಿಂದ ಸಿಂಹ ರಾಶಿಯವರಿಗೆ ಮಂಗಳಕರ ಮತ್ತು ಫಲದಾಯಕವಾಗಿರುತ್ತದೆ. ಸಿಂಹ ರಾಶಿಯ ಜನರು ಉದ್ಯೋಗ ಮತ್ತು ವ್ಯವಹಾರದಲ್ಲಿ ಪ್ರಗತಿ ಹೊಂದುವ ಸಾಧ್ಯತೆಗಳು ದಟ್ಟವಾಗಿದೆ. ಕಾರ್ಯಕ್ಷೇತ್ರದಲ್ಲೂ ಕೆಲವು ಉತ್ತಮ ಬದಲಾವಣೆಗಳನ್ನು ನಿರೀಕ್ಷೇ ಮಾಡಬಹುದು. ಸಾಮಾಜಿಕ ಮತ್ತು ರಾಜಕೀಯ ಕ್ಷೇತ್ರದಲ್ಲಿ ಅವರ ಸ್ಥಾನವು ಉತ್ತಮ ಮತ್ತು ಬಲವಾಗಿರುತ್ತದೆ. ಅವರ ದಿಟ್ಟ ನಿರ್ಧಾರಗಳಿಂದ ಅವರಿಗೂ ಲಾಭವಾಗುತ್ತದೆ.
ಧನು ರಾಶಿ
ಚಂದ್ರಗ್ರಹಣವು ಧನು ರಾಶಿಯವರಿಗೆ ಮಂಗಳಕರ ಫಲಿತಾಂಶವನ್ನು ನೀಡಲಿದೆ. ಈ ಚಂದ್ರಗ್ರಹಣವು ಧನು ರಾಶಿಯಿಂದ ಹನ್ನೊಂದನೇ ಮನೆಯಲ್ಲಿ ಸಂಭವಿಸುತ್ತದೆ. ಹೀಗಾಗಿ ಧನು ರಾಶಿಯವರು ಸಂಪತ್ತಿನ ಲಾಭವನ್ನು ಪಡೆಯುತ್ತಾರೆ. ಉದ್ಯೋಗಸ್ಥರು ಉತ್ತಮ ಇನ್ಕ್ರಿಮೆಂಟ್ ಪಡೆಯುವ ಸಾಧ್ಯತೆಯಿದೆ. ಮಕ್ಕಳಿಂದ ನಿಮಗೆ ಸಿಹಿ ಸುದ್ದಿ ಸಿಗಲಿದೆ.
ಮಕರ ರಾಶಿ
ವೈಶಾಖ ಪೂರ್ಣಿಮೆಯಂದು ಚಂದ್ರಗ್ರಹಣ ಸಂಭವಿಸ್ತಿರೋದ್ರಿಂದ ಮಕರ ರಾಶಿಯವರಿಗೆ ಮಂಗಳಕರವಾಗಿರುತ್ತದೆ. ಹೀಗಾಗಿ ಚಂದ್ರಗ್ರಹಣವು ಮಕರ ರಾಶಿಯವರಿಗೆ ಉದ್ಯೋಗ ಮತ್ತು ವ್ಯವಹಾರದ ವಿಷಯದಲ್ಲಿ ಅನುಕೂಲಕರವಾಗಿರುತ್ತದೆ. ಕೆಲಸದ ಸ್ಥಳದಲ್ಲಿ ಕೆಲಸದ ಒತ್ತಡವಿರುತ್ತದೆ, ಆದರೆ ನೀವು ಅದರ ಲಾಭವನ್ನು ಸಹ ಪಡೆಯುತ್ತೀರಿ. ನೀವು ದೈಹಿಕ ಸಂತೋಷ ಪಡೆಯುತ್ತೀರಿ. ನಿಮ್ಮ ಗೌರವ ಹಾಗೂ ಪ್ರತಿಷ್ಠೆ ಹೆಚ್ಚಾಗುತ್ತದೆ.
ಕುಂಭ ರಾಶಿ
ಮೊದಲನೇ ಚಂದ್ರಗ್ರಹಣದ ಸಮಯದಲ್ಲಿ ಚಂದ್ರನು ಕುಂಭ ರಾಶಿಯಿಂದ ಒಂಬತ್ತನೇ ಮನೆಯಲ್ಲಿರುತ್ತಾನೆ. ಹೀಗಾಗಿ ಕುಂಭ ರಾಶಿಯವರಿಗೆ ಈ ಚಂದ್ರಗ್ರಹಣದಿಂದ ಅದೃಷ್ಟಒಲಿದು ಬರುತ್ತದೆ. ತಂದೆಯ ಬಳಗದವರೊಂದಿಗೆ ನಿಮ್ಮ ಸಂಬಂಧವು ಸುಧಾರಿಸುತ್ತದೆ. ಮತ್ತು ನೀವು ಅವರಿಂದ ಲಾಭವನ್ನು ಪಡೆಯುತ್ತೀರಿ. ಈ ಸಮಯದಲ್ಲಿ ನೀವು ಧರ್ಮ-ಆಧ್ಯಾತ್ಮಿಕತೆಯಲ್ಲಿ ಆಸಕ್ತಿ ಹೊಂದಿರುತ್ತೀರಿ. ಪ್ರಯಾಣವು ಶುಭ ಫಲವನ್ನೇ ನೀಡಲಿದೆ. ಈ ಚಂದ್ರಗ್ರಹಣದ ನಂತರ ನೀವು ಹಿಂದೆ ಮಾಡಿದ ಹೂಡಿಕೆಗಳು ಮತ್ತು ಕೆಲಸಗಳಿಂದ ಲಾಭವನ್ನು ಪಡೆಯಬಹುದು.
ಮೀನ ರಾಶಿ
ಮೀನ ರಾಶಿಯವರಿಗೆ ಮೇ 5 ರಂದು ಸಂಭವಿಸಿದ ವೈಶಾಖ ಪೂರ್ಣಿಮೆಯ ವರ್ಷದ ಮೊದಲ ಚಂದ್ರಗ್ರಹಣವು ಆರ್ಥಿಕ ವಿಷಯಗಳಲ್ಲಿ ಮಂಗಳಕರವಾಗಿರುತ್ತದೆ. ಚಂದ್ರಗ್ರಹಣದ ನಂತರ ಸುಮಾರು 10 ದಿನಗಳಲ್ಲಿ ಅವರು ಸಾಕಷ್ಟು ಪ್ರಯೋಜನಗಳನ್ನು ಪಡೆಯುವ ಸಾಧ್ಯತೆಯಿದೆ. ಇನ್ನೂ ಒಳ್ಳೆಯ ಸುದ್ದಿ ಮತ್ತು ಉಡುಗೊರೆಗಳನ್ನು ಪಡೆಯುವ ಸಾಧ್ಯತೆಯಿದೆ. ಆದರೆ ನಿಮ್ಮನ್ನು ಮಾನಸಿಕ ಸಮಸ್ಯೆಗಳು ಕಾಡುವ ಸಾಧ್ಯತೆಯಿದೆ. ಈ ಸಮಯದಲ್ಲಿ ನಿಮಗೆ ಆತಂಕ ಹೆಚ್ಚಾಗಬಹುದು. ನಿಮ್ಮ ಆರೋಗ್ಯದ ಬಗ್ಗೆಯೂ ನೀವು ಜಾಗರೂಕರಾಗಿರಬೇಕು.



Click it and Unblock the Notifications
