July Month Love Horoscope 2023: ಜುಲೈ ತಿಂಗಳಲ್ಲಿ 24 ರಿಂದ 30 ರವರೆಗೆ ಪ್ರೇಮಿಗಳಿಗೆ, ವಿವಾಹಿತರಿಗೆ ಹೇಗಿರಲಿದೆ?

ದಾಂಪತ್ಯ ಜೀವನ ಹಾಗೂ ಪ್ರೇಮಿಗಳ ಜೀವನ ಪ್ರತಿ ದಿನ ಒಂದೇ ರೀತಿ ಇರೋದಿಲ್ಲ. ಏಳು-ಬೀಳುಗಳು ಇದ್ದೇ ಇರುತ್ತೆ. ಈ ವಾರ ಗ್ರಹಗಳ ಚಲನೆಯಲ್ಲಿ ಬದಲಾವಣೆ ಆಗಿರೋದ್ರಿಂದ ಕೆಲವು ರಾಶಿಯವರಿಗೆ ಈ ವಾರ ತುಂಬಾನೇ ಚೆನ್ನಾಗಿರಲಿದೆ. ಇನ್ನೂ ಕೆಲವು ರಾಶಿಯವರು ಇದ್ರಿಂದ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಅಷ್ಟಕ್ಕು ಜುಲೈ ಕೊನೆಯ ವಾರದಲ್ಲಿ ದ್ವಾದಶ ರಾಶಿಗಳ ಪ್ರೇಮ ಭವಿಷ್ಯ ಹೇಗಿರಲಿದೆ ಅನ್ನೋದನ್ನು ತಿಳಿಯೋಣ.

ಮೇಷ ರಾಶಿ

ಮೇಷ ರಾಶಿಯವರಿಗೆ ಪ್ರೇಮದ ವಿಚಾರದಲ್ಲಿ ಈ ವಾರವು ವಿಶೇಷವಾಗಿರುತ್ತದೆ. ನಿಮ್ಮ ಸಂಬಂಧದಲ್ಲಿ ಪ್ರೀತಿಯೂ ಹೆಚ್ಚಾಗಲಿದೆ. ನೀವು ಕಷ್ಟಪಟ್ಟು ಕೆಲಸ ಮಾಡಿದರೆ ಯಾರಾದರೂ ಒಬ್ಬರೂ ಉತ್ತಮ ಸ್ಥಾನದಲ್ಲಿರುವ ಮಹಿಳೆಯು ನಿಮ್ಮ ಸಹಾಯಕ್ಕೆ ಬರುತ್ತಾರೆ. ಆದರೆ ಈ ವಾರದ ಕೊನೆಯಲ್ಲಿ ಕೆಲವು ಸುದ್ದಿಗಳನ್ನು ಕೇಳಿ ನಿಮ್ಮ ಮನಸ್ಸು ಕಂಗಾಲಾಗಬಹುದು. ಹೀಗಾಗಿ ನೀವು ತಾಳ್ಮೆಯಿಂದ ಕೆಲಸ ಮಾಡಬೇಕಾಗುತ್ತದೆ. ನಿಮ್ಮ ಮನಸ್ಸು ವಿಚಲಿತಗೊಳ್ಳದಂತೆ ನೋಡಿಕೊಳ್ಳಿ.

Love Weekly Horoscope July 24 to 30 July 2023: Love interests Predictions on All Zodiac Signs

ವೃಷಭ ರಾಶಿ

ಈ ವಾರ ಅದೃಷ್ಟ ವೃಷಭ ರಾಶಿಯವರ ಕೈ ಬಿಡೋದಿಲ್ಲ. ನಿಮ್ಮ ಪ್ರೇಮ ಜೀವನದಲ್ಲಿ ಸಂತೋಷದ ಕ್ಷಣಗಳು ಇರುತ್ತದೆ. ಮತ್ತು ಪರಸ್ಪರ ಪ್ರೀತಿ ಬಲಗೊಳ್ಳುತ್ತದೆ. ನಿಮ್ಮ ಸಂಗಾತಿಯ ಜೊತೆಗೆ ಆನಂದಕರ ಸಮಯವನ್ನು ಕಳೆಯಲು ಸಾಧ್ಯವಾಗುತ್ತದೆ. ಈ ವಾರದ ಕೊನೆಯಲ್ಲಿ ನಿಮ್ಮ ಸಂಗಾತಿಯೊಂದಿಗೆ ಉತ್ತಮ ಸ್ಥಳಕ್ಕೆ ಭೇಟಿ ನೀಡುವ ಸಾಧ್ಯತೆಯಿದೆ. ಮತ್ತು ನಿಮ್ಮ ಪ್ರೀತಿಯ ಜೀವನದಲ್ಲಿ ಶಾಂತಿ ತುಂಬಿರುತ್ತದೆ.

ಮಿಥುನ ರಾಶಿ

ಮಿಥುನ ರಾಶಿಯವರಿಗೆ ಈ ವಾರ ಅದೃಷ್ಟದಾಯಕವಾಗಿರುತ್ತದೆ. ಈ ವಾರ ನೀವು ನಿಮ್ಮ ಪ್ರೇಮ ಜೀವನದಲ್ಲಿ ಸಾಕಷ್ಟು ನಿರಾಳವಾಗಿರುತ್ತೀರಿ. ಮತ್ತು ನಿಮ್ಮ ಸಂಗಾತಿಯು ನಿಮ್ಮ ಸಂಕಷ್ಟದಲ್ಲಿ ಜೊತೆಯಾಗಿರುತ್ತಾರೆ. ವಾರದ ಕೊನೆಯಲ್ಲಿ ನಿಮ್ಮ ಪ್ರೇಮ ಜೀವನದಲ್ಲಿ ಕ್ರಮೇಣ ಬದಲಾವಣೆಗಳು ಕಂಡುಬರುತ್ತವೆ. ಸಂಗಾತಿಯ ಜೊತೆಗೆ ಸಂತೋಷ ಹಾಗೂ ಸಮೃದ್ಧಿಯ ಕ್ಷಣಗಳನ್ನು ಕಳೆಯುತ್ತೀರಿ.

ಕರ್ಕಾಟಕ ರಾಶಿ

ಕರ್ಕಾಟಕ ರಾಶಿಯವರು ಈ ವಾರ ಪ್ರೇಮ ಜೀವನ ಆಹ್ಲಾದಕರವಾಗಿರುತ್ತದೆ. ಈ ವಾರ ನಿಮ್ಮ ಜೀವನದಲ್ಲಿ ಸಂತೋಷವು ಹೆಚ್ಚಾಗುತ್ತದೆ. ಸಂಯಮದಿಂದ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳಬೇಕು. ವಾರದ ಕೊನೆಯಲ್ಲಿ ಮಹಿಳೆಯ ಕಾರಣದಿಂದಾಗಿ ಇದ್ದಕ್ಕಿದ್ದಂತೆ ವ್ಯತ್ಯಾಸಗಳು ಉಂಟಾಗಬಹುದು ಮತ್ತು ಪ್ರೀತಿಯಲ್ಲಿ ಚಡಪಡಿಕೆ ಕೂಡ ಹೆಚ್ಚಾಗುತ್ತದೆ.

ಸಿಂಹ ರಾಶಿ

ಸಿಂಹ ರಾಶಿಯವರಿಗೆ ಪ್ರೇಮ ಸಂಬಂಧಗಳ ವಿಷಯದಲ್ಲಿ ಈ ವಾರದ ಆರಂಭದಲ್ಲಿ ಕೆಲವು ತೊಂದರೆಗಳು ಹೆಚ್ಚಾಗಬಹುದು. ನಿಮ್ಮ ಮನಸ್ಸು ಅಸಮಾಧಾನಗೊಳ್ಳಬಹುದು. ಯಾವುದೇ ಹೊಸ ಬದಲಾವಣೆಯ ಬಗ್ಗೆಯೂ ಮನಸ್ಸು ಅತೃಪ್ತವಾಗಿರುತ್ತದೆ. ವಾರದ ಕೊನೆಯಲ್ಲಿ ನೀವು ಸಮತೋಲನವನ್ನು ಕಾಯ್ದುಕೊಂಡು ಜೀವನದಲ್ಲಿ ಮುನ್ನಡೆದರೆ ಸಂತೋಷ ಮತ್ತು ಸಮೃದ್ಧಿಯನ್ನು ಕಂಡುಕೊಳ್ಳಲು ಸಾಧ್ಯವಾಗುತ್ತದೆ. ನಿಮ್ಮಿಬ್ಬರ ಮಧ್ಯೆ ಪರಸ್ಪರ ಪ್ರೀತಿ ಬಲಗೊಳ್ಳುತ್ತದೆ.

ಕನ್ಯಾ ರಾಶಿ

ಕನ್ಯಾ ರಾಶಿಯವರು ಪ್ರೇಮ ವ್ಯವಹಾರಗಳ ವಿಷಯದಲ್ಲಿ ಎಚ್ಚರಿಕೆಯಿಂದ ನಿರ್ಧಾರ ತೆಗೆದುಕೊಳ್ಳಬೇಕು. ಈ ವಾರ ಸಂಗಾತಿಯ ಜೊತೆಗಿನ ಗೊಂದಲದ ಮಧ್ಯೆಯೂ ಎಲ್ಲವನ್ನೂ ಸರಿದೂಗಿಸಿಕೊಂಡು ಹೋಗೋದಕ್ಕೆ ಪ್ರಯತ್ನಿಸಿ ಆಗ ಮಾತ್ರ ನೀವು ಸಂತೋಷವಾಗಿ ಇರಬಹುದು. ವಾರದ ಆರಂಭದಲ್ಲಿ ಮನಸ್ಸು ಯಾವುದೋ ವಿಷಯದ ಬಗ್ಗೆ ಚಂಚಲವಾಗಿರುತ್ತದೆ. ಮತ್ತು ಭಾವನಾತ್ಮಕವಾಗಿ ಈ ವಾರ ನಿಮಗೆ ಪ್ರತಿಕೂಲವಾಗಿರುತ್ತದೆ.

ತುಲಾ ರಾಶಿ

ಪ್ರೀತಿಯ ವಿಷಯದಲ್ಲಿ ಈ ವಾರ ತುಲಾ ರಾಶಿಯವರಿಗೆ ಉತ್ತಮವಾಗಿರಲಿದೆ. ನಿಮ್ಮ ಪ್ರೀತಿ ಪಾತ್ರರ ಜೊತೆಗೆ ನೀವು ಆಹ್ಲಾದಕರ ಸಮಯವನ್ನು ಕಳೆಯುತ್ತೀರಿ. ಈ ವಾರ ನಿಮ್ಮ ದಾಂಪತ್ಯ ಜೀವನ ಅಡೆ-ತಡೆಗಳ ಮಧ್ಯೆಯೂ ಸಂತೋಷವಾಗಿರುತ್ತದೆ. ಈ ವಾರದ ಕೊನೆಯಲ್ಲಿ ಮಹಿಳೆಯ ಬಗ್ಗೆ ಮನಸ್ಸು ಚಂಚಲವಾಗಬಹುದು. ಇದರಿಂದಾಗಿ ನಿಮ್ಮ ಪ್ರೇಮ ಜೀವನದ ಬಗ್ಗೆ ಹೆಚ್ಚು ಗಮನ ಹರಿಸಲು ನಿಮಗೆ ಸಾಧ್ಯವಾಗುವುದಿಲ್ಲ.

ವೃಶ್ಚಿಕ ರಾಶಿ

ಈ ವಾರ ವೃಶ್ಚಿಕ ರಾಶಿಯವರ ಪ್ರೇಮ ಜೀವನ ಉತ್ತಮವಾಗಿರಲಿದೆ. ಮತ್ತು ಪರಸ್ಪರ ಪ್ರೀತಿ ಬಲಗೊಳ್ಳುತ್ತದೆ. ನಿಮ್ಮ ಪ್ರೇಮ ಜೀವನದಲ್ಲಿ ನೀವು ಸಂತೋಷವಾಗಿರುತ್ತೀರಿ. ಮತ್ತು ಪರಸ್ಪರ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳುತ್ತೀರಿ. ವಾರದ ಕೊನೆಯಲ್ಲಿ ನೀವು ನಿಮ್ಮ ಸಂಗಾತಿಯೊಂದಿಗೆ ಮದುವೆ ಸಮಾರಂಭ ಅಥವಾ ವಿಶೇಷ ಕಾರ್ಯಕ್ರಮಕ್ಕೆ ಹಾಜರಾಗಬಹುದು.

ಧನು ರಾಶಿ

ಧನು ರಾಶಿಯವರಿಗೆ ಈ ವಾರ ನಿಮ್ಮ ಪ್ರೀತಿಯನ್ನು ಬಲಪಡಿಸುವ ವಾರವಾಗಿದೆ. ನಿಮ್ಮ ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿಯು ಕಾಕತಾಳೀಯವಾಗಿ ಇರುತ್ತದೆ. ಈ ವಾರದ ಆರಂಭದಲ್ಲಿ ನೀವು ಹಿರಿಯರ ಸಹಾಯವನ್ನು ಪಡೆಯಬಹುದು. ಬಲವಾದ ವ್ಯಕ್ತಿತ್ವವುಳ್ಳ ವ್ಯಕ್ತಿ ನೀವಾಗಿರುತ್ತೀರಿ. ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಮಾಡೋದಕ್ಕೆ ಹೀಗಬೇಡಿ. ಈ ವಾರ ನೀವು ಜೀವನದಲ್ಲಿ ಸಂತೋಷ ಮತ್ತು ಶಾಂತಿಯನ್ನು ಅನುಭವಿಸುವಿರಿ.

ಮಕರ ರಾಶಿ

ಈ ವಾರ ಮಕರ ರಾಶಿಯವರು ತಮ್ಮ ಪ್ರೇಮ ಜೀವನದಲ್ಲಿ ಶಾಂತಿ ಕಂಡುಕೊಳ್ಳುತ್ತಾರೆ. ನಿಮ್ಮ ಮನಸ್ಸು ಸಂತೋಷದಿಂದ ಕೂಡಿರುತ್ತದೆ. ನಿಮ್ಮ ಸಂಗಾತಿಯೊಂದಿಗೆ ಎಲ್ಲಾದರೂ ಹೊರಗಡೆ ಹೋಗಿ ಉತ್ತಮ ಸಮಯವನ್ನು ಕಳೆಯಿರಿ. ಈ ವಾರದ ಕೊನೆಯಲ್ಲಿ ನೀವು ಒಂಟಿತನ ಅನುಭವಿಸಬಹುದು. ಮತ್ತು ನಿಮ್ಮ ಆತಂಕವೂ ಹೆಚ್ಚಾಗುತ್ತದೆ.

ಕುಂಭ ರಾಶಿ

ಈ ವಾರ ಕುಂಭ ರಾಶಿಯವರ ಪ್ರೇಮ ಸಂಬಂಧಗಳಲ್ಲಿ ಬಹಳಷ್ಟು ಬದಲಾವಣೆಗಳು ಆಗುತ್ತದೆ. ನೀವು ಹೊಸ ಜೀವನ ನಡೆಸೋದಕ್ಕೆ ಹೆಜ್ಜೆ ಇಡುತ್ತೀರಿ. ಮತ್ತು ನಿಮ್ಮ ಪ್ರೀತಿಯ ಸಂಬಂಧಗಳು ಸಹ ಬಲಗೊಳ್ಳುತ್ತವೆ. ವಾರದ ಕೊನೆಯಲ್ಲಿ ನಿಮ್ಮ ಮನಸ್ಸಿನ ಉದ್ವಿಗ್ನತೆ ಹೆಚ್ಚಾಗಬಹುದು. ಸಂಗಾತಿಯ ಜೊತೆಗೆ ನಿಮ್ಮೆಲ್ಲಾ ಅಭಿಪ್ರಾಯಗಳನ್ನು ವ್ಯಕ್ತಪಡಿಸಿ. ಈ ವಾರ ಬುದ್ಧಿವಂತಿಕೆಯಿಂದ ಕೆಲಸ ಮಾಡಿಲು ಪ್ರಯತ್ನಿಸಿದರೆ ಒಳ್ಳೆಯದು.

ಮೀನ ರಾಶಿ

ಈ ವಾರ ಮೀನ ರಾಶಿಯವರ ಪ್ರೇಮ ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿಯು ಕಾಕತಾಳೀಯವಾಗಿರುತ್ತದೆ. ಮತ್ತು ನಿಮ್ಮ ಮಧ್ಯೆ ಪರಸ್ಪರ ಪ್ರೀತಿ ಬಲಗೊಳ್ಳುತ್ತದೆ. ಪ್ರೇಮ ಜೀವನದಲ್ಲಿ ನೀವು ಸಂತೋಷವಾಗಿರುತ್ತೀರಿ. ಈ ವಾರದ ಕೊನೆಯಲ್ಲಿ ಮನಸ್ಸು ಯಾವುದೋ ವಿಷಯದ ಬಗ್ಗೆ ದುಃಖಿತವಾಗಬಹುದು. ನಿಮ್ಮ ಸಂಗಾತಿಯು ಈ ವಾರ ನಿಮ್ಮ ನಿರೀಕ್ಷೆಗಳಿಗೆ ತಕ್ಕಂತೆ ಬದುಕೋದಿಲ್ಲ. ಇದರಿಂದ ನೀವು ಬೇಸರಗೊಳ್ಳುತ್ತೀರಿ.

English summary

Love Weekly Horoscope July 24 to 30 July 2023: Love interests Predictions on All Zodiac Signs

Here are July love horoscope of July 24 to 30 July 2023 in Kannada read on.
Story first published: Monday, July 24, 2023, 10:40 [IST]
X
Desktop Bottom Promotion