Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
July Month Love Horoscope 2023: ಜುಲೈ ತಿಂಗಳಲ್ಲಿ 17 ರಿಂದ 23 ರವರೆಗೆ ಪ್ರೇಮಿಗಳಿಗೆ, ವಿವಾಹಿತರಿಗೆ ಹೇಗಿರಲಿದೆ?
ಈ ವಾರ ಪವಿತ್ರ ಶ್ರಾವಣ ಮಾಸ ನಡೆಯುತ್ತಿದೆ. ಹೀಗಾಗಿ ವೈವಾಹಿಕ ಜೀವನದಲ್ಲಿರುವವರು ಮತ್ತು ಪ್ರೇಮಿಗಳ ಜೀವನದಲ್ಲಿ ಅನೇಕ ಬದಲಾವಣೆಗಳನ್ನು ಕಾಣಬಹುದು. ಇನ್ನೂ ಪ್ರೇಮಿಗಾಗಿ ಹಾಗೂ ಮದುವೆಯಾಗೋದಕ್ಕೆ ವಧು ವರರನ್ನು ಹುಡುಕುತ್ತಿರುವವರ ಬಾಳಿನಲ್ಲಿ ಸಂತಸದ ಸುದ್ದಿ ಕೇಳಲಿದ್ದಾರಾ? ಅಥವಾ ಈ ವಾರವೂ ಒಂಟಿಯಾಗಿಯೇ ಉಳಿಯಲಿದ್ದಾರಾ? ಒಟ್ಟಿನಲ್ಲಿ ಈ ವಾರ ದ್ವಾದಶ ರಾಶಿಗಳ ಪ್ರೇಮ ಭವಿಷ್ಯ ಹೇಗೆದೆ ಅನ್ನೋದನ್ನು ತಿಳಿಯೋಣ.
ಮೇಷ ರಾಶಿ
ಪ್ರೀತಿಯಲ್ಲಿ ಇರುವವರಿಗೆ ಈ ವಾರ ಕೆಲವು ಸಮಸ್ಯೆಗಳು ಎದುರಾಗಬಹುದು. ನಿಮ್ಮ ಕುಟುಂಬ ಸದಸ್ಯರು ನಿಮ್ಮ ಸಂಬಂಧಕ್ಕೆ ವಿರೋಧ ವ್ಯಕ್ತ ಪಡಿಸಬಹುದು. ನಿಮ್ಮ ಸಂಗಾತಿ ನಿಮ್ಮ ಕಡೆಗೆ ಇರುತ್ತಾರೆ. ಹೀಗಾಗಿ ಭಯ ಪಡೋ ಅಗತ್ಯವಿಲ್ಲ. ಪ್ರತಿಕೂಲ ಸಂದರ್ಭಗಳಲ್ಲಿಯೂ ನಿಮ್ಮ ಸಂಗಾತಿ ನಿಮ್ಮ ಪರವಾಗಿ ನಿಲ್ಲುತ್ತಾರೆ. ಈ ವಾರ ನಿಮ್ಮ ಸಂಗಾತಿಯೊಂದಿಗೆ ಸಮಯ ಕಳೆಯಿರಿ. ಅವರಿಗೆ ನಿಮ್ಮ ಅವಶ್ಯಕತೆ ಇದೆ.

ವೃಷಭ ರಾಶಿ
ಪ್ರೇಮಿಗಳಿಗೆ ಈ ವಾರ ಉತ್ತಮವಾಗಿರುತ್ತದೆ. ನಿಮ್ಮ ಸಂಗಾತಿಯೊಂದಿಗೆ ಜೊತೆಗೆ ಆದಷ್ಟು ಸಮಯ ಕಳೆಯಿರಿ. ಸಂಗಾತಿಯನ್ನು ಸಂತೋಷವಾಗಿಡಲು ಪ್ರಯತ್ನಿಸಿ. ಪ್ರೇಮ ಸಂಬಂಧಗಳಿಗೆ ಈ ಸಮಯ ಅನುಕೂಲಕರವಾಗಿದೆ. ಎಲ್ಲವೂ ನಿಮ್ಮ ಪರವಾಗಿರುತ್ತದೆ. ನಿಮ್ಮ ಸಂಗಾತಿಯೊಂದಿಗಿನ ನಿಮ್ಮ ಸಂಬಂಧವು ಬಲವಾಗಿರುತ್ತದೆ. ಮದುವೆಯಾದವರು ಈ ವಾರ ನೀವು ಕುಟುಂಬ ಯೋಜನೆ ಮಾಡಬಹುದು.
ಮಿಥುನ ರಾಶಿ
ಪ್ರೀತಿಯಲ್ಲಿರುವವರಿಗೆ ಈ ವಾರ ತುಂಬಾ ಒಳ್ಳೆಯದು. ಯಾವುದೋ ವಿಷಯದಲ್ಲಿ ನಿಮ್ಮಿಬ್ಬರ ನಡುವೆ ಕೆಲವು ಭಿನ್ನಾಭಿಪ್ರಾಯಗಳಿದ್ದರೂ ಸಹ ನಿಮ್ಮ ಸಂಗಾತಿಯೊಂದಿಗೆ ನೀವು ಉತ್ತಮ ಸಮಯವನ್ನು ಕಳೆಯುತ್ತೀರಿ. ನಿಮ್ಮ ಸಂಗಾತಿ ನಿಮಗೆ ಸಂಪೂರ್ಣವಾಗಿ ಸಹಕರಿಸುತ್ತಾರೆ. ಈ ವಾರ ನಿಮ್ಮ ಸಂಗಾತಿಯೊಂದಿಗೆ ಹೊರಗೆ ಹೋಗಲು ಯೋಜನೆ ಹಾಕಿಕೊಳ್ಳಬಹುದು. ಅಲ್ಲದೆ, ನಿಮ್ಮ ಸಂಗಾತಿಯು ನಿಮ್ಮ ಮನಸ್ಥಿತಿಯನ್ನು ಅರ್ಥಮಾಡಿಕೊಳ್ಳುತ್ತಾರೆ. ಈ ವಾರ ನಿಮ್ಮ ಸಂಗಾತಿಯಿಂದ ಹೆಚ್ಚಿನ ಪ್ರೀತಿಯನ್ನು ಪಡೆಯಲಿದ್ದೀರಿ.
ಕರ್ಕಾಟಕ ರಾಶಿ
ಪ್ರೀತಿಯಲ್ಲಿರುವವರಿಗೆ ಈ ವಾರ ಸಮಸ್ಯೆಗಳು ಹೆಚ್ಚಾಗಬಹುದು. ಇನ್ನೂ ಮದುವೆಯಾದವರ ಭವಿಷ್ಯ ನೋಡೋದಾದ್ರೆ ನಿಮ್ಮ ಹಾಗೂ ಸಂಗಾತಿಯ ಮಧ್ಯೆ ಮನಸ್ಥಾಪ ಉಂಟಾಗಬಹುದು. ನಿಮ್ಮ ಕುಟುಂಬದ ಸದಸ್ಯರು ನಿಮ್ಮ ಸಂಗಾತಿಯೊಂದಿಗೆ ಇರಲು ಇಷ್ಟಪಡದಿರಬಹುದು. ಕೆಲವರು ನಿಮ್ಮ ಸಂಬಂಧವನ್ನು ಹಾಳು ಮಾಡಲು ಪ್ರಯತ್ನಿಸಬಹುದು. ನಿಮ್ಮ ಸಂಗಾತಿಯೊಂದಿಗೆ ಸಮಯ ಕಳೆಯುವುದು ಒಳ್ಳೆಯದು.
ನಿಮ್ಮ ಸಂಗಾತಿಯ ಮನಸ್ಸಿನಲ್ಲಿ ಏನಿದೆ ಅನ್ನೋದನ್ನು ತಿಳಿದುಕೊಳ್ಳೋದಕ್ಕೆ ಪ್ರಯತ್ನಿಸಿ. ಅವರ ಭಾವನೆಗಳನ್ನು ಗೌರವಿಸಿ ಮತ್ತು ಅವರ ಮೇಲೆ ಬಂದಿರುವ ಆರೋಪಗಳನ್ನು ಕೂಲಂಕುಷವಾಗಿ ಪರಿಶೀಲಿಸಿದ ನಂತರ ಮುಂದಿನ ನಿರ್ಧಾರ ತೆಗೆದುಕೊಳ್ಳಿ. ಇಲ್ಲದಿದ್ದರೆ ಇದರಿಂದ ನಿಮಗೆ ನಷ್ಟವಾಗಬಹುದು.
ಸಿಂಹ ರಾಶಿ
ಪ್ರೇಮಿಗಳಿಗೆ ಈ ವಾರ ಅಸ್ಥಿರವಾಗಿರುತ್ತದೆ. ನಿಮ್ಮ ಸಂಗಾತಿಯೊಂದಿಗೆ ನೀವು ಜಗಳವಾಡಬಹುದು. ನಿಮ್ಮ ನಡವಳಿಕೆಯಿಂದ ನಿಮ್ಮ ಸಂಗಾತಿ ಅಸಮಾಧಾನಗೊಳ್ಳಬಹುದು. ಅವರು ತಮ್ಮ ಮನಸ್ಸಿನ ಮಾತನ್ನು ನಿಮ್ಮೊಂದಿಗೆ ಹೇಳೋದಕ್ಕೆ ಸಾಧ್ಯವಾಗದೇ ಇರಬಹುದು. ಅವರ ಈ ನಡವಳಿಕೆಯಿಂದಾಗಿ ನಿಮ್ಮ ಪರಸ್ಪರ ಭಿನ್ನಾಭಿಪ್ರಾಯಗಳು ಹೆಚ್ಚಾಗಬಹುದು. ನಿಮ್ಮ ಸಂಗಾತಿಯೊಂದಿಗೆ ಸಮಯ ಕಳೆಯುವುದು ಒಳ್ಳೆಯದು. ನಿಮ್ಮ ಸಂಗಾತಿಯ ಜೊತೆಗೆ ಎಲ್ಲಾದರೂ ಹೊರಗಡೆ ಹೋಗಿ.
ಕನ್ಯಾ ರಾಶಿ
ಪ್ರೀತಿಯಲ್ಲಿ ಇರುವವರಿಗೆ ಈ ವಾರ ಉತ್ತಮವಾಗಿರುತ್ತದೆ. ನಿಮ್ಮ ಸಂಗಾತಿ ನಿಮ್ಮ ಆಲೋಚನೆಗಳಿಂದ ಪ್ರಭಾವಿತರಾಗುತ್ತಾರೆ. ಹಾಗೂ ನೀವು ನಿಮ್ಮ ಸಂಗಾತಿಯೊಂದಿಗೆ ವಿಹಾರಕ್ಕೆ ಹೋಗಬಹುದು. ನೀವು ಇನ್ನೂ ನಿಮ್ಮ ಸಂಗಾತಿಗೆ ನಿಮ್ಮ ಮನಸ್ಸನ್ನು ಹೇಳಿಲ್ಲದಿದ್ದರೆ ಪ್ರೀತಿಯನ್ನು ಹೇಳಿಕೊಳ್ಳಲು ಇದು ಅನುಕೂಲಕರ ಸಮಯವಾಗಿದೆ. ನಿಮ್ಮ ಸಂಗಾತಿಯ ಜೊತೆಗೆ ಮನಸ್ಸು ಬಿಚ್ಚಿ ಮಾತನಾಡಿ. ನಿಮ್ಮ ಸಂಗಾತಿ ನಿಮ್ಮನ್ನು ಗೌರವಿಸುತ್ತಾರೆ. ಪ್ರೇಮ ಸಂಬಂಧಗಳಿಗೆ ಸಮಯ ಅನುಕೂಲಕರವಾಗಿದೆ.
ತುಲಾ ರಾಶಿ
ಪ್ರೇಮ ಜೀವನದಲ್ಲಿ ಇರುವವರಿಗೆ ಈ ವಾರ ಉತ್ತಮವಾಗಿರುತ್ತದೆ. ನಿಮ್ಮ ಸಂಗಾತಿಯೊಂದಿಗೆ ಭವಿಷ್ಯಕ್ಕಾಗಿ ನೀವು ಹೊಸ ಯೋಜನೆಗಳನ್ನು ಮಾಡಬಹುದು. ಹೀಗಾಗಿ ಕುಟುಂಬ ಯೋಜನೆಯನ್ನು ಕೊಂಚ ಹಿಂದಕ್ಕೆ ಹಾಕುವುದು ಒಳ್ಳೆಯದು. ನಿಮ್ಮ ಸಂಗಾತಿ ನಿಮ್ಮ ಕಡೆಗಿರುತ್ತಾರೆ. ನಿಮ್ಮ ಮಧ್ಯೆ ಕೆಲವು ಜಗಳಗಳು ಬರಬಹುದು. ಪ್ರೇಮ ಸಂಬಂಧಗಳಿಗೆ ಈ ವಾರ ಅನುಕೂಲಕರವಾಗಿದೆ. ನಿಮ್ಮ ಸಂಗಾತಿ ತನ್ನ ಭಾವನೆಗಳನ್ನು ನಿಮ್ಮ ಮುಂದೆ ವ್ಯಕ್ತಪಡಿಸಬಹುದು.
ವೃಶ್ಚಿಕ ರಾಶಿ
ಪ್ರೀತಿಯಲ್ಲಿ ಇರುವವರು ಈ ವಾರ ಬಹಳ ಜಾಗರೂಕತೆಯಿಂದ ಇರಬೇಕು. ಎದುರಾಳಿಗಳು ನಿಮ್ಮ ಮತ್ತು ಸಂಗಾತಿಯ ನಡುವೆ ಭಿನ್ನಾಭಿಪ್ರಾಯಗಳನ್ನು ಸೃಷ್ಟಿಸಲು ಪ್ರಯತ್ನಿಸುತ್ತಾರೆ. ಇದರಲ್ಲಿ ಅವರು ಯಶಸ್ವಿಯಾಗುತ್ತಾರೆ. ಯಾರ ಮಾತಿಗೂ ತಲೆ ಕೆಡಿಸಿಕೊಳ್ಳದೇ ಸಂಗಾತಿ ಮೇಲೆ ನಂಬಿಕೆ ಇಟ್ಟರೆ ಉತ್ತಮ. ಅವರೊಂದಿಗೆ ಸಮಯ ಕಳೆಯಿರಿ ಮತ್ತು ಅವರ ಆಲೋಚನೆಗಳನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿ. ಸಂಗಾತಿಯ ಮನಸ್ಸಿನಲ್ಲಿ ಏನಿದೆ ಅನ್ನೋದನ್ನು ತಿಳಿದುಕೊಳ್ಳೋದಕ್ಕೆ ಪ್ರಯತ್ನಿಸಿ.
ಧನು ರಾಶಿ
ಪ್ರೀತಿಯಲ್ಲಿ ಇರುವವರಿಗೆ ಈ ವಾರ ಸವಾಲುಗಳಿಂದ ತುಂಬಿರುತ್ತವೆ. ನಿಮ್ಮ ಸಂಗಾತಿಯು ಇತರರ ಮಾತು ಕೇಳಿ ನಿಮ್ಮನ್ನು ಅವಮಾನಿಸಬಹುದು. ಇದರಿಂದಾಗಿ ನೀವಿಬ್ಬರೂ ಬೇರೆಯಾಗುವ ಸಾಧ್ಯತೆ ಕೂಡ ಹೆಚ್ಚಿದೆ. ನಿಮ್ಮ ಸಂಗಾತಿಯೊಂದಿಗೆ ಕುಳಿತು ಅವರ ಮನಸ್ಸಿನಲ್ಲಿರುವ ಅನುಮಾನವನ್ನು ಹೋಗಲಾಡಿಸುವುದು. ಮತ್ತು ಅವರೊಂದಿಗೆ ಸ್ವಲ್ಪ ಸಮಯ ಕಳೆಯುವುದು ಉತ್ತಮ.
ಮಕರ ರಾಶಿ
ಪ್ರೀತಿಯಲ್ಲಿ ಇರುವವರಿಗೆ ಈ ವಾರವು ನಿಮ್ಮ ಸಂಗಾತಿಗೆ ಸಂಪೂರ್ಣವಾಗಿ ಮೀಸಲಾಗಿರುತ್ತದೆ. ಪ್ರೇಮ ಸಂಬಂಧಗಳಿಗೆ ಈ ಸಮಯ ಸೂಕ್ತವಾಗಿದೆ. ನಿಮ್ಮ ಸಂಗಾತಿ ನಿಮ್ಮಲ್ಲಿ ಮನಸ್ಸಿನ ಮಾತನ್ನು ಹೇಳಬಹುದು. ಈ ವಾರ ನಿಮ್ಮ ಸಂಗಾತಿಯೊಂದಿಗೆ ಉತ್ತಮ ಸಮಯವನ್ನು ಕಳೆಯಲಿದ್ದೀರಿ. ಅಲ್ಲದೆ ನಿಮ್ಮ ಸಂಗಾತಿ ನಿಮ್ಮ ಮಾತಿಗೆ ಪ್ರಾಮುಖ್ಯತೆ ನೀಡುತ್ತಾರೆ.
ಕುಂಭ ರಾಶಿ
ಪ್ರೇಮಿಗಳಿಗೆ ಈ ವಾರ ಉತ್ತಮವಾಗಿರುತ್ತದೆ. ನಿಮ್ಮ ಸಂಗಾತಿಯೊಂದಿಗೆ ನಿಮ್ಮ ಮನಸ್ಸಿನ ಭಾವನೆಗಳನ್ನು ಹಂಚಿಕೊಳ್ಳದಿದ್ದರೆ ಈ ಸಮಯ ಸೂಕ್ತವಾಗಿದೆ. ನಿಮ್ಮ ಸಂಗಾತಿ ಕೂಡ ನೀವು ಪ್ರೀತಿಯನ್ನು ವ್ಯಕ್ತಪಡಿಸಲಿ ಎಂದು ಕಾಯುತ್ತಿದ್ದಾರೆ. ಇನ್ನೂ ಮದುವೆಯಾದವರು ಈ ವಾರ ನೀವು ನಿಮ್ಮ ಸಂಗಾತಿಯೊಂದಿಗೆ ಉತ್ತಮ ಸಮಯ ಕಳೆಯುತ್ತೀರಿ.
ಮೀನ ರಾಶಿ
ಪ್ರೀತಿಯಲ್ಲಿ ಇರುವವರಿಗೆ ಈ ವಾರ ಕಷ್ಟಗಳಿಂದ ತುಂಬಿರಬಹುದು. ನಿಮ್ಮ ಸಂಗಾತಿಯನ್ನು ಬೇರೊಬ್ಬರೊಂದಿಗೆ ನೋಡಿದಾಗ ನಿಮ್ಮ ಮನಸ್ಸಿನಲ್ಲಿ ನೋವು ಹಾಗೂ ಅವರ ಬಗ್ಗೆ ತಪ್ಪು ಆಲೋಚನೆಗಳು ಬರಬಹುದು. ಇದರಿಂದಾಗಿ ನಿಮ್ಮ ಜೀವನದಲ್ಲಿ ದೊಡ್ಡ ಸಮಸ್ಯೆ ಉದ್ಭವಿಸಬಹುದು. ಬೇರೆಯವರ ಮಾತುಗಳನ್ನು ಕೇಳಿ ತಪ್ಪು ಮಾಡಬೇಡಿ. ನಿಮ್ಮ ಮನಸ್ಸಿನಿಂದ ಕೆಟ್ಟ ವಿಚಾರಗಳನ್ನು ತೆಗೆದುಹಾಕುವ ಮೂಲಕ ನಿಮ್ಮ ಸಂಗಾತಿಯೊಂದಿಗೆ ಕುಳಿತು ಸಂಬಂಧದ ಬಗ್ಗೆ ಮುಕ್ತವಾಗಿ ಮಾತನಾಡಿ. ಯಾವುದೇ ಕಾರಣಕ್ಕೂ ಪ್ರೀತಿಯಲ್ಲಿ ಮೋಸ ಹೋಗದಂತೆ ಎಚ್ಚರ ವಹಿಸಿ.



Click it and Unblock the Notifications
