Latest Updates
-
ಸುಪ್ರೀಂ ಕೋರ್ಟ್ ವಿಶೇಷ ಲೋಕ್ ಅದಾಲತ್: ವಿಚ್ಛೇದನ, ಕಸ್ಟಡಿ ಸಮಸ್ಯೆಗಳಿಗೆ ಇಲ್ಲಿದೆ ಸುಲಭ ಪರಿಹಾರ! -
ಅಪಾರ್ಟ್ಮೆಂಟ್ನಲ್ಲಿ ಪರಿಸರ ಸ್ನೇಹಿ ಗಣೇಶ ಹಬ್ಬ: ದಂಡ ತಪ್ಪಿಸಿ, ಸುಲಭವಾಗಿ ವಿಸರ್ಜನೆ ಮಾಡುವುದು ಹೇಗೆ? -
ಓಣಂ ಸದ್ಯದ ಸಂಭ್ರಮ: ಬೆಲೆ ಏರಿಕೆ ಮತ್ತು ಆರೋಗ್ಯದ ಚಿಂತೆಯಿಲ್ಲದೆ ಹಬ್ಬ ಆಚರಿಸುವುದು ಹೇಗೆ? -
ಆಗಸ್ಟ್ 2026 ಏಕಾದಶಿ: ಸ್ಮಾರ್ತ vs ವೈಷ್ಣವ ವ್ರತದ ದಿನಾಂಕಗಳ ಗೊಂದಲವೇ? ಮಧುಮೇಹಿಗಳಿಗೆ ಇಲ್ಲಿದೆ ಉಪವಾಸದ ಸೂತ್ರ! -
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ನಿಮ್ಮ ಮಕ್ಕಳೊಂದಿಗೆ ಚಂದ್ರನ ರಹಸ್ಯಗಳನ್ನು ಅನ್ವೇಷಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಓಣಂ ಹಬ್ಬದ ಸಂಭ್ರಮ: ಮಳೆಯಲ್ಲೂ ಸ್ಟೈಲಿಶ್ ಆಗಿ ಕಾಣಲು ₹1,200 ರೊಳಗೆ ಬೆಸ್ಟ್ ಫ್ಯಾಷನ್ ಟಿಪ್ಸ್! -
ಮಳೆಗಾಲದಲ್ಲಿ ಹಿರಿಯರು ಜಾರಿ ಬೀಳುವ ಆತಂಕವೇ? ಸುರಕ್ಷಿತವಾಗಿರಲು ಈ 12 ನಿಮಿಷಗಳ ಚೇರ್-ಯೋಗ ಟ್ರೈ ಮಾಡಿ! -
ಹಿರಿಯರ ಆರೋಗ್ಯಕ್ಕೆ ದಿನಕ್ಕೆ 12 ನಿಮಿಷದ 'ಚೇರ್ ಯೋಗ': ಚೈತನ್ಯ ಮತ್ತು ಸಮತೋಲನಕ್ಕೆ ಇದುವೇ ಮಂತ್ರ! -
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್!
ಜೂನ್ ತಿಂಗಳು ಈ 3 ರಾಶಿಯವರಿಗೆ ಬಂಪರ್ ಆಗಿರಲಿದೆ!
ರಾಶಿಯಲ್ಲಿ ಗ್ರಹಗಳ ಸ್ಥಾನಕ್ಕೆ ತಕ್ಕಂತೆ ಆ ಗ್ರಹವು ರಾಶಿಯಲ್ಲಿ ಶುಭ ಹಾಗೂ ಅಶುಭ ಫಲ ನೀಡಲಿದೆ. ಜೂನ್ ತಿಂಗಳ ರಾಶಿಫಲ ನೋಡುವುದಾದರೆ ಗ್ರಹಗತಿಗಳ ಸ್ಥಾನಕ್ಕೆ ಅನುಸಾರ ಈ 3 ರಾಶಿಯವರಿಗೆ ಈ ತಿಂಗಳು ತುಂಬಾನೇ ಅನುಕೂಲಕರವಾಗಿದೆ ನೋಡಿ:

ಸಿಂಹ ರಾಶಿ
ಈ ಅವಧಿಯಲ್ಲಿ ನೀವು ಧಾರ್ಮಿಕ ಪ್ರಯಾಣಕ್ಕೆ ಹೋಗಬಹುದು. ನಿಮ್ಮ ಈ ಪ್ರಯಾಣವು ತುಂಬಾ ಆಹ್ಲಾದಕರವಾಗಿರುತ್ತದೆ. ಹಣಕಾಸಿನ ಪರಿಸ್ಥಿತಿಯಲ್ಲಿ ಸುಧಾರಣೆಯ ಬಲವಾದ ಸಾಧ್ಯತೆಯಿದೆ, ಬರಬೇಕಾಗಿರುವ ಹಣ ಕೈ ಸೇರಲಿದೆ. ತಿಂಗಳ ಮಧ್ಯದಲ್ಲಿ ನೀವು ಹೊಸ ಆದಾಯದ ಮೂಲವನ್ನು ಪಡೆಯಬಹುದು. ಇದೆಲ್ಲವೂ ನಿಮ್ಮ ಶ್ರಮದ ಫಲ. ಉದ್ಯೋಗಿಗಳಿಗೆ ಯಶಸ್ಸಿನ ಬಾಗಿಲು ತೆರೆಯುತ್ತದೆ, ನಿಮ್ಮ ಶ್ರಮಕ್ಕೆ ತಕ್ಕ ಫಲ ಪಡೆಯುವಿರಿ. ಈ ಅವಧಿಯಲ್ಲಿ ನೀವು ಸಂಪೂರ್ಣ ಆತ್ಮವಿಶ್ವಾಸದಿಂದ ಕೂಡಿರುತ್ತೀರಿ. ವ್ಯಾಪಾರಸ್ಥರು ಹಣಕ್ಕೆ ಸಂಬಂಧಿಸಿದ ವ್ಯವಹಾರಗಳನ್ನು ಮಾಡುವಾಗ ಬಹಳ ಜಾಗರೂಕರಾಗಿರಲು ಸಲಹೆ ನೀಡಲಾಗಿದೆ. ಯಾವುದೇ ಕೆಲಸವನ್ನು ಅವಸರದಲ್ಲಿ ಮಾಡಿದರೆ ನಷ್ಟವಾಗಬಹುದು. ಮನೆಯ ಹಿರಿಯರ ಆಶೀರ್ವಾದ ಸಿಗಲಿದೆ. ಮನೆಯಲ್ಲಿ ಅವಿವಾಹಿತ ಸದಸ್ಯರಿದ್ದರೆ, ಈ ತಿಂಗಳು ಅವರಿಗೆ ಉತ್ತಮ ವಿವಾಹ ಪ್ರಸ್ತಾಪ ಬರಬಹುದು. ಆರೋಗ್ಯದ ವಿಷಯದಲ್ಲಿ, ಈ ತಿಂಗಳು ನಿಮಗೆ ಏರಿಳಿತಗಳಿಂದ ತುಂಬಿರಲಿದೆ, ಆರೋಗ್ಯದ ಕಡೆ ಗಮನಹರಿಸಿ.ಕುಟುಂಬವು ಒಗ್ಗಟ್ಟಾಗಿರುತ್ತದೆ. ಆರ್ಥಿಕವಾಗಿ, ಈ ತಿಂಗಳು ಉತ್ತಮವಾಗಿರುತ್ತದೆ. ವ್ಯಾಪಾರ-ವ್ಯವಹಾರದಲ್ಲಿ ಲಾಭವಾಗಲಿದೆ. ಈ ತಿಂಗಳು ನೀವು ಹೊಸ ವಾಹನ, ಭೂಮಿ ಇತ್ಯಾದಿಗಳನ್ನು ಖರೀದಿಸಬಹುದು.
ರಾಶಿಚಕ್ರದ ಅಂಶ: ಬೆಂಕಿ
ರಾಶಿಚಕ್ರದ ಅಧಿಪತಿ: ಸೂರ್ಯ
ಅದೃಷ್ಟದ ಸಂಖ್ಯೆಗಳು: 7, 10, 19, 21, 33, 40, 55
ಅದೃಷ್ಟದ ದಿನಗಳು: ಗುರುವಾರ, ಶುಕ್ರವಾರ, ಸೋಮವಾರ, ಬುಧವಾರ
ಅದೃಷ್ಟದ ಬಣ್ಣಗಳು: ಕೆಂಪು, ಕಡು ಹಸಿರು, ನೀಲಿ, ಕೇಸರಿ
ಧನು ರಾಶಿ
ಕೆಲಸದ ಮುಂಭಾಗದಲ್ಲಿ, ಈ ತಿಂಗಳು ನಿಮಗೆ ಉತ್ತಮ ಸೂಚನೆಗಳನ್ನು ನೀಡುತ್ತಿದೆ. ನೀವು ಕೆಲಸವನ್ನು ಬದಲಾಯಿಸಲು ಬಯಸಿದರೆ, ನೀವು ಉತ್ತಮ ಅವಕಾಶವನ್ನು ಪಡೆಯಬಹುದು. ವ್ಯಾಪಾರಸ್ಥರಿಗೆ ಹೊಸ ಯೋಜನೆಗಳಲ್ಲಿ ಕೆಲಸ ಮಾಡಲು ಅವಕಾಶ ಸಿಗುತ್ತದೆ. ಈ ಅವಧಿಯಲ್ಲಿ ನಿಮ್ಮ ಹಣಕಾಸಿನ ಸಮಸ್ಯೆಗಳನ್ನು ಸಹ ಪರಿಹರಿಸಬಹುದು. ಈ ಸಮಯ ಸಂಗಾತಿಯೊಂದಿಗೆ ತುಂಬಾ ಚೆನ್ನಾಗಿರಲಿದೆ. ನಿಮ್ಮ ಪ್ರೀತಿಪಾತ್ರರ ಜೊತೆ ನೀವು ವಿಹಾರಕ್ಕೆ ಸಹ ಹೋಗಬಹುದು. ಹಣಕಾಸಿನ ಸ್ಥಿತಿ ಉತ್ತಮವಾಗಿರುತ್ತದೆ. ನೀವು ಹೆಚ್ಚು ಉಳಿಸಲು ಸಾಧ್ಯವಾಗುತ್ತದೆ. ನೀವು ಹೂಡಿಕೆ ಮಾಡಲು ಯೋಜಿಸುತ್ತಿದ್ದರೆ ಈ ಸಮಯ ಸೂಕ್ತವಾಗಿದೆ. ತಿಂಗಳ ಅಂತ್ಯವು ನಿಮಗೆ ತುಂಬಾ ಒಳ್ಳೆಯದು. ಈ ಸಮಯದಲ್ಲಿ ನೀವು ಕೆಲವು ಒಳ್ಳೆಯ ಸುದ್ದಿಗಳನ್ನು ಪಡೆಯಬಹುದು. ಆರೋಗ್ಯದ ದೃಷ್ಟಿಯಿಂದ ಈ ಸಮಯವು ನಿಮಗೆ ಉತ್ತಮವಾಗಿರುತ್ತದೆ.
ರಾಶಿಚಕ್ರದ ಅಂಶ: ಬೆಂಕಿ
ರಾಶಿಯ ಅಧಿಪತಿ: ಗುರು
ಅದೃಷ್ಟದ ಸಂಖ್ಯೆಗಳು: 1, 7, 14, 21, 38, 49
ಅದೃಷ್ಟದ ದಿನಗಳು: ಭಾನುವಾರ, ಶನಿವಾರ, ಸೋಮವಾರ, ಬುಧವಾರ
ಅದೃಷ್ಟದ ಬಣ್ಣಗಳು: ಕಡು ಕೆಂಪು, ಹಸಿರು, ಗುಲಾಬಿ, ನೇರಳೆ
ಮಿಥುನ ರಾಶಿ
ಈ ತಿಂಗಳು ನಿಮಗೆ ಉತ್ತಮವಾಗಿರುತ್ತದೆ. ಏನಾದರೂ ಆರೋಗ್ಯ ಸಮಸ್ಯೆಯಿದ್ದರೆ ಸುಧಾರಣೆ ಕಾಣಲಿದೆ. ವ್ಯಾಪಾರ-ವ್ಯವಹಾರದಲ್ಲಿ, ನೀವು ಈ ತಿಂಗಳು ಅನುಕೂಲಕರವಾಗಿದೆ. ಪಾಲುದಾರರ ಬೆಂಬಲದಿಂದ ಯಶಸ್ಸು ಸಾಧಿಸಲು ಸಾಧ್ಯವಾಗುವುದು. ನೀವು ವ್ಯವಹಾರದಲ್ಲಿ ಹೊಸ ಯೋಜನೆ ಕೂಡ ಜಾರಿಗೆ ತರುತ್ತೀರಿ. ಆದರೆ ನಿಮ್ಮ ಮನಸ್ಸಿನ ಯೋಜನೆಯನ್ನು ಎಲ್ಲರಿಗೂ ಹೇಳಬೇಡಿ, ಇಲ್ಲದಿದ್ದರೆ ನೀವು ನಷ್ಟವನ್ನು ಅನುಭವಿಸಬೇಕಾಗಬಹುದು. ಉದ್ಯೋಗಿಗಳು ಈ ಅವಧಿ ಅನುಕೂಲಕರವಾಗಿದೆ. ಕುಟುಂಬ ವಾತಾವರಣ ಚೆನ್ನಾಗಿರಲಿದೆ. ಕೆಲಸ ಹುಡುಕುತ್ತಿದ್ದರೆ ಹೊಸ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ. ಆರ್ಥಿಕ ಸ್ಥಿತಿ ತುಂಬಾ ಚೆನ್ನಾಗಿರಲಿದೆ. ನಿಮ್ಮ ಆತ್ಮವಿಶ್ವಾಸ ಬಲವಾಗಲಿದೆ. ನಿಮ್ಮ ಪ್ರೀತಿಪಾತ್ರರೊಂದಿಗಿನ ನಿಮ್ಮ ಸಂಬಂಧವು ಇನ್ನಷ್ಟು ಬಲವಾಗಿರುತ್ತದೆ.
ರಾಶಿಚಕ್ರದ ಅಂಶ: ವಾಯು
ರಾಶಿಯ ಅಧಿಪತಿ: ಬುಧ
ಅದೃಷ್ಟ ಸಂಖ್ಯೆಗಳು: 2, 18, 26, 31, 44, 57
ಅದೃಷ್ಟದ ದಿನಗಳು: ಬುಧವಾರ, ಮಂಗಳವಾರ, ಭಾನುವಾರ, ಸೋಮವಾರ
ಅದೃಷ್ಟದ ಬಣ್ಣಗಳು: ಕಡು ನೀಲಿ, ಕೆಂಪು, ಕಂದು, ಬಿಳಿ



Click it and Unblock the Notifications