Latest Updates
-
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್! -
ನವರಾತ್ರಿ ಸಂಭ್ರಮ: ಅತ್ತೆ-ಮಾವಂದಿರ ಮನೆಗೆ ಹೋಗುವಾಗ ನವದಂಪತಿಗಳು ಮರೆಯದೆ ಪಾಲಿಸಬೇಕಾದ ಶಿಷ್ಟಾಚಾರಗಳಿವು! -
ದೆಹಲಿ ಮಳೆ ಅಲರ್ಟ್: ಮನೆಯಲ್ಲಿ ನೀರು ಸೋರಿಕೆ ತಡೆಯಲು 20 ನಿಮಿಷದ ಈ ಕೆಲಸ ಮಾಡಿ! -
ಮುಂಬೈನಲ್ಲಿ ಬಿಸಿಲಿನ ಅಬ್ಬರ: ಯೆಲ್ಲೋ ಅಲರ್ಟ್ ಘೋಷಣೆ, ಆರೋಗ್ಯ ಕಾಪಾಡಿಕೊಳ್ಳಲು ಈ ಕ್ರಮಗಳನ್ನು ತಪ್ಪದೇ ಪಾಲಿಸಿ
ಅತಿಯಾದ ರೂಪವತಿ ಎಂಬ ಕಾರಣಕ್ಕೆ ಒಲಿಂಪಿಕ್ಸ್‌ನಿಂದ ಈಕೆಯನ್ನು ತೆಗೆಯಲಾಯ್ತೇ?
ಸಾಧನೆ-ಕಾಂಟ್ರೋವರ್ಸಿ ಎಲ್ಲಾ ಸುದ್ದಿಗಳನ್ನು 2024ರ ಒಲಿಂಪಿಕ್ಸ್‌ಗೆ ಆಗಸ್ಟ್ 11ಕ್ಕೆ ತೆರೆ ಬೀಳಲಿದೆ. ಈ ಭಾರಿ ಅನೇಕ ಸಂಗತಿಗಳು ಗಮನ ಸೆಳೆದಿದ್ದೆವು. ಸಾಮಾನ್ಯವಾಗಿ ನಾವು ನಮ್ಮ ದೇಶದ ಸಾಧಕರ ಬಗ್ಗೆ ಮಾತ್ರ ಗಮನಹರಿಸುತ್ತೇವೆ, ಆದರೆ ಬೇರೆ ದೇಶದ ಹಲವು ಸ್ಪರ್ಧಿಗಳು ಈ ಬಾರಿ ನಮ್ಮ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಕೆಲವರು ಅಮೋಘ ಸಾಧನೆಯಿಂದ ಗಮನ ಸೆಳೆದರೆ ಇನ್ನು ಕೆಲವರು ಒಲಿಂಪಿಕ್ಸ್‌ನಲ್ಲಿ ಆದ ಕೆಲವೊಂದು ಕಾಂಟ್ರೋವರ್ಸಿ ಕಾರಣದಿಂದ ಗಮನ ಸೆಳೆದರು, ಹೀಗೆ ಗಮನ ಸೆಳೆದವರು ಲುವೆನೋ ಅಲೋನ್ಸಾ, ಆಕರ್ಷಕ ಮೈ ಮಾಟದ ಈ ಅಂದಗಾರ್ತಿ ಈಜುಪಟು, ಒಲಿಂಪಿಕ್ಸ್‌ನಲ್ಲಿ ಪರಾಗ್ವೆ ದೇಶದ ಸ್ಪರ್ಧಿ.
20 ವರ್ಷದ ಈ ಈಜುಗಾರ್ತಿ ಅಪ್ರತಿಮ ರೂಪವಂತೆ
ಈಕೆ ಅಂದಗಾತಿ, ನೋಡಿದರೆ ಯಾವುದೋ ಮಾಡೆಲ್ ಎನ್ನುವಂಥ ರೂಪವಂತೆ. ಒಲಿಂಪಿಕ್ಸ್‌ನಲ್ಲಿ 100ಮೀ ಬಟರ್‌ಫ್ಲೈ ಸ್ಪರ್ಧೆಯಲ್ಲಿ ಸೆಮಿಫೈನಲ್‌ಗೆ ತಲುಪಲು ಸಾಧ್ಯವಾಗಿಲ್ಲ, ಆದರೆ ಈಕೆಯ ವರ್ತನೆ ಅಷ್ಟಾಗಿ ಸರಿಯಿಲ್ಲದ ಕಾರಣ ಒಲಿಂಪಿಕ್ಸ್‌ನಿಂದ ದೂರ ಇಡಲಾಯ್ತು ಎಂದು ಹೇಳಲಾಗುತ್ತಿದೆ.
ಪರಾಗ್ವೆ ಒಲಿಂಪಿಕ್ ಕಮಿಟಿಯ ಮುಖ್ಯಸ್ಥ ಮಾತನಾಡಿ' ಆಕೆಯ ಇರುವಿಗೆ ಪರಾಗ್ವೆ ಟಿಂನಲ್ಲಿ ಅಸ್ವಾಭಾವಿಕ ವಾತಾವರಣ ಉಂಟು ಮಾಡಿತ್ತು, ಹೀಗಾಗಿ ಆಕೆಯನ್ನು ಸ್ಪರ್ಧೆಯಿಂದ ತೆಗೆಯಲಾಯ್ತು ಎಂದು ಹೇಳಿದರು. ಈಕೆಯ ರೂಪ, ನಡೆ ನುಡಿ ಇತರ ಪುರುಷ ಆಟಗಾರರ ಗಮನ ಸೆಳೆಯುತ್ತಿತ್ತು, ಟೀಂನೊಳಗಡೆ ವಾತಾವರಣ ಬದಲಾಯ್ತು ಎಂದು ಹೆಡ್ ಹೇಳಿದ್ದಾರೆ, ಅದನ್ನು ಲುವೆನೋ ಇದೆಲ್ಲಾ ಅಲ್ಲಗಳಿದಿದ್ದಾರೆ.
ನನ್ನನ್ನು ಎಲ್ಲಿಂದ ಹೊರಗೆ ಹಾಕಲಿಲ್ಲ, ಸುಳ್ಳು ಮಾಹಿತಿ ಹಂಚಬೇಡಿ ಎಂದು ಇನ್‌ಸ್ಟಾಗ್ರಾಂನಲ್ಲಿ ಹೇಳಿದ್ದಾರೆ. ಲುವೆನೋ ಈಜು ಸ್ಪರ್ಧೆಯಲ್ಲಿ 0.24 ಸೆಕೆಂಡ್ ಹಿಂದೆ ಬಿದ್ದರು. ಹೀಗಾಗಿ ಸೆಮಿಫೈನಲ್‌ನಿಂದ ದೂರ ಉಳಿಯುವಂತಾಯ್ತು. ನನ್ನನ್ನು ಬೆಂಬಲಿಸಿದ ಎಲ್ಲರಿಗೂ ಧನ್ಯವಾದಗಳು ಎಂದು ಬರೆದುಕೊಂಡಿದ್ದಾರೆ.
20 ವರ್ಷಕ್ಕೇ ಕ್ರೀಡೆಗೆ ಗುಡ್‌ಬೈ
ಈ ಒಲಿಂಪಿಕ್ಸ್ ಆಟದಿಂದ ಹೊರಗುಳಿದ ಮೇಲೆ ಇವರು ಕ್ರೀಡೆಗೆ ಗುಡ್‌ಬೈ ಹೇಳಿದ್ದಾರೆ. ತುಂಬಾ ವರ್ಷದಿಂದ ನಾನು ಈಜುವ ಸ್ಪರ್ಧೆಯಲ್ಲಿ ಭಾಗವಹಿಸಿದ್ದೇನೆ, ಆದರೆ ಒಲಿಂಪಿಕ್ಸ್ ನನ್ನ ಕೊನೆಯ ಆಟವಾಗಿರುವುದು ನನಗೆ ಸಂತೋಷ ತಂದಿದೆ ಎಂದು ಹೇಳಿದ್ದಾರೆ.
ಯಾವ ಮಾಡೆಲ್‌ಗೂ ಕಡಿಮೆಯಿಲ್ಲ ಈ ಈಜುಪಟು
ಈಕೆಯನ್ನು ನೋಡಿದರೆ ಹಾಲಿವುಡ್ ಸಿನಿಮಾ ನಟಿಯೇ ಎಂದು ಕೇಳುತ್ತಾರೆ, ಅಂಥ ಚೆಲುವು ಇವರದ್ದು. ಆಕೆಗೆ ಕ್ರೀಡಾ ಸ್ಪರ್ಧಿಗಳಿಗೆ ತನ್ನಿಂದಾಗುವ ಏನಾದರೂ ಸಹಾಯ ಮಾಡಬೇಕೆಂಬ ಆಸೆ ಇದೆ. ಕ್ರೀಡಾ ಸಚಿವೆ ಆಗಬೇಕೆಂಬ ಆಸೆ ಹೊಂದಿದ್ದಾರೆ.
ಇದೇ ರೀತಿ ಬ್ರೆಜಿಲ್‌ನ ಈಜುಗಾರ್ತಿಯನ್ನು ಒಲಿಂಪಿಕ್ಸ್ ಗೇಮ್‌ನಿಂದ ಕೈ ಬಿಡಲಾಗಿತ್ತು, ರಾತ್ರಿ ತನ್ನ ಬಾಯ್‌ಫ್ರೆಂಡ್ ಜೊತೆ ಸುತ್ತುತ್ತಿದ್ದನ್ನು ನೋಡಿದ ತಂಡದವರು ಆಕೆಯನ್ನೂ ಕ್ರೀಡೆಯಿಂದ ತೆಗೆದು ಹಾಕಿದ್ದರು.



Click it and Unblock the Notifications
