July Month Love Horoscope 2023: ಜುಲೈ ತಿಂಗಳಲ್ಲಿ 3 ರಿಂದ 9ರವರೆಗೆ ಪ್ರೇಮಿಗಳಿಗೆ, ವಿವಾಹಿತರಿಗೆ ಹೇಗಿರಲಿದೆ?

ಜುಲೈ ತಿಂಗಳಿನಲ್ಲಿ ನಾಲ್ಕು ಗ್ರಹಗಳು ತಮ್ಮ ರಾಶಿಯನ್ನು ಬದಲಾಯಿಸಲಿದೆ. ಹೀಗಾಗಿ ಇದರ ಪರಿಣಾಮ ಕೆಲವು ರಾಶಿಗಳ ಮೇಲೆ ಧನಾತ್ಮಕವಾಗಿ ಇದ್ದರೆ ಇನ್ನೂ ಕೆಲವು ರಾಶಿಗಳು ಮೇಲೆ ಋಣಾತ್ಮಕವಾಗಿ ಇರಲಿದೆ. ಇದರ ಪರಿಣಾಮ ಪ್ರೀತಿ ಹಾಗೂ ಸಂಬಂಧದ ಮೇಲೂ ಆಗಲಿದೆ.

ಕೆಲವರ ಬಾಳಿನಲ್ಲಿ ತಮ್ಮ ಸಂಗಾತಿಯೊಂದಿಗಿನ ಸಂಬಂಧವು ಮಧುರವಾಗಿರುತ್ತದೆ. ಇನ್ನೂ ಕೆಲವರ ಬಾಳಿನಲ್ಲಿ ಭಿನ್ನಾಭಿಪ್ರಾಯಗಳು ಎದುರಾಗಬಹುದು. ಅಷ್ಟಕ್ಕು ಜುಲೈ ತಿಂಗಳಿನಲ್ಲಿ 3 ರಿಂದ 9ರವರೆಗೆ ದ್ವಾದಶ ರಾಶಿಗಳ ಪ್ರೇಮ ಜೀವನ ಹೇಗಿರಲಿದೆ ಅನ್ನೋದನ್ನು ತಿಳಿಯೋಣ.

Love Weekly Horoscope July 3rd to 9th 2023: Love interests Predictions on All Zodiac Signs

ಮೇಷ ರಾಶಿ

ಪ್ರೀತಿಯಲ್ಲಿ ಇರುವವರಿಗೆ ಈ ವಾರವು ಕೆಲವು ಸಮಸ್ಯೆಗಳಿಂದ ತುಂಬಿರುತ್ತದೆ. ನಿಮ್ಮ ಸಂಗಾತಿಯ ನಡವಳಿಕೆಯಿಂದ ನೀವು ಅತೃಪ್ತರಾಗಬಹುದು. ಮತ್ತು ನಿಮ್ಮ ಸಂಗಾತಿಯನ್ನು ನೀವು ಅನುಮಾನಿಸಬಹುದು. ಈ ವಾರ ನಿಮ್ಮ ಸಂಗಾತಿಯಿಂದ ನೀವು ಬಯಸುವ ನಿರೀಕ್ಷೆಯು ಈಡೇರುವುದಿಲ್ಲ. ಪರಸ್ಪರ ಭಿನ್ನಾಭಿಪ್ರಾಯಗಳು ಹೆಚ್ಚಾಗಬಹುದು. ಆದ್ದರಿಂದ ನಿಮ್ಮ ಸಂಗಾತಿಗೆ ಸಮಯವನ್ನು ನೀಡಿ. ಮತ್ತು ಅವರೊಂದಿಗೆ ನಿಮ್ಮ ಸಂಬಂಧದ ಬಗ್ಗೆ ಚರ್ಚಿಸಿ. ದೃಢ ನಿರ್ಧಾರ ತೆಗೆದುಕೊಳ್ಳಿ.

ವೃಷಭ ರಾಶಿ

ಪ್ರೀತಿಯಲ್ಲಿ ಇರುವವರಿಗೆ ಈ ವಾರ ತೊಂದರೆಯಾಗಲಿದೆ. ನಿಮ್ಮ ಸಂಗಾತಿಯ ಆರೋಗ್ಯವು ಹದಗೆಡಬಹುದು. ಅದರಿಂದಾಗಿ ನೀವು ಚಿಂತಿತರಾಗಬಹುದು. ಕುಟುಂಬದ ಸದಸ್ಯರು ನಿಮ್ಮ ಸಂಗಾತಿಯನ್ನು ವಿರೋಧಿಸಬಹುದು. ನಿಮ್ಮ ಸಂಗಾತಿ ನಿಮ್ಮಿಂದ ಕೆಲವು ಆಂತರಿಕ ವಿಷಯಗಳನ್ನು ಮರೆ ಮಾಚಬಹುದು. ಈ ವಿಷಯದಿಂದ ಇಬ್ಬರ ನಡುವೆ ಭಿನ್ನಾಭಿಪ್ರಾಯ ಹೆಚ್ಚಾಗಬಹುದು. ಆದ್ದರಿಂದ ನಿಮ್ಮ ಸಂಗಾತಿಯೊಂದಿಗೆ ನೀವು ಸಮಯ ಕಳೆಯಿರಿ. ಅವರ ಮನಸ್ಸಿನಲ್ಲಿ ಓಡುತ್ತಿರುವ ಯೋಚನೆಗಳನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿ.

ಮಿಥುನ ರಾಶಿ

ಪ್ರೀತಿಯಲ್ಲಿ ಇರುವವರಿಗೆ ಈ ವಾರ ಉತ್ತಮವಾಗಿರುತ್ತದೆ. ನಿಮ್ಮ ಸಂಗಾತಿಯೊಂದಿಗೆ ನೀವು ಹೊರಗೆ ಹೋಗಬಹುದು. ಅಲ್ಲದೆ, ನಿಮ್ಮ ಸಂಗಾತಿಯು ನಿಮಗೆ ತನ್ನ ಪ್ರೀತಿಯನ್ನು ವ್ಯಕ್ತಪಡಿಸಬಹುದು. ಈ ವಾರ ನಿಮಗೆ ಅನುಕೂಲಕರವಾಗಿರುತ್ತದೆ. ಪ್ರೇಮ ಸಂಬಂಧಗಳಿಗೆ ಇದು ಉತ್ತಮ ಸಮಯ. ನಿಮ್ಮ ಸಂಗಾತಿಯೊಂದಿಗೆ ನಿಮ್ಮ ಮನಸ್ಸಿನ ಮಾತನ್ನು ಹೇಳಿಕೊಳ್ಳಿ. ನಿಮ್ಮ ಸಂಗಾತಿ ಪ್ರತಿಯೊಂದು ವಿಚಾರದಲ್ಲೂ ನಿಮ್ಮನ್ನು ಬೆಂಬಲಿಸುತ್ತಾರೆ.

ಕರ್ಕಾಟಕ ರಾಶಿ

ಕರ್ಕಾಟಕ ರಾಶಿಯವರ ಪ್ರೇಮ ಜೀವನ ಈ ವಾರ ಉತ್ತಮವಾಗಿರುತ್ತದೆ. ನಿಮ್ಮ ಸಂಗಾತಿಯ ನಡವಳಿಕೆಯಿಂದ ನೀವು ಸಂತೋಷವಾಗಿರುತ್ತೀರಿ. ಇಲ್ಲಿಯವರೆಗೆ ನೀವು ನಿಮ್ಮ ಪ್ರೀತಿಯನ್ನು ವ್ಯಕ್ತಪಡಿಸದಿದ್ದರೆ ಈ ವಾರ ನಿಮಗೆ ಅನುಕೂಲಕರವಾಗಿದೆ. ನಿಮ್ಮ ಪ್ರೀತಿಯ ಸಂಗಾತಿ ಈ ವಾರ ಜೀವನ ಸಂಗಾತಿಯಾಗಬಹುದು. ನೀವು ಕುಟುಂಬ ಸದಸ್ಯರಿಂದ ಕೆಲವು ವಿರೋಧವನ್ನು ಎದುರಿಸಬೇಕಾಗಬಹುದು. ಆದರೆ ಈ ಸಮಯವು ಪ್ರೇಮ ಸಂಬಂಧಗಳಿಗೆ ಈ ವಾರ ಅನುಕೂಲಕರವಾಗಿದೆ.

ಸಿಂಹ ರಾಶಿ

ಪ್ರೀತಿಯಲ್ಲಿ ಇರುವವರು ಈ ವಾರ ನಿಮ್ಮ ಸಂಗಾತಿಯ ನಡವಳಿಕೆಯಿಂದ ನೀವು ತೊಂದರೆಗೊಳಗಾಗಬಹುದು. ನಿಮ್ಮ ಸಂಗಾತಿಯು ನಿಮ್ಮನ್ನು ವಿರೋಧಿಸಬಹುದು. ನಿಮ್ಮ ಸಂಗಾತಿಯ ಮೇಲಿನ ನಿಮ್ಮ ಆಂತರಿಕ ಪ್ರೀತಿ ಕಡಿಮೆಯಾಗಬಹುದು. ವದಂತಿಗಳ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳೋದಕ್ಕೆ ಹೋಗಬೇಡಿ. ಮತ್ತು ನಿಮ್ಮ ಸಂಬಂಧವನ್ನು ಉಳಿಸಲು ನಿಮ್ಮ ಸಂಗಾತಿಯ ಜೊತೆಗೆ ಕುಳಿತು ಮಾತನಾಡಿ.

ಕನ್ಯಾ ರಾಶಿ

ಪ್ರೀತಿಯಲ್ಲಿರುವವರಿಗೆ ಈ ವಾರ ಕೆಲವು ಸಮಸ್ಯೆಗಳು ಹೆಚ್ಚಾಗುತ್ತದೆ. ನಿಮ್ಮ ಸಂಗಾತಿಯ ಅಭಿಪ್ರಾಯಗಳನ್ನು ನೀವು ಒಪ್ಪದೇ ಇರಬಹುದು. ಈ ವಾರ ನೀವು ಕುಟುಂಬ ಮತ್ತು ನಿಮ್ಮ ಸಂಗಾತಿ ನಡುವೆ ಆಯ್ಕೆ ಮಾಡುವ ಪರಿಸ್ಥಿತಿ ಎದುರಾಗುತ್ತದೆ. ಈ ವಾರ ನೀವು ಈ ಕಠಿಣ ಪರಿಸ್ಥಿತಿಯಲ್ಲಿ ಸಿಲುಕಿಕೊಳ್ಳುತ್ತೀರಿ. ನಿಮ್ಮ ಸಂಗಾತಿಯು ನಿಮ್ಮ ನಡವಳಿಕೆಯಿಂದ ಅಸಮಾಧಾನಗೊಳ್ಳಬಹುದು. ಇದರಿಂದಾಗಿ ಅವನು/ಅವಳು ನಿಮ್ಮಿಂದ ದೂರವಿರಲು ನಿರ್ಧರಿಸಬಹುದು. ನಿಮ್ಮ ಸಂಗಾತಿಯೊಂದಿಗೆ ಕುಳಿತು ಮಾತನಾಡಿ ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನಿಸಿದರೆ ಉತ್ತಮ.

ತುಲಾ ರಾಶಿ

ಪ್ರೀತಿಯಲ್ಲಿ ಇರುವವರಿಗೆ ಈ ವಾರ ಉತ್ತಮವಾಗಿರುತ್ತದೆ. ನಿಮ್ಮ ಸಂಗಾತಿ ನಿಮ್ಮೊಂದಿಗೆ ಸ್ನೇಹದಿಂದ ಇರುತ್ತಾರೆ. ಪ್ರೇಮ ಸಂಬಂಧಗಳಿಗೆ ಈ ವಾರ ಉತ್ತಮವಾಗಿರುತ್ತದೆ. ನಿಮ್ಮ ಸಂಗಾತಿಯ ನಡವಳಿಕೆಯಿಂದ ನೀವು ಸಂತೋಷವಾಗಿರುತ್ತೀರಿ. ಕೆಲವೊಂದು ವಿಚಾರಗಳಲ್ಲಿ ವಾದ-ವಿವಾದಗಳು ಇರುತ್ತದೆ. ಅದರಿಂದ ಅದು ನಿಮಗೆ ಒಳ್ಳೆಯದಾಗುತ್ತದೆ. ನಿಮ್ಮ ಸಂಗಾತಿಯೊಂದಿಗೆ ನಿಮ್ಮ ಕುಟುಂಬ ಯೋಜನೆಯನ್ನು ಮಾಡಬಹುದು.

ವೃಶ್ಚಿಕ ರಾಶಿ

ಪ್ರೀತಿಯಲ್ಲಿ ಇರುವವರಿಗೆ ಈ ಸಮಯವು ತುಂಬಾ ಅನುಕೂಲಕರವಾಗಿರಲಿದೆ. ನಿಮ್ಮ ಸಂಗಾತಿಯೊಂದಿಗೆ ನೀವು ವಿಹಾರಕ್ಕೆ ಹೋಗಬಹುದು. ಈ ವಾರವು ಮನರಂಜನೆಯಿಂದ ತುಂಬಿರುತ್ತದೆ. ಮತ್ತು ನಿಮ್ಮ ಸಂಗಾತಿಯೊಂದಿಗೆ ನೀವು ಸಾಕಷ್ಟು ಸಮಯವನ್ನು ಕಳೆಯುತ್ತೀರಿ. ನಿಮ್ಮ ಭವಿಷ್ಯದ ಬಗ್ಗೆ ನಿಮ್ಮ ಸಂಗಾತಿಯೊಂದಿಗೆ ನೀವು ಚರ್ಚಿಸುತ್ತೀರಿ. ನಿಮ್ಮ ಪ್ರತಿಯೊಂದು ನಿರ್ಧಾರದಲ್ಲೂ ನಿಮ್ಮ ಸಂಗಾತಿ ನಿಮ್ಮ ಬೆಂಬಲವಾಗಿ ನಿಲ್ಲುತ್ತಾರೆ. ಈ ವಾರ ನಿಮಗೆ ಸಂತೋಷದಿಂದ ಕೂಡಿರುತ್ತದೆ. ನಿಮ್ಮ ಮನೆಗೆ ಹೊಸ ಅತಿಥಿ ಬರಬಹುದು.

ಧನು ರಾಶಿ

ಪ್ರೀತಿಯಲ್ಲಿ ಇರುವವರಿಗೆ ಈ ವಾರ ತೊಂದರೆಯಿಂದ ಕೂಡಿರುತ್ತದೆ. ಈ ವಾರ ಕುಟುಂಬದಲ್ಲಿ ಭಿನ್ನಾಭಿಪ್ರಾಯದ ವಾತಾವರಣ ಉಂಟಾಗಬಹುದು. ನಿಮ್ಮ ಸಂಬಂಧವನ್ನು ಹಾಳು ಮಾಡಲು ಬೇರೆಯವರು ಸಂಚು ರೂಪಿಸಬಹುದು. ನೀವಿಬ್ಬರೂ ಬಲಿಯಾಗೋದಕ್ಕೆ ಹೋಗಬೇಡಿ. ಈ ಬಗ್ಗೆ ಜಾಗೃತರಾಗಿರಿ. ನಿಮ್ಮ ಸಂಬಂಧವನ್ನು ಉಳಿಸಿಕೊಳ್ಳೋದಕ್ಕೆ ನಿಮ್ಮ ಸಂಗಾತಿಯೊಂದಿಗೆ ಮುಕ್ತವಾಗಿ ಮಾತನಾಡಿ.

ಮಕರ ರಾಶಿ

ಪ್ರೀತಿಯಲ್ಲಿ ಇರುವವರಿಗೆ ಈ ವಾರ ಉತ್ತಮವಾಗಿರುತ್ತದೆ. ನಿಮ್ಮ ಜೀವನ ಸಂಗಾತಿ ನಿಮ್ಮ ಪ್ರತಿಯೊಂದು ಆಸೆಯನ್ನು ಪೂರೈಸುತ್ತಾರೆ. ಪ್ರೇಮ ಸಂಬಂಧಗಳಿಗೆ ಈ ಸಮಯ ತುಂಬಾ ಒಳ್ಳೆಯದು. ಈ ವಾರ ನಿಮ್ಮ ಕುಟುಂಬದ ಸದಸ್ಯರು ನಿಮ್ಮ ಪ್ರತಿಯೊಂದು ನಿರ್ಧಾರದಲ್ಲಿ ನಿಮ್ಮೊಂದಿಗೆ ಇರುತ್ತಾರೆ. ಮತ್ತು ನಿಮ್ಮ ಪ್ರೀತಿಯ ಜೀವನವನ್ನು ಬೆಂಬಲಿಸುತ್ತಾರೆ.

ಕುಂಭ ರಾಶಿ

ಪ್ರೀತಿಯಲ್ಲಿ ಇರುವವರಿಗೆ ಈ ಸಮಯವು ತುಂಬಾ ಅನುಕೂಲಕರವಾಗಿರಲಿದೆ. ನಿಮ್ಮ ಪ್ರಿಯಕರನೊಂದಿಗೆ ನಿಮ್ಮ ಮನಸ್ಸಿನ ಮಾತನ್ನು ಹೇಳಬಹುದು. ಈ ವಾರ ನಿಮ್ಮ ಪ್ರೇಮಿ ನಿಮ್ಮೊಂದಿಗೆ ಸಂತೋಷದಿಂದ ಇರುತ್ತಾರೆ. ನಿಮ್ಮ ಸಂಗಾತಿಯೊಂದಿಗೆ ಉತ್ತಮ ಸಮಯವನ್ನು ಕಳೆಯುವಿರಿ. ನಿಮ್ಮ ಸಂಗಾತಿ ನಿಮ್ಮ ಮಾತಿಗೆ ಪ್ರಾಮುಖ್ಯತೆ ನೀಡುತ್ತಾರೆ. ಕುಟುಂಬ ಸದಸ್ಯರು ನಿಮ್ಮ ಸಂಬಂಧವನ್ನು ಒಪ್ಪಿಕೊಳ್ಳುತ್ತಾರೆ. ನಿಮ್ಮ ಪ್ರೀತಿಯ ಸಂಗಾತಿಯೂ ಈ ವಾರ ಜೀವನ ಸಂಗಾತಿಯಾಗಬಹುದು.

ಮೀನ ರಾಶಿ

ಪ್ರೀತಿಯಲ್ಲಿ ಇರುವವರಿಗೆ ಈ ಸಮಯವು ತುಂಬಾ ಒಳ್ಳೆಯದು. ನಿಮ್ಮ ಕುಟುಂಬದ ಸದಸ್ಯರೊಂದಿಗೆ ನಿಮ್ಮ ಸಂಗಾತಿಯ ಬಗ್ಗೆ ಮಾತನಾಡಬಹುದು. ಅಲ್ಲದೆ, ನಿಮ್ಮ ನಿರ್ಧಾರದಲ್ಲಿ ಕುಟುಂಬ ಸದಸ್ಯರು ನಿಮ್ಮೊಂದಿಗೆ ಇರುತ್ತಾರೆ. ಈ ವಾರದ ಪ್ರತಿಯೊಂದು ಪರಿಸ್ಥಿತಿಯಲ್ಲಿಯೂ ನಿಮ್ಮ ಸಂಗಾತಿಯು ನಿಮ್ಮ ಬೆಂಬಲಕ್ಕೆ ನಿಲ್ಲುತ್ತಾರೆ. ಮತ್ತು ನಿಮ್ಮ ಕುಟುಂಬ ಮತ್ತು ಪಾಲುದಾರರೊಂದಿಗೆ ನೀವು ದೀರ್ಘ ಪ್ರಯಾಣವನ್ನು ಮಾಡಬಹುದು. ಈ ವಾರ ನೀವು ನಿಮ್ಮ ಸಂಗಾತಿ ಮತ್ತು ಕುಟುಂಬದೊಂದಿಗೆ ಸಾಕಷ್ಟು ಆನಂದದಾಯಕ ಸಮಯವನ್ನು ಕಳೆಯುತ್ತೀರಿ.

English summary

Love Weekly Horoscope July 3rd to 9th 2023: Love interests Predictions on All Zodiac Signs

Here are July love horoscope of July 3rd - 9th 2023 in Kannada read on.
Story first published: Monday, July 3, 2023, 16:00 [IST]
X
Desktop Bottom Promotion