Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ವರ್ಷದ ಮೊದಲ ಚಂದ್ರಗ್ರಹಣ ಯಾವಾಗ? ಭಾರತದಲ್ಲಿ ಇದರ ಸೂತಕ ಇದೆಯೇ?
2023ರ ವರ್ಷದ ಮೊದಲ ಸೂರ್ಯಗ್ರಹಣಕ್ಕೆ ಮೇ 5 ಸಾಕ್ಷಿಯಾಗಲಿದೆ. ಖಗೋಳದಲ್ಲಿ ನಡೆಯುವ ಅನೇಕ ವಿಸ್ಮಯಗಳಲ್ಲಿ ಗ್ರಹಣ ಕೂಡ ಹೌದು. ಏಪ್ರಿಲ್ 20ಕ್ಕೆ ಸೂರ್ಯಗ್ರಹಣ ಸಂಭವಿಸಿತ್ತು. ಅದಾಗಿ 15 ದಿನಕ್ಕೆ ಚಂದ್ರಗ್ರಹಣ ಸಂಭವಿಸಲಿದೆ. ಚಂದ್ರಗ್ರಹಣ ಯಾವಾಗ ಸಂಭವಿಸಲಿದೆ, ಈ ಬಾರಿ ಚಂದ್ರಗ್ರಹಣದ ವಿಶೇಷತೆಯೇನು ಎಂದು ನೋಡೋಣ ಬನ್ನಿ:
ಚಂದ್ರಗ್ರಹಣದ ದಿನಾಂಕ ಮತ್ತು ಸಮಯ
2023ರ ಮೊದಲ ಚಂದ್ರಗ್ರಹಣವು ಮೇ5 ಶುಕ್ರವಾರದಂದು ಸಂಭವಿಸಲಿದೆ. ಈ ಚಂದ್ರಗ್ರಹಣ ರಾತ್ರಿ 08:45ಕ್ಕೆ ಪ್ರಾರಂಭವಾಗಿ ಮಧ್ಯರಾತ್ರಿ 1 ಗಂಟೆಗೆ ಮುಕ್ತಾಯವಾಗಲಿದೆ.

ಭಾರತದಲ್ಲಿ ಇರಲ್ಲ ಚಂದ್ರಗ್ರಹಣದ ಸೂತಕ
ಚಂದ್ರಗ್ರಹಣದ ಅವಧಿಯು 9 ಗಂಟೆಗಳ ಮೊದಲೇ ಪ್ರಾರಂಭವಾಗುವುದಾದರೂ ಈ ಗ್ರಹಣ ಭಾರತದಲ್ಲಿ ಗೋಚರಿಸುವುದಿಲ್ಲ, ಹಾಗಾಗಿ ಭಾರತದಲ್ಲಿ ಸೂತಕದ ಅವಧಿಯು ಮಾನ್ಯವಾಗುವುದಿಲ್ಲ.
ಮೇ 5ಕ್ಕೆ ಸಂಭವಿಸಲಿರುವುದು ಪೆನಂಬ್ರಲ್ ಚಂದ್ರಗ್ರಹಣ ಸಂಭವಿಸಲಿದೆ
ಸೂರ್ಯ ಮತ್ತು ಚಂದ್ರ ನಡುವೆ ಭೂಮಿ ಅಡ್ಡಬಂದಾಗ ಸೂರ್ಯಕಿರಣಗಳಿ ಚಂದ್ರನ ಮೇಲೆ ಬೀಳುವುದಕ್ಕೆ ಅಡ್ಡಿಯಾಗುವುದು. ಇದಕ್ಕೆ ಚಂದ್ರಗ್ರಹಣ ಎಂದು ಕರೆಯಲಾಗುವುದು.
ಮೇ 5ರ ಚಂದ್ರಗ್ರಹಣವನ್ನು ಪೆನಂಬ್ರಲ್ ಚಂದ್ರಗ್ರಹಣ ಅಥವಾ ಸ್ಟ್ರಾಬೆರ್ರಿ ಚಂದ್ರಗ್ರಹಣವೆಂದು ಕರೆಯಲಾಗುವುದು. ಈ ಗ್ರಹಣದ ವೇಳೆ ಚಂದ್ರ ಸಂಪೂರ್ಣ ಮರೆಯಾಗುವುದಿಲ್ಲ, ಕತ್ತಲು ಆವರಿಸುವುದಿಲ್ಲ, ಈ ಸಮಯದಲ್ಲಿ ಚಂದ್ರ ಸ್ವಲ್ಪ ಮಂಕಾಗಿ ಕಾಣಿಸುತ್ತಾನೆ ಅಷ್ಟೇ. ಇದನ್ನು ನೆರಳು ಚಂದ್ರಗ್ರಹಣ ಎಂದು ಕೂಡ ಕರೆಯಲಾಗುವುದು.
ಈ ಚಂದ್ರಗ್ರಹಣ ಎಲ್ಲೆಲ್ಲಿ ಗೋಚರಿಸಲಾಗುವುದು?
ಪೆನಂಬ್ರಲ್ ಚಂದ್ರಗ್ರಹಣ ಯುರೋಪ್, ಮಧ್ಯ ಏಷ್ಯಾ, ಆಸ್ಟ್ರೇಲಿಯಾ, ಆಫ್ರಿಕಾ, ಅಂಟಾರ್ಇಕಾಸಾಗರ, ಪೆಸಿಫಿಕ್ ಸಾಗತ, ಹಿಂದೂ ಮಹಾಸಾಗರದಲ್ಲಿ ಕಂಡು ಬರುವುದು. ಈ ಗ್ರಹಣ ಭಾರತದಲ್ಲಿ ಗೋಚರಿಸುವುದಿಲ್ಲ. ಅಕ್ಟೋಬರ್ 28ರಂದು ಚಂದ್ರಗ್ರಹಣ ನಡೆಯಲಿದ್ದು ಇದು ಭಾರತದಲ್ಲಿ ಗೋಚರಿಸಲಿದೆ.
2023ರಲ್ಲಿ ಯಾವಾಗೆಲ್ಲಾ ಗ್ರಹಣ ಸಂಭವಿಸಲಿದೆ?
ಏಪ್ರಿಲ್ 20ಕ್ಕೆ ಸೂರ್ಯಗ್ರಹಣ (ಹೈಬ್ರಿಡ್ ಸೂರ್ಯಗ್ರಹಣ ಸಂಭವಿಸಿತ್ತು)
ಮೇ 5ಕ್ಕೆ ಚಂದ್ರಗ್ರಹಣ(ಪೆನಂಬ್ರಲ್ ಚಂದ್ರಗ್ರಹಣ)
ಅಕ್ಟೋಬರ್ 14ಕ್ಕೆ ಸೂರ್ಯಗ್ರಹಣ (ವಾರ್ಷಿಕ ಸೂರ್ಯಗ್ರಹಣ)
ಅಕ್ಟೋಬರ್ 28ಕ್ಕೆ ಚಂದ್ರಗ್ರಹಣ: ಪಾರ್ಶ್ವಸೂರ್ಯಗ್ರಹಣ
ಚಂದ್ರಗ್ರಹಣವನ್ನು ನೋಡಲು ಭಾರತೀಯರಿಗೆ ಸಾಧ್ಯವಿಲ್ಲ?
ಗ್ರಹಣ ಭಾರತದಲ್ಲಿ ಗೋಚರಿಸಿದ ಕಾರಣ ನೋಡಲು ಸಾಧ್ಯವಿಲ್ಲ, ಆದರೆ ಲೈವ್ ಟೆಲಿಕಾಸ್ಟ್‌ನಲ್ಲಿ ನೋಡಬಹುದಾಗಿದೆ. ಅಕ್ಟೋಬರ್ 14ರ ಸೂರ್ಯಗ್ರಹಣ ಕೂಡ ಭಾರತದಲ್ಲಿ ಗೋಚರಿಸುವುದಿಲ್ಲ.
ಗ್ರಹಣದ ಸಮಯದಲ್ಲಿ ಪಾಲಿಸಲಾಗುವ ನಂಬಿಕೆಗಳು
* ಗ್ರಹಣ ಪ್ರಾರಂಭವಾಗುವ ಮೊದಲು ಆಹಾರ ಹಾಗೂ ಪಾನೀಯಗಳಲ್ಲಿ ತುಳಸಿಯನ್ನು ಹಾಕಲಾಗುವುದು
* ಈ ಸಮಯದಲ್ಲಿ ತುಪ್ಪದ ದೀಪ ಹಚ್ಚಿ ಚಂದ್ರನಿಗೆ ಸಂಬಂಧಿಸಿದ ಮಂತ್ರಗಳನ್ನು ಹೇಳಲಾಗುವುದು.
* ಗ್ರಹಣದ ನಂತರ ಗಂಗಾಜಲ ಚಿಮುಕಿಸಿ ಮನೆಯನ್ನು ಶುದ್ಧೀಕರಿಸಲಾಗುವುದು.



Click it and Unblock the Notifications

